ಶತ ಶತಮಾನಗಳಿಂದ ಸಮಾಜವು ನಡೆದು ಬಂದ ದಾರಿಯನ್ನು ತಿಳಿಯಲು ಅವಶ್ಯಕವಾದ ಮಾಹಿತಿಯನ್ನು ನೀಡುವಲ್ಲಿ ಶಾಸನಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸಿವೆ. ಶಾಸನಗಳು ಸಮಾಜಕ್ಕೆ ಮಾನವನು ನೀಡಿದ ಕೊಡುಗೆಗಳ ಅಮೂಲ್ಯ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಸಮಕಾಲೀನದಾಖಲೆಯ ವಸ್ತುಗಳೊಂದಿಗೆ, ಕಾಲಕಾಲಕ್ಕೆ ಸಂಭವಿಸಿದ ಘಟನೆಗಳ ಬಗೆಗೂವಾಸ್ತವಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಪ್ರಾಚೀನ ಶೋಧನ ಶಾಸ್ತ್ರಗಳ ಪರಿಶೋಧನೆ ಮತ್ತು ಭೂಶೋಧನೆಗಳ ಮೂಲಕ ಬೆಳಕಿಗೆ ಬಂದ ಸಾಕ್ಷಿಗಳಲ್ಲಿ ಕಳೆದ ಐದು ಸಾವಿರ ವರ್ಷಗಳಿಂದಲೂ ಭಾರತದಲ್ಲಿ ಪ್ರಾಚೀನ ನಾಗರೀಕತೆಗಳಾದ ಸರಸ್ವತಿ ನದಿ ನಾಗರೀಕತೆಯೆಂದು ಪ್ರಸಿದ್ಧವಾದ ಸಿಂಧೂ ನದಿ ನಾಗರೀಕತೆ, ಗಂಗಾತೀರದ ನಾಗರೀಕತೆಗಳು ಕ್ರಿ.ಪೂ. ಮೂರು ಸಾವಿರ ವರ್ಷಗಳ ಹಿಂದೆ ಮಾನವ ಜೀವನದ ಅಧ್ಯಯನಕ್ಕೆ ಸಂಬಂಸಿದಂತೆ ಪ್ರಮುಖವಾದ ಸುಳಿವನ್ನು ಒಳಗೊಂಡಿದೆ.
ಸಿಂಧೂನದಿ ನಾಗರೀಕತೆಯಲ್ಲಿ ಮುದ್ರೆಗಳು ಹಾಗೂ ಪಟ್ಟಿಕೆಗಳು ಮತ್ತು ವಿಶೇಷ ಸಂದರ್ಭದಗಳಲ್ಲಿ ಇತರ ವಸ್ತುಗಳ ಮೇಲೂ ಬರೆದಿರುವ ಬರಹದ ಚಿನ್ಹೆಗಳು ಕಂಡುಬರುತ್ತವೆ.ಈವರೆವಿಗೂ ಪ್ರಾಚೀನ ಭಾರತದ ಈ ಲಿಪಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡದಿರುವುದರಿಂದ ಮುದ್ರೆಗಳು ಹಾಗೂ ಪಟ್ಟಿಕೆಗಳ ಮೇಲೆ ಬರೆದಿರುವ ಬರಹದ ವಿಚಾರವು ನಮಗೆ ಹೊಳೆಯುವುದಿಲ್ಲ. ಸಾಹಿತ್ಯದ ಮೂಲಕ ತಿಳಿದುಬರುವಂತೆ ಜನರು ವರ್ಣನಾನುಕ್ರಮದ ಈ ಲಿಪಿಯನ್ನು ಅಬಿವೃದ್ಧಿಪಡಿಸಿದ್ದರೂ ಸಹಾ ನಮಗೆ ಅವುಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. ಹಾಗಿದ್ದರೂ ಸಹಾ ಕ್ರಿ.ಪೂ. ೫ನೆಯ ಶತಮಾನಕ್ಕೆ ಮೊದಲೇ ಭಾರತೀಯರು ವರ್ಣಮಾಲೆಯ ಲಿಪಿಗಳನ್ನು ಅಬಿವೃದ್ಧಿಪಡಿಸಿ ಬಳಸುತ್ತಿದ್ದರೆಂದು ತಿಳಿದು ಬರುತ್ತದೆ.
ಭಾರತದ ಉದ್ದಗಲಕ್ಕೂ ಶಾಸನಗಳನ್ನು ಕೆತ್ತಿಸಿದ ಕೀರ್ತಿಯು ಮೌರ್ಯ ಚಕ್ರವರ್ತಿ ಅಶೋಕನಿಗೆ ಸಲ್ಲುತ್ತದೆ. ಅವನ ಶಾಸನಗಳು ಉತ್ತರದಲ್ಲಿ ನೇಪಾಳದಿಂದ ಆಫ್ಘಾನಿಸ್ಥಾನ ದವರೆಗೂ ದಕ್ಷಿಣದಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲೂ,ಪಶ್ಚಿಮದಲ್ಲಿ ಗುಜರಾತಿ ನಿಂದ ಬಿಹಾರದವರೆಗು,ಪೂರ್ವದಲ್ಲಿ ಒರಿಸ್ಸಾದಿಂದ ಬಂಗಾಳದವರೆಗೂ ಕಂಡು ಬರುತ್ತದೆ. ಈ ಶಾಸನಗಳು ಬ್ರಾಹ್ಮೀ, ಖರೋಷ್ಟಿ, ಗ್ರೀಕ್ ಮತ್ತು ಅರಾಬಿಕ್ ಲಿಪಿಯಲ್ಲಿವೆ. ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳನ್ನು ಪ್ರಾಕೃತ ಭಾಷೆಯಲ್ಲಿ ಕಂಡರಿಸಲಾಗಿದೆ. ಗ್ರೀಕ್ ಮತ್ತು ಅರಾಬಿಕ್ ಲಿಪಿಗಳನ್ನು ಆಯಾ ಭಾಷೆಯಲ್ಲಿಯೇ ಕಂಡರಿಸಲಾಗಿದೆ. ಈ ಎಲ್ಲಾ ಲಿಪಿಗಳ ವರ್ಣಮಾಲೆಗಳು ಪೂರ್ಣವಾಗಿ ವೃದ್ಧಿಹೊಂದಿದೆ. ತಮಿಳು ನಾಡಿನ ಗುಹೆಗಳಲ್ಲಿ ಬ್ರಾಹ್ಮೀಲಿಪಿಯನ್ನು ಪ್ರಾಚೀನ ತಮಿಳು ಲಿಪಿಯಲ್ಲಿ ಕಂಡರಿಸಲಾಗಿದೆ. ಇದೇ ಶೈಲಿಯನ್ನು ಅಶೋಕನ ಕಾಲದ ಶ್ರೀಲಂಕಾ ಶಾಸನಗಳಲ್ಲಿಯೂ ಕಾಣಬಹುದು. ನಂತರದಲ್ಲಿ ತಮಿಳು ಆಗ್ನೇಯ ರಾಷ್ಟ್ರಗಳಾದ ಬರ್ಮಾ,ಜಾವಾ, ಸುಮಾತ್ರ, ಇಂಡೋನೇಷಿಯಾ ಮತ್ತಿತರ ಆಗ್ನೇಯ ರಾಷ್ಟ್ರಗಳವರೆಗೂ ಹಬ್ಬಿತು.
ಕ್ರಿ.ಶ ಮೂರನೆಯ ಶತಮಾನದ ನಂತರ ಶಾಸಗಳಲ್ಲಿ ಕ್ರಮೇಣ ಸಂಸ್ಕೃತವು ಪ್ರಾಕೃತ ಭಾಷೆಯ ಸ್ಥಾನವನ್ನು ಆಕ್ರಮಿಸಿಕೊಂಡಿತು. ಸಂಸ್ಕೃತವು ಶಾಸನ ಭಾಷೆಯಾಗಿ ಆಧುನಿಕ ಕಾಲದವರೆಗೂ ಮುಂದುವರೆಯಿತು. ಇಂದಿಗೂ ಸಹಾ ವಿಶೇಷ ಸಂದರ್ಭಗಳಲ್ಲಿ ಸಂಸ್ಕೃತವನ್ನು ಶಾಸನ ಭಾಷೆಯಾಗಿ ಬಳಸಲಾಗುತ್ತದೆ. ಹಾಗಿದ್ದರೂ ಸಹಾ ಕ್ರಿ.ಶ ೫ನೇ ಶತಮಾನದ ಮಧ್ಯಭಾಗದಿಂದ ಕನ್ನಡ ಭಾಷೆಯು ಶಾಸನ ಭಾಷೆಯಾಗಿ ಮುನ್ನಡೆಯನ್ನು ಸಾಸಿತು. ಕನ್ನಡದ ಅತಿಪ್ರಾಚೀನ ಶಾಸನವು ಕರ್ನಾಟಕದ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ಕಂಡು ಬಂದಿತು. ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯು ಕ್ರಮೇಣ ಬದಲಾವಣೆಯನ್ನು ಹೊಂದಿ ವಿವಿಧ ಲಿಪಿಗಳಿಗೆ ಜನ್ಮನೀಡಿದ ನಂತರ ಆಯಾ ಭಾಷೆಯ ಹೆಸರಿನಿಂದ ಪ್ರಸಿದ್ಧವಾಯಿತು. ಎಂದು ತಿಳಿಯಲು ಸ್ವಾರಸ್ಯವಾಗಿದೆ, ಈ ಮಾತೃಲಿಪಿಯಿಂದ ಸಂಸ್ಕೃತ ಮತ್ತು
ದ್ರಾವಿಡ ಭಾಷೆಗಳಿಗೆ ವಿವಿಧ ಲಿಪಿಗಳನ್ನು ಬಳಸಿ ಅವುಗಳನ್ನು ಪಡೆಯಲಾಯಿತು. ಆ ಲಿಪಿಗಳು ಪಂಜಾಬಿ, ಗುಜರಾತಿ, ನೇವಾರಿ, ಒರಿಯಾ, ಬಂಗಾಲಿ, ದೇವನಾಗರಿ ಹಾಗು ಕನ್ನಡ, ತಮಿಳು, ತೆಲುಗು, ಮಲಯಾಳಂ ಸಂಸ್ಕೃತ ಹಾಗು ದ್ರಾವಿಡ ಭಾಷೆ ಗಳಿಗೆ ಬಳಸಿದ ಇತರ ಲಿಪಿಗಳು ಮತ್ತೊಂದು ಕಡೆ ಬ್ರಾಹ್ಮಿಯ ಮೂಲಕ್ಕೆ ಋಣಿಯಾಗಿದೆ. ಕ್ರಿ.ಶ ೫೬ ನೆಯ ಶತಮಾನದಲ್ಲಿ ಅಸ್ಥಿತ್ವಕ್ಕೆ ಬಂದ ಗ್ರಂಥಲಿಪಿ ಮತ್ತು ವಟ್ಟೆಳುತ್ತು ಎಂಬ ಪ್ರಮಾಣಪೂರ್ಣವಾದ ಲಿಪಿಯು ಕೆಲವು ತಮಿಳು ಶಾಸನಗಳಲ್ಲಿ ಬಳಸಲ್ಪಟಿದ್ದು ತಮ್ಮ ಮೂಲವನ್ನು ಬ್ರಾಹ್ಮಿಗೇ ಒಯ್ಯುತ್ತದೆ.
ಕ್ರಿ. ಪೂ. ೩ ನೆಯ ಶತಮಾನದಿಂದ ಕ್ರಿ.ಶ. ೧೨ ನೆಯ ಶತಮಾನದವರೆಗೆ ಕರ್ನಾಟಕದ ಬ್ರಾಹ್ಮೀಲಿಪಿಯು ಸ್ಪಷ್ಟವಾದ ಬದಲಾವಣೆಗಳನ್ನು ಹೊಂದಿ ಅನಂತರದ ಶತಮಾನಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಹೊಂದಿತು. ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ತಲಕಾಡಿನ ಗಂಗರು, ರಾಷ್ಟ್ರಕೂಟರು, ಕಲ್ಯಾಣಿಚಾಲುಕ್ಯರು, ಕಲಚೂರಿಗಳು, ಸೇವುಣರು ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು ಮತ್ತಿತರ ಸಾಮಂತ ರಾಜವಂಶಗಳು ಬ್ರಾಹ್ಮೀಲಿಪಿಯಲ್ಲಿ ಸ್ಪಷ್ಟವಾದ ಬದಲಾವಣೆಯ ಚಿನ್ಹೆಗಳನ್ನು ಕ್ರಿ.ಶ ೫ ನೆಯ ಶತಮಾನದ ನಂತರ ಕಂಡವು. ಕ್ರಿ.ಶ ೫ ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ದಕ್ಷಿಣ ಭಾರತದ ಬ್ರಾಹ್ಮಿಯು ೧೦೦೦ ವರ್ಷಗಳಲ್ಲಿ ಸ್ಪಷ್ಟವಾದ ಬದಲಾವಣೆಗಳನ್ನು ಹೊಂದಿ ಮುದ್ರಣ ತಂತ್ರಜ್ಞಾನವು ಅಸ್ತಿತ್ವಕ್ಕೆ ಬಂದ ನಂತರ ಸ್ಥಿರರೂಪವನ್ನು ಪಡೆಯಿತು. ಕನ್ನಡ ಮತ್ತು ತೆಲುಗು ಶಾಸನಗಳು ಒಂದೇ ರೀತಿಯ ಲಿಪಿಯನ್ನು ಬಳಸುತ್ತಿದ್ದುದರಿಂದ ತಮ್ಮ ಮೂಲವನ್ನು ಮಾತೃಲಿಪಿಯಾದ ಬ್ರಾಹ್ಮೀಗೆ ಒಯ್ದು ಋಣಿಯಾಗಿದೆ. ಆದ್ದರಿಂದ ಕನ್ನಡತೆಲುಗು ಅಥವಾ ತೆಲುಗುಕನ್ನಡ ಲಿಪಿ ಎಂದು ಕ್ರಿ.ಶ ೧೫ ನೆಯ ಶತಮಾನದಲ್ಲಿ ಕರೆಯಲಾಯಿತು. ಇಂದಿಗೂ ಸಹಾ ಇವೆರಡೂ ಲಿಪಿಯಲ್ಲೂ ಕೆಲವು ಅಕ್ಷರಗಳ ಹೊರತು, ಉಳಿದೆಲ್ಲಾ ಅಕ್ಷರಗಳು ಸಮನಾಗಿವೆ. ಕನ್ನಡ ಅಥವಾ ತೆಲುಗು ಮಾತನಾಡುವ ಕ್ಷೇತ್ರದಿಂದ ಬಂದ ವ್ಯಕ್ತಿಯು ಬೇರೆ ಕ್ಷೇತ್ರದಲ್ಲಿ ಜಾರಿಯಲ್ಲಿರುವ ಲಿಪಿಯನ್ನು ಸುಲಭವಾಗಿ ಓದಬಹುದು. ಒಂದು ಶತಮಾನದಲ್ಲಿ ಶಶೈಲಿಯ ಅತ್ಯಲ್ಪ ವ್ಯತ್ಯಾಸದೊಂದಿಗೆ ಪ್ರಾದೇಶಿಕ ಬಿನ್ನತೆಯಿಂದ ಕೂಡಿದ ಲಿಪಿಗಳಾದವು. ಲಿಪಿಗಳು ನಗರವೈವಿಧ್ಯ ಗ್ರಾಮೀಣ ವೈವಿಧ್ಯದಿಂದ ಕೂಡಿದ್ದು ಅಕ್ಷರಗಳು ಪ್ರಾಚೀನಲಿಪಿಶಾಸ್ತ್ರದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿದ್ದರೂ ಸಹಾ ಅವಸರದಲ್ಲಿ ಅಥವಾ ಅಲಕ್ಷ್ಯದಿಂದ ಬರೆದಂತಿರುತ್ತದೆ. ಉದಾಹರಣೆಗೆ ಹಲ್ಮಿಡಿ ಶಾಸನದಲ್ಲಿ ಬಳಸಿರುವ ಕನ್ನಡ ಲಿಪಿಯಲ್ಲಿ ಅಲಂದಿನ ಕಾಲದ ಇದೇ ವಂಶಸ್ಥರ ಇತರ ಶಾಸನಗಳ ಲಿಪಿಗಳಲ್ಲಿ ಕಂಡುಬರುವ ಚೌಕತಲೆಯು ಕಂಡುಬರುವುದಿಲ್ಲ.
ಕಾಕುತ್ಸವರ್ಮನ ಕಾಲದ ಶಿವಮೊಗ್ಗ ಜಿಲ್ಲೆಯ ತಾಳಗುಂದ ಶಾಸನ, ಉತ್ತರ ಕರ್ನಾಟಕದ ಬನವಾಸಿಯ ಮೃಗೇಶವರ್ಮನ ಶಾಸನಗಳು ಕನ್ನಡ ಲಿಪಿಯ ಉತ್ತಮ ಉದಾಹರಣೆಗಳಾಗಿವೆ. ತಾಮ್ರಪತ್ರಗಳಲ್ಲಿ ಕಂಡುಬರುವ ಲಿಪಿಗಳಲ್ಲಿ ಬಿನ್ನ ಶೈಲಿಯ ಲಿಪಿಗಳಿರುತ್ತವೆ. ಒರಟು ಕಲ್ಲಿನ ಮೇಲೆ ಕಂಡರಿಸಿರುವ ಅಕ್ಷರಗಳಲ್ಲಿ ಕಲ್ಲು ಒರಟಾದ್ದರಿಂದ ಅದೇ ಬಿನ್ನತೆಯನ್ನು ಹೊಂದಿರುತ್ತದೆ. ಕ್ರಿ.ಶ ೧೧೧೨ ನೆಯ ಶತಮಾನದ ಹೊಯ್ಸಳ ಲಿಪಿಯು ಅತ್ಯಂತ ಅಲಂಕಾರಿಕವಾಗಿದ್ದು ಕೆಲವು ಲಿಪಿಗಳು ಪ್ರಾಣಿ, ಪಕ್ಷಿಗಳ ಇತ್ಯಾದಿ ಚಿತ್ರಗಳನ್ನು ನೆನಪಿಸುತ್ತವೆ. ಕ್ರಿ.ಶ ೯ ರಿಂದ ೧೨ ನೆಯ ಶತಮಾನದ ಕನ್ನಡ ಲಿಪಿಗಳಾದ ವ’ ಮ’ ಮತ್ತ್ಙುಯ’ ಅಕ್ಷರಗಳು ರೂಪಾಂತರಗೊಂಡಿವೆ. ಹಸ್ತಪ್ರತಿಗಳಲ್ಲಿ ಬಳಸಿರುವ ಲಿಪಿಗಳು ಶಾಸನಗಲ್ಲಿ ಕಂಡುಬರುವಂತೆ ಒಂದೇ ರೀತಿಯ ಬೆಳವಣಿಗೆಯನ್ನು ತೋರಿದರೂ ಸಹಾ ಅನೇಕ ಸಂದರ್ಭಗಳಲ್ಲಿ ತಮ್ಮದೇ ಆದ ಬಿನ್ನಶೈಲಿಯನ್ನು ಹೊಂದಿರುತ್ತವೆ.
ವಿವಿಧ ಶತಮಾನಗಳಿಗೆ ಸಂಬಂಸಿದ ಕರ್ನಾಟಕದ ಶಾಸನಗಳನ್ನು ನಾವೀಗ ಅವಲೋಕಿಸಬಹುದು. ಕ್ರಿ.ಪೂ ೩ ನೆಯ ಶತಮಾನದಿಂದ ಕ್ರಿ.ಶ ೩ ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ಶಾಸನಗಳು ಪ್ರಾಕೃತ ಭಾಷೆಯಲ್ಲಿತ್ತು. ಅತಿ ಶೀಘ್ರದಲ್ಲಿಯೇ ಕ್ರಿ.ಶ ೪ ನೆಯ ಶತಮಾನದಲ್ಲಿ ಸಂಸ್ಕೃತವು ಮುನ್ನಡೆಯನ್ನು ಸಾಸಿತು. ಕ್ರಿ.ಶ ೫ನೆಯ ಶತಮಾನದ ನಂತರವೂ ಸಂಸ್ಕೃತದ ಬಳಕೆಯು ಆಧುನಿಕ ಕಾಲದವರೆಗೂ ಮುಂದುವರೆದು, ಇಂದಿಗೂ ಸಹಾ ಶಾಸನ ಭಾಷೆಯಾಗಿ ಬಳಸಲ್ಪಡುತ್ತಿದೆ. ಕ್ರಮೇಣ ಕನ್ನಡವು ಅತ್ಯಂತ ಪ್ರಸಿದ್ಧಿ ಹಾಗೂ ಪ್ರಾಮುಖ್ಯತೆಯನ್ನು ಪಡೆಯಿತು. ಹೀಗಿದ್ದರೂ ಸಹಾ ಕರ್ನಾಟಕವು ತಮಿಳುನಾಡು, ಕೇರಳ, ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಆವೃತವಾಗಿರುವುದರಿಂದ, ಹಾಗೂ ಚೋಳರು, ಕರ್ನಾಟಕದ ಗಡಿಭಾಗದಲ್ಲಿನ ಮುಸ್ಲಿಮರು ಮತ್ತು ಮರಾಠರನ್ನು ಒಳಗೊಂಡಂತೆ ಹಲವಾರು ರಾಜಮನೆತನಗಳು ಆಳಿರುವುದರಿಂದ ತಮಿಳು, ತೆಲುಗು, ಮರಾಠಿ, ಅರಾಬಿ, ಪರ್ಷಿಯನ್, ಇಂಗ್ಲಿಷ್, ಮಲಯಾಳಂ, ಇತ್ಯಾದಿ ಭಾಷೆಗಳ ಶಾಸನಗಳು ನಮಗೆ ದೊರೆಯುತ್ತವೆ. ಕನ್ನಡ ಮತ್ತು ಸಂಸ್ಕೃತ ಶಾಸನಗಳು ಕ್ರಿ. ಶ ೪೫ ನೆಯ ಶತಮಾನಗಳ ನಂತರವೂ ಪ್ರಧಾನವಾಗಿದ್ದರೂ ಸಹಾ ವಿಶೇಷ ಸಂದರ್ಭಗಳಲ್ಲಿ ವಿಶೇಷವಾಗಿ ಗಡಿಭಾಗಗಳಲ್ಲಿರುವ ಶಾಸನಗಳಲ್ಲಿ ಮೇಲ್ಕಂಡ ಕಾರಣಗಳಿಂದಾಗಿ ಒಂದಕ್ಕಿಂತ ಹೆಚ್ಚಿನ ಲಿಪಿ ಹಾಗೂ ಭಾಷೆಯಲ್ಲಿ ಇರುತ್ತದೆ.
ಶಾಸನಗಳನ್ನು ವಿಶಾಲಾರ್ಥದಲ್ಲಿ ಶಿಲಾಶಾಸನಗಳು ಮತ್ತು ತಾಮ್ರ ಶಾಸನಗಳೆಂದು ವಿಭಜಿಸಬಹುದು. ಶಿಲಾಶಾಸನಗಳು ಬಂಡೆಗಳು, ಶಿಲಾಫಲಕಗಳು, ದೇವಾಲಯದ ಗೋಡೆಗಳು, ಕಂಭಗಳು ಹಾಗೂ ಹಲವಾರು ಕಡೆಗಳಲ್ಲಿ ಕಡೆದಿರುವ ಶಾಸನಗಳನ್ನು ಒಳಗೊಂಡಿರುತ್ತವೆ. ವೀರಗಲ್ಲು ಶಾಸನಗಳು ಹಾಗೂ ಸ್ಮಾರಕ ಶಾಸನಗಳೂ ಇವೆ. ವೀರಗಲ್ಲಿನ ಶಾಸನಗಳನ್ನು ಶಿಲ್ಪಗಳ ಹಂತ ಹಂತದ ಮಧ್ಯದಲ್ಲಿರುವ ಶಿಲಾಪಟ್ಟಿಕೆಗಳ ಮೇಲೆ ಕೆತ್ತಲ್ಪಟ್ಟಿರುತ್ತವೆ. ಈ ಹಂತಗಳು ಮೂರರಿಂದ ಐದು ಅಥವಾ ಕೆಲವು ಸಂದರ್ಭಗಳಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಸತಿ’ ಅಥವಾ ಮಹಾಸತಿ’ ಕಲ್ಲಿನ ಶಾಸನಗಳು ರಣರಂಗದಲ್ಲಿ ತಮ್ಮ ಪತಿಯ ಮರಣಾನಂತರ ಸತಿ’ಯಾದ ವೀರರ ಪತ್ನಿಯರ ಸ್ಮರಣಾರ್ಥಕವಾಗಿರುತ್ತದೆ. ಕೆಲವು ಶಾಸನಗಳು ರಣರಂಗದಲ್ಲಿ ವೀರರೊಂದಿಗೆ ಹೋರಾಡಿ ಮಡಿದ ಪ್ರಾಣಿಗಳಾದ ಆನೆ, ನಾಯಿಗಳ ಸ್ಮರಣಾರ್ಥಕವಾಗಿದ್ದು ವೀರನ ಪಕ್ಕದ್ದಲ್ಲಿ ಕೆತ್ತಲ್ಪಟ್ಟಿರುತ್ತದೆ. ಇತರ ಸ್ಮಾರಕಶಿಲೆಗಳಾದ ನಿಷಿಗಲ್ಲುಗಳಲ್ಲಿ, ಸಲ್ಲೇಖನವ್ರತದಿಂದ ದೇಹತ್ಯಾಗ ಮಾಡಿದ ಜೈನ ಸನ್ಯಾಸಿಗಳ ಉಲ್ಲೇಖವಿರುತ್ತದೆ. ಶತಮಾನದ ಆದಿಯಿಂದಲೂ ಇಂತಹ ಸ್ಮಾರಕ ಶಿಲೆಗಳು ದೊರೆಯುತ್ತವೆ.
ಶಿಲ್ಪವಿರುವ ವೀರಗಲ್ಲುಗಳಲ್ಲಿ ಯುದ್ಧ ಹಾಗೂ ಗೋಹರಣ ಸಂದರ್ಭಗಳಲ್ಲಿ ಹೋರಾಡುತ್ತಿರುವ ವೀರನ ಶಿಲ್ಪ ಮತ್ತು ವೀರರನ್ನು ಸ್ವರ್ಗದ ಸುರಾಂಗನೆಯರು ಪುಷ್ಪಕ ವಿಮಾನದಲ್ಲಿ ಕೊಂಡೊಯ್ಯುವ ಶಿಲ್ಪ ಮತ್ತು ಮೇಲಿನ ಹಂತದಲ್ಲಿ ವೀರನು ತನ್ನ ಜೀವಿತಾವಯಲ್ಲಿ ಪೂಜಿಸುತ್ತಿದ್ದ ದೈವ ಅಥವಾ ವೀರರನ್ನೇ ಸ್ವರ್ಗದಲ್ಲಿರುವವರು ಪೂಜಿಸುತ್ತಿರುವ ಶಿಲ್ಪವನ್ನು ಕೆಳಭಾಗದಿಂದ ಮೇಲ್ಭಾಗದವರೆಗೆ ಹಂತ ಹಂತವಾಗಿ ಕೆತ್ತಿರುತ್ತಾರೆ. ಶಿಲ್ಪಗಳ ಹಂತ ಹಂತಗಳ ಮಧ್ಯಭಾಗದಲ್ಲಿರುವ ಶಿಲಾಪಟ್ಟಿಕೆಗಳಲ್ಲಿ ಕಂಡರಿಸಿರುವ ಶಾಸನಗಳಲ್ಲಿ ಯುದ್ಧದ ವಿವರ ಹಾಗೂ ವೀರನ ವಿವರಗಳು, ಯುದ್ಧದಲ್ಲಿ ವೀರನ ಮರಣಾನಂತರ ಅವನ ಕುಟುಂಬದವರಿಗೆ ನೀಡಿದ ದಾನಗಳ ವಿವರಗಳಿದ್ದು ಮೇಲಿನಿಂದ ಕೆಳಭಾಗದವೆರೆಗೆ ಕೆತ್ತಿರುತ್ತಾರೆ. ಅನೇಕ ಶಾಸನಗಳಲ್ಲಿ ಅಲಂದಿನ ಕಾಲದಲ್ಲಿ ರಾಜ್ಯವಾಳುತ್ತಿದ್ದ ರಾಜನ ಹೆಸರು ಹಾಗೂ ಕಾಲದ ನಿರೂಪಣೆಯಿರುತ್ತದೆ. ತಾಮ್ರಪತ್ರಗಳನ್ನು ರಾಜವಂಶದವರು ಹಾಗೂ ಇತರ ಸಂಸ್ಥೆಗಳು ನೀಡಿರುತ್ತವೆ.
ಅಂದವಾಗಿ ಸಜ್ಜುಗೊಳಿಸಿದ ಒಂದು ಅಥವಾ ಹೆಚ್ಚಿನ ತಾಮ್ರಪತ್ರಗಳ ಮೇಲೆ ಶಾಸನವನ್ನು ಕಂಡರಿಸಿದ ಕ್ರಮಸಂಖ್ಯೆಯನ್ನು ನೀಡಲಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತಾಮ್ರಪತ್ರಗಳಿದ್ದಲ್ಲಿ ಮೇಲಿನ ಮಧ್ಯಭಾಗದಲ್ಲಿ ರಂಧ್ರವನ್ನು ಮಾಡಿ, ಎಲ್ಲ ತಾಮ್ರ ಪತ್ರಗಳನ್ನು ಒಂದು ಉಂಗುರದಿಂದ ಸೇರಿಸಿ ಉಂಗುರದ ಮೇಲೆ ರಾಜಮುದ್ರೆಯನ್ನು ಹೊಂದಿದ್ದು, ತಾಮ್ರಪತ್ರದಲ್ಲಿ ದಾಖಲಿಸಿರುವ ದಾನವನ್ನು ನೀಡಿದ ರಾಜ ಅಥವಾ ಚಕ್ರವರ್ತಿಯ ಹೆಸರಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಶಿಲಾಶಾಸನಗಳನ್ನು ಹಾಕಿಸಿದ ಅನೇಕ ಉಲ್ಲೇಖಗಳಿವೆ. ಶಿಲಾಶಾಸನಗಳಲ್ಲಿ ಉಲ್ಲೇಖಿಸಿರುವ ದಾನಗಳು ತಾಮ್ರಪತ್ರದಲ್ಲಿಯೂ ಕಂಡುಬರುತ್ತದೆ.
ಶಿಲಾಶಾಸನಗಳಲ್ಲಿ ಬಹುಪಾಲು ದಾನದ ರೂಪದಲ್ಲಿದ್ದು, ದೇವಾಲಯದ ನಿರ್ಮಾಣವನ್ನೋ ಅಥವಾ ಇತರ ಭವನವನ್ನೋ, ಶ್ರೇಷ್ಠರಾದ ಪಿತೃಗಳ ಆತ್ಮೋನ್ನತಿಗಾಗಿ ಅಥವಾ ದೇವಾಲಯದ ದೇವರಿಗಾಗಿ, ರಾಣಿಯರು ಅಥವಾ ದಂಡ ನಾಯಕರು ಅಥವಾ ಸಾಧಾರಣ ವ್ಯಕ್ತಿಗಳಿಂದ ನಿರ್ಮಿತವಾದ ದೇವಾಲಯವನ್ನೋ ಅಥವಾ ಇತರ ಭವನಗಳ ನಿರ್ಮಾಣವನ್ನೋ ಉಲ್ಲೇಖಿಸಲ್ಪಟ್ಟಿರುತ್ತದೆ, ಕೆಲವು ಶಾಸನಗಳು ಎರಡು ಬಿನ್ನ ಮತಧರ್ಮಗಳ ವಿವಾದವನ್ನು ಬಗೆಹರಿಸುವುದು, ಬರಗಾಲದಲ್ಲಿ ಕೃಷಿತೆರಿಗೆಯನ್ನು ಮನ್ನಾ ಮಾಡಿರುವುದು ಅಥವಾ ಬ್ರಾಹ್ಮಣರಿಗೆ ಹಳ್ಳಿಯನ್ನು ದಾನನೀಡಿದ ವಿಷಯವನ್ನು ದಾಖಲಿಸಿರುವುದು ಇತ್ಯಾದಿ. ವಿಗ್ರಹಗಳ ಪಾದಪೀಠಗಳ ಮೇಲಿರುವ ಶಾಸನದಿಂದ ಅವುಗಳನ್ನು ಪ್ರತಿಷ್ಠಾಪಿಸಿದ ವಿವರ ಇತ್ಯಾದಿಗಳನ್ನು ಒಳಗೊಂಡಿರುವುದನ್ನು ಅನೇಕ ವಿಗ್ರಹಗಳಲ್ಲಿ ಕಾಣಬಹುದು.
ಪ್ರಾಚೀನ ಸಮಾಜದ ಅಧ್ಯಯನದಲ್ಲಿ ಶಾಸನಗಳ ಪ್ರಾಮುಖ್ಯತೆ:
ಶಾಸನಗಳು ಪ್ರಾಕೃತ, ಸಂಸ್ಕೃತ ಅಥವಾ ಪ್ರಾದೇಶಿಕ ಭಾಷೆಗಳಲ್ಲಿರಲಿ, ಪ್ರಾರಂಭದಲ್ಲಿ ಸಂಕ್ಷಿಪ್ತವಾಗಿದ್ದು, ಶತಮಾನಗಳು ಕಳೆದಂತೆ ಹೆಚ್ಚು ವಿವರಣಾತ್ಮಕವಾಗುತ್ತವೆ. ಒಟ್ಟಿನಲ್ಲಿ ಪ್ರಾಕೃತ ಶಾಸನಗಳು ನೇರ ವಿವರಣೆಯನ್ನು ನೀಡುತ್ತವೆ, ಕನ್ನಡ ಮತ್ತು ಸಂಸ್ಕೃತ ಶಾಸನಗಳು ಮಧ್ಯಯುಗದಲ್ಲಿ ಅಥವಾ ನಂತರದ ಯುಗದಲ್ಲಿ ಹೆಚ್ಚು ಹೆಚ್ಚು ವಿವರಣಾತ್ಮಕವಾಗಿರುವುದು ಕಂಡುಬರುತ್ತದೆ. ಶಾಸನದ ಪ್ರಾರಂಭದಲ್ಲಿ ದಾನಿಯ ಇಷ್ಟದೈವದ ಪ್ರಣಾಮವಿದ್ದು, ಅದು ಕೇವಲ ಕೆಲವೇ ನುಡಿಗಳಲ್ಲಿರುತ್ತದೆ. ಅವು ಓಂ ನಮಃ ಶಿವಾಯ’ ಓಂ ನಮೋ ವಿಷ್ಣುವೇ’ ಓಂ ನಮೋ ಜಿನೇಂದ್ರಾಯ’ ಅಥವಾ ಓಂ ನಮೋ ಸಿದ್ಧಾನಿ’ ಇತ್ಯಾದಿ ಕೆಲವು ಸಂದರ್ಭಗಳಲ್ಲಿ ಪ್ರಾರ್ಥನಾ ಶ್ಲೋಕಗಳು ಅಥವಾ ಆಯಾ ದೇವರುಗಳ ಸ್ತೋತ್ರರೂಪದಲ್ಲಿರುತ್ತದೆ. ಇದಾದ ನಂತರ ಆಳುವ ಚಕ್ರವರ್ತಿ ಅಥವಾ ರಾಜನ ಅವನ ರಾಣಿಯರ, ದಂಡನಾಯಕರ, ಸ್ಥಳೀಯ ಅಕಾರಿಗಳ ವಂಶವಿವರಣೆ ಅಥವಾ ಕುಟುಂಬದ ಸಾಧನೆ ಇತ್ಯಾದಿಗಳನ್ನು ಉಲ್ಲೇಖಿಸಲಾಗುತ್ತದೆ. ಇದಾದ ನಂತರ ಶಾಸನದ ಮುಖ್ಯೋದ್ದೇಶವಾದ ದೇವಾಲಯದ ನಿರ್ಮಾಣ, ದಾನದ ವಿವರ ಇತ್ಯಾದಿಗಳಿರುತ್ತವೆ. ಸಾಮಾನ್ಯವಾಗಿ ದೇವರ ನಿತ್ಯಪೂಜೆ, ಉತ್ಸವ, ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಅನ ದೇವತೆಗಳ ವಿವರಗಳನ್ನು ಒಳಗೊಂಡಿರುತ್ತದೆ. ದೇವಾಲಯಕ್ಕೆ ಹೊಂದಿಕೊಂಡಂತಿರುವ ಪಾಠಶಾಲೆ ಅಥವಾ ಘಟಿಕಾಚಲದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮೇಲ್ವಿಚಾರಣೆ, ದಾನಿ ಹಾಗೂ ಅವನ ಕುಟುಂಬವರ್ಗ, ಇತರ ದೇವಾಲಯದ ಪರಿಚಾರಕರು ಇತ್ಯಾದಿ ವಿವರಗಳಿರುತ್ತದೆ. ಬಹುಪಾಲು ದಾನಗಳು ಖುಷ್ಕಿ ಹಾಗೂ ನೀರಾವರಿ ಹೊಲದ ರೂಪದಲ್ಲಿರುತ್ತದೆ. ಕೆಲವು ದಾನಗಳು ಎಣ್ಣೆಯ ಗಾಣ, ನಿರಂತರ ದೀಪದ ಸೇವೆ, ಗೋವು ಇತ್ಯಾದಿಗಳಾಗಿರುತ್ತವೆ. ಗೋವುಗಳು ದೇವಾಲಯಕ್ಕೆ ಅವಶ್ಯಕವಾದ ಹಾಲು ತುಪ್ಪಗಳನ್ನು ಪೂರೈಸುತ್ತವೆ. ದಾನಗಳು ಹಣದ ರೂಪದಲ್ಲಿ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಪಾತ್ರೆಗಳು, ಜಾಗಟೆ, ಗಂಟೆ ಮತ್ತಿತರ ದೇವಾಲಯಕ್ಕೆ ಅಗತ್ಯವಾದ ವಸ್ತುಗಳಾಗಿರುತ್ತವೆ. ಇವುಗಳನ್ನು ಶಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿರುತ್ತದೆ.
ಕಾಲವನ್ನು ತಿಳಿಸುವ ಭಾಗದಲ್ಲಿ ಶಕವರ್ಷ ಅಥವಾ ಕಲಿಯುಗ ವರ್ಷ, ಕಾಲಚಕ್ರದ ವರ್ಷ, ತಿಥಿ, ದಿನ, ಮತ್ತಿತರ ವಿಶೇಷ ಸಂದರ್ಭಗಳಾದ ಸೂರ್ಯ ಮತ್ತು ಚಂದ್ರಗ್ರಹಣ ಇವೆಲ್ಲವೂ ದಾನನೀಡಲು ಪ್ರಶಸ್ತವಾದ ಸಂದರ್ಭಗಳಾಗಿವೆ. ಮುಕ್ತಾಯದ ಹಂತದಲ್ಲಿ ಶಾಪವಾಕ್ಯಗಳು ಅಥವಾ ದೇವಾಲಕ್ಕೆ ನೀಡಿರುವ ದಾನವನ್ನು ಸಂರಕ್ಷಿಸಬೇಕೆಂಬ ಸಲಹೆ ಹಾಗೂ ಸಂರಕ್ಷಿಸದವರಿಗೆ ಶಾಪವಿರುತ್ತದೆ. ಸಾಮಾನ್ಯವಾಗಿ ಶಾಪವಾಕ್ಯಗಳನ್ನು ವ್ಯಾಸ, ಮನು ಇತ್ಯಾದಿಗಳಿಂದ ಆಯ್ದು ಕಂಡರಿಸಲಾಗಿದೆ. ದಾನವನ್ನು ಸಂರಕ್ಷಿಸುವವನಿಗೆ ಶ್ರೇಷ್ಠತೆಯನ್ನೂ, ದಾನವನ್ನು ಕಳವು ಮಾಡುವವನು ಅಥವಾ ಹಾಳು ಮಾಡುವವನಿಗೆ ಪಾಪ ಬೀತಿಯನ್ನು ಒತ್ತಿ ಹೇಳಲಾಗುತ್ತದೆ. ವಿಶೇಷವಾಗಿ ಮಧ್ಯಕಾಲೀನ ಶಾಸನಗಳಲ್ಲಿ ಶಾಪವು ಒರಟು ಭಾಷೆಯಲ್ಲಿ ಮೂಡಿಬಂದಿರುತ್ತದೆ. ಇಷ್ಟೆಲ್ಲಾ ಎಚ್ಚರಿಕೆಗಳಿದ್ದರೂ ಸಹಾ ಜನರು ದಾನಗಳನ್ನು ಕಳವು ಅಥವಾ ನಾಶಪಡಿಸುತ್ತಿದ್ದರೆಂದು ಕಂಡುಬರುತ್ತದೆ.
ಕನ್ನಡ ಶಾಸನಗಳಲ್ಲಿ ಬಹುಪಾಲು ಗದ್ಯದಲ್ಲಿಯೂ, ಕೆಲವು ಪದ್ಯದಲ್ಲಿಯೂ, ಕೆಲವು ಚಂಪೂ ಶೈಲಿಯಲ್ಲಿಯೂ ಇರುತ್ತವೆ. ಸಂಸ್ಕೃತ ಶಾಸನಗಳೂ ಸಹ ಚಂಪೂ ಶೈಲಿಯಲ್ಲಿದ್ದು, ಸುಂದರಕಾವ್ಯದಂತಿರುತ್ತದೆ. ಕೆಲವು ಶಾಸನಕವಿಗಳು ಶ್ರೇಷ್ಠಮಟ್ಟದ ಕವಿಗಳಾಗಿರಬಹುದೆಂದು ಶಾಸನದ ಭಾಷೆಯ ಪ್ರೌಡಿಮೆಯಿಂದ ತಿಳಿಯಬಹುದು. ಕದಂಬರ ಕಾಲದ ಶಿವಮೊಗ್ಗ ಜಿಲ್ಲೆಯ ತಾಳಗುಂದ ಶಾಸನ, ಉತ್ತರ ಕರ್ನಾಟಕದ ಬನವಾಸಿ ಮತ್ತು ಗುಡ್ನಾಪುರ ಶಾಸನ, ಐಹೊಳೆಯ ಶಾಸನ ಮತ್ತು ಚಾಲುಕ್ಯ ಎರಡನೆಯ ಪುಲಕೇಶಿಯ ಶಾಸನ ಕನ್ನಡದ ಆದಿಕವಿ ಪಂಪನ ಉಲ್ಲೇಖವಿರುವ ಕುರಿಕ್ಯಾಲ ಶಾಸನ, ಕದಂಬರ ಕಾಲದ ಕೆಲವು ತಾಮ್ರಪತ್ರಗಳು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರ ಕಾಲದಲ್ಲಿ ಶ್ರೇಷ್ಠ ಸಾಹಿತ್ಯ ಗುಣದಿಂದ ಕೂಡಿದ ಶಾಸನಗಳ ಉದಾಹರಣೆಗಳಿವೆ. ಸ್ಮರಣಾರ್ಹವಾದ ಮತ್ತೊಂದು ಮುಖ್ಯವಾದ ಅದಂಶವೆಂದರೆ, ಶಾಸನಗಳು ವೇದ, ಪುರಾಣಗಳಿಂದಲೂ, ಶ್ರೇಷ್ಠಕವಿಗಳಾದ ಕಾಳಿದಾಸ, ಭಾರವಿ, ಬಾಣ, ಭವಭೂತಿ, ಮೊಘ, ಶ್ರೀಹರ್ಷ ಇತ್ಯಾದಿಗಳ ಕಾವ್ಯ ನಾಟಕಗಳಿಂದಲೂ ಹಾಗೂ ಮನು, ಯಾಜ್ಞವಲ್ಕ್ಯ, ನಾರದ ಸಂಹಿತೆಗಳು ಮತ್ತು ಕೌಟಿಲ್ಯನ ಕೃತಿಗಳು, ಆಗಮಗಳು ಮತ್ತಿತರ ಪ್ರಾಚೀನ ಜ್ಯೋತಿಷ್ಯ, ವೈದ್ಯ, ತಂತ್ರಜ್ಞಾನ ಇತ್ಯಾದಿ ಕೃತಿಗಳಿಂದಲೇ ಬಹು ಪ್ರಭಾವಿತವಾಗಿರುವುದನ್ನು ಕಾಣಬಹುದು.
ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದ ಚರಿತ್ರೆಯನ್ನು ರಚಿಸಲು ಶಾಸನಗಳು, ನಾಣ್ಯಗಳು ಬಹುಮುಖ್ಯ ಆಧಾರಗಳಾಗಿವೆ. ಯಾವುದೇ ಪ್ರದೇಶದ ಇತಿಹಾಸ ರಚನೆಯಲ್ಲಿ ಸಮಕಾಲೀನ ದಾಖಲೆಗಳು ಪ್ರಮುಖವಾದವು. ಶಾಸನಗಳಲ್ಲಿ ದಾಖಲಿಸಿರುವ ಘಟನೆಗಳು ನಡೆದ ಸ್ಥಳ, ರಾಜಕೀಯ, ಸಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತಿತರ ವಿಚಾರಗಳ ಸ್ಪಷ್ಟ ಮಾಹಿತಿಯನ್ನು ನೀಡುತ್ತವೆ. ಕರ್ನಾಟಕವು ಇದಕ್ಕೆ ಸಾಕ್ಷಿಯಾಗಿದೆ. ಶಾಸನಗಳಿಂದ ಆಡಳಿತ ವಿಧಾನಗಳು, ಆಡಳಿತಗಾರರು ಅನುಸರಿಸುತ್ತಿದ್ದ ಆದರ್ಶ ಧ್ಯೇಯಗಳು, ಕೃಷಿಲೆಕ್ಕ, ನಾಣ್ಯಪದ್ದತಿ, ತೆರಿಗೆ ಪದ್ದತಿ, ಚಕ್ರವರ್ತಿಯು ಆಡಳಿತದಲ್ಲಿನ ಸಾಮಾನ್ಯ ಆಡಳಿತದ ವಿವರಗಳು, ಪ್ರಾಂತೀಯ, ವಿಭಾಗೀಯ, ಉಪವಿಭಾಗೀಯಗಳ ಹಳ್ಳಿಗಳು, ಅಗ್ರಹಾರಗಳು, ಸೈನ್ಯಾಡಳಿತ, ಪ್ರಾಚೀನ ನ್ಯಾಯಸಂಹಿತೆಗೆ ಅನುಗುಣವಾದ ನ್ಯಾಯ ಶಾಸ್ತ್ರದ ಅಧ್ಯಯನವನ್ನು ಮಾಡಬಹುದು. ಶಾಸನಗಳ ಕಣ್ತಪ್ಪಿಸಿದ ವಾಸ್ತವ ಘಟನೆಗಳು ಯಾವುದೂ ಇಲ್ಲವೆಂದೇ ಹೇಳಬಹುದು.
ವೀರಗಲ್ಲಿನ ಶಾಸನಗಳು ಸಾಮಾನ್ಯವಾಗಿ ಯುದ್ಧದ ವಿವರಗಳು, ತುರುಗಾಳಗ, ಆಪತ್ತಿನಲ್ಲಿರುವ ಸ್ತ್ರೀಯರ ಸಂರಕ್ಷಣೆಯಲ್ಲಿ ಅನೇಕ ವೀರರು ಭಾಗವಹಿಸಿದ ವಿವರಗಳಿರುತ್ತವೆ. ಅನೇಕ ವೀರಗಲ್ಲುಗಳು ಈ ಶ್ಲೋಕವನ್ನು ಹೊಂದಿರುತ್ತವೆ.
ಜಿತೇನ ಲಭ್ಯತೇ ಲಕ್ಷ್ಮೀಃ ಮೃತೇನಾಪಿ ಸುರಂಗನಾಃ |
ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ ||
ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ ||
(ಗೆಲಿದರೆ ಸಿರಿ ಸೊಬಗು, ಮಡಿದರೆ ಸುರಕನ್ನಿಕೆ ನಿಮಿಷದಲಿ ಅಳಿವುದೀ ಕಾಯ ಕಾಳಗದಲಿ ಅಳಿವೆನೆಂಬ ಕೊರಗೇಕೆ?)
ಈ ಶ್ಲೋಕದ ಮೇಲೆ ಮಹಾಭಾರತದ ರಣರಂಗದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಯ ಪ್ರಭಾವವಿದೆ. (ನೋಡಿಭಗವದ್ಗೀತೆ ಅಧ್ಯಾಯ ೨. ಶ್ಲೋಕ ೨೫. ಹತೋವ ಪ್ರಾಪ್ಯಸೇ ಸ್ವರ್ಗಂ ಜಿತ್ವಾವಾ ಭೋಕ್ಷ್ಯಸೇ ಮಹೀಂ…)
ದಾನ ಶಾಸನಗಳು ಶಿವ, ವಿಷ್ಣು, ಜಿನ ಇತ್ಯಾದಿ ಶ್ಲೋಕಗಳನ್ನು ಹೊಂದಿದ್ದು, ಶಾಸನದ ಮೇಲ್ಭಾಗದಲ್ಲಿರುವ ಶಿಲ್ಪವು ಆಯಾ ದೈವ ಭಕ್ತಿಗೆ ಅನುಗುಣವಾಗಿರುತ್ತದೆ. ಇದು ಶಾಸನದಲ್ಲಿ ಉಕ್ತವಾಗಿರುವ ದಾನಿಯ ದೈವ ಭಕ್ತಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ಅನೇಕ ಶಾಸನಗಳಲ್ಲಿ ರಾಜವಂಶದ ಮನೆದೇವರ ಸ್ತೋತ್ರಗಳಿರುತ್ತವೆ. ಕರ್ನಾಟದ ಶಾಸನಗಳಲ್ಲಿ ನಮೂದಿಸಿರುವ ಕಾಲಗಳಲ್ಲಿ ಸಾಧಾರಣವಾಗಿ ಶಕವರ್ಷದ ಉಲ್ಲೇಖವಿರುತ್ತದೆ. ಕೆಲವು ಶಾಸನಗಳಲ್ಲಿ ಕಲಿಶಕೆ ಅಥವಾ ಕಲಿಯುಗ ಸಂವತ್ಸರವು ಯುಷ್ಠಿರ ಶಕೆ ಎಂದೂ ಪ್ರಸಿದ್ದವಾಗಿದ್ದು, ಅದರ ಉಲ್ಲೇಖವಿರುತ್ತದೆ. ಇದು ಕ್ರಿ.ಪೂ ೩೧೦೧೦೨ ರಲ್ಲಿ ನಡೆದ ಮಹಾಭಾರತ ಯುದ್ಧದ ಕಾಲದಿಂದ ಆರಂಭವಾಗಿದೆ. ಶಕವರ್ಷವು ಕ್ರಿ.ಶ ೭೮ ರಿಂದ ಪ್ರಾರಂಭವಾಗಿ ಅನೇಕ ಶಾಸನಗಳಲ್ಲಿ ರಾಜನು ಪಟ್ಟಕ್ಕೆ ಬಂದ ಕಾಲದಿಂದ ಲೆಕ್ಕಮಾಡಿ ರಾಜ್ಯ ಸಂವತ್ಸರವೆಂಬ ಪ್ರಾದೇಶಿಕ ವರ್ಷವನ್ನು ಉಲ್ಲೇಖಿಸಿರುತ್ತದೆ. ಅವುಗಳಲ್ಲಿ ಕ್ರಿ.ಶ. ೧೦೭೫೭೬ ರಲ್ಲಿದ್ದ ಕಲ್ಯಾಣಿಚಾಲುಕ್ಯದವನಾದ ಆರನೆಯ ತ್ರಿಭುವನಮಲ್ಲ ವಿಕ್ರಮಾದಿತ್ಯನ ಹೆಸರಿನ ಪ್ರಾರಂಭವಾದ ವಿಕ್ರಮ ಸಂವತ್ಸರವು ಬಹು ಮುಖ್ಯವಾದುದು.
ಅನೇಕ ಸಂಸ್ಕೃತ ಶಾಸನಗಳು ಹಾಗೂ ಕೆಲವು ಅನ್ಯಭಾಷೆಯ ಶಾಸನಗಳಿದ್ದರೂ ಸಹಾ, ಕರ್ನಾಟಕದ ಪ್ರಾಚೀನ ಶಾಸನಗಳ ಭಾಷೆಯು ಹಲ್ಮಿಡಿ ಶಾಸನದ ಕಾಲದ ಭಾಷೆಯಾಗಿದ್ದು ಅನೇಕ ಶಾಸನಗಳು ಶ್ರೇಷ್ಠ ಸಾಹಿತ್ಯದ ಪ್ರಕಾರದಲ್ಲಿದೆ. ಸಾಹಿತ್ಯಕೃತಿಗಳಲ್ಲಿರುವ ಸಂಸ್ಕೃತ ಛಂದಸ್ಸು, ಅಲಂಕಾರ, ಶೈಲಿಗಳು ಶಾಸನಗಳ ಮೇಲೆ ಪ್ರಭಾವ ಬೀರಿದೆ. ಕನ್ನಡ ಶಾಸನಗಳಿಗೆ ಸಂಬಂಸಿದಂತೆ, ಮೊಟ್ಟಮೊದಲ ಶಾಸನವಾದ ಕ್ರಿ.ಶ ೫ನೇ ಶತಮಾನದ ಶಾಸನದಲ್ಲಿಯೇ ಉನ್ನತ ಮಟ್ಟದ ಸಂಸ್ಕೃತದ ಪ್ರಭಾವವನ್ನು ಬಿಂಬಿಸುತ್ತದೆ. ಹಲ್ಮಿಡಿ ಶಾಸನವೇ ಸಂಸ್ಕೃತ ಶ್ಲೋಕದಿಂದ ಪ್ರಾರಂಭವಾಗಿದೆ. ಹೀಗಿದ್ದರೂ ಸಹಾ ಕನ್ನಡ ಭಾಷೆ ಮತ್ತು ವ್ಯಾಕರಣವು ಪ್ರಾರಂಭವಾಗಿದೆ. ಹೀಗಿದ್ದರೂ ಸಹಾ ಕನ್ನಡಭಾಷೆ ಮತ್ತು ವ್ಯಾಕರಣವು ಕ್ರಮೇಣ ಗಮನಾರ್ಹ ಬದಲಾವಣೆಯನ್ನು ಹೊಂದಿತು.
ಕ್ರಿ.ಶ ೫ ರಿಂದ ೮ ನೇಯ ಶತಮಾನದ ಶಾಸನಗಳಲ್ಲಿನ ವ್ಯಾಕರಣದ ಪ್ರಯೋಗಗಳು ತಮಿಳು ರೂಪಗಳಂತೆ ಇದ್ದವು. (ಉದಾ: ಕೊಟ್ಟಾನ್, ವಿಟ್ಟಾನ್ ಇತ್ಯಾದಿ.) ಇವು ಮೂಲದ್ರಾವಿಡ ಸ್ಥಿತಿಯನ್ನು ಸೂಚಿಸುತ್ತದೆ. ಅನಂತರದ ಶತಮಾನಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಹೊಂದಿ, ಅದಂತಿಮವಾಗಿ ಕ್ರಿ.ಶ. ೫ ನೆಯ ಶತಮಾನದ ಆಧುನಿಕ ಶೈಲಿಯನ್ನು ತಲುಪಿತು. ಅನಂತರ ಕನ್ನಡಲಿಪಿಯಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಜಿಹ್ವಾಮೂಲೀಯ, ಉಪಧ್ಮಾನೀಯ, ಪದಾಂತ್ಯದ ಅನುನಾಸಿಕಗಳು ತ್ಯಜಿಸಲ್ಪಟ್ಟುವು. ರ, ಳಗಳ ಸಾಮಾನ್ಯ ರೂಪವನ್ನು ಉಳಿಸಿಕೊಳ್ಳಲಾಯಿತು. ಕನ್ನಡ ಭಾಷೆಯು ಕ್ರಿ.ಶ ೫ ರಿಂದ ೨೦ ನೆಯ ಶತಮಾನದವರೆಗೂ ಸ್ಪಷ್ಟವಾದ ಬದಲಾವಣೆಗಳನ್ನು ಹೊಂದಿದ್ದು, ಅದರ ಪ್ರಕ್ರಿಯೆ ಇನ್ನೂ ಮುಂದುವರೆಯುತ್ತಿದೆ.
ಅದಂತಿಮವಾಗಿ ಪ್ರಾಚೀನ ಹಾಗು ಮಧ್ಯಕಾಲೀನ ಕರ್ನಾಟಕವನ್ನು ಒಳಗೊಂಡಂತೆ ಭಾರತದ ಚರಿತ್ರೆಯನ್ನು ಪುನರ್ರಚಿಸಲು ವಿಶಶೇಷವಾಗಿ ಶಶಾಸನಗಳು ಮುಖ್ಯವಾದ ಆಕರಗಳಾಗಿವೆ. ಕ್ರಿ.ಶ ೧೮೩೭೩೮ ರಲ್ಲಿ ಜೇಮ್ಸ್‌ಪ್ರಿನ್ಸೆಪ್ ಅವರ ಬ್ರಾಹ್ಮಿಯ ರೂಪನಿಷ್ಪತ್ತಿಯು ಶಾಸನಾಧ್ಯಯನಕ್ಕೆ ಹೊಸ ಕ್ಷಿತಿಜವನ್ನು ನೀಡಿತು. ಕನ್ನಡ ಶಾಸನಗಳು ಅಪರಿಮಿತವಾದ ಅತಿಮುಖ್ಯವಾದ ಮೂಲಸಾಮಗ್ರಿಯನ್ನು ಹೊಂದಿದ್ದು ಕರ್ನಾಟಕದ ಇತಿಹಾಸದ ಪುನರ್ರಚನೆ ಅಷ್ಟೇ ಅಲ್ಲದೆ ಸಮಸ್ತ ಭವ್ಯಭಾರತದ ಇತಿಹಾಸ ರಚನೆಗೂ ಆಕರವಾಗಿದೆ.
ಚಿತ್ರಗಳು
೧. ಭಾರತದ ಪ್ರೌಡ ಇತಿಹಾಸ ಮೂಲ: ಮುಜುಂದಾರ್, ಅನುವಾದ: ಎನ್.ಎಸ್.ಶಶಾರದಾಪ್ರಸಾದ್.
೨. ಕನ್ನಡ ಲಿಪಿಯ ಉಗಮ ಮತ್ತು ವಿಕಾಸ ಡಾ|| ಎ.ವಿ.ನರಸಿಂಹಮೂರ್ತಿ.
೩. ಮಣಿಹ ಸಂ. ಪ್ರೊ.ಎಂ.ವಿ.ಸೀತಾರಾಮಯ್ಯ ಮತ್ತು ಡಾ|| ಆರ್.ಶ ಶೇಷಶಶಾಸ್ತ್ರಿ (ಪ್ರಧಾನ ಸಂ. ಡಾ|| ಸಿದ್ಧಯ್ಯ ಪುರಾಣಿಕ).
೪. ಕರ್ನಾಟಕದ ವೀರಗಲ್ಲುಗಳು ಡಾ|| ಆರ್. ಶೇಷಶಶಾಸ್ತ್ರಿ.
೫. ತರಂಗ ವಾರಪತ್ರಿಕೆ (ದಿ. ೭೧೧೨೦೦೨.)
ಕೃಪೆ : http://kanaja.in/archives/10231