Dec 14, 2016

ಕಾಲ ಬದಲಾದಾಗ

ಕಾಲ ಯಾವಾಗ ಬದಲಾಯಿತೊ ಗೊತ್ತೇ ಆಗಲಿಲ್ಲ 🕐🕜🕤🕧

*ಮನೆ ಮಂದಿಯೆಲ್ಲಾ  ಒಂದೇ ಸಾಬೂನು ಉಪಯೋಗಿಸುತ್ತಿದ್ವಿ*

*ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ*

*ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು*

*ಯಾವತ್ತೊ ಒಂದು ದಿನ ಮಾಡುತ್ತಿದ್ದ   ಹೋಳಿ ಪದಾರ್ಥಕ್ಕೆ ಈಗ ಆ ರುಚಿ ಇಲ್ಲ*

*ಬೆಲ್ಲ ಕ್ಯಾಂಡಿ ತಿನ್ನೊದು ಯಾವಾಗ ನಿಲ್ಲಿಸಿದೆವು*

*ಅಪ್ಪ ತರುತ್ತಿದ್ದ ಬಟ್ಟೆಯ ಸಂಭ್ರಮ ಇವತ್ತಿನ ಮಾಲ್ ನಲ್ಲಿ ಸಿಗುತ್ತಿಲ್ಲ*

*ಕಾದಂಬರಿ ಓದೋರ ಒಂದು ಬಳಗವೇ ಇರುತ್ತಿತ್ತು*

*ಊರ ಜಾತ್ರೆಗಿಂತ ದೊಡ್ಡ ಪ್ರೋಗ್ರಾಮ ಇರಲೇ ಇಲ್ಲ*

*ಎಲ್ಲಾ ಧರ್ಮದವರು ಒಟ್ಟಿಗೆ ಹಬ್ಬ ಆಚರಿಸ್ತಾ ಇದ್ದೆವು*

*ಜ್ವರಕ್ಕೆ ಅಮ್ಮನ ಕಾಫಿ/ಕಷಾಯ ಸಾಕಾಗ್ತಾ ಇತ್ತು*

*ಕಿವಿ ನೋವು, ಹೊಟ್ಟೆ ನೋವು, ಶೀತ, ಕೆಮ್ಮು, ಗಂಟಲು ನೋವು ಖಯಿಲೆ ಅಂದ್ರೆ ಇವಷ್ಟೆ ಆಗಿತ್ತು*

*ಸಕ್ಕರೆ ಖಯಿಲೆ ಅವಾಗ ಶ್ರೀಮಂತರಿಗೆ ಮಾತ್ರ*

*ಬಿಲ್ಡಿಂಗಿಗಿಂತ ಮರಗಳೇ ಜಾಸ್ತಿ ಇದ್ದವು*

*ಲಗೋರಿ, ಗೋಲಿ, ಕ್ರಿಕೆಟ್ ಫೇಮಸ್ ಆಗಿತ್ತು*

*ಭೂತದ ಮನೆ, ಭೂತ ಬಂಗ್ಲೆ ಊರಿಗೊಂದು ಇರುತ್ತಿತ್ತು*

*ಸಂಜೆ ಏಳಕ್ಕೆ ಎಲ್ಲಾ ಮನೆಲಿ ಇರುತ್ತಿದ್ವಿ*

*5 ಪೈಸೆಗೆ ಚಾಕ್ಲೆಟ್ ಸಿಗ್ತಾ ಇತ್ತು. ದೊಡ್ಡ ಚಾಕ್ಲೇಟ್ ಅಂದರೆ 2 ರೂಪಾಯಿ ಕಿಸ್ ಮಿ ಬಾರ್ ಚಾಕ್ಲೇಟ್*

*ಆದಿತ್ಯವಾರ ಕೂದಲು ಕಟ್ಟಿಂಗೆ ಲೈನ್ ಕಾಯ್ತಾ ಇದ್ದೆವು*

*ಹುಡುಗೀರಿಗೆ ಅಮ್ಮನದ್ದೆ ಬ್ಯೂಟಿ ಪಾರ್ಲರ್*

*ದೊಡ್ಡೋರ ಅಂಗಿ ಸಣ್ಣವರಿಗೆ ಬಳುವಳಿಯಾಗಿ ಬರುತ್ತಿತ್ತು*

*ಮಳೆ ಬೆಳಗ್ಗೆ ಶಾಲೆಗೆ ಹೋಗುವಾಗ ಮತ್ತು ಸಂಜೆ ಬರುವಾಗ ಜೋರಾಗಿ ಹೊಡಿತ್ತಿತ್ತು  ಆಮೇಲೆ ದಿನ ಇಡೀ ಜಿಟಿಜಿಟಿ ಸುರಿತಾ ಇತ್ತು*

*ಮಗ್ಗಿ ಹೇಳೊದೆ ದೊಡ್ಡ ಅಸೈನ್ಮಂಟು*

*ಗುಬ್ಬಿ ಮನೆ ಅಂಗಳದಲ್ಲೇ, ಸಂಜೆ ಆದ್ರೆ ಬೇರೆ ಬೇರೆ ಸದ್ದಿನ ಹಕ್ಕಿಗಳು*

*ಟ್ರಾಫಿಕ್ ಜಾಮ್ ಕೇಳಿ ಗೊತ್ತಿತ್ತು ನೋಡಿ ಗೊತ್ತಿರಲಿಲ್ಲ*

*ತರಕಾರಿ ತರೋದಕ್ಕೆ ಕೈ ಚೀಲ ನಾವೆ ತಗೊಂಡು ಹೊಗ್ತಾ ಇದ್ದೆವು*

*ನೆಲದಲ್ಲಿ ಡಿಪ್ಸ್ ತಗಿಯೋದೆ ದೊಡ್ಡ ಜಿಮ್ ಆಗಿತ್ತು*

*ಯಾರಿಗಾದರು ನೋವಾದರೆ ನಮಗೂ ದುಃಖ ಆಗ್ತಾ ಇತ್ತು, ಸ್ಮಯ್ಲಿ/ಇಮೊಜಿ ಕಳುಹಿಸುತ್ತಾ ಇರ್ಲಿಲ್ಲ*

*ಮನೆಮಂದಿ ಒಟ್ಟಿಗೆ ಕೂತು ಮಾತಾಡೋದೆ ವಾಟ್ಸಪ್ ಗ್ರೂಪ್ ಆಗಿತ್ತು*

*ಫೋಟೊ ತೆಗೆದ್ರೆ ಕ್ಲೀನ್ ಆಗಿ ಬರೋಕೆ ಕಾಯ್ತಾ ಇದ್ದೆವು*

*ಪೇಪರಿನಲ್ಲಿ ಅಪಘಾತದಂತ ಸುದ್ದಿ ಬಂದ್ರೆ ಮರುಗುತ್ತಿದ್ದವು*

*ಒಬ್ರು ಯಾರೊ ಫೇಸ್ ಬುಕ್ ತರ ಎಲ್ಲಾ ವಿಷಯ ಮನೆಗೆ ಬಂದು ಅಪ್ಲೋಡ್ ಮಾಡ್ತಾ ಇದ್ದರು/ ಅದೆ ಮನೆಯಿಂದ ವಿಷಯ ಡಾವ್ನ್ಲೋಡ್ ಕೂಡ ಮಾಡ್ತ ಇದ್ರು*

*ಅಂಗಡಿ ಶೆಟ್ರಿಗೆ, ಊರ ಡಾಕ್ಟ್ರಿಗೆ, ಶಾಲಾ ಮಾಸ್ತರಿಗೆ ಮನೆಯವರೆಲ್ಲರ ಪರಿಚಯ ಮತ್ತು ವಿಷಯ ತಿಳಿದಿತ್ತು*

ಕಾಲ ಬದಲಾಗಿದ್ದು ಗೊತ್ತೇ ಆಗ್ಲಿಲ್ಲ... ಆದರೆ ನೆನಪುಗಳು ಇನ್ನೂ ಡಿಲೀಟ್ ಆಗಿಲ್ಲ...