Dec 23, 2016

ಅನ್ನದ ಮಹತ್ವ

*ರತನ್ ಟಾಟಾ* ಹೇಳಿದ
“ *ಊಟದ ಸ್ಟೋರಿ*”:
ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ  ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.
ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.
ಹಂಬರ್ಗ್ ನಲ್ಲಿ  ಊಟ ಮಾಡಲು ಅಲ್ಲಿನ ಹೋಟೆಲ್’ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.
ನಮಗೆ ಆಶ್ಚರ್ಯವಾಯಿತು.
ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.
ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.
ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದರಲ್ಲ ಎನ್ನಿಸಿತು.
ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!
ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!
ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!
ಪೊಲೀಸರು ಬಂದರು.!!!!
ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.
ಅವರು ಹೇಳಿದರು
"ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!
ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!
ಆಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!
ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!"
ಇದು ನಮಗೆ ಒಂದು ಗುಣಪಾಠವಲ್ಲವೇ…?
“ *MONEY* *IS* *YOURS*
*BUT RESOURCES BELONGS TO THE SOCIETY*”

Dec 20, 2016

ಗ್ರಾಮದೇವತೆ ಹಿರಿಯಮ್ಮ ದೇವಿ, ಮಾಕಳಿ ಗ್ರಾಮ


ಗ್ರಾಮದೇವತೆ ಹಿರಿಯಮ್ಮ ದೇವಿ, ಮಾಕಳಿ ಗ್ರಾಮ


ಮಾಕಳಿ ಗ್ರಾಮದ ಹಿರಿಯಮ್ಮ ದೇವಿ

ಮಾಕಳಿ ಗ್ರಾಮದ ಹಿರಿಯಮ್ಮ ದೇವಿ


ಮಾಕಳಿ ಗ್ರಾಮದ ಹಿರಿಯಮ್ಮ ದೇವಿ
ಮಾಕಳಿ ಗ್ರಾಮದ ಹಿರಿಯಮ್ಮ ದೇವಿ

Dec 14, 2016

ಕಾಲ ಬದಲಾದಾಗ

ಕಾಲ ಯಾವಾಗ ಬದಲಾಯಿತೊ ಗೊತ್ತೇ ಆಗಲಿಲ್ಲ 🕐🕜🕤🕧

*ಮನೆ ಮಂದಿಯೆಲ್ಲಾ  ಒಂದೇ ಸಾಬೂನು ಉಪಯೋಗಿಸುತ್ತಿದ್ವಿ*

*ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ*

*ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು*

*ಯಾವತ್ತೊ ಒಂದು ದಿನ ಮಾಡುತ್ತಿದ್ದ   ಹೋಳಿ ಪದಾರ್ಥಕ್ಕೆ ಈಗ ಆ ರುಚಿ ಇಲ್ಲ*

*ಬೆಲ್ಲ ಕ್ಯಾಂಡಿ ತಿನ್ನೊದು ಯಾವಾಗ ನಿಲ್ಲಿಸಿದೆವು*

*ಅಪ್ಪ ತರುತ್ತಿದ್ದ ಬಟ್ಟೆಯ ಸಂಭ್ರಮ ಇವತ್ತಿನ ಮಾಲ್ ನಲ್ಲಿ ಸಿಗುತ್ತಿಲ್ಲ*

*ಕಾದಂಬರಿ ಓದೋರ ಒಂದು ಬಳಗವೇ ಇರುತ್ತಿತ್ತು*

*ಊರ ಜಾತ್ರೆಗಿಂತ ದೊಡ್ಡ ಪ್ರೋಗ್ರಾಮ ಇರಲೇ ಇಲ್ಲ*

*ಎಲ್ಲಾ ಧರ್ಮದವರು ಒಟ್ಟಿಗೆ ಹಬ್ಬ ಆಚರಿಸ್ತಾ ಇದ್ದೆವು*

*ಜ್ವರಕ್ಕೆ ಅಮ್ಮನ ಕಾಫಿ/ಕಷಾಯ ಸಾಕಾಗ್ತಾ ಇತ್ತು*

*ಕಿವಿ ನೋವು, ಹೊಟ್ಟೆ ನೋವು, ಶೀತ, ಕೆಮ್ಮು, ಗಂಟಲು ನೋವು ಖಯಿಲೆ ಅಂದ್ರೆ ಇವಷ್ಟೆ ಆಗಿತ್ತು*

*ಸಕ್ಕರೆ ಖಯಿಲೆ ಅವಾಗ ಶ್ರೀಮಂತರಿಗೆ ಮಾತ್ರ*

*ಬಿಲ್ಡಿಂಗಿಗಿಂತ ಮರಗಳೇ ಜಾಸ್ತಿ ಇದ್ದವು*

*ಲಗೋರಿ, ಗೋಲಿ, ಕ್ರಿಕೆಟ್ ಫೇಮಸ್ ಆಗಿತ್ತು*

*ಭೂತದ ಮನೆ, ಭೂತ ಬಂಗ್ಲೆ ಊರಿಗೊಂದು ಇರುತ್ತಿತ್ತು*

*ಸಂಜೆ ಏಳಕ್ಕೆ ಎಲ್ಲಾ ಮನೆಲಿ ಇರುತ್ತಿದ್ವಿ*

*5 ಪೈಸೆಗೆ ಚಾಕ್ಲೆಟ್ ಸಿಗ್ತಾ ಇತ್ತು. ದೊಡ್ಡ ಚಾಕ್ಲೇಟ್ ಅಂದರೆ 2 ರೂಪಾಯಿ ಕಿಸ್ ಮಿ ಬಾರ್ ಚಾಕ್ಲೇಟ್*

*ಆದಿತ್ಯವಾರ ಕೂದಲು ಕಟ್ಟಿಂಗೆ ಲೈನ್ ಕಾಯ್ತಾ ಇದ್ದೆವು*

*ಹುಡುಗೀರಿಗೆ ಅಮ್ಮನದ್ದೆ ಬ್ಯೂಟಿ ಪಾರ್ಲರ್*

*ದೊಡ್ಡೋರ ಅಂಗಿ ಸಣ್ಣವರಿಗೆ ಬಳುವಳಿಯಾಗಿ ಬರುತ್ತಿತ್ತು*

*ಮಳೆ ಬೆಳಗ್ಗೆ ಶಾಲೆಗೆ ಹೋಗುವಾಗ ಮತ್ತು ಸಂಜೆ ಬರುವಾಗ ಜೋರಾಗಿ ಹೊಡಿತ್ತಿತ್ತು  ಆಮೇಲೆ ದಿನ ಇಡೀ ಜಿಟಿಜಿಟಿ ಸುರಿತಾ ಇತ್ತು*

*ಮಗ್ಗಿ ಹೇಳೊದೆ ದೊಡ್ಡ ಅಸೈನ್ಮಂಟು*

*ಗುಬ್ಬಿ ಮನೆ ಅಂಗಳದಲ್ಲೇ, ಸಂಜೆ ಆದ್ರೆ ಬೇರೆ ಬೇರೆ ಸದ್ದಿನ ಹಕ್ಕಿಗಳು*

*ಟ್ರಾಫಿಕ್ ಜಾಮ್ ಕೇಳಿ ಗೊತ್ತಿತ್ತು ನೋಡಿ ಗೊತ್ತಿರಲಿಲ್ಲ*

*ತರಕಾರಿ ತರೋದಕ್ಕೆ ಕೈ ಚೀಲ ನಾವೆ ತಗೊಂಡು ಹೊಗ್ತಾ ಇದ್ದೆವು*

*ನೆಲದಲ್ಲಿ ಡಿಪ್ಸ್ ತಗಿಯೋದೆ ದೊಡ್ಡ ಜಿಮ್ ಆಗಿತ್ತು*

*ಯಾರಿಗಾದರು ನೋವಾದರೆ ನಮಗೂ ದುಃಖ ಆಗ್ತಾ ಇತ್ತು, ಸ್ಮಯ್ಲಿ/ಇಮೊಜಿ ಕಳುಹಿಸುತ್ತಾ ಇರ್ಲಿಲ್ಲ*

*ಮನೆಮಂದಿ ಒಟ್ಟಿಗೆ ಕೂತು ಮಾತಾಡೋದೆ ವಾಟ್ಸಪ್ ಗ್ರೂಪ್ ಆಗಿತ್ತು*

*ಫೋಟೊ ತೆಗೆದ್ರೆ ಕ್ಲೀನ್ ಆಗಿ ಬರೋಕೆ ಕಾಯ್ತಾ ಇದ್ದೆವು*

*ಪೇಪರಿನಲ್ಲಿ ಅಪಘಾತದಂತ ಸುದ್ದಿ ಬಂದ್ರೆ ಮರುಗುತ್ತಿದ್ದವು*

*ಒಬ್ರು ಯಾರೊ ಫೇಸ್ ಬುಕ್ ತರ ಎಲ್ಲಾ ವಿಷಯ ಮನೆಗೆ ಬಂದು ಅಪ್ಲೋಡ್ ಮಾಡ್ತಾ ಇದ್ದರು/ ಅದೆ ಮನೆಯಿಂದ ವಿಷಯ ಡಾವ್ನ್ಲೋಡ್ ಕೂಡ ಮಾಡ್ತ ಇದ್ರು*

*ಅಂಗಡಿ ಶೆಟ್ರಿಗೆ, ಊರ ಡಾಕ್ಟ್ರಿಗೆ, ಶಾಲಾ ಮಾಸ್ತರಿಗೆ ಮನೆಯವರೆಲ್ಲರ ಪರಿಚಯ ಮತ್ತು ವಿಷಯ ತಿಳಿದಿತ್ತು*

ಕಾಲ ಬದಲಾಗಿದ್ದು ಗೊತ್ತೇ ಆಗ್ಲಿಲ್ಲ... ಆದರೆ ನೆನಪುಗಳು ಇನ್ನೂ ಡಿಲೀಟ್ ಆಗಿಲ್ಲ...

Dec 6, 2016

ಭಾರತದ ಚಿನ್ಹೆಗಳು



 1} ‪#‎ರಾಷ್ಟ್ರಧ್ವಜ‬
=> ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2
=> ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ
=> ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ.
=> ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.
=> ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.
=> ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.
=> ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
=> ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು.
=> ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು
=> ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.
=> ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.
2} ‪#‎ರಾಷ್ಟ್ರೀಯ_ಚಿನ್ಹೆ‬
=> ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ.
=> ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.
=> ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು.
=> ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.
=> ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.
3} ‪#‎ರಾಷ್ಟ್ರೀಯ_ಹೂವು‬
=> ಭಾರತದ ಪುಷ್ಪ - ಕಮಲದ ಹೂವು
=> ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ.
=> ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರಾ(Nelumbo nucifera)
=> ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.
4} ‪#‎ರಾಷ್ಟ್ರಗೀತೆ‬
=> ಭಾರತದ ರಾಷ್ಟ್ರಗೀತೆ 'ಜನಗಣಮನ"
=> ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್
=> ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.
=> ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
=> ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ.
=> ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.
=> ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ.
=> ರವೀಂದ್ರನಾಥ ಟ್ಯಾಗೋರ್ ರವರ 'ಅಮರ್ ಸೋನಾರ್ ಬಾಂಗ್ಲಾ' ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು)
=> 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ "ರಕ್ಷಾಬಂಧನ" ಆಚರಿಸುವಂತೆ ಕರೆ ನೀಡಿದ್ದರು.
5} ‪#‎ರಾಷ್ಟ್ರೀಯ_ಹಾಡು‬
=> ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು.
=> ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ 'ಆನಂದಮಠ' ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ.
=> ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು.
=> ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು.
=> ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.
6} ‪#‎ರಾಷ್ಟ್ರೀಯ_ಪಂಚಾಂಗ‬
=> ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.
=> ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ.
=> ಸಾಮಾನ್ಯ ವರ್ಷದ ಮೊದಲ ದಿನಾಂಕ - ಮಾರ್ಚ 21
=> ಅಧಿಕ ವರ್ಷದ ಮೊದಲ ದಿನಾಂಕ - ಮಾರ್ಚ 22
=> ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು.
=> 2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು.
=> ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು - ಚೈತ್ರ
=> ಕೊನೆಯ ತಿಂಗಳು - ಫಾಲ್ಗುಣ
=> ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ
7} ‪#‎ರಾಷ್ಟ್ರೀಯ_ಕ್ರೀಡೆ‬
=> ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ
=> ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ.
=> ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ.
=> ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ.
=> ಭಾರತದ ಹಾಕಿಯ ಮಾಂತ್ರಿಕ - ಧ್ಯಾನಚಂದ್
=> ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು.
=> ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.
=> ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ.
=> ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ - 70 ನಿಮಿಷಗಳು.
8} ‪#‎ರಾಷ್ಟ್ರೀಯ_ನದಿ‬
=> ಭಾರತದ ರಾಷ್ಟ್ರೀಯ ನದಿ - ಗಂಗಾನದಿ
=> ನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.
=> ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km)
=> ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ.
9} ‪#‎ರಾಷ್ಟ್ರೀಯ_ಜಲಪ್ರಾಣಿ‬
=> ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ.
=> ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica)
10} ‪#‎ರಾಷ್ಟ್ರೀಯ_ಪಕ್ಷಿ‬
=> ಭಾರತದ ರಾಷ್ಟ್ರೀಯ ಪಕ್ಷಿ - ನವಿಲು
=> ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ - 1972 ರ ಅಡಿಯಲ್ಲಿ ನವಿಲು ಸಂರಕ್ಷಿಸಲಾಗುವುದು.
=> ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್ (pavo cristatus)
=> ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ.
11} ‪#‎ರಾಷ್ಟ್ರೀಯ_ಮರ‬
=> ಭಾರತದ ರಾಷ್ಟ್ರೀಯ ಮರ - ಬನಯಾನ್ ಅಥವಾ ಅರಳಿ ಮರ.
=> ಅರಳಿ ಮರದ ವೈಜ್ಞಾನಿಕ ಹೆಸರು - ಫೈಕಾಸ್ ಬೆಂಗಾಲೆನಿಸ್ (ficus benghalensis)
=> ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ.
=> ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ.
=> ಗೌತಮ ಬುದ್ದನ ಆಧ್ಯಾತ್ಮಿಕ ಗುರು - ಅಲಾರ ಕಮಾ
=> ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು - ಕಲ್ಕತ್ತದಲ್ಲಿ.
=> ಪ್ರಪಂಚದ ಅತಿ ದೊಡ್ಡ ವೃಕ್ಷ - ದೈತ್ಯ ಸಿಕೋಯ್ ಮರ.
=> ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ.
12} ‪#‎ರಾಷ್ಟ್ರೀಯ_ಹಣ್ಣು‬
=> ಭಾರತದ ರಾಷ್ಟ್ರೀಯ ಹಣ್ಣು - ಮಾವಿನ ಹಣ್ಣು
=> ಮಾವಿನ ವೈಜ್ಞಾನಿಕ ಹೆಸರು - ಮ್ಯಾಂಜಿಫೇರಾ ಇಂಡಿಕಾ (mangifera indica)
=> ಮಾವಿ ಹಣ್ಣಿನಲ್ಲಿರುವ ಜೀವಸತ್ವಗಳು - A,C,D
=> ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ.
13} ‪#‎ರಾಷ್ಟ್ರೀಯ_ವಂಶಪಾರಂಪರ್ಯ_ಪ್ರಾಣಿ‬
=> ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ.
=> ಆನೆಯ ವೈಜ್ಞಾನಿಕ ಹೆಸರು - ಎಲಿಫಾಸ್ ಮ್ಯಾಕ್ಷಿಮಸ್ (elephas maximus)
=> ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ - ಆಪ್ರಿಕಾದ ಆನೆ.
=> ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ - 1992.
=> ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.
=> ಕರ್ನಾಟಕದ ರಾಜ್ಯ ಪ್ರಾಣಿ - ಆನೆ.
14} ‪#‎ರಾಷ್ಟ್ರೀಯ_ಪ್ರಾಣಿ‬
=> 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು.
=> ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು.
=> ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್. (Panthera tigris)
=> ಭಾರತದ ಮೊದಲ ಹುಲಿ ಅಭಯಾರಣ್ಯ - ಉತ್ತರಖಂಡದ ಕಾರ್ಬೆಟ್
=> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.
=> ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ - ಆಂದ್ರಪ್ರದೇಶದ ನಾಗಾರ್ಜುನ ಸಾಗರ
=> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ - ಪಶ್ಚಿಮ ಬಂಗಾಳದ ಸುಂದರಬನ್ಸ್
=> ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1972
15} ‪#‎ರಾಷ್ಟ್ರೀಯ_ಕಟ್ಟಡ‬
=> ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.
16} ‪#‎ರಾಷ್ಟ್ರೀಯ_ದೊರೆ‬
=> ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.

Dec 1, 2016

ನನ್ನ ಭಾರತ ಶ್ರೇಷ್ಠ ಭಾರತ

ಸೌರ ಮಂಡಲದಲ್ಲಿ ಎಂಟು ಗ್ರಹಗಳಿವೆ. ಆ ಎಂಟು ಗ್ರಹಗಳಲ್ಲಿ  ಭೂಮಿಯೇ ವಿಶೇಷವಾದ ಗ್ರಹ. ನಮ್ಮ ಭೂಮಿಯಲ್ಲಿ ಸಪ್ತ ಖಂಡಗಳಿವೆ. ಆ ಸಪ್ತ ಖಂಡಗಳಲ್ಲಿ ಏಷ್ಯ ಖಂಡ ಒಂದು. ಏಷ್ಯ ಖಂಡದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ನಿಂತಿರುವ್ ದೇಶವೇ ಭಾರತ. 

ಭಾರತ ಸುಂದರವಾದ ದೇಶ. ಯಾವ ದೇಶದವರಿಗಾದರು ಇಷ್ಟವಾಗುದೆ ಇರದು. ಭಾರತ ಪೂರ್ವ ಕಾಲದಿಂದಲು ತನ್ನದೆ ಆದ ರೀತಿಯಲ್ಲಿ ಬೆಳೆಯುತ್ತಾ ಬಂದಿದೆ. ಜಗ ತ್ತಿಗೆ ಸಾವಿರಾರು ಕೊಡುಗೆಗಳನ್ನು ನೀಡಿದೆ.ಭಾರತದ ಸಾವಿರಾರು ರಾಜಮಹಾರಾಜರುಗಳು ಒಬ್ಬರಿಗಿಂತ ಒಬ್ಬರು ಎಂಬಂತೆ ದೇಶ ಸೇವೆ ಮಾಡಿದ್ದರೆ.ಅನೇಕ ಕಾವ್ಯ ಶಾಸ್ತ್ರಗಳಿಗೆ ಜನ್ಮ ಸ್ಥಳ ಭಾರತ. ದೈವ ಭಾಷೆಯಾದ ಸಂಸ್ಕೃತದ ತವರೂರು ಭಾರತ.ಮಹಾಭಾರತ,ರಾಮಾಯಣ,ವೇದಗಳ ತವರು ಭಾರತ. ಮಸಾಲೆ ಪದಾರ್ಥಗಳಾದ ಮೆಣಸು ಇತ್ಯಾದಿಗಳ ಬೆಳೆಯಲು ಪ್ರಾರಂಭಿಸಿದ್ದು ಭಾರತದಲ್ಲಿಯೆ.ರೇಖಗಣಿತವು ನಮ್ಮ ಭಾರತದಲ್ಲಿ ಬಹಳ ಪ್ರಾಚೀನದಿಂದಲೆ ಇದೆ ಎಂಬುದಕ್ಕೆ ಉದಾಹರಣಿ ಹೋಮ ಕುಂಡಗಲನ್ನು ಜೊಡ್ಡಿಸುತ್ತಿದದ್ದು.ಅಂಕಗಣಿತಕ್ಕೆ ಶುನ್ಯವನ್ನು ಕೊಟ್ಟು ಅದನ್ನು ಮುಂದುವರಿಸಿದವರು ಭಾರತೀಯರು.ಬೀಜಗಣಿತದಲ್ಲು ಭಾರತಿಯರ ಮಹತ್ವದ ಕೊಡುಗೆ ಇದೆ. ಹೀಗೆ ಗಣಿತದಲ್ಲಿ ಭಾರತೀಯರ ಕೊಡುಗೆಯನ್ನು ಬರೆಯುತ್ತ ಹೋದರೆ ಸಾವಿರ ಉದಾಹರಣೆಯನ್ನು ಕೊಡಬಹುದು.ಭಾರತೀಯರು ಬುದ್ದಿವಂತರು,ಪೂರ್ವಕಲದಲ್ಲಿಯೇ ನಾವು ಅನೇಕ ವಿಷಯಗಳನ್ನು ಸಂಶೋಧಿಸಿದ್ದೆವು.ಉದಾಹರಣೆಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಡಿದರೆ ಶಸ್ತ್ರಚಿಕಿತ್ಸೆಯನ್ನು ಮೊದಲು ಪ್ರರಂಬಿಸಿದ್ದು ಭಾರತೀಯನಾದ ಶುಶ್ರುತ.ಆಯುರ್ವೇದವನ್ನು ಜಗತ್ತಿಗೆ ನೀಡಿದವರು ಭಾರತೀಯರು. ಆಯುರ್ವೇದ ಅತ್ಯಂತ ಪ್ರಾಚಿನವದದ್ದು,ಅಂದರೆ ಎಲ್ಲಾ ವೈದ್ಯಕೀಯ ಪ್ರಭೇದಗಳಿಗಿಂತಲು ಹಿಂದಿನದ್ದು.ಇದರಿಂದ ವೈದ್ಯಕೀಯ ಕ್ಷೆತ್ರಕ್ಕೆ ಭಾರತಿಯರು ಹೆಚ್ಚು ಒತ್ತು ನೀಡಿದವರು ಎಂಬುದನ್ನು ತಿಳಿಯಬಹುದು.ಅನೇಕ ರೋಗಗಳಿಗೆ ರಾಮಬಾಣದಂತಿರುವ ಅರಿಶಿಣವನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತಿಯರು. ವಿಗ್ನಾನ ಕ್ಷೇತ್ರದಲ್ಲಿ ಭರತೀಯರ ಪ್ರಗತಿಯನ್ನು ನೋಡಬೇಕಾದರೆ ನೋಡಬೇಕಾದರೆ ನಮ್ಮ ದೇವಸ್ತಾನದ ಉದಹರನೆಯನ್ನು ತೆಗೆದು ಕೊೞಬಹುದು.ಭಾರತ ಯಾವ ಕ್ಷೇತ್ರದಲ್ಲಿ ತನ್ನ ಕೊಡುಗೆಯನ್ನು ನೀಡಿಲ್ಲ?ಭರತ ಎಲ್ಲಾ ದೇಶಗಳಿಗಿಂತ ವಿಭಿನ್ನವಾದದ್ದು.ಆದ್ದರಿಂದಲೇ ಅಲೆಕ್ಸಾಂಡರ್ ನ ವಲವು ಭಾರತದೆಡೆಗೆ ಮೂಡ್ಡಿದ್ದು.ಯುರೋಪನವರಿಗೂ ಸಹ ಭಾರತದ ಮೇಲೆ ಕುತೂಹಲ ಹೆಚ್ಚಾಗಿತ್ತು.ನಮ್ಮ ಯವೂದರಲ್ಲೂ ಕಮ್ಮಿ ಇಲ್ಲ,ಆದರೂ ಸಹ ಯಾಕೆ ಇಂದು ನಾವು ಬೇರೆ ದೇಶದ ಕಡೆಗೆ ಮುಖ ಮಾಡಿ ನೋಡುತ್ತಿದೇವೆ? ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುತ್ತಿದ್ದ ನಮ್ಮ ದೇಶ ಯಾಕೆ ಇಂದು ಆರ್ತಿಕ ಬಿಕಟ್ಟು ಅನುಭವಿಸುತ್ತಿದೆ ಇದಕ್ಕೆ ಕಾರಣ ನಮ್ಮ ದೇಶದ ಬುದ್ದಿವಂತ ಪ್ರಜೆಗಲು ಬೇರೆ ದೇಶಕ್ಕೆ ಹಾರತ್ತಿರುವುದು.ಉತ್ತಮ ಅವಕಾಶಗಳು ಸಿಗದಿವುದು ಇದಕ್ಕೆ ಕರಣವಾಗಿರಬಹುದು.ಆದ್ದರಿಂದ ನಮ್ಮ ಸರ್ಕಾರ ಉತ್ತಮ ಅವಕಾಶಗಳನ್ನು ಒದಗಿಸಬೇಕು.ಈ ನಿಟ್ಟಿನಲ್ಲಿ ನಮ್ಮ ಪ್ರಾಧಾನಿ ನರೇಂದ್ರ ಮೋದಿಯವರ ಹೆಜ್ಜೆಗಳು ಪ್ರಶಂಶನೀಯ.ನಾವೇಲ್ಲರು ನಮ್ಮಲ್ಲಿ ರಾಷ್ಟ್ರಪ್ರೇಮ ರಾಷ್ಟ್ರಭಕ್ತಿಯನ್ನು ನಮ್ಮಲ್ಲಿ ಬೆಳಸಿಕೊೞಬೇಕು.ನಾವೆಲ್ಲರು ಒಂದಾಗಬೇಕು.ಭಾರತವನ್ನು ಮುಂದುವರಿಸಬೇಕು.ಭಾರತವನ್ನು ಉತುಂಗಕ್ಕೆ ಕೊಂಡ್ಯೊಯಬೇಕು.ವಂದೇ ಭಾರತ ಮಾತರಂ.ಜೈ ಭಾರತ ಮಾತೆ. 

Nov 25, 2016

ಸದ್ ಮಾರ್ಗ

👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇

👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇

ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌

💛❤💛❤💛❤💛❤💛

👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇

30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌

💛❤💛❤💛❤💛❤💛

👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ
ಬದಲಾಗಿ👇

ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇

💛❤💛❤💛❤💛❤💛

👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇

ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌

💛❤💛❤💛❤💛❤💛

👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇

ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌

💛❤💛❤💛❤💛❤💛

👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇

👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌

💛❤💛❤💛❤💛❤💛

👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇

ನಸುಕಿನ ಜಾವ ಹೊಲ-ಮನೆ  ಕೆಲಸಗಳನ್ನು ಮಾಡಿ..👌

💛❤💛❤💛❤💛❤💛

👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ
ಬದಲು👇

ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌

💛❤💛❤💛❤💛❤💛

👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇

ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍

💛❤💛❤💛❤💛❤💛

👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.

ಅದರ ಬದಲು👇

ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ  ಬದುಕಬಹುದು..👌👍

💛❤💛❤💛❤💛❤💛

ಈಗ👇

ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..

ಏಕೆಂದರೆ👇

ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏

💛❤💛❤💛❤💛❤💛

ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏

💛❤💛❤💛❤💛❤💛

ಅಪ್ಪ ಅಂದರೆ

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....?

ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....
ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ  ಅಪ್ಪನ ಪಾರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.

ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.

ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.

ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.

'ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ' ಎಂಬ ಭಿತ್ತಿಪತ್ರ ಕಾಣಿಸಿತ್ತು.

ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ....?

ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ.....

ಈಗ ಬೂಟ್'ಗಳಿಂದ ನೋವಾಗುತ್ತಿಲ್ಲ....

ಮನೆಯಲ್ಲಿ ಅಪ್ಪ ಇಲ್ಲ... ಸ್ಕೂಟರ್ ಇಲ್ಲ... ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ....!

ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ....!

" ಬೇಡ ಅಪ್ಪ...! ನನಗೆ ಬೈಕ್ ಬೇಡ....!!ಅಂದೆ

ಆವಾಗ್ಲೆ ಗೊತ್ತಾಗಿದ್ದು  ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.

ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ.

ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ,
ಇಂತಹ ಕಥೆಗಳನ್ನು ಮಕ್ಕಳಿಗೆ ಹೇಳಿ ವ್ಯಕ್ತಿತ್ವ ಬೆಳೆಸಿ:
One of the best msgs that i hv read n plz read and share without fail.

ಜನನ ಮರಣ ಗಳ ನಡುವೆ

*ಹುಟ್ಟು:* ನಾವು ಕೇಳದೇ ಸಿಗುವ ವರ(ಶಾಪ)

*ಸಾವು:* ನಾವು ಹೇಳದೇ ಹೋಗುವ ಜಾಗ

*ಬಾಲ್ಯ:* ಮೈಮರೆತು ಆಡುವ ಸ್ವರ್ಗ.

*ಯೌವನ:* ಅರಿವಿದ್ದರೂ ಅರಿಯದ ಮಾಯೆ.

*ಮುಪ್ಪು:* ಕಡೆಯ ಆಟ.

*ಸ್ನೇಹ:* ಶಾಶ್ವತವಾಗಿ ಉಳಿಯೋ ಬಂಧ.

*ಪ್ರೀತಿ:* ಪ್ರಾಣಕ್ಕೆ ಹಿತವಾದ ಅನುಬಂಧ.

*ಪ್ರೇಮ:* ತ್ಯಾಗಕ್ಕೆ ಸ್ಪೂರ್ತಿ.

*ಕರುಣೆ:* ಕಾಣುವ ದೇವರು.

*ಮಮತೆ:* ಕರುಳಿನ ಬಳ್ಳಿ.

*ದ್ವೇಷ:* ಉರಿಯುವ ಕೊಳ್ಳಿ.

*ತ್ಯಾಗ:* ದೀಪ.

*ಉಸಿರು:* ಮೌನದಲೆ ಜೊತೆಗಿರುವ ಗೆಳೆಯ.

*ಹ್ರದಯ:* ಎಚ್ಚರಿಕೆ ಗಂಟೆ.

*ಕಣ್ಣು:* ಸ್ರಷ್ಟಿಯ ಕನ್ನಡಿ.

*ಮಾತು:* ಬೇಸರ ನೀಗುವ ವಿದ್ಯೆ.

*ಮೌನ:* ಭಾಷೆಗೂ ನಿಲುಕದ ಭಾವ.

*ಕಣ್ಣೀರು:* ಅಸ್ತ್ರ

*ನೋವು:* ಅಸಹಾಯಕತೆ

*ನಗು:* ಔಷಧಿ.

*ಹಣ:* ಅವಶ್ಯಕತೆ.

*ಗುಣ:* ಆಸ್ತಿ.

*ಕಲೆ:* ಜ್ಞಾನ.

*ಧರ್ಮ:* ಬುನಾದಿ.

*ಕರ್ಮ:* ಕಾಣದಾ ಕೈ ಆಟ.

*ಕಾಯಕ:* ದೇಹ, ಮನಸಿಗೆ ಮಿತ್ರ.

*ಸಂಸ್ಕೃತಿ:* ನೆಲೆ

*ಸಾಧನೆ:* ಜೀವಕ್ಕೆ ಜೀವನಕ್ಕೆ ಬೆಲೆ.

Nov 7, 2016

Om ಓಂ ಮಂತ್ರದ ಪ್ರಯೋಜನ

*OM......OM......OM*

*THE ELIXIR OF LIFE*

*"ಓಂ"* ಮಂತ್ರ ಪಠಿಸಿ,
ಸರ್ವ ರೋಗ ನಿವಾರಿಸಿ

ಹಿಂದೂ ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ. *ಓಂ* ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.?

ಇಂದು ನಾವು ನಿಮಗೆ
*'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.

*'ಓಂ'* ಮತ್ತು *ಥೈರಾಯ್ಡ್‌*:
'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

*ಓಂ* ಮತ್ತು *ಭಯ* : ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.

*ಓಂ* ಮತ್ತು  *ಒತ್ತಡ* :
ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ.
ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

*ಓಂ* ಮತ್ತು *ರಕ್ತ ಸಂಚಾರ* :  ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

*ಓಂ* ಮತ್ತು *ಪಚನ ಕ್ರಿಯೆ* : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.

*'ಓಂ'* ಮತ್ತು *ಸ್ಫೂರ್ತಿ* : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.

*ಓಂ* ಮತ್ತು *ಸುಸ್ತು* : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.

*ಓಂ* ಮತ್ತು *ನಿದ್ರೆ* : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

*ಓಂ* ಮತ್ತು *ಶ್ವಾಸಕೋಶ* : 'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.

*ಓಂ* ಮತ್ತು *ಬೆನ್ನೆಲುಬು* : 'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..

Nov 5, 2016

ರೈತನತ್ತ ಮನಸು

ಈ ಸಂದೇಶದ
ರಚನಕಾರರಿಗೆ ಧನ್ಯವಾದಗಳು

  ವಿದ್ಯೆ ಕಲಿತವರು ವಿನಯವಂತರಾಗಬೇಕ್ಕಿತ್ತು
ಆದರೆ ಹಾಗಾಗಲ್ಲಿಲ್ಲ,

ಹಣವಂತರು ದಾನಿಗಳಾಗಬೇಕ್ಕಿತ್ತು, ಅದರೆ ಹಾಗಾಗಲ್ಲಿಲ್ಲ,

ಬಹುಜನರು ಒಬ್ಬ ಗುರುಮಾರ್ಗದರ್ಶನದಲ್ಲಿ ಹೊಗಬೇಕ್ಕಿತ್ತು ,
ಆದರೆ ಅದೂ ಹಾಗಾಗಲ್ಲಿಲ್ಲ,
ಮತ್ತೆಲ್ಲಿ
ಪ್ರಬುದ್ಧಭಾರತದ ಕನಸು ಮಿತ್ರರೇ,

ಹಿಂದೆ ಒಬ್ಬ ಗುರುವಿರಲಿ,
ಮುಂದೆ ಗುರಿ ಇರಲಿ,
ನಡುವೆ
ನೀವು ದಾರಿ ತಪ್ಪುವುದಿಲ್ಲ,
ಗುರು, ಗುರಿ ಇಲ್ಲದೆ ಇದ್ದರೆ
ನಿಮ್ಮ ಶ್ರಮ
ಇನ್ನೊಂದೆರಡು ಸಾವಿರ ವರ್ಷಗಳು ಬೇಕಾಗಬಹುದು
ಸಮಾನತೆಯ ಸಮಾಜ
ನಿರ್ಮಾಣ ವಾಗಲು ಅಲ್ಲವೇ?
         
ನನ್ನ ಸಣ್ಣ ನೋವು,
ಮತ್ತು ಬಹುಕಾಲದ ಹತಾಶೆ.......

ನಿ೦ಬೆಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡುವಿರಿ,

ಸೊಪ್ಪಿನ ಅಜ್ಜನ ಬಳಿ ಕೊಸರಾಡುವಿರಿ,

ಕಡಲೆಕಾಯಿ ಮಾರುವವನ ಹತ್ತಿರ ಜಗಳವಾಡುವಿರಿ,

ಹಣ್ಣು
ಮಾರುವವನ ಹತ್ತಿರ
ಪೌರುಷ ತೋರುವಿರಿ ,

ಎಳನೀರಿನವನ ಬಳಿ ಜುಗ್ಗುತನ ತೋರುವಿರಿ,

ಹೂವಿನವರ ಹತ್ತಿರ
ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡುವಿರಿ,

ಗೊತ್ತೇ ನಿಮಗೆ
ಭತ್ತ ಬೆಳೆಯುವವನ ಕಷ್ಟ,

ಗೊತ್ತೇ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆ೦ದು,

ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆ೦ದು,

ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು,

ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆ೦ದು,

ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು

ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾ೦ಡ,

ಗೊತ್ತೇ ನಿಮಗೆ ಅದರಲ್ಲಿ ಆಗುವ
ನಷ್ಟ ( Waste ) ಎಷ್ಟೆಂದು,

ಗೊತ್ತೇ ನಿಮಗೆ ಇಷ್ಟಾದರೂ
ಅದಕ್ಕೆ ಸಿಗುವ ಪ್ರತಿಫಲದ ನೋವು,

ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್  ನಲ್ಲಿ ತಯಾರಾದದ್ದಲ್ಲ,

ನೀವು ಊಟಮಾಡುವ ಅಕ್ಕಿ ಇಂಟರ್ನೆಟ್  ನಲ್ಲಿ ಬೆಳೆದದ್ದಲ್ಲ,

ಅದು ರೈತರ
ಬೆವರ ಹನಿಗಳಿ೦ದ ಬಸಿದದ್ದು,

ತಾಕತ್ತಿದ್ದರೆ
Pizza, Burger,
ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ,

ಧೈರ್ಯವಿದ್ದರೆ ಶಾಪಿ೦ಗ್ ಮಾಲ್ ಗಳಲ್ಲಿ ಕೊಸರಾಡಿ,

ಶಕ್ತಿಯಿದ್ದರೆ
Multiplex Theater
ಟಿಕೆಟ್ ಕೌ೦ಟರ್ ನಲ್ಲಿ ಜಗಳವಾಡಿ,
ಕ್ಷಮಿಸಿ ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು. ...

ಒಂದು ಚಿಕ್ಕ ಚಾಕಲೇಟ್ಗೇ 
MRP ಬೆಲೆಯಿದೆ
ಆದರೆ ರೈತ ಬೆಳೆದ ಬೆಳೆಗೆ ಕೆಲವೊಮ್ಮೆ ಶ್ರಮಕ್ಕೆ ಬೆಲೆಯಿಲ್ಲ..
ಪ್ರಬುದ್ಧ ಮನಸ್ಸು,
ಪ್ರಬುದ್ಧ ಸಮಾಜ,
ಪ್ರಬುದ್ಧ ರಾಜ್ಯ,
ಪ್ರಬುದ್ಧ ಭಾರತ. !!!!!


ರೈತರು ನಾಟೌಟ್ ಆಗಿ ನಿಲ್ಲಬೇಕು....

ಬಂಧುಗಳೇ...
1ಕ್ಷಣ ಇಲ್ಲಿ ನೋಡಿ..
ವಿಕೆಟ್ ಬಿದ್ರೆ ದೇಶ ಸೋಲುತ್ತೇ..ಎಂದು ಭಯಬೀಳುವ ದೇಶಭಕ್ತ
ದೇಶಕ್ಕೆ ಅನ್ನ ನೀಡುವ ದೇಹಗಳೆಷ್ಟೋ ಬೀಳುತ್ತಿದ್ದರೂ ಗಮನ ಕೊಟ್ಟೆಯ ದೇಶಭಕ್ತ?
🌱
ಇಷ್ಟ ವಾದ ಕ್ರಿಕೆಟರ್ ನೂರು ರನ್ ಮಾಡಲಿ ಎಂದು ದೇವರನ್ನು ಮುಗಿದಂತೆ
ನಿನಗೆ ಗೊತ್ತಿರುವ ರೈತ ನೂರು ಮೂಟೆಗಳ ಬೆಳೆ ಬೆಳೆಯಬೇಂದು ಮನಸಾರೆ ಯಾವಗಲಾದರೂ ಬೇಡಿಕೊಂಡಿದ್ದೀಯ ದೇಶಭಕ್ತ?
🌱
ಮೂರು ಗಂಟೆ ಬ್ಯಾಟ್ ಹಿಡಿದು ಆಡಿದಾತನು ದೇವರಾದರೇ..
ನಿನಗೆ ಜೀವನವೆಲ್ಲ ಅನ್ನ ನೀಡುವ ರೈತನನ್ನು ಏನೆನ್ನುವೇ?
🌱
ನಿನಗೆ ಎಲ್ಲಾ ಸ್ಟೇಡಿಯಂಗಳ ಪಿಚ್ ಹೇಗಿರುತ್ತೆ ಎನ್ನುವುದು ಗೊತ್ತು.
ನಿನ್ನ ಊರಲ್ಲಿ ಮಾರ್ಕೆಟ್ ಯಾರ್ಡ ಎಲ್ಲಿದಿಯೋ..ಎಂತಹ ಪರಿಸ್ಥಿತಿಯಲ್ಲಿದಿಯೋ..ನಿನಗೆ ಗೊತ್ತ ದೇಶಭಕ್ತ?
🌱
ಅನ್ನ ತಿನ್ನುತ್ತಾ...
ಪಾಕಿಸ್ತಾನ ಟೀಂ  ನಿನ್ನ ದೇಶಕ್ಕೆ ಬರಲಾ.. ಅಥವಾ ಬೇಡವ ನಿರ್ಧಾರ ತೆಗೆದುಕೊಳ್ಳುತ್ತೀಯ...
ನಿನ್ನ ಕೈಯಲ್ಲಿರುವುದು ಸ್ವದೇಶಿ ಅಕ್ಕಿನೋ ವಿದೇಶಿ ಅಕ್ಕಿನೋ ನಿನಗೆ ಗೊತ್ತಾ ದೇಶಭಕ್ತ?
🌱
ಯಾರು ಯಾವಾಗ ಎಷ್ಟು ಸ್ಕೋರ್ ಮಾಡಿದ್ರು ಎಂದು ಗೊತ್ತಿರುವ ನಿಂಗೆ...
ದಿನ ಎಲ್ಲೇಲ್ಲಿ ಎಷ್ಟು ರೈತರು ಸಾಯುತ್ತಿದ್ದಾರೆ ಗೊತ್ತಾ ದೇಶಭಕ್ತ?
🌱
ಕಾಮೆಂಟ್ರಿ ಕೇಳುತ್ತಾ ಟಿವಿ ಯೊಳಗೇ...ಹೋಗುವ ನೀನು
ಯಾವಾಗಲಾದರೂ ರೈತರ ಬಗ್ಗೆ ಚರ್ಚೆ ಕಾರ್ಯಕ್ರಮ ನೋಡಿದಿಯಾ ದೇಶಭಕ್ತ?
🌱
ಹನ್ನೊಂದು ಜನ ಆಡುವ ಆಟಕ್ಕೋಸ್ಕರ ಲಕ್ಷ ಲಕ್ಷ ಜನ ಒಂದಾಗುತ್ತೇವೆ..
ಕೋಟಿ ಜನರ ಹಸಿವನ್ನು ನೀಗಿಸುವ
ರೈತರಿಗೆ ಏನ್ಮಾಮಾಡ್ತಿದಿವಿ ದೇಶಭಕ್ತ?
🌱
ಇಂಡಿಯಾ ಗೆಲ್ಲಿಸುವವರ ಜೊತೆಗೆ
ಬದುಕಿಸುವವರ ಬಗ್ಗೆ ಕಾಳಜಿಯಿರಲಿ ದೇಶಭಕ್ತ..
🌱
ಇಂಡಿಯಾ ಗೆಲ್ಲಬೇಕಾಗಿರುವುದು ಆಟದ ಮೈದಾನದಲಲ್ಲ...ಅಚ್ಚ ಹಸಿರಿನ ಹೊಲದ ಮೈದಾನದಲ್ಲಿ...
ಅದಕ್ಕೇ ರೈತ ನಾಟೌಟ್ ಆಗಿ ನಿಲ್ಲಬೇಕು....ನಾವೆಲ್ಲರೂ ಅವರ ಏಳ್ಗೆ ಬಯಸೋಣ......
ಸ್ನೇಹಿತರೇ
🌿🌿🌿🌿🌿🌿
Plz share this...

Nov 2, 2016

ರಾಮನಗರ ಜಿಲ್ಲೆ

ರಾಮನಗರ ಜಿಲ್ಲೆಯ ವಿಶೇಷತೆಗಳು

1) ಕರ್ನಾಟಕದ ರೇಷ್ಮೆನಗರಿ ಎಂದು ಕರೆಯಲ್ಪಡುವ ಜಿಲ್ಲೆ ನಮ್ಮ ರಾಮನಗರ.

2) ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌದದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ತವರು ರಾಮನಗರ.

3) ರಾಮನಗರ ಜಿಲ್ಲೆಯ ಮಾಗಡಿಯ ನಾಡಪ್ರಭು ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರಿನ ಸ್ಥಾಪಕರು.

4) ಬೊಂಬೆಗಳ ನಗರಿ ಚನ್ನಪಟ್ಟಣದ ಬೊಂಬೆಗಳು ವಿಶ್ವಪ್ರಸಿದ್ಧವಾಗಿವೆ.

5) ಅಮೇರಿಕಾದ ಶ್ವೇತಭವನವನ್ನು ಚನ್ನಪಟ್ಟಣದ ಬೊಂಬೆಗಳು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

6) ಗಂಗ ವಂಶದ ರಾಜರ 4 ಪ್ರಮುಖವಾದ ರಾಜಧಾನಿಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನ ಮಾಕುಂದ ಎಂಬ ಊರು ಕೂಡ ಒಂದು.

7) ಭಾರತೀಯ ಚಿತ್ರರಂಗದ ಮೈಲುಗಲ್ಲೆನಿಸಿದ ಹಿಂದಿಯ ಖ್ಯಾತ ಶೋಲೆ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡು ಲೋಕವಿಖ್ಯಾತವಾಯಿತು.

8) ರಾಮನಗರವು ಜಾನಪದ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆ.ಚನ್ನಪಟ್ಟಣ ತಾಲ್ಲೂಕಿನ ಸಮೀಪ ಪ್ರಸಿದ್ಧವಾದ ಜಾನಪದ ಲೋಕವಿದೆ.

9) ಜಾನಪದ ಗಾಯನದಲ್ಲಿ ರಾಮನಗರದ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದರು.

10) ಕಾವೇರಿ ಮತ್ತು ಅರ್ಕಾವತಿ ನದಿಗಳ ಪವಿತ್ರ ಸಂಗಮವಾಗುವ ಸ್ಥಳ ಕನಕಪುರದ ಸಂಗಮ ಎಂಬ ಊರಿನಲ್ಲಿದೆ.

11) ದಕ್ಷಿಣ ಭಾರತದ ಪ್ರಖ್ಯಾತ ನಟಿಯಾದ ಪದ್ಮಭೂಷಣ ಡಾ!!.ಬಿ.ಸರೋಜಾದೇವಿಯವರು ಚನ್ನಪಟ್ಟಣದ ದಶವಾರ ಎಂಬ ಗ್ರಾಮದವರು.

12) ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ನಾಡೋಜ ದೇ.ಜವರೇಗೌಡರ ಜನ್ಮಸ್ಥಳ ಚನ್ನಪಟ್ಟಣದ ಬಳಿಯ ಚಕ್ಕೆರೆ ಎಂಬ ಊರು.

13) ವಿಶ್ವದಲ್ಲೇ ಇತಿಹಾಸ ಪ್ರಸಿದ್ಧ ಸುಗ್ರೀವನ ದೇವಾಲಯ ಹೊಂದಿರುವ ಸ್ಥಳ‌ ಚನ್ನಪಟ್ಟಣ.

14) ಗಿಡಮರಗಳನ್ನೇ ತನ್ನ ಮಕ್ಕಳೆಂದು ಭಾವಿಸಿ, ಅವುಗಳನ್ನು ಸಂರಕ್ಷಿಸಿ ಬೆಳೆಸಿ ದೇಶಕ್ಕೇ ಆದರ್ಶ ಮಹಿಳೆಯಾದ ಸಾಲುಮರದ ತಿಮ್ಮಕ್ಕ ನವರ ಊರು ಮಾಗಡಿ.

15) ವಿಷ್ಣುಸಹಸ್ರ ನಾಮದಲ್ಲಿ ಉಲ್ಲೇಖವಾಗಿರುವ ಅಪ್ರಮೇಯ ಎಂಬ ನಾಮದ ವಿಶ್ವದಲ್ಲೇ ಏಕೈಕ ದೇವಾಲಯವಿರುವುದು ಚನ್ನಪಟ್ಟಣದ ಸಮೀಪದ ದೊಡ್ಡ ಮಳೂರು ಎಂಬ ಗ್ರಾಮದಲ್ಲಿ ಮಾತ್ರ.

16) ಕರ್ನಾಟಕ ರತ್ನ, ಪದ್ಮಭೂಷಣ ಸಿದ್ಧಗಂಗಾ ಶ್ರೀಗಳಾದ ಡಾ!!.ಶಿವಕುಮಾರ ಮಹಾಸ್ವಾಮಿಗಳ ಜನ್ಮಸ್ಥಳ ಮಾಗಡಿಯ ಸಮೀಪದ ವೀರಾಪುರ      ಗ್ರಾಮ

17) ಪದ್ಮಭೂಷಣ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಬಿಡದಿ ಸಮೀಪದ ಬಾನಂದೂರು.

[18) ಭಾರತ ದೇಶದಲ್ಲಿ ಉದ್ದ ಕೊಕ್ಕಿನ ಹದ್ದುಗಳು ಅತಿ ಹೆಚ್ಚು ಕಂಡುಬರುವುದು ರಾಮನಗರದ ರಾಮದೇವರ ಬೆಟ್ಟದಲ್ಲಿ ಮಾತ್ರ.

19) ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕಶಿಲಾ ಬೆಟ್ಟ ಇರುವುದು ರಾಮನಗರದಲ್ಲಿ.

[20) ಮಾಧ್ವ ಪರಂಪರೆಯಲ್ಲಿ ಬಂದ ಯತಿಗಳಾದ ಬ್ರಹ್ಮಣ್ಯತೀರ್ಥರ ಬೃಂದಾವನ ಚನ್ನಪಟ್ಟಣದ ಅಬ್ಬೂರು ಗ್ರಾಮದಲ್ಲಿ ಇದೆ.

[21) ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ವ್ಯಾಸರಾಯರು ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿ ಮುಖ್ಯಪ್ರಾಣ ಹನುಮಂತನ ವಿಗ್ರಹ   ಸ್ಥಾಪಿಸಿದ್ದಾರೆ.

22) ಪುರಂದರದಾಸರು  ಚನ್ನಪಟ್ಟಣದ ಅಪ್ರಮೇಯ ದೇವಾಲಯದಲ್ಲಿನ ಅಂಬೆಗಾಲು ಕೃಷ್ಣನ ಮೂರ್ತಿಯನ್ನು ನೋಡಿ ಪ್ರಸಿದ್ಧ ಕೀರ್ತನೆಯಾದ 'ಆಡಿಸಿದಳು ಯಶೋಧೆ ಸುಗುಣಾಂತರಂಗನ ಅಪ್ರಮೇಯನ` ಎಂಬ ಗೀತೆ ರಚಿಸಿದ್ದಾರೆ.

23) ಪ್ರತಿಷ್ಠಿತ ಪೋಲೀಸ್ ತರಬೇತಿ ಶಾಲೆ( PTS ) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿದೆ.

25) 1999ನೇ ಇಸವಿಯಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ S.L.ಭೈರಪ್ಪನವರು ಅಧ್ಯಕ್ಷರಾಗಿದ್ದರು.

24) ಭಾರತ ದೇಶದಲ್ಲಿ ಕಪ್ಪುಬಣ್ಣದ  ಗ್ರಾನೈಟ್ ಶಿಲೆಗೆ ಕನಕಪುರ ಪ್ರಸಿದ್ಧಿಪಡೆದಿದೆ.

26) ಪ್ರಾಚೀನ ಕಾಲದಲ್ಲಿ ಚನ್ನಪಟ್ಟಣ ವೀಣೆ ತಂತಿಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದ್ದುದಕ್ಕೆ  ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.

27) ಚನ್ನಪಟ್ಟಣವನ್ನು ಮೊದಲು ತಿಮ್ಮಪ್ಪ ರಾಜ ಅರಸು ಎಂಬ ಸಾಮಂತ ಆಳುತ್ತಿದ್ದರು.

28) ಚನ್ನಪಟ್ಟಣದ ಅಬ್ಬೂರ ಸಮೀಪ ಪುರಾಣ ಪ್ರಸಿದ್ಧ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಈ ಭಾಗದಲ್ಲಿ ಹರಿಯುವ ನದಿಗೆ ಕಣ್ವನದಿ ಎಂದು ಹೆಸರು ಬಂದಿದೆ.

29) ರೇವಣಸಿದ್ದೇಶ್ವರ ಸ್ವಾಮಿಗಳ ಪುಣ್ಯಕ್ಷೇತ್ರ ರಾಮನಗರ ಸಮೀಪದ‌ ಅವ್ವೇರಹಳ್ಳಿಯ ಬೆಟ್ಟದಲ್ಲಿದೆ.

30) ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಾಮಾನುಜಾಚಾರ್ಯರು ಕೆಲವು ದಿನಗಳು ಚನ್ನಪಟ್ಟಣದ ವರದರಾಜಸ್ವಾಮಿ ದೇವಾಲಯದಲ್ಲಿ ನೆಲೆಸಿ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾಗಿ ಉಲ್ಲೇಖವಿದೆ.

31) ಚನ್ನಪಟ್ಟಣದ ಪ್ರಾಚೀನ ಹೆಸರು '‌ ಚಂದದ ಪಟ್ಟಣ' ಎಂಬುದಾಗಿ ಇತ್ತು.

32) ರಾಮನಗರದ‌ ಪ್ರಾಚೀನ ಹೆಸರು ' ‌ಕ್ಲೋಸ್ ಪೇಟೆ '.

33) ಕನಕಪುರದ ಮೊದಲ ಹೆಸರು  'ಕಾನಕಾನ ಹಳ್ಳಿ' ಎಂದು ಕರೆಯಲಾಗುತ್ತಿತ್ತು.

34) ಕರ್ನಾಟಕ ರಾಜ್ಯದ ಏಕೈಕ ಕಾರು ತಯಾರಿಕಾ ಕಂಪನಿ "ಟೊಯೋಟಾ ಕಿರ್ಲೋಸ್ಕರ್ ಮೋಟಾರ್" ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ.

35) ಮಾಗಡಿಯ ಸಾವನದುರ್ಗ ಬೆಟ್ಟ ಇತಿಹಾಸ ಪ್ರಸಿದ್ಧ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ.