:- #ವಿಷಯ :- ಇತಿಹಾಸ.
ಸಂಗ್ರಹ :- 6 ನೆಯ ತರಗತಿ ಸಮಾಜ ವಿಜ್ಞಾನ ಮೊದಲ ಸೆಮಿಸ್ಟರ್.
1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
* 1674 ರಲ್ಲಿ.
2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
* ರಾಯಗಡದಲ್ಲಿ.
3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
* ಬೈಬಲ್ ನಲ್ಲಿ.
4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
* ಬೆತ್ಲಹೆಂ ನಲ್ಲಿ.
5) 'ಬೆತ್ಲಹೆಂ' ಯಾವ ದೇಶದಲ್ಲಿದೆ?
* ಇಸ್ರೇಲ್.
6) ಯೇಸುಕ್ರಿಸ್ತನ ತಾಯಿಯ ಹೆಸರೇನು?
* ಮೇರಿ.
7) ಕುರಾನ್ ಯಾವ ಭಾಷೆಯಲ್ಲಿದೆ?
* ಅರೇಬಿಕ್.
8) ಇಸ್ಲಾಂ ಪದದ ಅರ್ಥವೇನು?
* ಶರಣಾಗತಿ ಎಂದರ್ಥ.
9) ಮುಸ್ಲಿಂ ಎಂದರೆ -----.
* ದೇವರಿಗೆ ಶರಣರಾದವರು.
10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
* ಕಲೀಫರು.
11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
* ಜರೂಸಲಮ್.
12) ಹಿಜರಿ ಶಕೆಯ ----- ರಿಂದ ಪ್ರಾರಂಭ.
* ಕ್ರಿಶ.622.
13) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
* ಖಜುರಾಹೊ.
14) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
* ಜೈಪುರ.
15) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
* ಗ್ವಾಲಿಯರ್ ಕೋಟೆ.
16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
* ಉದಯಪುರ ಅರಮನೆ.
17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
* ಒಂಟೆ.
18) ರಜಪೂತರ ಕಾಲಾವಧಿ ತಿಳಿಸಿ?
* ಕ್ರಿಶ 650-1200.
19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
* ಕವಿರಾಜಮಾರ್ಗ.
20) "ಕೈಲಾಸ ದೇವಾಲಯ" ಎಲ್ಲಿದೆ?
*ಎಲ್ಲೋರ.
21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
* ಮಹಾರಾಷ್ಟ್ರ.
22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
* ಮುಮ್ಮಡಿ ಗೋವಿಂದ.
23) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
* ಚೆನ್ನಕೇಶವ ದೇವಾಲಯ.
24) "ಚೆನ್ನಕೇಶವ ದೇವಾಲಯ" ಎಲ್ಲಿದೆ?
* ಬೇಲೂರಿನಲ್ಲಿದೆ.
25) "ಕೇಶವ ದೇವಾಲಯ" ಎಲ್ಲಿದೆ?
* ಸೋಮನಾಥಪುರ.
26) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
* ಹರಿಹರ.
27) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
* ಆಂಡಯ್ಯ.
28) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
* ರಾಜರಾಜಚೋಳನ.
29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
* ಶಂಕರಾಚಾರ್ಯರ.
30) ಬದರಿ ಯಾವ ರಾಜ್ಯದಲ್ಲಿದೆ?
* ಉತ್ತರಾಖಂಡ.
31) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
* ಮೇಲುಕೋಟೆ.
32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
* ವಿಜಯಪುರ.
33) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
* ಶಕ್ತಿವಿಶಿಷ್ಟಾದ್ವೈತ.
34) "ದೇಹವೇ ದೇಗುಲ" ಎಂದವರು ಯಾರು?
* ಬಸವೇಶ್ವರರು.
35) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
* ಉಡುಪಿಯಲ್ಲಿ.
36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
* ಅರಬ್ಬರು.
37) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
* ಇಲ್ತಮಿಶ್.
38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
* ಅಲ್ಲಾವುದ್ದೀನ್ ಖಿಲ್ಜಿ.
39) "ಅಲೈ ದರ್ವಾಜಾ" ಎಲ್ಲಿದೆ?
* ದಿಲ್ಲಿಯಲ್ಲಿದೆ.
40) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
* ನೇಯ್ಗೆ.
41) ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು?
* ಜಯಸಿ.
42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
* 1206-1210.
43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
* 1236-1240.
44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
* ಕ್ರಿಶ. 1526 ರಲ್ಲಿ.
45) ಮೀನಾರು ಎಂದರೆ -----.
* ಎತ್ತರವಾದ ಸ್ತಂಭಗೋಪುರ.
46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
* ಕ್ರಿಶ 1206 - 1526.