ಈ ಸಂದೇಶದ
ರಚನಕಾರರಿಗೆ ಧನ್ಯವಾದಗಳು
ವಿದ್ಯೆ ಕಲಿತವರು ವಿನಯವಂತರಾಗಬೇಕ್ಕಿತ್ತು
ಆದರೆ ಹಾಗಾಗಲ್ಲಿಲ್ಲ,
ಹಣವಂತರು ದಾನಿಗಳಾಗಬೇಕ್ಕಿತ್ತು, ಅದರೆ ಹಾಗಾಗಲ್ಲಿಲ್ಲ,
ಬಹುಜನರು ಒಬ್ಬ ಗುರುಮಾರ್ಗದರ್ಶನದಲ್ಲಿ ಹೊಗಬೇಕ್ಕಿತ್ತು ,
ಆದರೆ ಅದೂ ಹಾಗಾಗಲ್ಲಿಲ್ಲ,
ಮತ್ತೆಲ್ಲಿ
ಪ್ರಬುದ್ಧಭಾರತದ ಕನಸು ಮಿತ್ರರೇ,
ಹಿಂದೆ ಒಬ್ಬ ಗುರುವಿರಲಿ,
ಮುಂದೆ ಗುರಿ ಇರಲಿ,
ನಡುವೆ
ನೀವು ದಾರಿ ತಪ್ಪುವುದಿಲ್ಲ,
ಗುರು, ಗುರಿ ಇಲ್ಲದೆ ಇದ್ದರೆ
ನಿಮ್ಮ ಶ್ರಮ
ಇನ್ನೊಂದೆರಡು ಸಾವಿರ ವರ್ಷಗಳು ಬೇಕಾಗಬಹುದು
ಸಮಾನತೆಯ ಸಮಾಜ
ನಿರ್ಮಾಣ ವಾಗಲು ಅಲ್ಲವೇ?
ನನ್ನ ಸಣ್ಣ ನೋವು,
ಮತ್ತು ಬಹುಕಾಲದ ಹತಾಶೆ.......
ನಿ೦ಬೆಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡುವಿರಿ,
ಸೊಪ್ಪಿನ ಅಜ್ಜನ ಬಳಿ ಕೊಸರಾಡುವಿರಿ,
ಕಡಲೆಕಾಯಿ ಮಾರುವವನ ಹತ್ತಿರ ಜಗಳವಾಡುವಿರಿ,
ಹಣ್ಣು
ಮಾರುವವನ ಹತ್ತಿರ
ಪೌರುಷ ತೋರುವಿರಿ ,
ಎಳನೀರಿನವನ ಬಳಿ ಜುಗ್ಗುತನ ತೋರುವಿರಿ,
ಹೂವಿನವರ ಹತ್ತಿರ
ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡುವಿರಿ,
ಗೊತ್ತೇ ನಿಮಗೆ
ಭತ್ತ ಬೆಳೆಯುವವನ ಕಷ್ಟ,
ಗೊತ್ತೇ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆ೦ದು,
ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆ೦ದು,
ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು,
ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆ೦ದು,
ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು
ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾ೦ಡ,
ಗೊತ್ತೇ ನಿಮಗೆ ಅದರಲ್ಲಿ ಆಗುವ
ನಷ್ಟ ( Waste ) ಎಷ್ಟೆಂದು,
ಗೊತ್ತೇ ನಿಮಗೆ ಇಷ್ಟಾದರೂ
ಅದಕ್ಕೆ ಸಿಗುವ ಪ್ರತಿಫಲದ ನೋವು,
ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್ ನಲ್ಲಿ ತಯಾರಾದದ್ದಲ್ಲ,
ನೀವು ಊಟಮಾಡುವ ಅಕ್ಕಿ ಇಂಟರ್ನೆಟ್ ನಲ್ಲಿ ಬೆಳೆದದ್ದಲ್ಲ,
ಅದು ರೈತರ
ಬೆವರ ಹನಿಗಳಿ೦ದ ಬಸಿದದ್ದು,
ತಾಕತ್ತಿದ್ದರೆ
Pizza, Burger,
ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ,
ಧೈರ್ಯವಿದ್ದರೆ ಶಾಪಿ೦ಗ್ ಮಾಲ್ ಗಳಲ್ಲಿ ಕೊಸರಾಡಿ,
ಶಕ್ತಿಯಿದ್ದರೆ
Multiplex Theater
ಟಿಕೆಟ್ ಕೌ೦ಟರ್ ನಲ್ಲಿ ಜಗಳವಾಡಿ,
ಕ್ಷಮಿಸಿ ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು. ...
ಒಂದು ಚಿಕ್ಕ ಚಾಕಲೇಟ್ಗೇ
MRP ಬೆಲೆಯಿದೆ
ಆದರೆ ರೈತ ಬೆಳೆದ ಬೆಳೆಗೆ ಕೆಲವೊಮ್ಮೆ ಶ್ರಮಕ್ಕೆ ಬೆಲೆಯಿಲ್ಲ..
ಪ್ರಬುದ್ಧ ಮನಸ್ಸು,
ಪ್ರಬುದ್ಧ ಸಮಾಜ,
ಪ್ರಬುದ್ಧ ರಾಜ್ಯ,
ಪ್ರಬುದ್ಧ ಭಾರತ. !!!!!
ರೈತರು ನಾಟೌಟ್ ಆಗಿ ನಿಲ್ಲಬೇಕು....
ಬಂಧುಗಳೇ...
1ಕ್ಷಣ ಇಲ್ಲಿ ನೋಡಿ..
ವಿಕೆಟ್ ಬಿದ್ರೆ ದೇಶ ಸೋಲುತ್ತೇ..ಎಂದು ಭಯಬೀಳುವ ದೇಶಭಕ್ತ
ದೇಶಕ್ಕೆ ಅನ್ನ ನೀಡುವ ದೇಹಗಳೆಷ್ಟೋ ಬೀಳುತ್ತಿದ್ದರೂ ಗಮನ ಕೊಟ್ಟೆಯ ದೇಶಭಕ್ತ?
🌱
ಇಷ್ಟ ವಾದ ಕ್ರಿಕೆಟರ್ ನೂರು ರನ್ ಮಾಡಲಿ ಎಂದು ದೇವರನ್ನು ಮುಗಿದಂತೆ
ನಿನಗೆ ಗೊತ್ತಿರುವ ರೈತ ನೂರು ಮೂಟೆಗಳ ಬೆಳೆ ಬೆಳೆಯಬೇಂದು ಮನಸಾರೆ ಯಾವಗಲಾದರೂ ಬೇಡಿಕೊಂಡಿದ್ದೀಯ ದೇಶಭಕ್ತ?
🌱
ಮೂರು ಗಂಟೆ ಬ್ಯಾಟ್ ಹಿಡಿದು ಆಡಿದಾತನು ದೇವರಾದರೇ..
ನಿನಗೆ ಜೀವನವೆಲ್ಲ ಅನ್ನ ನೀಡುವ ರೈತನನ್ನು ಏನೆನ್ನುವೇ?
🌱
ನಿನಗೆ ಎಲ್ಲಾ ಸ್ಟೇಡಿಯಂಗಳ ಪಿಚ್ ಹೇಗಿರುತ್ತೆ ಎನ್ನುವುದು ಗೊತ್ತು.
ನಿನ್ನ ಊರಲ್ಲಿ ಮಾರ್ಕೆಟ್ ಯಾರ್ಡ ಎಲ್ಲಿದಿಯೋ..ಎಂತಹ ಪರಿಸ್ಥಿತಿಯಲ್ಲಿದಿಯೋ..ನಿನಗೆ ಗೊತ್ತ ದೇಶಭಕ್ತ?
🌱
ಅನ್ನ ತಿನ್ನುತ್ತಾ...
ಪಾಕಿಸ್ತಾನ ಟೀಂ ನಿನ್ನ ದೇಶಕ್ಕೆ ಬರಲಾ.. ಅಥವಾ ಬೇಡವ ನಿರ್ಧಾರ ತೆಗೆದುಕೊಳ್ಳುತ್ತೀಯ...
ನಿನ್ನ ಕೈಯಲ್ಲಿರುವುದು ಸ್ವದೇಶಿ ಅಕ್ಕಿನೋ ವಿದೇಶಿ ಅಕ್ಕಿನೋ ನಿನಗೆ ಗೊತ್ತಾ ದೇಶಭಕ್ತ?
🌱
ಯಾರು ಯಾವಾಗ ಎಷ್ಟು ಸ್ಕೋರ್ ಮಾಡಿದ್ರು ಎಂದು ಗೊತ್ತಿರುವ ನಿಂಗೆ...
ದಿನ ಎಲ್ಲೇಲ್ಲಿ ಎಷ್ಟು ರೈತರು ಸಾಯುತ್ತಿದ್ದಾರೆ ಗೊತ್ತಾ ದೇಶಭಕ್ತ?
🌱
ಕಾಮೆಂಟ್ರಿ ಕೇಳುತ್ತಾ ಟಿವಿ ಯೊಳಗೇ...ಹೋಗುವ ನೀನು
ಯಾವಾಗಲಾದರೂ ರೈತರ ಬಗ್ಗೆ ಚರ್ಚೆ ಕಾರ್ಯಕ್ರಮ ನೋಡಿದಿಯಾ ದೇಶಭಕ್ತ?
🌱
ಹನ್ನೊಂದು ಜನ ಆಡುವ ಆಟಕ್ಕೋಸ್ಕರ ಲಕ್ಷ ಲಕ್ಷ ಜನ ಒಂದಾಗುತ್ತೇವೆ..
ಕೋಟಿ ಜನರ ಹಸಿವನ್ನು ನೀಗಿಸುವ
ರೈತರಿಗೆ ಏನ್ಮಾಮಾಡ್ತಿದಿವಿ ದೇಶಭಕ್ತ?
🌱
ಇಂಡಿಯಾ ಗೆಲ್ಲಿಸುವವರ ಜೊತೆಗೆ
ಬದುಕಿಸುವವರ ಬಗ್ಗೆ ಕಾಳಜಿಯಿರಲಿ ದೇಶಭಕ್ತ..
🌱
ಇಂಡಿಯಾ ಗೆಲ್ಲಬೇಕಾಗಿರುವುದು ಆಟದ ಮೈದಾನದಲಲ್ಲ...ಅಚ್ಚ ಹಸಿರಿನ ಹೊಲದ ಮೈದಾನದಲ್ಲಿ...
ಅದಕ್ಕೇ ರೈತ ನಾಟೌಟ್ ಆಗಿ ನಿಲ್ಲಬೇಕು....ನಾವೆಲ್ಲರೂ ಅವರ ಏಳ್ಗೆ ಬಯಸೋಣ......
ಸ್ನೇಹಿತರೇ
🌿🌿🌿🌿🌿🌿
Plz share this...