Jan 26, 2012

ಬೊಮ್ಮನಾಯಕನಹಳ್ಳಿ ಶಿವದೇವಾಲಯ


ಬೊಮ್ಮನಾಯಕನಹಳ್ಳಿ ಶಿವದೇವಾಲಯ
Bommanayakana halli, channapattana, ಬೊಮ್ಮನಾಯಕನಹಳ್ಳಿ ಶಿವಾಲಯ,our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬಣ್ಣದ ಬೊಂಬೆಗಳಿಗೆ ಹೆಸರಾದ ಚನ್ನಪಟ್ಟಣ ಉಪ ವಿಭಾಗಕ್ಕೆ ಒಳಪಟ್ಟ ಬೊಮ್ಮನಾಯಕನಹಳ್ಳಿ ಒಂದು ಪುಟ್ಟ ಗ್ರಾಮ. ಗ್ರಾಮ ಪುಟ್ಟದಾದರೂ ಇದರ ಇತಿಹಾಸ ಮಾತ್ರ ಬಹು ದೊಡ್ಡದು. ಕರುನಾಡನ್ನಾಳಿದ ಗಂಗರ ಕಾಲದಲ್ಲಿಯೇ ಈ ಊರು ಇತ್ತೆಂದು ಹೇಳಲಾಗುತ್ತದೆ.
ಮಂಡನಾಯಕಹೊನ್ನನಾಯಕರೆಂಬ ಪಾಳೆಯಗಾರರ ಸೋದರ ಬೊಮ್ಮನಾಯಕ  ಆಳಿದ ಈ ಊರಿಗೆ ಬೊಮ್ಮನಾಯಕನ ಹಳ್ಳಿ ಎಂಬ ಹೆಸರು ಬಂದಿದೆ.ಊರಿನಲ್ಲಿರುವ ಪುರಾತನ  ದೇವಾಲಯಗಳಲ್ಲಿರುವ ವಿಗ್ರಹಗಳುಭಗ್ನಗೊಂಡಿರುವ ಉರುಟ ಕಲ್ಲಿನ ಹಳೆಯ ನಂದಿದೇವಾಲಯದ ಬಳಿ ಸಿಕ್ಕಿರುವ ವೀರಗಲ್ಲುಗಳು ಹೋಯ್ಸಳರ ಕಾಲದ ಶಿಲ್ಪಗಳನ್ನು ಹೋಲುವ ಕಾರಣ ಊರಿಗೆ 450-500 ವರ್ಷಗಳ ಇತಿಹಾಸ ಇದ್ದಿರಬಹುದೆಂದು ಅಂದಾಜಿಸಲಾಗಿದೆ.
Bommanayakana halli, channapattana, ಬೊಮ್ಮನಾಯಕನಹಳ್ಳಿ ಶಿವಾಲಯ,our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಪುರಾತನವಾದ ಆದರೆಶಿಲ್ಪಕಲಾ ವೈಭವವಿಲ್ಲದ ಸಾಧಾರಣ ಕಲ್ಲುಕಟ್ಟಡದ ಈ ದೇಗುಲದ ಬಿತ್ತಿಗಳ ಮೇಲೆ ಹಾಗೂ ಛಾವಣಿಯ ಮೇಲೆ ಗಿಡಗಂಟಿ ಬೆಳೆದು ಶಿಥಿಲವಾಗಿದೆ.  ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ಹೀಗಾಗೇ ದೇವಾಲಯದಲ್ಲಿದ್ದ ಪುರಾತನ ಶಿವಲಿಂಗವನ್ನು ಶಿವಪಾರ್ವತಿ ಕಲ್ಯಾಣ ಮಂಟಪ ಟ್ರಸ್ಟ್‌ನವರು  ಸ್ಥಳಾಂತರಿಸಿಪುರ ಪ್ರವೇಶದ ಆರಂಭದಲ್ಲಿಯೇ ಇರುವ  ಎರಡೂವರೆ ಎಕರೆ ವಿಶಾಲ ಜಾಗದಲ್ಲಿ  ಸಿಮೆಂಟ್ ಇಟ್ಟಿಗೆಯಿಂದ ನಿರ್ಮಿಸಿರುವ ಗಟ್ಟಿಮುಟ್ಟಾದ ಭವ್ಯ ಹಾಗೂ ಆಕರ್ಷಕವಾದ ವರ್ಣಮಯ ದೇಗುಲದಲ್ಲಿ  ಹಳೆಯ ಶಿವಲಿಂಗವನ್ನೇ ಶಾಸ್ತ್ರೋಕ್ತವಾಗಿ ಮರು ಪ್ರತಿಷ್ಠಾಪಿಸಿದ್ದಾರೆ.
ಭವ್ಯಸುಸಜ್ಜಿತವಾದ ಆರ್.ಸಿ.ಸಿ. ಛಾವಣಿಯ ದೇವಾಲಯದ ಮೇಲೆ ಧ್ಯಾನಾರೂಢನಾದ 20 ಅಡಿ ಎತ್ತರದ ಶಿವನ ಮೂರ್ತಿಯನ್ನೇ ಸ್ಥಾಪಿಸಲಾಗಿದೆ. ಭಕ್ತರಿಗೆ ಅನುಕೂಲವಾಗಲೆಂದು ಸುಸಜ್ಜಿತವಾದ ಕಲ್ಯಾಣ ಮಂಟಪ ಹಾಗೂ ದೇವಾಲಯದ ಸುತ್ತಲೂ ಹಸಿರು ಹುಲ್ಲು ಹಾಸಿನ ಉದ್ಯಾನನೀರಿನ ಕಾರಂಜಿ ನಿರ್ಮಿಸಲಾಗಿದೆ.
ದೇವಾಲಯದ ಸುತ್ತಲೂ ತಲಾ 10 ಅಡಿ ಎತ್ತರವಿರುವ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಾಳೆಯ ಕಂದಿನ ಅಲಂಕಾರದಲ್ಲಿ ನವದುರ್ಗೆಯರನ್ನು ನೋಡಲು ನೂರು ಕಣ್ಣೂ ಸಾಲದು.
Bommanayakana halli, channapattana, ಬೊಮ್ಮನಾಯಕನಹಳ್ಳಿ ಶಿವಾಲಯ,our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಇಲ್ಲಿಯೂ ಎಲ್ಲ  ದೇವಾಲಯಗಳಂತೆ ಪ್ರಥಮ ವಂದಿತ ವಿಘ್ನ ನಿವಾರಕ ಗಣಪನಿದ್ದಾನೆ. ದೇವಾಲಯ ಪ್ರವೇಶಿಸಿದೊಡನೆಯೇ ಪಾರ್ವತಿ ಪುತ್ರ ಗಣಪನ ದರ್ಶನವಾಗುತ್ತದೆ. ನಂತರ ಭಕ್ತರನ್ನು ಹರಸಲೆಂದೇ ನಿಂತಿರುವ ಆಳೆತ್ತರದ ಎದುರು ಮುಖದ ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇಲ್ಲಿ ಮತ್ತೊಂದು ವಿಶೇಷವಿದೆ ನವಗ್ರಹ ಪ್ರತಿಷ್ಠಾಪನೆ ಮಾಡುವಂತೆ ಇಲ್ಲಿ ನವದುರ್ಗೆಯರನ್ನು ಒಂದೇ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದ್ದು೯ ಬಾರಿ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಊರಿನ ಜನರ ನಂಬಿಕೆ. ಇದರ ಪಕ್ಕದಲ್ಲಿಯೇ ನಾಗರಕಲ್ಲು ಹಾಗೂ ಅಶ್ವತ್ಥನಾರಾಯಣಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.
Bommanayakana halli, channapattana, ಬೊಮ್ಮನಾಯಕನಹಳ್ಳಿ ಶಿವಾಲಯ,our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಎಲ್ಲ ದೇವಾಲಯಗಳಂತೆಯೇ ಇಲ್ಲಿಯೂ ನವಗ್ರಹ ಮಂಟಪವಿದೆ. ಪ್ರಧಾನ ದೇವಾಲಯದ ಗರ್ಭಗೃಹದಲ್ಲಿ  ನಾಗಭೂಷಣನಾದ  ಸರ್ವಾಲಂಕೃತ ಪರಶಿವನ ದರ್ಶನ ಮನೋಹರ. ಪ್ರತಿವರ್ಷ ಕಾರ್ತೀಕ ಮಾಸದ ಕೊನೆಯ  ಸೋಮವಾರ ಲಕ್ಷದೀಪೋತ್ಸವ ಜರುಗತ್ತದೆ.
ಈ ಊರಿನಿಂದ ಬೇವೂರು ಮಂಡ್ಯಕ್ಕೆ ಹೋಗುವ ಮಾರ್ಗದಲ್ಲಿ ಪುಟ್ಟದೊಂದು ಮಂಟಪದಾಕಾರದ ಗುಡಿಯಿದೆಇಲ್ಲಿರುವ ದೇವತೆಗೆ ಕೊಂಡಕ್ಬಿದ್ದಮ್ಮ ಎಂದು ಕರೆಯುತ್ತಾರೆ. ಸನಿಹದಲ್ಲೇ ಗ್ರಾಮದೇವತೆ ಪಟಾಲಮ್ಮನ ಗುಡಿಯಿದೆ. ರಕ್ಕಸನ ರುಂಡವನ್ನು ಕೈಯಲ್ಲಿ ಹಿಡಿದಕೋರೆಹಲ್ಲುಗಳುಳ್ಳ ಚತುರ್ಭುಜೆ ತಾಯಿ ಪುರಜನರನ್ನು ಇಲ್ಲಿ ರಕ್ಷಿಸಲು ನೆಲೆಸಿದ್ದಾಳೆ.
ಶಿವ ಪಾರ್ವತಿ ಕಲ್ಯಾಣಮಂಟಪ ಟ್ರಸ್ಟ್ ಅಧ್ಯಕ್ಷರಾಗಿರುವ ಸಮಾಜ ಸೇವಕ ಸಿ. ದೇವರಾಜ್ ದೇವಾಲಯದ ಜೀರ್ಣೋದ್ಧಾರಕ್ಕೆ ಮುಖ್ಯ ಕಾರಣರಾಗಿದ್ದಾರೆ. 

ನಮ್ಮ ಭಾರತದ ಸಂವಿಧಾನ

 
 ಭಾರತದ ಸಂವಿಧಾನ

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ ೯, ೧೯೪೭ ರಿಂದ ನವೆಂಬರ್ ೨೬, ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ ೨೬, ೧೯೫೦ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ೪೪೪ ವಿಧಿಗಳನ್ನೂ, ೧೦ (ನಂತರ ೧೨) ಅನುಚ್ಛೇದಗಳನ್ನೂ, ಅನೇಕ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನದ ಮಹತ್ವ
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ.

ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ .

ಸಂವಿಧಾನವು ೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪ ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟು ಜಮ್ಮು ಮತ್ತು ಕಾಶ್ಮೀರರಾಜ್ಯಕ್ಕೆ ಅನ್ವಯಿಸುತ್ತದೆ.
ಇತಿಹಾಸ

ಸಂಪುಟ ಸಮಿತಿ
ಎರಡನೆಯ ಮಹಾಯುದ್ಧವು ಮೇ ೯, ೧೯೪೫ರಂದು ಯೂರೋಪಿನಲ್ಲಿ ಮುಕ್ತಾಯಗೊಂಡಿತು. ಅದೇ ವರ್ಷದ ಜುಲೈನಲ್ಲಿ, ಯುನೈಟೆಡ್ ಕಿಂಗ್‍ಡಮ್ನಲ್ಲಿ ಹೊಸ ಸರಕಾರವು ಅಧಿಕಾರಕ್ಕೆ ಬಂದಿತು. ಈ ಹೊಸ ಸರಕಾರವು ತನ್ನ ಭಾರತೀಯ ಧೋರಣೆ (ಇಂಡಿಯನ್ ಪಾಲಿಸಿ)ಯನ್ನು ಘೋಷಿಸಿ, ಸಂವಿಧಾನದ ಕರಡನ್ನು ತಯಾರು ಮಾಡಲು ಸಮಿತಿಯನ್ನು ರಚಿಸಲು ನಿರ್ಧರಿಸಿತು. ಮೂವರು ಬ್ರಿಟೀಷ್ಮಂತ್ರಿಗಳ ತಂಡವೊಂದು, ಭಾರತದ ಸ್ವಾತಂತ್ರ್ಯದ ಬಗ್ಗೆ, ಪರಿಹಾರ ಹುಡುಕಲು ಭಾರತಕ್ಕೆ ಬಂದಿತು. ಈ ತಂಡವನ್ನು 'ಸಂಪುಟ ಸಮಿತಿ' (Cabinet Mission) ಎಂದು ಕರೆಯಲಾಯಿತು.
ಸಂವಿಧಾನದ ರೂಪುರೇಷೆಗಳನ್ನು ಚರ್ಚಿಸಿದ ಈ ಸಮಿತಿಯು, ಕರಡು ಸಂವಿಧಾನ ರಚನಾ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನದ ಕೆಲವು ವಿವರಗಳನ್ನು ಸ್ಪಷ್ಟಪಡಿಸಿತು. ಬ್ರಿಟಿಷ್ ಭಾರತದ ಪ್ರಾಂತ್ಯಗಳ ೨೯೬ ಸ್ಥಾನಗಳಿಗೆ ಚುನಾವಣೆಗಳು ೧೯೪೬ರ ಜುಲೈ - ಅಗಸ್ಟ್ ಹೊತ್ತಿಗೆ ಮುಗಿದವು. ಆಗಸ್ಟ್ ೧೫, ೧೯೪೭ರಂದು ಭಾರತದ ಸ್ವಾತಂತ್ರ್ಯದೊಂದಿಗೆ ಸಂವಿಧಾನರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಈ ಸಮಿತಿಯು ಡಿಸೆಂಬರ್ ೯, ೧೯೪೭ ರಂದು ತನ್ನ ಕೆಲಸವನ್ನು ಆರಂಭಿಸಿತು.

ಸಂವಿಧಾನ ರಚನಾಸಭೆ
ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು.

ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್ ಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು ಆಂಗ್ಲೋ-ಇಂಡಿಯನ್ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್ , ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ.ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ಮೊದಲ ಅಧ್ಯಕ್ಷರಾಗಿದ್ದರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.

ಸಂವಿಧಾನ ರಚನಾಸಭೆಯು ಎರಡು ವರ್ಷ ೧೧ ತಿಂಗಳು ೧೮ ದಿನಗಳ ಕಾಲದ ಅವಧಿಯಲ್ಲಿ ೧೬೬ ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು.

ಆಶಯಗಳ ನಿಷ್ಕರ್ಷೆ


 ಸಂವಿಧಾನದ ಮೂಲ ತತ್ವಗಳನ್ನು ಜವಹರಲಾಲ್ ನೆಹರುರವರು ತಮ್ಮ ಆಶಯಗಳ ನಿಷ್ಕರ್ಷೆ ಯಲ್ಲಿ ಸ್ಪಷ್ಟಪಡಿಸಿದ್ದಾರೆ :
ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ.;
ಭಾರತವು ಹಿಂದಿನ ಬ್ರಿಟಿಷ್ ಭಾರತದ ಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಭಾರತವನ್ನು ಸೇರಬಯಸುವ ಇತರ ಪ್ರದೇಶಗಳ ಒಕ್ಕೂಟ.
ಒಕ್ಕೂಟವನ್ನು ಸೇರುವ ಪ್ರದೇಶಗಳು ಸ್ವಾಯತ್ತ ಘಟಕಗಳಾಗಿದ್ದು ಒಕ್ಕೂಟಕ್ಕೆ ಒಪ್ಪಿಸಿದ ಅಧಿಕಾರಗಳ ಹೊರತಾಗಿ ಸರಕಾರದ ಮತ್ತು ಆಡಳಿತದ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸಬಲ್ಲವಾಗಿರುತ್ತವೆ ;
ಸ್ವತಂತ್ರ ಸಾರ್ವಭೌಮ ಭಾರತದ ಮತ್ತು ಅದರ ಸಂವಿಧಾನದ ಎಲ್ಲಾ ಅಧಿಕಾರಗಳು ಮತ್ತು ಅಧಿಕರಣಗಳು ಭಾರತದ ಪ್ರಜೆಗಳಿಂದ ದೊರೆಯಲ್ಪಡುತ್ತವೆ;
ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ;
ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಆದಿವಾಸಿ ಪ್ರಾಂತ್ಯಗಳಿಗೆ, ದೀನ ಮತ್ತು ಹಿಂದುಳಿದ ವರ್ಗಗಳಿಗೆ ಸಮರ್ಪಕ ಸಂರಕ್ಷಣೆಗಳು ಒದಗಿಸಲಾಗುತ್ತದೆ;
ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ;
ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.
ವೈಶಿಷ್ಟ್ಯಗಳು
ಸಮಾಜೋದ್ಧಾರಕ್ಕೆ ಒತ್ತು
ಭಾರತ ಸಂವಿಧಾನದ ಮುಕ್ತ ಪ್ರಜಾಪ್ರಭುತ್ವದ ಸಿದ್ಧಾಂತಗಳ ನಿರೂಪಣೆಯಲ್ಲಿ ಪಾಶ್ಚಿಮಾತ್ಯ ನ್ಯಾಯಶಾಸ್ತ್ರದ ಪ್ರಭಾವ ಗಮನೀಯವಾದುದು.ಆದರೆ ಈ ಸಂವಿಧಾನ ವೈಶಿಷ್ಟ್ಯವೆಂದರೆ ಇದರಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಕೊನೆಗೊಳಿಸುವ ಉದ್ದೇಶವುಳ್ಳ ತತ್ವಗಳು ಮತ್ತು ಸಮಾಜೋದ್ಧಾರದ ಆಕಾಂಕ್ಷೆಗಳು. ಸಂವಿಧಾನ ತಜ್ಞ ಗ್ರಾನ್ವಿಲ್ ಆಸ್ಟಿನನ, "ಸರ್ವೋದ್ಧಾರಕ್ಕೆ ಸಮಾಜವನ್ನು ಪುನಶ್ಚೇತನಗೊಳಿಸಲು ಪ್ರಾಯಶಃ ಬೇರೆ ಯಾವ ದೇಶದ ಸಂವಿಧಾನವೂ ಇಷ್ಟು ಒತ್ತು ನೀಡಿಲ್ಲ" ಎಂದು ಅಭಿಪ್ರಾಯಿಸಿದ್ದಾನೆ.

ಕೇಂದ್ರೀಕರಣ
ಈ ಸಂವಿಧಾನದ ಅಡಿಯಲ್ಲಿ ಹೆಚ್ಚು ಅಧಿಕರಣ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯ ಕೈಗಳಲ್ಲಿ ಕ್ರೂಢಿಕೃತವಾಗಿದೆ. ಭಾರತದಲ್ಲಿ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳು ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಈ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬೆಂಬಲಿಗರು ಪ್ರಾದೇಶಿಕ ಪ್ರಾಮುಖ್ಯತೆಯುಳ್ಳ ವಿಕೇಂದ್ರೀಕೃತ ಪಂಚಾಯತಿ ಪದ್ಧತಿಯನ್ನು ಅಳವಡಿಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಜವಹರಲಾಲ್ ನೆಹರುರವರಂತಹ ಆಧುನಿಕತೆಯ ಬೆಂಬಲಿಗ ನೇತಾರರ ಅಭಿಪ್ರಾಯ ಮೇಲ್ಗೈ ಹೊಂದಿ, ಪ್ರಬಲ ಕೇಂದ್ರೀಕೃತ ಸಂಸದೀಯ ರಾಜ್ಯಗಳ ಒಕ್ಕೂಟ ವ್ಯವಸ್ಥಯನ್ನು ಅಳವಡಿಸಲಾಯಿತು.

ಸಂವಿಧಾನ ಸ್ಥಾಪನೆಯ ನಂತರದ ವರ್ಷಗಳಲ್ಲಿ ಕ್ರಮೇಣ ಪ್ರಾಂತ್ಯಗಳು ಮತ್ತು ಪಂಗಡಗಳು ತಮ್ಮ ವೈಶಿಷ್ಟ್ಯಗಳ ನಿಟ್ಟಿನಲ್ಲಿ ಹೆಚ್ಚು ಅಧಿಕಾರಗಳನ್ನು ಬಯಸಿವೆ. ಈ ಬೆಳವಣಿಗೆ ಸಂವಿಧಾನದ ಕೇಂದ್ರೀಕರಣ ತತ್ವಗಳಿಗೆ ಅಸಮ್ಮತವಾಗಿದೆ. ಆದರೆ ಸಂವಿಧಾನದಲ್ಲಿ ಅಳವಡಿತ ಇತರ ನಿಯಂತ್ರಣಗಳಾದ ಚುನಾವಣ ಪ್ರಾಧಿಕಾರ,ಸರ್ವೋಚ್ಛ ನ್ಯಾಯಲಯ ಮತ್ತು ಮುಂತಾದವುಗಳು ಸಮತೋಲನವನ್ನು ಕಾಪಾಡುತ್ತವೆ. ಇತ್ತೀಚೆಗೆ ಪ್ರಾಂತೀಯ ರಾಜಕೀಯ ಪಕ್ಷಗಳು ಹೆಚ್ಚು ಜನಪ್ರಿಯತೆ ಹೊಂದುತ್ತಿರುವುದರಿಂದ, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳುಸಾಮಾನ್ಯವಾಗಿ, ಅಧಿಕಾರ ಹೆಚ್ಚು ವಿಕೇಂದ್ರೀಕೃತವಾಗುತ್ತಿದೆ.

ಬೇರೆ ದೇಶಗಳ ಸಂವಿಧಾನಗಳಿಂದ ಅಳವಡಿಸಿಗೊಂಡ ತತ್ವಗಳು

ಸಂವಿಧಾನದ ಅಂತಿಮ ರೂಪವು ಅನೇಕ ಇತರ ಸಮಕಾಲೀನ ಸಂವಿಧಾನಗಳ ಬೇರೆಬೇರೆ ತತ್ವಗಳಿಗೆ ಋಣಿಯಾಗಿದೆ.

ಬ್ರಿಟನ್ನಿನ ಸಂವಿಧಾನ
ಸರಕಾರದ ಸಂಸದೀಯ ಸ್ವರೂಪ
ಏಕಸ್ವಾಮ್ಯ ಪೌರತ್ವ
ನ್ಯಾಯದ ಪ್ರಭುತ್ವ
ಲೋಕಸಭಾಧ್ಯಕ್ಷ ಮತ್ತವರ ಪಾತ್ರ
ಶಾಸನೆ ರಚನೆಯ ವಿಧಾನ
ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩)
 ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ
ಮೂಲಭೂತ ಹಕ್ಕುಗಳು
ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ
ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ.
ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ (ಲೇಖನ ೫೨)
ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩)
ಐರ್ಲೆಂಡ್ ದೇಶದ ಸಂವಿಧಾನ  ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು

ಫ್ರಾನ್ಸ್ ದೇಶದ ಸಂವಿಧಾನ  ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃ‍ತ್ವ ಆದರ್ಶಗಳು
ಕೆನಡಾ ದೇಶದ ಸಂವಿಧಾನ  ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು

ಆಸ್ಟ್ರೇಲಿಯ ದೇಶದ ಸಂವಿಧಾನ  ಪ್ರಸ್ತುತ ವಿಷಯಗಳ ಪಟ್ಟಿ
ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪರ - ವಹಿವಾಟಿಗೆ ಸ್ವಾತಂತ್ರ್ಯ

ಸೋವಿಯಟ್ ಒಕ್ಕೂಟದ ಸಂವಿಧಾನ  ಮೂಲಭೂತ ಹಕ್ಕುಗಳು
ಸರ್ಕಾರಿ ಕಾರ್ಯನೀತಿಯ ತಾಕೀತುಗಳು

ಜಪಾನ್ ದೇಶದ ಸಂವಿಧಾನ  ಮೂಲಭೂತ ಕರ್ತವ್ಯಗಳು (ಲೇಖನ ೫೧-ಎ)

ಜರ್ಮನಿ ದೇಶದ ಸಂವಿಧಾನ
 ತುರ್ತು ಪರಿಸ್ಥಿತಿಯ ಎರ್ಪಾಡು (ಲೇಖನ ೩೬೮)
 ಭಾರತ ಸಂವಿಧಾನದ ಪೀಠಿಕೆ

 ಭಾರತದ ಸಂವಿಧಾನದ ಪೀಠಿಕೆಯು ಈ ಕೆಳಗಿನಂತಿದೆ:

  
ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ:ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;ಗಳನ್ನು ದೊರಕಿಸಿ,ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.    
ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ,ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. ಇದಕ್ಕೆ ಉದಾಹರಣೆ, 'ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ' ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು.

ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು ೧೯೭೬ರಲ್ಲಿ ಸಂವಿಧಾನದ ೪೨ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ,ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು.

ಪೀಠಿಕೆಯ ಮಹತ್ವ

ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರುಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ.

ಪೀಠಿಕೆಯ ಮೊದಲ ಪದಗಳು - "ನಾವು, ಜನಗಳು " - ಭಾರತದಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ.

ಪೀಠಿಕೆಯ ಕೆಲವು ಪದಗಳ ನಿರೂಪಣೆ

ಸಾರ್ವಭೌಮ

 ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥಾವ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.  
ಸಮಾಜವಾದಿ

 ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ.  

 ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.

ಜಾತ್ಯತೀತ

 ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ.ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ.ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.  
ಪ್ರಜಾಪ್ರಭುತ್ವ

 ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.  
ಗಣತಂತ್ರ

 ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದ ಗಣತಂತ್ರದಲ್ಲಿ, ಆ ರಾಜ್ಯದ ಮುಖ್ಯಸ್ತನನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಆರಿಸಲಾಗುವುದು. ರಾಷ್ಟ್ರಪತಿಯನ್ನು ೫ ವರ್ಷಗಳ ಒಂದು ನಿರ್ಧಿಷ್ಟ ಅವಧಿಗೆ ಚುನಾಯಿಸಲಾಗುವುದು.  
ಅನುಚ್ಛೇಧಗಳು

 ಅನುಚ್ಛೇಧಗಳನ್ನು ಸಂವಿಧಾನದ ತಿದ್ದುಪಡಿಯ ಮುಖಾಂತರ ಸೇರಿಸಬಹುದು. ಪ್ರಚಲಿತದಲ್ಲಿರುವ ೧೨ ಅನುಚ್ಛೇಧಗಳು ಇವುಗಳನ್ನು ಒಳಗೊಂಡಿವೆ. ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರ ಪರಮಾವದಿ; ಉನ್ನತ ಅಧಿಕಾರಿಗಳ ಸಂಬಳ(ವರಮಾನ);ಪ್ರಮಾಣವಚನಗಳ ವಿಧಗಳು; ರಾಜ್ಯಸಭೆ(ರಾಜ್ಯಗಳ ಪರಿಷತ್ತು - ಸಂಸತ್ತಿನ ಮೇಲ್ಮನೆ)ಯಲ್ಲಿ ಪ್ರತಿ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಿಷ್ಟು ಎಂದು ಸ್ಥಾನಗಳನ್ನು ನಿಗದಿಪಡಿಸುವುದು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಡಳಿತ ಮತ್ತು ನಿಯಂತ್ರಣಕ್ಕೆ ವಿಶೇಷ ಏರ್ಪಾಟು ಕಲ್ಪಿಸುವುದು;ಅಸ್ಸಾಮಿನಲ್ಲಿರುವ ಬುಡಕಟ್ಟು ಪ್ರದೇಶಗಳ ಆದಳಿತಕ್ಕೆ ಏರ್ಪಾಟು ಕಲ್ಪಿಸುವುದು; ಕೇಂದ್ರ(ಕೇಂದ್ರ ಸರ್ಕಾರ),ರಾಜ್ಯ ಹಾಗು ದ್ವಂದ್ವ ಜವಾಬ್ದಾರಿಗಳ ಪಟ್ಟಿಗಳು; ಅಧಿಕೃತ ಭಾಷೆಗಳು ; ಸ್ಥಳ ಮತ್ತು ಅವಧಿಯ ಸುಧಾರಣೆ ; ಭಾರತದೊಂದಿಗೆ ಸಿಕ್ಕಿಂನ ಸಂಯೋಗ; ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರ ಪಕ್ಷಾಂತರ ವಿರುದ್ದ ವಿಶೇಷ ಏರ್ಪಾಟು ಕಲ್ಪಿಸುವುದು ; ಗ್ರಾಮೀಣ ಅಭಿವೃದ್ಧಿ ; ಮತ್ತು ನಗರ ಯೋಜನೆ .

ತಿದ್ದುಪಡಿಗಳು

ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ಪ್ರಕ್ರಿಯೆಗಳಿವೆ:
ಸಂಸತ್ತಿನಲ್ಲಿ ಸಾಮಾನ್ಯ ಬಹುಮತದಿಂದ: ಸಂಸತ್ತಿನಲ್ಲಿ ತಿದ್ದುಪಡಿ ಮತಕ್ಕೆ ಬಂದಾಗ ಅಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಂಸದೀಯರ ಅಂಗೀಕಾರವಿದ್ದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.
ಸಂಸತ್ತಿನಲ್ಲಿ ವಿಶೇಷ ಬಹುಮತದಿಂದ: ಸಂಸತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿದ್ದು, ಅವರಲ್ಲಿ ೩ರಲ್ಲಿ ೨ ಭಾಗ ಸಂಸದೀಯರು ತಿದ್ದುಪಡಿಯನ್ನು ಅಂಗೀಕರಿಸಿದರೆ ಅ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.
ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಬಗೆಗಿನ ತಿದ್ದುಪಡಿಗಳಿಗೆ ಮೇಲಿನಂತೆ ಸಂಸತ್ತಿನ ವಿಶೇಷ ಬಹುಮತವಿದ್ದು, ಅದರೊಂದಿಗೆ ಕನಿಷ್ಟ ಅರ್ಧ ರಾಜ್ಯಗಳ ಶಾಸನಸಭೆಗಳಲ್ಲಿ ವಿಶೇಷ ಬಹುಮತ ಗಳಿಸಿದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.

ಮೇಲಿನಂತೆ ಸಂವಿಧಾನ ತಿದ್ದುಪಡಿ ಒಂದು ಕಠಿಣ ಪ್ರಕ್ರಿಯೆಯಾದರೂ, ಭಾರತದ ಸಂವಿಧಾನ ಪ್ರಪಂಚದ ಅತೀ ತಿದ್ದಲ್ಪಟ್ಟ ಸಂವಿಧಾನಗಳಲ್ಲಿ ಒಂದಾಗಿದೆ. ಮೊಟ್ಟಮೊದಲ ತಿದ್ದುಪಡಿ ಸಂವಿಧಾನದ ಅಳವಡಿಕೆಯ ಒಂದು ವರ್ಷದೊಳಗೆಯೆ ಆಯಿತು. ಇದರಲ್ಲಿ ಹಲವಾರು ಸಣ್ಣ ಬದಲಾವಣೆಗಳನ್ನು ಮಾಡಲಾಯಿತು. ನಂತರದಿಂದ ವರ್ಷಕ್ಕೆ ಸರಾಸರಿ ೨ ತಿದ್ದುಪಡಿಗಳಷ್ಟು ಆಗಿವೆ. ಈ ಸಂವಿಧಾನ ಸವಿಸ್ತಾರವಾಗಿರುವುದರಿಂದ, ಬೇರೆ ಜನತಂತ್ರ ದೇಶಗಳಲ್ಲಿ ವಿಶೇಷ ಕಾಯಿದೆ (ordinance) ಮೂಲಕ ಜಾರಿಗೆ ತರಬಲ್ಲ ಕಾಯಿದೆಗಳನ್ನು ಭಾರತದಲ್ಲಿ ತಿದ್ದುಪಡಿಯಿಂದ ಮಾತ್ರ ತರಲಾಗುತ್ತದೆ.

೧೯೭೪ರ ಕೇಶವಾನಂದ ಭಾರತಿ ವಿರುದ್ಧ ಕೇರಳಾ ರಾಜ್ಯ ಸರ್ಕಾರ ಮೊಕದ್ದಮೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿದ ಒಂದು ಪ್ರಮುಖ ತೀರ್ಪಿನಲ್ಲಿ ಸಂವಿಧಾನದತ್ತ ನ್ಯಾಯಾಂಗ ಪರಿಶೀಲನೆಯ ಶಕ್ತಿಯನ್ನು ಶಾಸಕಾಂಗದ ಸಂವಿಧಾನದ ತಿದ್ದುಪಡಿಗಳನ್ನೂ ಪರಿಶೀಲಿಸುವುದಕ್ಕೆ ವಿಸ್ತರಿಸಿ ಸಂವಿಧಾನದ ಮೂಲಭೂತ ತತ್ವಗಳ ವ್ಯಾಖ್ಯಾನವನ್ನು ಸ್ಥಾಪಿಸಿತು. ಇದರಡಿಯಲ್ಲಿ ೩೯ನೇ ತಿದ್ದುಪಡಿಯನ್ನು ಮತ್ತು ೪೨ನೇ ತಿದ್ದುಪಡಿಯ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ಅವನ್ನು ತಗೆದೆ ಹಾಕಿತು. ಎಚ್.ಎಮ್.ಸೀರ್ವಾಯ್‍ರಂತಃ ಕೆಲ ಸಂವಿಧಾನಿಕ ತಜ್ಞರು ಇದು ಸಂವಿಧಾನ ಶಿಲ್ಪಿಗಳ ಆಶಯಗಳ ಉಲ್ಲಂಘನೆಯೆಂದು ಅಭಿಪ್ರಾಯಿಸಿದ್ದಾರೆ. ಭಾರತದ ಸಂವಿಧಾನ ಇಲ್ಲಿಯವರೆಗೂ ೧೦೮ ತಿದ್ದುಪಡಿಗಳನ್ನು ಕಂಡಿದ್ದು, ಇತ್ತೀಚೆಗೆ ೨೦೧೦ ನೇ ಇಸ್ವಿ ಮಾಚ್ ೯ರಂದು ರಾಜ್ಯಸಭೆಯಲ್ಲಿ ಮಹಿಳಾ ವಿಧೆಯಕ ಅಂಗೀಕಾರವಾಗಿ ರಾಷ್ತ್ರಪತಿಗಲಳ ಅಂಕಿತಕ್ಕಾಗಿ ಹೋಗಿದೆ. 

ಲೇಖನಗಳು
ಭಾಗ ೧ - ಲೇಖನಗಳು ೧-೪ ಕೇಂದ್ರ ಮತ್ತು ಅದರ ಆಡಳಿತದ ಮೇಲೆ
ಭಾಗ ೨ - ಲೇಖನಗಳು ೫-೧೧ ಪೌರತ್ವ ದ ಮೇಲೆ
ಭಾಗ ೩ - ಲೇಖನಗಳು ೧೨-೩೫ ಮೂಲಭೂತ ಹಕ್ಕುಗಳು
ಲೇಖನಗಳು ೧೪-೧೮ ಸಮಾನತೆಯ ಹಕ್ಕು,
ಲೇಖನಗಳು ೧೯-೨೨ ಸ್ವಾತಂತ್ರ್ಯದ ಹಕ್ಕು,
ಲೇಖನಗಳು ೨೩-೨೪ ಶೋಷಣೆಯ ವಿರುದ್ಧ ಹಕ್ಕು,
ಲೇಖನಗಳು ೨೫-೨೮ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,
ಲೇಖನಗಳು ೨೯-೩೧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,
ಲೇಖನಗಳು ೩೨-೩೫ ಸಾಂವಿಧಾನಿಕ ಪರಿಹಾರದ ಹಕ್ಕು.
ಭಾಗ ೪ - ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತುಗಳನ್ನೊಳಗೊಂಡ ಲೇಖನಗಳಾದ ೩೬ - ೫೧
ಭಾಗ ೪(ಎ) ಲೇಖನ ೫೧ ಅ ಒಳಗೊಂಡಿದೆ - ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯಗ್ಳನ್ನೊಳಗೊಂಡಿದೆ.
ಭಾಗ ೫ - ಕೆಂದ್ರದ ಕುರಿತು ಲೇಖನಗಳನ್ನೊಳಗೊಂಡಿದೆ.ಅಧ್ಯಾಯ ೧ - ಲೇಖನಗಳು ೫೨-೭೮ ಕಾರ್ಯಾಂಗ ದ ಬಗ್ಗೆ
ಲೇಖನಗಳು ೫೨-೭೩ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಗಳ ಬಗ್ಗೆ,
ಲೇಖನಗಳು ೭೪-೭೫ ಮಂತ್ರಿ ಪರಿಷತ್ತಿನ ಮೇಲೆ,
ಲೇಖನ ೭೬ ಭಾರತದ ಮುಖ್ಯ ಅಟಾರ್ನಿ,
ಲೇಖನಗಳು ೭೭-೭೮ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆಅಧ್ಯಾಯ ೨ - ಲೇಖನಗಳು ೭೯-೧೨೨ ಸಂಸತ್ತು ಬಗ್ಗೆ.
ಲೇಖನಗಳು ೭೯-೮೮ ಸಂಸತ್ತಿನ ಸಂವಿಧಾನದ ಬಗ್ಗೆ,
ಲೇಖನಗಳು ೮೯-೯೮ ಸಂಸತ್ತಿನ ಅಧಿಕಾರಿಗಳ ಬಗ್ಗೆ,
ಲೇಖನಗಳು ೯೯-೧೦೦ ವ್ಯವಹಾರಗಲನ್ನು ನಡೆಸುವ ಬಗ್ಗೆ,
ಲೇಖನಗಳು ೧೦೧-೧೦೪ ಸದಸ್ಯರ ಉಚ್ಚಾಟನೆಯ ಬಗ್ಗೆ,
ಲೇಖನಗಳು ೧೦೫-೧೦೬ ಸಂಸತ್ತು ಮತ್ತು ಸಂಸತ್ಸದಸ್ಯರ ಅಧಿಕಾರ, ಸೌಕರ್ಯಗಳು, ಮತ್ತು ವಿಶೇಷಾಧಿಕಾರಗಳ ಬಗ್ಗೆ,
ಲೇಖನಗಳು ೧೦೭-೧೧೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ,
ಲೇಖನಗಳು ೧೧೨-೧೧೭ ಆರ್ಥಿಕ ವಿಚಾರಗಳ ಕಾರ್ಯವಿಧಾನದ ಬಗ್ಗೆ,
ಲೇಖನಗಳು ೧೧೮-೧೨೨ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ.ಅಧ್ಯಾಯ ೩ - ಲೇಖನ ೧೨೩ ರಾಷ್ಟ್ರಪತಿಗಳ ಶಾಸಕಾಂಗ ಅಧಿಕಾರಗಳ ಬಗ್ಗೆ.
ಲೇಖನ ೧೨೩ ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆಅಧ್ಯಾಯ ೪ - ಲೇಖನಗಳು ೧೨೪-೧೪೭ ಕೇಂದ್ರ ನ್ಯಾಯಾಂಗದ ಬಗ್ಗೆ.
ಲೇಖನಗಳು ೧೨೪-೧೪೭ ಪರಮೋಚ್ಛ ನ್ಯಾಯಾಲಯದ (ಸುಪ್ರೀಂ ಕೋರ್ಟ್) ರಚನೆ ಮತ್ತು ಸಂವಿಧಾನಗಳ ಬಗ್ಗೆಅಧ್ಯಾಯ ೫ - ಲೇಖನಗಳು ೧೪೮-೧೫೧ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ.
ಲೇಖನಗಳು ೧೪೮ - ೧೫೧ ಕಾಂಪ್ಟ್ರೋಲರ್ ಮತ್ತು ಆಡಿಟರ್-ಜನರಲ್‍ನ ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ
ಭಾಗ ೬ - ರಾಜ್ಯಗಳ ಬಗ್ಗೆ ಲೇಖನಗಳು.ಅಧ್ಯಾಯ ೧ - ಲೇಖನ ೧೫೨ ಭಾರತದ ರಾಜ್ಯದ ಸಾಮಾನ್ಯ ವ್ಯಾಖ್ಯಾನ
ಲೇಖನ ೧೫೨ - ಭಾರತದ ರಾಜ್ಯದ ವ್ಯಾಖ್ಯಾನದಿಂದ ಜಮ್ಮು ಮತ್ತು ಕಾಶ್ಮೀರದ ಹೊರಪಡಿಸುವಿಕೆಅಧ್ಯಾಯ ೨ - ಲೇಖನಗಳು ೧೫೩-೧೬೭ ಕಾರ್ಯಾಂಗದ ಬಗ್ಗೆ
ಲೇಖನಗಳು ೧೫೩-೧೬೨ ರಾಜ್ಯಪಾಲರ ಬಗ್ಗೆ,
ಲೇಖನಗಳು ೧೬೩-೧೬೪ ಮಂತ್ರಿ ಪರಿಷತ್ತಿನ ಮೇಲೆ,
ಲೇಖನ ೧೬೫ ರಾಜ್ಯದ ಅಡ್ವೋಕೇಟ್-ಜನರಲ್ ರ ಬಗ್ಗೆ.
ಲೇಖನಗಳು ೧೬೬-೧೬೭ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆ.ಅಧ್ಯಾಯ ೩ - ಲೇಖನಗಳು ೧೬೮ - ೨೧೨ ರಾಜ್ಯಗಳ ಶಾಸಕಾಂಗದ ಬಗ್ಗೆ.
ಲೇಖನಗಳು ೧೬೮ - ೧೭೭ ಸಾಮಾನ್ಯ ಮಾಹಿತಿ
ಲೇಖನಗಳು ೧೭೮ - ೧೮೭ ರಾಜ್ಯ ಶಾಸಕಾಂಗದ ಅಧಿಕಾರಿಗಳ ಬಗ್ಗೆ,
ಲೇಖನಗಳು ೧೮೮ - ೧೮೯ ಕಾರ್ಯನಿರ್ವಣೆಯ ಬಗ್ಗೆ,
ಲೇಖನಗಳು ೧೯೦ - ೧೯೩ ಸದಸ್ಯರನ್ನು ವಜಾ ಮಾಡುವ ಬಗ್ಗೆ,
ಲೇಖನಗಳು ೧೯೪ - ೧೯೫ ಸಭೆಯ ಮತ್ತದರ ಸದಸ್ಯರ ಅಧಿಕಾರಗಳು, ಸವಲತ್ತುಗಳು ಮತ್ತು ಕಾನೂನಿಕ ಸಂರಕ್ಷಣೆಗಳು,
ಲೇಖನಗಳು ೧೯೬ - ೨೦೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ,
ಲೇಖನಗಳು ೨೦೨ - ೨೦೭ ಅರ್ಥಿಕ ವಿಷಯಗಳಲ್ಲಿ ಕಾರ್ಯವಿಧಾನಗಳ ಬಗ್ಗೆ,
ಲೇಖನಗಳು ೨೦೮ - ೨೧೨ ಇತರೆ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ.ಅಧ್ಯಾಯ ೪ - ಲೇಖನ ೨೧೩ ರಾಜ್ಯಪಾಲರ ಶಾಸಕಾಂಗ ಅಧಿಕಾರಗಳ ಬಗ್ಗೆ
ಲೇಖನ ೨೧೩ - ರಾಷ್ಟ್ರಪತಿಗೆ ಸಂಸತ್ತು ಸಭೆಯಲ್ಲಿಲ್ಲದ ಕಾಲದಲ್ಲಿ ವಿಧೇಯಕಗಳನ್ನು ನೀಡುವ ಅಧಿಕಾರದ ಬಗ್ಗೆ.ಅಧ್ಯಾಯ ೫ - ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಛನ್ಯಾಯಾಲಯಗಳ ಬಗ್ಗೆ.
ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಛನ್ಯಾಯಾಲಯಗಳ ಬಗ್ಗೆ.ಅಧ್ಯಾಯ ೬ - ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ.
ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ
ಭಾಗ ೭ - ಮೊದಲನೆ ಅನುಚ್ಛೇಧದ 'ಬಿ' ಭಾಗದಲ್ಲಿರುವ ರಾಜ್ಯಗಳ ಬಗ್ಗೆ ಲೇಖನಗಳು.
ಲೇಖನ ೨೩೮ ಲೇಖನ ೨೩೮ರ ರದ್ದುಪಡಿಸುವಿಕೆ. ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
ಭಾಗ ೮ - ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಲೇಖನಗಳು
ಲೇಖನಗಳು ೨೩೯ - ೨೪೨ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಉಚ್ಛ ನ್ಯಾಯಾಲಯಗಳ ಬಗ್ಗೆ
ಭಾಗ ೯ - ಪಂಚಾಯತಿ ಪದ್ಧತಿಯ ಬಗ್ಗೆ ಲೇಖನಗಳು
ಲೇಖನಗಳು ೨೪೩ - ೨೪೩ಓ ಗ್ರಾಮ ಸಭೆ ಮತ್ತು ಪಂಚಾಯತಿ ಪದ್ಧತಿಯ ಬಗ್ಗೆ
ಭಾಗ ೯ಎ - ನಗರಪಾಲಿಕೆಗಳ ಬಗ್ಗೆ ಲೇಖನಗಳು.
ಲೇಖನಗಳು ೨೪೩ಪಿ - ೨೪೩ಜೆಡ್‍ಜಿ ನಗರಪಾಲಿಕೆಗಳ ಬಗ್ಗೆ
ಭಾಗ ೧೦ - ಪರಿಶಿಷ್ಟ ಪಂಗಡಗಳಿರುವ ಪ್ರದೇಶಗಳ ಬಗ್ಗೆ ಲೇಖನಗಳು.
ಲೇಖನಗಳು ೨೪೪ - ೨೪೪ಎ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಶಾಸನಸಭೆಗಳ ಬಗ್ಗೆ.
ಭಾಗ ೧೧ - ಕೇಂದ್ರ ಮತ್ತು ರಾಜ್ಯಗಳ ಸಂಭಂಧಗಳ ಬಗ್ಗೆ.ಅಧ್ಯಾಯ ೧ - ಲೇಖನಗಳು ೨೪೫ - ೨೫೫ ಶಾಸಕಾಂಗದ ಅಧಿಕಾರಗಳ ವಿತರಣೆಯ ಬಗ್ಗೆ
ಲೇಖನಗಳು ೨೪೫ - ೨೫೫ ಶಾಸಕಾಂಗದ ಸಂಬಂಧಗಳ ವಿತರಣೆಯ ಬಗ್ಗೆಅಧ್ಯಾಯ ೨ - ಲೇಖನಗಳು ೨೫೬ - ೨೬೩ ಆಡಳಿತದ ಸಂಭಂಧಗಳು
ಲೇಖನಗಳು ೨೫೬ - ೨೬೧ - ಸಾಮಾನ್ಯ
ಲೇಖನಗಳು ೨೬೨ - ನೀರಿನ ವಿವಾದಗಳ ಬಗ್ಗೆ.
ಲೇಖನಗಳು ೨೬೩ - ರಾಜ್ಯಗಳ ಮಧ್ಯೆ ಸಂಯೋಜನೆಯ ಬಗ್ಗೆ.
ಭಾಗ ೧೨ - ಹಣಕಾಸು, ಸ್ವತ್ತು, ಒಪ್ಪಂದಗಳು ಮತ್ತು ದಾವೆಗಳ ಬಗ್ಗೆ.ಅಧ್ಯಾಯ ೧ - ಲೇಖನಗಳು ೨೬೪ - ೨೯೧ ಹಣಕಾಸಿನ ಬಗ್ಗೆ
ಲೇಖನಗಳು ೨೬೪ - ೨೬೭ ಸಾಮಾನ್ಯ
ಲೇಖನಗಳು ೨೬೮ - ೨೮೧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಆದಾಯದ ಹಂಚುವಿಕೆ ಬಗ್ಗೆ
ಲೇಖನಗಳು ೨೮೨ - ೨೯೧ ಇತರೆ ಹಣಕಾಸಿನ ಬಗ್ಗೆ ಮುನ್ನೇರ್ಪಾಡುಗಳುಅಧ್ಯಾಯ ೨ - ಲೇಖನಗಳು ೨೯೨ - ೨೯೩ ಸಾಲಗಳ ಬಗ್ಗೆ
ಲೇಖನಗಳು ೨೯೨ - ೨೯೩ ರಾಜ್ಯಗಳು ಸಾಲ ಮಾಡುವ ಬಗ್ಗೆಅಧ್ಯಾಯ ೩ - ಲೇಖನಗಳು ೨೯೪ - ೩೦೦ ಸ್ವತ್ತು, ಒಪ್ಪಂದಗಳು, ಹಕ್ಕುಗಳು, ಹೊಣೆಗಾರಿಕೆ, ಅಭಾರಗಳು ಮತ್ತು ದಾವೆಗಳ ಬಗ್ಗೆ
ಲೇಖನಗಳು ೨೯೪ - ೩೦೦ ಸ್ವತ್ತುಗಳ ಹಕ್ಕುಗಳು, ಹೊಣೆಗಾರಿಕೆ ಮತ್ತು ಅಭಾರಗಳು ಉತ್ತರಾಧಿಕಾರದ ಬಗ್ಗೆ.ಅಧ್ಯಾಯ ೪ - ಲೇಖನ ೩೦೦ಎ ಸ್ವತ್ತಿನ ಮೇಲಿನ ಹಕ್ಕುಗಳ ಬಗ್ಗೆ
ಲೇಖನ ೩೦೦ಎ - ಜನರ ಸ್ವತ್ತುಗಳನ್ನು ಕಾನೂನುಬಾಹಿರವಾಗಿ ತಗೆದುಕೊಳ್ಳದಿರುವ ಬಗ್ಗೆ
ಭಾಗ ೧೩ - ಭಾರತದ ಸಂಸ್ಥಾನದ ಒಳಗೆ ವ್ಯಾಪಾರ ಮತ್ತು ವಾಣಿಜ್ಯಗಳ ಬಗ್ಗೆ ಲೇಖನಗಳು
ಲೇಖನಗಳು ೩೦೧ - ೩೦೫ ವ್ಯಾಪಾರ ಮತ್ತು ವಾಣಿಜ್ಯಗಳ ಸ್ವಾತಂತ್ರ್ಯತೆ ಹಾಗು ಅದರ ಮೇಲೆ ಸಂಸತ್ತು ಮತ್ತು ರಾಜ್ಯಗಳಿಗೆ ನಿರ್ಬಂಧನೆಗಳನ್ನು ಹೇರುವ ಅಧಿಕಾರದ ಬಗ್ಗೆ
ಲೇಖನ ೩೦೬ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
ಲೇಖನ ೩೦೭ - ಲೇಖನ ೩೦೧ ರಿಂದ ೩೦೪ರಲ್ಲಿರುವ ಕಾರ್ಯಗಳನ್ನು ನಡೆಸುವ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ.
ಭಾಗ ೧೪ - ರಾಜ್ಯ ಮತ್ತು ಕೇಂದ್ರದಡಿಯಲ್ಲಿರುವ ಸೇವೆಗಳ ಬಗ್ಗೆ ಲೇಖನಗಳುಅಧ್ಯಾಯ ೫ - ಲೇಖನಗಳು ೩೦೮ - ೩೧೪ ಸೇವೆಗಳ ಬಗ್ಗೆ
ಲೇಖನಗಳು ೩೦೮ - ೩೧೩ ಸೇವೆಗಳ ಬಗ್ಗೆ
ಲೇಖನ ೩೧೪ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಇಪ್ಪತೆಂಟನೇ ತಿದ್ದುಪಡಿ) ಕಾಯಿದೆ, ೧೯೭೨, ಎಸ್. ೩ (೨೯-೮-೧೯೭೨ರಿಂದ ಜಾರಿಗೆ).ಅಧ್ಯಾಯ ೨ - ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ
ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ
ಭಾಗ ೧೪ಎ - ಆಯೋಗಗಳ ಬಗ್ಗೆ ಲೇಖನಗಳು
ಲೇಖನಗಳು ೩೨೩ಎ - ೩೨೩ಬಿ
ಭಾಗ ೧೫ - ಚುನಾವಣೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ
ಲೇಖನೆಗಳು ೩೨೪ - ೩೨೯ ಚುನಾವಣೆಗಳ ಬಗ್ಗೆ
ಲೇಖನ ೩೨೯ ಎ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ನಲ್ವತ್ತನಾಲ್ಕನೇ ತಿದ್ದುಪಡಿ) ಕಾಯಿದೆ, ೧೯೭೮, ಎಸ್.೩೬ (೨೦-೬-೧೯೭೯ರಿಂದ ಜಾರಿಗೆ).
ಭಾಗ ೧೬ - ಕೆಲ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಬಗ್ಗೆ ಲೇಖನಗಳು.
ಲೇಖನಗಳು ೩೩೦ -೩೪೨ ಮೀಸಲಾತಿಯ ಬಗ್ಗೆ
ಭಾಗ ೧೭ - ಅಧಿಕೃತ ಭಾಷೆಗಳ ಬಗ್ಗೆ ಲೇಖನಗಳುಅಧ್ಯಾಯ ೧ - ಲೇಖನಗಳು ೩೪೩ - ೩೪೪ ಕೇಂದ್ರದ ಭಾಷೆಯ ಬಗ್ಗೆ
ಲೇಖನಗಳು ೩೪೩ - ೩೪೪ ಕೇಂದ್ರದ ಅಧಿಕೃತ ಭಾಷೆಯ ಬಗ್ಗೆ
ಅಧ್ಯಾಯ ೨ - ಲೇಖನಗಳು ೩೪೫ - ೩೪೭ ಪ್ರಾಂತೀಯ ಭಾಷೆಗಳ ಬಗ್ಗೆ
ಲೇಖನಗಳು ೩೪೫ -೩೪೭ ಪ್ರಾಂತೀಯ ಭಾಷೆಗಳ ಬಗ್ಗೆಅಧ್ಯಾಯ ೩ - ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿ
ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿಅಧ್ಯಾಯ ೪ - ಲೇಖನಗಳು ೩೫೦ - ೩೫೧ ವಿಶೇಷ ನಿರ್ದೇಶಕಗಳ ಬಗ್ಗೆ
ಲೇಖನ ೩೫೦ - ಅಹವಾಲುಗಳನ್ನು ಸಲ್ಲಿಸುವಲ್ಲಿ ಉಪಯೋಗಿಸಬೇಕಾಗಿರುವ ಭಾಷೆಯ ಬಗ್ಗೆ.
ಲೇಖನ ೩೫೦ ಎ - ಮಾತೃಭಾಷೆಯಲ್ಲಿ ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣ ದೊರೆಸುವಿಕೆಯ ಬಗ್ಗೆ
ಲೇಖನ ೩೫೦ಬಿ - ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಿ ನೇಮಕದ ಬಗ್ಗೆ.
ಲೇಖನ ೩೫೧ - ಹಿಂದಿ ಭಾಷೆಯ ಬೆಳವಣೆಗೆಯ ಬಗ್ಗೆ ನಿರ್ದೇಶಕ.
ಭಾಗ ೧೮ - ತುರ್ತುಪರಿಸ್ಥಿತಿಗಳ ಮುನ್ನೇರ್ಪಾಡಿನ ಬಗ್ಗೆ ಲೇಖನಗಳು
ಲೇಖನಗಳು ೩೫೨ - ೩೫೯ - ತುರ್ತು ಪರಿಸ್ಥಿತಿಗಳ ಮುನ್ನೇರ್ಪಾಡುಗಳು.
ಲೇಖನ ೩೫೯ಎ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಅರವತ್ತಮೂರನೇ ತಿದ್ದುಪಡಿ) ಕಾಯಿದೆ, ೧೯೮೯, ಎಸ್. ೩ (೬-೧-೧೯೯೦ರಿಂದ ಜಾರಿಗೆ).ಲೇಖನ ೩೬೦ - ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಮುನ್ನೇರ್ಪಾಡುಗಳು.
ಭಾಗ ೧೯ - ಇತರೆ ವಿಷಯಗಳು
ಲೇಖನಗಳು ೩೬೧ - ೩೬೧ಎ - ಇತರೆ ವಿಷಯಗಳು
ಲೇಖನ ೩೬೨ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಇಪ್ಪತ್ತೇಳನೇ ತಿದ್ದುಪಡಿ) ಕಾಯಿದೆ, ೧೯೭೧, ಎಸ್.೨ .
ಲೇಖನಗಳು ೩೬೩ - ೩೬೭ - ಇತರೆ
ಭಾಗ ೨೦ - ಸಂವಿಧಾನದ ತಿದ್ದುಪಡಿಯ ಬಗೆಗಿನ ಲೇಖನಗಳು.
ಲೇಖನ ೩೬೮ - ಶಾಸನಸಭೆಗಿರುವ ಸಂವಿಧಾನವನ್ನು ತಿದ್ದುವ ಅಧಿಕಾರಗಳು ಮತ್ತದನ್ನು ಮಾಡುವ ವಿಧಾನ.
ಭಾಗ ೨೧ - ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ ಲೇಖನಗಳು
ಲೇಖನಗಳು ೩೬೯ -೩೭೮ಎ ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ
ಲೇಖನಗಳು ೩೭೯ - ೩೯೧ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
ಲೇಖನ ೩೯೨ - ಸಂಕಷ್ಟ ಪರಿಸ್ಥಿತಿಗಳನ್ನು ನಿವಾರಿಸಲು ರಾಷ್ಟ್ರಪತಿಯ ಅಧಿಕಾರಗಳು.
ಭಾಗ ೨೨ - ಸಂಕ್ಷಿಪ್ತ ಶೀರ್ಷಿಕೆ, ಪ್ರಾರಂಭದ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆಯ ಬಗ್ಗೆ ಲೇಖನಗಳು
ಲೇಖನಗಳು ೩೯೩ -೩೯೫ ಪ್ರಾರಂಭವಾಗುವ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆ

ಟೀಕೆಗಳು

 ಪಾಶ್ಚಿಮಾತ್ಯ ಸಂವಿಧಾನಗಳಿಂದ ಪ್ರೇರಿತ ಭಾರತದ ಸಂವಿಧಾನವು ಅವುಗಳಿಗಿಂತ ಭಿನ್ನವಾಗಿದೆ, ಹೇಗೆಂದರೆ ಶಾಸಕಾಂಗ ವನ್ನು ನಾಡಿನ ಪ್ರಧಾನ ಕಾನೂನು ರಚಿಸುವ ಅಂಗವನ್ನಾಗಿ ಸಂವಿಧಾನವು ಎತ್ತಿ ಹಿಡಿಯುತ್ತದೆ. ಈ ರೀತಿಯಾಗಿ ಶಾಸಕಾಂಗವು ಕಾರ್ಯಾಂಗ ಮತ್ತುನ್ಯಾಯಾಂಗ ಗಳಿಗಿಂತ ಬಲಿಷ್ಠವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸವು ಮಜಬೂತಾಗಿದ್ದರೂ, ಅಧಿಕಾರಶಾಹೀ ವರ್ಗಕ್ಕೆ ದುರುಪಯೋಗದ ಆಸ್ಪದ ಕೊಡುವುದೆಂಬ ಟೀಕೆಯೂ ಸೇರಿದೆ. ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ಬಡತನಗಳೇ ಇದಕ್ಕೆ ಸಾಕ್ಷಿಗಳಾಗಿವೆ.

ಕೃಪೆ : ವಿಕಿಪೀಡಿಯ

Jan 24, 2012

ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಜಾತ್ರೆ


ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಜಾತ್ರೆ

Kengal Anjaneya
ಚನ್ನಪಟ್ಟಣದ ಇತಿಹಾಸ ಪ್ರಸಿದ್ದ, ಐಯ್ಯನಗುಡಿ ಜಾತ್ರೆಯೆಂದೇ ಈ ಭಾಗದ ಜನರಲ್ಲಿ ಹಾಸುಹೊಕ್ಕಾಗಿರುವ ಚನ್ನಪಟ್ಟಣ ತಾಲ್ಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬ್ರಹ್ಮರಥೋತ್ಸವ ಕಾರ್ಯಕ್ರಮವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ, ವೇದ ಮಂತ್ರ, ಘೋಷಗಳ ನಾದದಲ್ಲಿ ವಿಜೃಂಭಣೆಯಿಂದ ಸೋಮವಾರ ನೆರವೇರಿತು.

ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ನಡೆದ ಈ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕು ತಹಶೀಲ್ದಾರ್ ಎಸ್.ಆರ್.ಕೃಷ್ಣಯ್ಯ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಚಂದ್ರಶೇಖರಯ್ಯ, ಶಾಸಕ ಎಂ.ಸಿ.ಅಶ್ವಥ್ ಹಾಗೂ ಇತರ ಗಣ್ಯ ಭಕ್ತಾದಿಗಳು ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಮೂರ್ತಿಗಳನ್ನು ಹೊತ್ತ ರಥ ಚಲಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತಾದಿಗಳು ಧನ್ಯತಾ ಭಾವದಿಂದ ತಮ್ಮ ಇಷ್ಟದೈವಕ್ಕೆ ಹೂವು, ಹಣ್ಣು, ಜವನ ಎಸೆಯುವ ಮೂಲಕ ಭಗವಂತನನ್ನು ಕಣ್ಮನಗಳಲ್ಲಿ ತುಂಬಿಕೊಂಡರು. ನಂತರ ಗೋವು ಮತ್ತು ಅಶ್ವಪೂಜೆ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಹೂವಿನ ಪಲ್ಲಕ್ಕಿ ಉತ್ಸವಗಳಲ್ಲಿ ಭಕ್ತರು ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು.

ದೇಗುಲದ ಇತಿಹಾಸ : ಸುಮಾರು 300 ವರ್ಷಗಳ ಇತಿಹಾಸವಿರುವ ಈ ದೇಗುಲ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ. ಸರ್ವಧರ್ಮ ಸಹಿಷ್ಣುತೆಯುಳ್ಳ ಈ ದೇವಾಲಯವನ್ನು 12 ಬಾರಿ ಪ್ರದಕ್ಷಿಣೆ ಹಾಕಿದರೆ ತಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದ ಸಂಕಲ್ಪ ಈಡೇರುತ್ತದೆ ಎಂಬ ನಂಬಿಕೆ ಈ ಭಾಗದ ಜನತೆಯಲ್ಲಿದೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕಣ್ವ ಕ್ಷೇತ್ರಾಂತರ್ಗತ ಹಾಗೂ ವ್ಯಾಸ ಮಹರ್ಷಿಗಳು ಕೆಂಪುಕಲ್ಲಿನಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಹುಲಿಗಳು ಹೆಚ್ಚಾಗಿದ್ದ ಕಾರಣ ಇದಕ್ಕೆ ಹುಲಿಮುತ್ತಿಗೆ ದೊಡ್ಡಿ ಎಂದೂ ಕರೆಯಲಾಗುತ್ತಿತ್ತು. ಈ ಹುಲಿಗಳು ಅಲ್ಲಿನ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದವು. ಅಂದಿನ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಹುಲಿಗಳ ಉಪಟಳ ತಾಳಲಾರದೆ ಭಗವಂತನ ಮೊರೆ ಹೋಗಿದ್ದರಂತೆ.

ಒಂದು ದಿನ ಓರ್ವ ರೈತ ಈ ಮಾರ್ಗವಾಗಿ ಎತ್ತಿನಗಾಡಿಯಲ್ಲಿ ತನ್ನ ಊರಿಗೆ ತೆರಳುತ್ತಿದ್ದಾಗ ವಿಶ್ರಾಂತಿಗಾಗಿ ಈ ಕ್ಷೇತ್ರದಲ್ಲಿ ಉಳಿದುಕೊಂಡನಂತೆ. ಬೆಳಿಗ್ಗೆ ಎದ್ದು ನೋಡಿದಾಗ ತನ್ನ ಹಸುಗಳನ್ನು ಕಾಣದೆ ಕಂಗಾಲಾಗಿರುವಾಗ ಭಗವಂತ ಪ್ರತ್ಯಕ್ಷನಾಗಿ ನನ್ನ ಮೂರ್ತಿ ಬಳಿ ನಿನ್ನ ಹಸುಗಳಿವೆ ಎಂದನಂತೆ.

ಆಗ ರೈತ ಶ್ರೀ ಆಂಜನೇಯನ ಮೂರ್ತಿ ಬಳಿ ಧಾವಿಸಿದಾಗ ತನ್ನ ಹಸುಗಳು ಮೂರ್ತಿ ಬಳಿ ಇದ್ದುದನ್ನು ಕಂಡು ಬೆರಗಾದನಂತೆ. ಹಸುಗಳ ಜೊತೆ ಹುಲಿಯೂ ಸಹ ಅಲ್ಲಿಯೇ ಇದ್ದುದನ್ನು ಕಂಡನಂತೆ. ಇದರಿಂದ ಪ್ರೇರಿತರಾದ ಮೈಸೂರಿನ ದಿವಾನರು ಈ ದೇವಾಲಯದ ಅಭಿವೃದ್ದಿಗಾಗಿ 10 ಎಕರೆ ಜಮೀನನ್ನು ನೀಡಿ, ಶ್ರೀ ಆಂಜನೇಯಸ್ವಾಮಿಗೆ ಒಂದು ಚಿನ್ನದ ಕಣ್ಣು ಹಾಗೂ ಮೀಸೆಯನ್ನು ಕೊಡುಗೆಯಾಗಿ ನೀಡಿದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಆಂಜನೇಯಸ್ವಾಮಿ ಪ್ರಸಾದದಿಂದ ಜನಿಸಿದರೆಂಬ ಹಿನ್ನಲೆಯಲ್ಲಿ ಈ ದೇವಾಲಯವನ್ನು ಅವರ 60ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಜೀರ್ಣೋದ್ದಾರ ಮಾಡಲಾಗಿದೆ.

ಮೂಲಸೌಲಭ್ಯಗಳ ಕೊರತೆ : ಪುರಾಣ ಪ್ರಸಿದ್ದವಾಗಿರುವ ಈ ದೇವಾಲಯ ಮೂಲಭೂತ ಸೌಲಭ್ಯಗಳಿಂದ ಇಂದಿಗೂ ವಂಚಿತವಾಗಿದೆ. ಕುಡಿಯುವ ನೀರು. ಶೌಚಾಲಯದ ಅಭಾವ, ಸ್ವಚ್ಛತೆ ಸಿಬ್ಬಂದಿ ಕೊರತೆ ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಕಾಡುತ್ತಿದೆ. ಪ್ರತಿವರ್ಷ ಇಲ್ಲಿ ಸಾವಿರಾರು ವಿವಾಹ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿನ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಜಿಲ್ಲಾಡಳಿತ ಗಮನಹರಿಸದಿರುವುದು ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡಿದೆ.

ದನಗಳ ಜಾತ್ರೆ : ಜಾತ್ರೆಯ ಅಂಗವಾಗಿ 9 ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ತರಹೇವಾರಿ ರಾಸುಗಳು ಇಲ್ಲಿ ಜಮಾವಣೆಗೊಳ್ಳುತ್ತವೆ. ಸಾವಿರಾರು ರಾಸುಗಳನ್ನು ಮಾರುವುದು ಕೊಳ್ಳುವುದರಿಂದ ಇಲ್ಲಿ ಕೋಟ್ಯಾಂತರ ರೂ. ವಹಿವಾಟು ನಡೆಯುವುದು ವಿಶೇಷ.

ದನಗಳ ಜಾತ್ರೆ ಕಳೆದ ವಾರದಿಂದಲೂ ಭರ್ಜರಿಯಾಗಿ ನಡೆಯುತ್ತಿದೆ. ಕೆಂಗಲ್ ಸುತ್ತಮುತ್ತ ಸುಮಾರು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರು ರಾಸುಗಳ ಓಡಾಟ ಮತ್ತು ರಾಸುಗಳನ್ನು ಕೊಳ್ಳಲು ಬಂದಿರುವ ಗಿರಾಕಿಗಳ ಸುತ್ತಾಟ ನಡೆದಿದೆ. ವರ್ಷದ ಆರಂಭದಲ್ಲಿ ಸಂಕ್ರಾಂತಿ ಸಮಯದಲ್ಲಿ ರಾಸುಗಳಿಗೆ ವಿಶೇಷ ಪೂಜೆ ಮಾಡುವ ದಿನದಂದೇ ಆರಂಭವಾಗುವ ಈ ದನಗಳ ಜಾತ್ರೆ ಅತಿ ವಿಶೇಷವಾಗಿದ್ದು, ಈ ಭಾಗದಲ್ಲಿ ಹೆಸರುವಾಸಿಯಾಗಿದೆ. ಜ.22ರವರೆಗೆ ಈ ದನಗಳ ಜಾತ್ರೆ ನಡೆಯಲಿದೆ.

ಇಲ್ಲಿನ ರಾಸುಗಳನ್ನು ಕೊಳ್ಳಲು ಜಿಲ್ಲೆಯ ವಿವಿಧ ರಾಜ್ಯಗಳ ಗಿರಾಕಿಗಳಲ್ಲದೆ, ನೆರೆಯ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಸಹ ಆಗಮಿಸಿದ್ದಾರೆ. ಇಲ್ಲಿ ರಾಸುಗಳು 10, 15 ಸಾವಿರದಿಂದ ಹಿಡಿದು, ಒಂದೂವರೆ ಲಕ್ಷದವರೆಗೆ ವ್ಯಾಪಾರಗೊಂಡ ಉದಾಹರಣೆಗಳು ಇವೆ. ಈ ಬಾರಿಯ ಜಾತ್ರೆಗೆ ತಾಲ್ಲೂಕು ಆಡಳಿತ ವಿಶೇಷ ಆಸಕ್ತಿ ವಹಿಸಿ ಬೆಳಕು ಮತ್ತು ನೀರಿನ ವ್ಯವಸ್ಥೆಯನ್ನು ಸಹ ಮಾಡಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಾಗುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಈ ದನಗಳ ಜಾತ್ರೆ ಗಮನಸೆಳೆಯುತ್ತಿದೆ. ರಥೋತ್ಸವವು ಮುಗಿದ ನಂತರ ಜಾತ್ರಾ ಮಹೋತ್ಸವ ಕೊನೆಗೊಳ್ಳಲಿದೆ.

Jan 22, 2012

ಅಪ್ರಮೇಯ ನೆಲೆಸಿಹ ಪವಿತ್ರ ಪುಣ್ಯಕ್ಷೇತ್ರ ಮಳೂರು


ಅಪ್ರಮೇಯ ನೆಲೆಸಿಹ ಪವಿತ್ರ ಪುಣ್ಯಕ್ಷೇತ್ರ ಮಳೂರು
Mallur Krishna, ಮಳೂರು ಅಂಬೆಗಾಲು ಕೃಷ್ಣ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಆಡಿಸಿದಳು ಯಶೋದೆ ಜಗದೋದ್ಧಾರನ, ಜಗದೋದ್ಧಾರನಾ ಮಗನೆಂದು ತಿಳಿಯುತಾ ಆಡಿಸಿದಳು ಯಶೋಧಾ ಜಗದೋದ್ಧಾರನಾ.....
ಪುರಂದರ ದಾಸರು ರಚಿಸಿದ ಈ ಗೀತೆ ಬಹು ಜನಪ್ರಿಯ. ಈ ಕೃತಿಯನ್ನು ದಾಸರು ರಚಿಸಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಬಳಿ ಇರುವ ದೊಡ್ಡ ಮಳೂರಿನ ಕೃಷ್ಣ ದೇವಾಲಯದಲ್ಲಿ, ಪುರಾತನವಾದ ಈ ದೇವಾಲಯದಲ್ಲಿರುವ ಸುಂದರ  ಕೃಷ್ಣನ ಮೂರ್ತಿಯನ್ನು ಕಂಡು ಭಾವಪರವಶರಾಗಿ ದಾಸರು ಈ ರಚನೆ ಮಾಡಿದರೆನ್ನುತ್ತದೆ ಇತಿಹಾಸ.
ಕಣ್ವ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮದ ಹೆಸರು ಜೋಳರ ಕಾಲದ ಹಲವು ದಾಖಲೆಗಳಲ್ಲಿ ದೊರಕುತ್ತದೆ. ದೊಡ್ಡ ಮಳೂರು, ಮಳ್ಳೂರು, ಮರಳೂರು ಇತ್ಯಾದಿ ಹೆಸರುಗಳಿಂದ ಕರೆಸಿಕೊಂಡಿತ್ತು.  ಹಿಂದೆ ಇದಕ್ಕೆ ರಾಜೇಂದ್ರ ಸಿಂಹ ನಗರ ಎಂಬ ಹೆಸರಿತ್ತೆಂದೂ ತಿಳಿದುಬರುತ್ತದೆ. ಸಾರಂಗಧರನಿಗೆ ಇಲ್ಲಿ ಕೈಗಳು ಮೊಳೆತುದರಿಂದ ಈ ಸ್ಥಳಕ್ಕೆ ಮೊಳತೂರು ಎಂಬ ಹೆರು ಬಂತೆಂದೂ ಕಾಲಾನಂತರದಲ್ಲಿ ಮೊಳತೂರು, ಮಳೂರಾಯಿತೆಂದು ಹೇಳಲಾಗಿದೆ. ಜಗದೇವರಾಯ ಈ ದೇವಸ್ಥಾನಕ್ಕೆ ಪ್ರಾಕಾರ ಕಟ್ಟಿಸಿದರೆಂದು ತಿಳಿದುಬರುತ್ತದೆ. ಈ ಊರು ಒಂದು ಕಾಲದಲ್ಲಿ Mallur Krishna, ಮಳೂರು ಅಂಬೆಗಾಲು ಕೃಷ್ಣ, ಅಪ್ರಮೇಯ, Aprameya, channapattana, mysore road,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುವೇದಾಧ್ಯಯನ ಕೇಂದ್ರವಾಗಿತ್ತು. ವೇದಾಧ್ಯಯನದಲ್ಲಿ ಸಾರ್ವಭೌಮತ್ವ ಪಡೆಯಲಿಚ್ಛಿಸುತ್ತಿದ್ದವರು ಇಲ್ಲಿ ಬರುತ್ತಿದ್ದರಂತೆ. ಹೀಗಾಗಿ ಇಲ್ಲಿನ ದೇವಾಲಯದಲ್ಲಿ ಸ್ಥಾಪಿಸಲಾಗಿರುವ ಅಪ್ರಮೇಯ ಎಂದೂ ಹೆಸರು ಬಂದಿದೆ. ಬ್ರಹ್ಮಾನಂದ ಪುರಾಣದ ರೀತ್ಯ ಅಪ್ರಮೇಯ ಎಂದರೆ ಪರಮೋಚ್ಚ ಎಂದು ಅರ್ಥ. ವನವಾಸಿಯಾಗಿದ್ದ ತ್ರೇತಾಯುಗಪುರುಷ ಶ್ರೀರಾಮಚಂದ್ರ ಇಲ್ಲಿ ಅಪ್ರಮೇಯನ ಪೂಜಿಸಿದನೆಂದೂ ಅದಕ್ಕೇ ರಾಮಾಪ್ರಮೇಯ ಎಂದೂ ಕರೆಯುತ್ತಾರೆ ಎನ್ನುತ್ತದೆ ಸ್ಥಳ ಪುರಾಣ.
ಇಲ್ಲಿರುವ ಕೃಷ್ಣಮೂರ್ತಿ ಅತ್ಯಂತ ಮನಮೋಹಕವಾಗಿದೆ. 16 ಕೈಗಳನ್ನುಳ್ಳ ಈ ಮೂರ್ತಿ ಶಂಖ, ಚಕ್ರ, ಗದಾ, ಪದ್ಮಾದಿ ಆಯುಧಗಳನ್ನು ಹಿಡಿದಿದ್ದಾನೆ. ಮೂರ್ತಿಯ ಹಿಂಭಾದಲ್ಲಿರುವ ವೃತ್ತಾಕಾರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ.
Mallur Krishna, ಮಳೂರು ಅಂಬೆಗಾಲು ಕೃಷ್ಣ, ಅಪ್ರಮೇಯ, Aprameya, channapattana, mysore road,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಶ್ರೀ ವ್ಯಾಸರಾಯರು ಇಲ್ಲಿ ದೇವತಾರ್ಚನೆ ಮಾಡುತ್ತಿದ್ದರು, ಇವರೇ ಇಲ್ಲಿ ಅಂಬೆಗಾಲು ಕೃಷ್ಣನನ್ನು ಪ್ರತಿಷ್ಠಾಪಿಸಿದರು ಎಂದೂ ಹೇಳುತ್ತದೆ ಐತಿಹ್ಯ. ಮುಮ್ಮಡಿ ಕೃಷ್ಣರಾಜ ಒಡೆಯರು ಈ ದೇವಾಲಯಕ್ಕೆ ಭೇಟಿ ನೀಡಿ, ಭಾವಪರವಶರಾಗಿ ದೇವರಿಗೆ ಹಲವು ಬಗೆಯ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀರಾಮಾನುಜಾಚಾರ್ಯರು ಸಹ ಕೆಲಕಾಲ ಇಲ್ಲಿ ನೆಲೆಸಿ ಶ್ರೀಕೃಷ್ಣ ಭಗವಾನನ ಸೇವೆ ಮಾಡಿದ್ದಾರೆ ಎಂದೂ ಹೇಳುತ್ತಾರೆ ದೇವಾಲಯದ ಅರ್ಚಕರು.
ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿ, ಈ ದೇವಾಲಯಕ್ಕೆ ಆಗಮಿಸಿ ಬೆಣ್ಣೆ ಕೃಷ್ಣನ ಮಂದಿರದಲ್ಲಿ ತೊಟ್ಟಿಲು ಕಟ್ಟುವ ಹರಕೆ ಹೊರುತ್ತಾರೆ. ಮಕ್ಕಳಾದ ಬಳಿಕ ಮಗುವಿನೊಂದಿಗೆ ಆಗಮಿಸಿ ಹರಕೆಯನ್ನೂ ತೀರಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿರುವ ದೊಡ್ಡ ಮಳೂರಿನಲ್ಲಿ ಕೃಷ್ಣ ಜನ್ಮಾಷ್ಠಮಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

Jan 19, 2012

Kanva reservoir


Kanva reservoir-Ramanagara District, channapatna taluk


Kanva reservoir is an artificial lake and tourist attraction 69 kilometres (43 mi) from BangaloreIndia and 10 kilometres (6.2 mi) from Ramanagara. The reservoirhas been formed from the damming of the river Kanva and is well known as a tourist destination for its birdlife. It is surrounded by wooded hills.
Alongside the dam is a fisheries training and research center, aimed at making the local villagers self sufficient through fish farming. The cave temple of Purushotthama Thirtha Gavi is 3 km away. It is an important pilgrimage center for Madhwa Brahmins, as it is believed that a saint performed penance here. A statue of Hanuman has been installed inside the cave.

Kanva Dam

Kanva Dam is a minor irrigation project dam. Built in 1946 across the Kanva river, it is 15 km long covering 776 hectares. The Kanva river (a tributary of theShimsha and Cauvery river) is named after the sage Kanva, who is believed to have lived in the caves in the mountains and forests around the dam in the time ofRamayana.

Photo Gallery:




Courtesy: Wikipedia

Jan 16, 2012

ಪ್ರಶ್ನೋತ್ತರ ಮಾಲಿಕೆ - 12

1. ಕರ್ನಾಟಕದಲ್ಲಿ ಅತಿ ಹೆಚ್ಚು ಅನಕ್ಷರತೆ ಹೊಂದಿರುವ ಜಿಲ್ಲೆ - ರಾಯಚೂರು

2. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ ( 814.5 ಹೆಕ್ಟೇರು )

3. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಆಗುಂಬೆ (ದೇಶದ 2ನೇ ಅತಿ ಹೆಚ್ಚು)

4. ಕರ್ನಾಟಕದಲ್ಲಿ ಅತಿ ಚಿಕ್ಕ ಜಿಲ್ಲೆ - ಬೆಂಗಳೂರು ನಗರ ಜಿಲ್ಲೆ

5. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ (131.5)

6. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ - ಕೊಡಗು

7. ಕರ್ನಾಟಕದಲ್ಲಿ ಅತಿ ಚಿಕ್ಕ ವಿಧಾನಸಭಾ ಕ್ಷೇತ್ರ -

8. ಕರ್ನಾಟಕದಲ್ಲಿ ಅತಿ ಚಿಕ್ಕ ಲೋಕಸಭಾ ಕ್ಷೇತ್ರ -

9. ಕರ್ನಾಟಕದಲ್ಲಿ ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ - ಉಡುಪಿ : ಚಿಕ್ಕಮಗಳೂರು

10. ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶಚಳ್ಳಕೆರೆ

Jan 14, 2012

Jan 13, 2012

ದೇವರ ಹೊಸಹಳ್ಳಿ ಬ್ರಹ್ಮರಥೋತ್ಸವ ಸಂಭ್ರಮ

ಚನ್ನಪಟ್ಟಣ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀ ಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದಶುಕ್ರವಾರನೆರವೇರಿತು. ಮಧ್ಯಾಹ್ನ 1ಗಂಟೆಯಿಂದ 2ಯೊಳಗೆ ತುಲಾ ಲಗ್ನದಲ್ಲಿ ಯಾತ್ರಾದಾನಪೂರ್ವಕ ಮಹಾರಥವನ್ನು ಭಕ್ತಾಧಿಗಳು ಎಳೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿಸಿದರು.ಗೋವು, ಅಶ್ವಪೂಜೆ, ಗಜಪೂಜೆ, ಮಂಟಪೋತ್ಸವ, ತಿರುಪ್ಪಾವಡಿಸೇವೆ, ಅನ್ನರಾಶಿ ಪೂಜೆ, ಮಜ್ಜಿಗೆ, ಪಾನಕ ವಿತರಣೆ, ಅಪೂರ್ವ ಡಿ.ಸಾಗರ್ ಅವರಿಂದ ನೃತ್ಯಸೇವೆ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಜರುಗಿದವು.
ಸಂಜೆ ಡೋಲೋತ್ಸವ, ಮಂದಹಾಸ ದೀಪೋತ್ಸವ, ತೆಪ್ಪೋತ್ಸವ, ವರ್ಣರಂಜಿತ ಬಾಣಬಿರುಸುಗಳ ಪ್ರದರ್ಶನ ಭಕ್ತಾಧಿಗಳ ಮನಸ್ಸಿನಲ್ಲಿ ಉಲ್ಲಾಸ ಉಂಟು ಮಾಡಿತು. ಇಂದು ಬೆಳಿಗ್ಗೆಯಿಂದಲೇ ಭಗವಂತನ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತಾಧಿಗಳು ಸಾಲುಗಟ್ಟಿ ನಿಂತಿದ್ದರು.

ಬ್ರಹ್ಮರಥೋತ್ಸವ ಸಂದರ್ಭದಲ್ಲಿ ತಾಲೂಕಿನ ಹಲವಾರು ಮುಖಂಡರು, ಹಿರಿಯರು, ಸುತ್ತಮುತ್ತಲ ತಾಲೂಕುಗಳ ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ಕ್ಷೇತ್ರದ ಮಹಿಮೆ : ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ತಾಲ್ಲೂಕಿನಲ್ಲಿ ಮಂತ್ರಸಿದ್ದಿ ಮಹಾ ಸಂಜೀವಿನಿ ಕ್ಷೇತ್ರವೆಂದು ದೇವರಹೊಸಹಳ್ಳಿ ಖ್ಯಾತಿವೆತ್ತು, ಚೈತನ್ಯದ ತಾಣವಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಮಧ್ವ ಸಿದ್ಧಾಂತ ಹರಿ ಸರ್ವೋತ್ತಮ ತತ್ವ ಪ್ರತಿಪಾದಕರಲ್ಲಿ ಒಬ್ಬರಾದ ಶ್ರೀವ್ಯಾಸರಾಜರು ನಿತ್ಯಾನುಷ್ಠಾನಕ್ಕೆ ಕಣ್ವ ನದಿಗೆ ಹೋಗುವುದು ಪ್ರಸಿದ್ಧಿಯಾಗಿತ್ತು.

ಅಬ್ಬೂರು ಮಠದ ವಾಯುವ್ಯಕ್ಕೆ ದೊಡ್ಡ ಬೆಟ್ಟವಿದ್ದು, ವ್ಯಾಸರಾಜರು ಒಮ್ಮೆ ಶ್ರೀಮಾರುತಿಯ ನಾಮ ಜಪಿಸುತ್ತ ದೊಡ್ಡ ಬೆಟ್ಟದ ಮಧ್ಯಭಾಗದಲ್ಲಿರುವ ಹುಲಿಗವಿಯ ಮೂಲಕ ಹೋಗುವಾಗ ದೊಡ್ಡ ಬಂಡೆಯಲ್ಲಿ ಉಗ್ರರೂಪಿ ಶ್ರೀ ಸಂಜೀವರಾಯನ ದರ್ಶನವಾಯಿತಂತೆ. ಶ್ರೀ ರಾಮಸಂಜೀವಮೂರ್ತಿಗೆ ವ್ಯಾಸರಾಜರು ತಮ್ಮ ತಪಃಶಕ್ತಿಯನ್ನೆಲ್ಲಾ ಧಾರೆ ಎರೆದು ಈ ಕ್ಷೇತ್ರದಲ್ಲಿ ನೆಲೆಸುವಂತೆ ಮಾಡಿದರು.

ಈ ಗ್ರಾಮ ಜಗದೇವ(ಕ)ರಾಯನೆಂಬ ಪಾಳೇಗಾರನ ಆಡಳಿತದಲ್ಲಿತ್ತು ಎಂದು ತಿಳಿದುಬಂದಿದ್ದು, ಪಾಳೇಗಾರ ಬೇಟೆ ಆಡಲು ಕಾಡಿಗೆ ಬರುತ್ತಿದ್ದರು. ಆಗ ಸಂಜೀವರಾಯಸ್ವಾಮಿ ಮೂರ್ತಿಯನ್ನು ಕಂಡು ಆಕರ್ಷಿತನಾದ ಪಾಳೇಗಾರ, ಅಲ್ಲೊಂದು ಗುಡಿ ಕಟ್ಟಿದ. ಇದಕ್ಕೆ ಸಂತೃಪ್ತನಾದ ಸಂಜೀವರಾಯ ಪಾಳೇಗಾರನಿಗೆ ಪುತ್ರ ಸಂತಾನ ನೀಡದನೆಂದು ಪ್ರತೀತಿ ಇದೆ.

ಜೀವಕಳೆ ತುಂಬಿರುವ ಮುದ್ದು ಮೂರ್ತಿಯ ಖಚಿತ ನೇತ್ರಗಳು ಪಚ್ಚೆ ವೈಡೂರ್ಯದ ರಾಮ ತಿಲಕ, ನವರತ್ನ ಖಚಿತ ಸ್ವರ್ಣ ಕರ್ಣ ಮಂಡಲಗಳು, ನಳಿನಾಕ್ಷಿ ಮಾಲೆ, ತ್ರಿದಳ ಪದ್ಮ ಶೌರ್ಯ ಸಾಹಸಗಳ ಆದ್ಭುತ ಅಮೃತಾನುಗ್ರಹ ಅಭಯ ಹಸ್ತ, ಕಟಿಬಂಧನ ಅಜಾನುಭಾಹು ಅಂಜನೇಯ ತ್ರಿಚರಣಗಳು ನೋಡುವ ಭಕ್ತರ ಹೃದಯ ಪಲ್ಲವಿಸುತ್ತದೆ.

ದೇವಾಲಯ ಗ್ರಾಮದ ಮಧ್ಯ ಭಾಗದಲ್ಲಿದೆ. ಪಾಕಶಾಲೆ, ಯೋಗಶಾಲೆ, ಹೂವಿನ ತೋಟವಿದೆ. ದೇವಾಲಯದ ಹೊರಗೆ ಗರುಡಗಂಬ, ಒಳಭಾಗದಲ್ಲಿ ಬಿಲಿಪೀಠ, ಧ್ವಜಸ್ಥಂಭ ಮತ್ತು ಎಡಭಾಗದಲ್ಲಿ ಪ್ರಾಚೀನ ಕಾಲದ ಅಶ್ವಥ್ಥ್ ವೃಕ್ಷವಿದೆ. ಹೂವಿನ ತೋಟದಲ್ಲಿ ಮೂಲ ಆದಿಶೇಷನ ವಾಲ್ಮೀಕವಿದೆ.

ಈ ಕ್ಷೇತ್ರದ ಮತ್ತೊಂದು ಐತಿಹ್ಯವೆಂದರೆ ಉಗ್ರನರಸಿಂಹಸ್ವಾಮಿ ಪ್ರತಿಷ್ಠಾಪಿತನಾಗಿ ಅನುಗ್ರಹಿಸಿರುವುದು.ಕ್ಷೇತ್ರದ ದೇವತೆ ಸಂಜೀವಿನಿ ಸಂಜೀವರಾಯ, ಆಂಜನೇಯ, ಉಗ್ರನರಸಿಂಹನ ಲಕ್ಷ್ಮೀವೆಂಕಟೇಶ್ವರ ಉತ್ಸವ ಮೂರ್ತಿಗಳ ಸಾನ್ನಿಧ್ಯ ರಾಜ್ಯದಲ್ಲಿ ಬೇರೆಲ್ಲೂ ಇಲ್ಲವೆಂದು ಹೇಳಲಾಗಿದೆ.

ಜಾತ್ರೆ ವಿಶೇಷ : ನವಜೀವನಕ್ಕೆ ಕಾಲಿಟ್ಟ ಜೋಡಿಗಳು ನಾಡಿನ ಮೂಲೆ ಮೂಲೆಗಳಿಂದ ಜಾತ್ರೆಗೆ ಬಂದು ಸೇರುತ್ತಾರೆ. ಆಷಾಢದಲ್ಲಿ ಒಲಿದ ಜೀವಗಳೂ ಒಂದು ತಿಂಗಳು ದೂರವಾಗಿ ಏಕಾದಶಿಗೆ (ಉಪ ವಾಸದ ಹಬ್ಬ) ಅತ್ತೆ ಮನೆಗೆ ಬರುವ ಅಳಿಯ ತನ್ನ ಪತ್ನಿಯ ಜೊತೆ ಈ ಜಾತ್ರೆಗೆ ಬರುವುದು ವಿಶೇಷ.

Jan 12, 2012

Channapatna toys


Channapatna toys


Channapatna toys are a particular form of wooden toys (and dolls) that are manufactured in the town of Channapatna in the Ramanagara district of Karnataka state, India. This traditional craft is protected as a geographical indication (GI) under the World Trade Organization, administered by the Government of Karnataka. As a result of the popularity of these toys, Channapatna is known asGombegala Ooru (toy-town) of Karnataka. Traditionally, the work involved lacquering the wood of the Wrightia tinctoria tree , colloquially called Aale mara (ivory-wood).

History
The origin of these toys can be traced to the reign of Tipu Sultan who invited artisans from Persia to train the local artisans in the making of wooden toys. For nearly two centuries, ivory-wood was the main wood used in the making of these toys, though rosewoodand sandalwood were also occasionally used.

Growth

With no proper backing or marketing, the Channapatna toy industry faced a financial crunch for more than a decade and was almost on the verge of dying out. However with the help of KHDC, the craft has been revived and the artisans involved are being trained on changing trends in the industry, to help them keep abreast of the current scenario. Prototypes designed by master craftsmen are introduced to the local artisans, who use them to create well-designed toys and dolls. The Government of Karnataka has also provided help by constructing a Lacquerware Craft Complex, which has a manufacturing centre with 32 turning lathe machines, at Channapatna. Financial assistance to the artisans, with help from the Dutch Government and the Karnataka Government'sVishwa scheme has also been provided.

Jan 10, 2012

ಪ್ರಶ್ನೋತ್ತರ ಮಾಲಿಕೆ - 11

1. ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ - ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು.

2.
ಕರ್ನಾಟಕದಲ್ಲಿ ಅತಿ ದೊಡ್ಡ ಮೃಗಾಲಯ - ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು.


3. ಕರ್ನಾಟಕದಲ್ಲಿ ಅತಿ ದೊಡ್ಡ ವಿಗ್ರಹ - ಗೊಮ್ಮಟೇಶ್ವರ, ಶ್ರವಣಬೆಳಗೊಳ.


4. ಕರ್ನಾಟಕದಲ್ಲಿ ಅತಿ ದೊಡ್ಡ ಗುಮ್ಮಟ - ಗೋಲಗುಮ್ಮಟ, ವಿಜಾಪುರ.


5. ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷಿಧಾಮ - ರಂಗನತಿಟ್ಟು, ಮಂಡ್ಯ.


6. ಕರ್ನಾಟಕದಲ್ಲಿ ಅತಿ ದೊಡ್ಡ ಬಂದರು - ನವಮಂಗಳೂರು ಬಂದರು, ಮಂಗಳೂರು.


7. ಕರ್ನಾಟಕದಲ್ಲಿ ಅತಿ ದೊಡ್ಡ ಹೊರಾಂಗಣ ಕ್ರೀಡಾಂಗಣ - ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು


8. ಕರ್ನಾಟಕದಲ್ಲಿ ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ - ಕಂಠೀರವ ಕ್ರೀಡಾಂಗಣ, ಬೆಂಗಳೂರು


9. ಕರ್ನಾಟಕದಲ್ಲಿ ಅತಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ - ಶರಾವತಿ


10. ಕರ್ನಾಟಕದಲ್ಲಿ ಅತಿ ದೊಡ್ಡ ನೀರಾವರಿ ಯೋಜನೆ ಹೊಂದಿರುವ ನದಿಕಾವೇರಿ.

ಕಲಾಸ್ವಾದಕ್ಕೊಂದು ಕೈಗನ್ನಡಿ: ಪಂಪನ ನೀಳಾಂಜನೆ

ಪಂಪನು ಕನ್ನಡದ ಆದಿಕವಿ. ಕ್ರಿ.ಶ. 10 ನೇ ಶತಮಾನದಲ್ಲಿ ಅರಿಕೇಸರಿಯ ಆಸ್ಥಾನದಲ್ಲಿದ್ದವನು.  ಪಂಪಭಾರತ ಮತ್ತು ಆದಿಪುರಾಣ ಈತನ ಎರಡು ಕೃತಿಗಳು. ಇವುಗಳಲ್ಲಿ ಆದಿಪುರಾಣವು ಜೈನಧರ್ಮಕ್ಕೆ ಸಂಬಂಧಿಸಿದ ಕಾವ್ಯ. ಈ ಕೃತಿಯನ್ನು ಕ್ರಿ.ಶ. 942 ರಲ್ಲಿ ರಚಿಸಿರುವುದಾಗಿ ಪಂಪನೇ ಹೇಳಿಕೊಂಡಿರುತ್ತಾನೆ. ಈ ಕೃತಿ ರಚನೆಗೆ ಆತನು ತೆಗೆದುಕೊಂಡ ಕಾಲ ಕೇವಲ ಮೂರು ತಿಂಗಳಂತೆ.
 ಆದಿಪುರಾಣದಲ್ಲಿ ಬರುವ ರಸಘಟ್ಟಗಳಲ್ಲಿ ಒಂದು ನೀಳಾಂಜನೆಯ ನಾಟ್ಯ. ಜಿನಸೇನಾಚಾರ್ಯರ ಪೂರ್ವಪುರಾಣದಲ್ಲಿ ಸುಮಾರು ಮೂರು ಶ್ಲೋಕಗಳಲ್ಲಿ ನೀಳಾಂಜನೆಯ ನಾಟ್ಯದ ವರ್ಣನೆಯಿದೆ. ಆದರೆ ಪಂಪನು ಅದನ್ನು 30 ಪದ್ಯಗಳಿಗೆ ಇಲ್ಲಿ ವಿಸ್ತರಿಸಿರುತ್ತಾನೆ.ಜೈನರ ಮೊದಲನೆಯ ತೀರ್ಥಂಕರನಾದ ವೃಷಭನಾಥನ ವೈರಾಗ್ಯಕ್ಕೆ ಪ್ರೇರಣೆಯಾಗಿ ಈ ನಾಟ್ಯ ಸನ್ನಿವೇಶವು ಮೂಡಿಬಂದಿದೆ.
 ಪಂಪನ ನೀಳಾಂಜನೆಯ ನಾಟ್ಯದ ವರ್ಣನೆಯು ಪಂಪನ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ. ಪಂಪನಿಗೆ ನಾಟ್ಯಶಾಸ್ತ್ರದ ಮೇಲಿದ್ದ ಅಪಾರ ಅನುಭವಗಳನ್ನು ಈ ಭಾಗದ ವರ್ಣನೆಗಳು ಸಾಬೀತು ಪಡಿಸುತ್ತವೆ.ನೀಳಾಂಜನೆಯು ಅಸಾಮಾನ್ಯ ಸೌಂದರ್ಯದ ಅದ್ಭುತ ನರ್ತಕಿ ಎಂಬುದನ್ನು ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಪಂಪನು ತನ್ನ ಕಲಾ ಪರಿಣತಿಯನ್ನೂ ಓದುಗರ ಮುಂದಿಡುತ್ತಾನೆ.  ಇಲ್ಲಿ ಕಂಡುಬರುವ ನಾಟ್ಯಶಾಸ್ತ್ರದ ಪಾರಿಭಾಷಿಕ ಪದಗಳಾದ ಭಾರತಿ, ಸಾತ್ವತಿ, ಕೈಶಿಕಿ, ಆರಭಟಿ, ಆಹಾರ್ಯ, ಜತಿ ಮೊದಲಾದವುಗಳು ಇದನ್ನೇ ಪುಷ್ಟೀಕರಿಸುವಂತಿವೆ. ಶಾಸ್ತ್ರದ ಈ ವಿಚಾರಗಳಿಗಷ್ಟೇ ಈ ಭಾಗ ಸೀಮಿತವಾಗದಿರುವುದು ಇಲ್ಲಿ ಅಗತ್ಯವಾಗಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ. ನಾಟ್ಯ ಕಲಾವಿದೆಯನ್ನು ಮತ್ತು ನಾಟ್ಯದಂತಹ ಕಲೆಯನ್ನು ಅಂದಿನ ಶ್ರೀಮಂತ ಸಮಾಜ ನೋಡುತ್ತಿದ್ದ ರೀತಿಯನ್ನೂ ಪಂಪನು ಓದುಗರ ಮುಂದೆ ಬೇಸರದಿಂದ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆ ಮೂಲಕ ನೀಳಾಂಜನೆಯ ಪರವಾದ ಅನುಕಂಪವನ್ನೂ ಸಹೃದಯ ಬಂಧುಗಳಿಂದ ನಿರೀಕ್ಷಿಸುತ್ತಾನೆ.
 ನೀಳಾಂಜನೆ ನಾಟ್ಯವನ್ನೆಸಗುವ ಸಭೆಯಲ್ಲಿ ಉಪಸ್ಥಿತರಿರುವ ಪ್ರೇಕ್ಷಕರತ್ತ ಗಮನಿಸೋಣ. ಅಲ್ಲಿರುವವರಲ್ಲಿ ಹೆಚ್ಚಿನವರು ಅರಸರು, ಇಂದ್ರಾದಿ ದೇವತೆಗಳು. ಹಾಗಾಗಿ ಇದು ಸಭ್ಯರೆಂದು ಭಾಸವಾಗುವವರು ಉಪಸ್ಥಿತರಿದ್ದ ಶ್ರೀಮಂತರ ಸಭೆ. ಇವರೆಲ್ಲಾ ನಾಟ್ಯ ಕಲೆಯ ಆರಾಧಕರೇ?. ಹಾಗೆ ಎದೆತಟ್ಟಿ ಹೇಳುವಂತಿಲ್ಲ. ಇವರಿಗೆ ನಾಟ್ಯ ಕೇವಲ ಮನೋರಂಜನೆಯ ಮಾಧ್ಯಮ.  ಇಲ್ಲಿ ನೆರೆದವರೆಲ್ಲರೂ ಎಲ್ಲಾ ರಸಗಳಲ್ಲೂ ಪ್ರಿಯರಲ್ಲ. ಕೇವಲ ಶೃಂಗಾರರಸಪ್ರಿಯರು. ಒಂದರ್ಥದಲ್ಲಿ  ಇವರ ಪಾಲಿಗೆ ಇದೊಂದು ಮೋಜಿನ ವಿಷಯ. ಆದರೆ ನೀಳಾಂಜನೆಯು ನಾಟ್ಯದಲ್ಲಿ ನಿಜವಾದ ಪರಿಶ್ರಮವುಳ್ಳವಳು. ಅದನ್ನು ಗೌರವಭಾವದಿಂದ ಕರಗತ ಮಾಡಿಕೊಂಡವಳು.ಪಂಪನ ಪ್ರಕಾರ ನಾಟ್ಯಶಾಸ್ತ್ರಕ್ಕೆ ಹೊಸಭಾಷ್ಯ ಬರೆಯುವ ಸಾಮಥ್ರ್ಯವುಳ್ಳವಳು.ಅಂತಹ ಅದ್ಭುತ ಕಲಾವಿದೆಗೆ ಈ ಮಂದಿಯ ಮುಂದೆ ನಾಟ್ಯ ಪ್ರದರ್ಶನ ನೀಡಬೇಕಾದುದು ಅನಿವಾರ್ಯ ಕರ್ಮ. ಅದು ಆ ಕಾಲದ ಸ್ಥಿತಿಯೂ ಆಗಿತ್ತು. ಅಲ್ಲಿನ ಈ ಪ್ರೇಕ್ಷಕರನ್ನು ಆಕಷರ್ಿಸಲು ನೀಳಾಂಜನೆ ತನ್ನ ಮನಸ್ಸಿಗೆ ಹಿತವಾಗಿಯೋ ಅಥವಾ ಅಹಿತವಾಗಿಯೋ ಹಲವು ಕಸರತ್ತುಗಳನ್ನು ನಾಟ್ಯದ ವೇಳೆ ಕೈಗೊಳ್ಳಲೇಬೇಕು.  ಇದು ಸಭ್ಯತೆಯ ಎಲ್ಲೆಯನ್ನು ಮೀರುವಂತೆ ಮಡಿವಂತ ಕಣ್ಣುಗಳಿಗೆ ಕಾಣಿಸಬಹುದು. ಆದರೆ ಅಲ್ಲಿರುವ ಅರಸು ಸಮುದಾಯದಿಂದ ಶಹಭಾಸ್ಗಿರಿ ಪಡೆಯಲು ಈ ತಂತ್ರ ಆಕೆಗೆ ಅನಿವಾರ್ಯ. ಅಲ್ಲಿರುವ ಪ್ರೇಕ್ಷಕ ಸಮುದಾಯಕ್ಕೆ ನೀಳಾಂಜನೆಯ ಈ ಭಂಗಿಗಳು ಕೊಟ್ಟಷ್ಟು ಆನಂದವನ್ನು ಅವಳ  ನೈಜ ಶಾಸ್ತ್ರೀಯ ನಾಟ್ಯವೈಖರಿ ಖಂಡಿತಾ ನೀಡದು. ಪಂಪನ ಒಂದೆರಡು ಪದ್ಯಗಳು ಈ ಅಂಶಗಳನ್ನು ಪುಷ್ಟೀಕರಿಸುವಂತಿವೆ.  ಅವುಗಳ ಸಾರಾಂಶ ಹೀಗಿದೆ.  ಅಲ್ಲಿರುವ ದೇವತೆಗಳು, ಅರಸರು ಆಕೆಯ ನಾಭಿಮೂಲ ಮತ್ತು ಬಾಹುಮೂಲಗಳನ್ನು ಕಣ್ಣುಗಳನ್ನು ಮುಚ್ಚದೆ ನೋಡುತ್ತಾ ಕುಳಿತರಂತೆ.  ಮನ್ಮಥನು ಈ ಭಾಗಗಳಲ್ಲಿ ಅಮೃತವನ್ನು ಬಯ್ತಿಟ್ಟಿದ್ದನಂತೆ. ಈ ಅಮೃತವು ಇಂದ್ರಾದಿ ದೇವತೆಗಳ ಮತ್ತು ಅರಸರ ಕಣ್ಣುಗಳಿಗೆ ತಂಪನ್ನು ನೀಡಿದುವಂತೆ. ಆಕೆ ರೇಷ್ಮೆ ವಸ್ತ್ರವನ್ನುಟ್ಟಿದ್ದಳು.ಪ್ರೇಕ್ಷಕರನ್ನು ಆಕರ್ಷಿಸಲು ತನ್ನ ದೇವಾಂಗವಸ್ತ್ರದ ಒಳ ಉಡುಗೆಯನ್ನು ಆಗಾಗ ಪಕ್ಕಕ್ಕೆ ಸರಿಸುವಳು.  ಎದೆಯ ಮೇಲೆ ಕಂಗೊಳಿಸುತ್ತಿರುವ ತನ್ನ ಕಂಠದ ಹಾರವನ್ನು ಆಗಾಗ ಸರಿಪಡಿಸಿಕೊಳ್ಳುವಳು.ಇದು ಮದನರಾಜರಾಜ್ಯವಿಲಾಸ ಎಂಬಂತೆ ಕಂಗೊಳಿಸಿತಂತೆ. ನೀಳಾಂಜನೆಯ ಈ ಅಭಿನಯ ಅಥವಾ ಕಸರತ್ತುಗಳು ಸಭ್ಯಸಮಾಜಕ್ಕೆ ಅಸಹ್ಯವಾಗಿ ಕಾಣಿಸಬಹುದು. ಆದರೆ ಅಲ್ಲಿ ನೆರೆದಿರುವ ಪ್ರೇಕ್ಷಕ ಸಮುದಾಯ ಇದನ್ನು ಆಕೆಯಿಂದ ನಿರೀಕ್ಷಿಸುತ್ತಿದೆ.  ಈ ರೀತಿ ಆಕೆ ನರ್ತಿಸದಿದ್ದಲ್ಲಿ ಅಲ್ಲಿರುವ ಸಮುದಾಯಕ್ಕೆ ರಸಾಸ್ವಾದ ಆಗದು. ಇದನ್ನು ಹೊರತುಪಡಿಸಿದ ಯಾವುದೇ ಪ್ರಬುದ್ಧ ಅಭಿನಯವೇ ಇರಲಿ. ಅದು ಅವರ ಮನ ಸೂರೆಗೊಳ್ಳದು. ಹಾಗಾಗಿ ಅಲ್ಲಿರುವವರೆಲ್ಲಾ ಈ ವಿಧದ ಅಭಿನಯವನ್ನೇ ಕಾದುಕುಳಿತವರು.ಅದೇ ಅವರ ಪ್ರಧಾನ ಆಸಕ್ತಿ.ಒಂದರ್ಥದಲ್ಲಿ ಇದು ಕೀಳು ಮನೋರಂಜನೆಯ ದೃಷ್ಟಿಯನ್ನು ಬಿಂಬಿಸುವಂತೆ ಭಾಸವಾಗಬಹುದು.ಆದರೆ ಅಲ್ಲಿರುವ ಶ್ರೀಮಂತ ಪ್ರೇಕ್ಷಕರ ಮನ:ಸ್ಥಿತಿ ಇದನ್ನು ಮೀರಿ ಎತ್ತರಕ್ಕೇರಲಾರದು.
  ಪಂಪನ ನೀಳಾಂಜನೆ ನಾಟ್ಯದ ಪ್ರಸಂಗದ ಮುಂದಿನ ಸನ್ನಿವೇಶದಲ್ಲಿ ನೀಳಾಂಜನೆ ರಂಗದಿಂದ ಅದೃಶ್ಯಳಾಗುತ್ತಾಳೆ.  ಈ ಸೂಕ್ಷ ಸಂಗತಿ ಅಲ್ಲಿದ್ದ ವೃಷಭನಾಥನ ಗಮನಕ್ಕೆ ಮಾತ್ರ ಬರುತ್ತದೆ. ನಾಟ್ಯದ ಮೋಹದ ಮತ್ತಿನಲ್ಲಿ ಮುಳುಗಿದ್ದ ಉಳಿದವರಿಗೆ ಇದರ ಅರಿವಾಗುವುದೇ ಇಲ್ಲ.  ಇಂದ್ರನು ರಸ ಭಂಗವಾಗದಂತೆ ಮತ್ತೊಂದು ಪಾತ್ರವನ್ನು ಕೂಡಲೇ ತಂದು ನಿಲ್ಲಿಸಿ, ನಾಟ್ಯ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ.  ಪಂಪನು ಕಾವ್ಯಭಾಗವನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಕಲೆಯ ವಿಚಾರದಲ್ಲಿ ಬೇರೆ ಯಾವುದೋ ಸಂದೇಶವನ್ನು ಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಕಲಾವಿದೆಯೊಬ್ಬಳನ್ನು ಮೋಜು ಅಥವಾ ಮನೋರಂಜನೆಯನ್ನು ಕೊಡುವ ವಸ್ತುವನ್ನಾಗಿ ಅಥವಾ ಯಂತ್ರವನ್ನಾಗಿ ನೋಡುವ ಪರಿಪಾಠದ ವಿರುದ್ಧ ಪಂಪನ ಅಸಮಾಧಾನವಿದೆ. ಮಾನವೀಯತೆ ಮರೆತ ಮೋಜಿನ ಶ್ರೀಮಂತ ಸಮಾಜದ ವಿರುದ್ಧ ಆಕ್ರೋಶವಿದೆ.ಅವಳು ಅದೃಶ್ಯಳಾದಾಗ ಅವಳ ಬಗ್ಗೆ ಒಂದಿನಿಸೂ ಅನುಕಂಪವನ್ನು ಸೂಚಿಸದೇ ನಾಟ್ಯವನ್ನು ಮುಂದುವರಿಸುವುದಕ್ಕೇ ಮಾತ್ರ ಇಂದ್ರಾದಿಗಳು ಶ್ರಮಿಸಿದ ಬಗ್ಗೆ ಆಕ್ಷೇಪವಿದೆ. ಈ ಕಾರಣಕ್ಕಾಗಿಯೇ ಪಂಪನೂ ಅವಳ ಅದೃಶ್ಯದ ದುರಂತದ ಬಗ್ಗೆ ಒಂದೇ ಒಂದು ನೋವಿನ ಮಾತನ್ನೂ ಅಲ್ಲಿದ್ದ ಅರಸರು ಅಥವಾ ಇಂದ್ರಾದಿಗಳ ಮೂಲಕ ಹೊರಹಾಕಿಲ್ಲ. ಅವರ ಅನುಕಂಪವನ್ನು ಬಿಂಬಿಸುವ ಯಾವುದೇ ಪದ್ಯವನ್ನೂ ಎಡೆಯಲ್ಲಿ ತರುವ ಗೋಜಿಗೆ ಹೋಗಿಲ್ಲ. ಈ ಮೂಲಕ ಪಂಪನು ತನ್ನ ನಾಟ್ಯದ ಮೂಲಕ ಸಭೆಯಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡಿದ ಕಲಾವಿದೆಯನ್ನು ಈ ತರನಾಗಿ ನಡೆಸಿಕೊಳ್ಳುವುದು ಸೂಕ್ತವೇ?. ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಾನೆ.ಪಂಪನ ಪ್ರಕಾರ ಆ ಸಭೆಯಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ನೀಳಾಂಜನೆಯ ಬಗ್ಗೆ ಗೌರವ ಮತ್ತು ಅನುಕಂಪ ಹೊಂದಿದ್ದ ಒಬ್ಬ ವ್ಯಕ್ತಿ ವೃಷಭನಾಥ. ವೃಷಭನಾಥನು ಅವಳನ್ನು ವೇದನೆಯಿಂದ ನಾರೀ ರೂಪದ ಯಂತ್ರ ಎಂದೇ ಕರೆಯುತ್ತಾನೆ. ಅವನಿಗೆ ಮಾತ್ರ ಈಕೆಯ ಅದೃಶ್ಯದ ಸುಳಿವು ಸಿಕ್ಕುತ್ತದೆ. ಹಾಗಾಗಿ ವೃಷಭನಾಥನ ಬಗ್ಗೆ ಪಂಪನಿಗೆ ವಿಶೇಷ ಗೌರವ.  ಈತನನ್ನು ಪಂಪನು ವಿದ್ಯಾನಿಲಯ ಎಂದು ಕರೆಯುತ್ತಾನೆ.  ಪ್ರಾಪಂಚಿಕವಾದ ಬಯಕೆಗಳಲ್ಲಿ ತುಂಬಿದ ಜನರಿಂದ ಇಂತಹ ಕಲಾವಿದೆೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನವಾದೀತು.  ಅಧ್ಯಾತ್ಮದತ್ತ ಒಲವುಳ್ಳ ಅಂದರೆ ಶುದ್ಧ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಕಲಾವಿದೆಗೆ ನಿಜವಾದ ಅರ್ಥದಲ್ಲಿ ಗೌರವ ಲಭಿಸೀತು. ವಿದ್ಯೆ ಎಂದರೆ ಸದಾ ಎಚ್ಚರ.  ವೃಷಭನಾಥನನ್ನು ಹೊರತುಪಡಿಸಿ ಲೌಕಿಕವಾದ ಮೋಹದಲ್ಲಿ ಮುಳುಗಿದ್ದ ಉಳಿದ ಯಾವ ಪ್ರೇಕ್ಷಕರಿಗೂ ಅಲ್ಲಿ ಎಚ್ಚರವಿಲ್ಲ.  ವೃಷಭನಾಥನ ಪಾಲಿಗೆ ಆಕೆ ಸಂಸಾರದ ಅನಿತ್ಯತೆಯನ್ನು ತನ್ನ ಮನಸ್ಸಿಗೆ ನಾಟುವಂತೆ ತೋರಿಸಿ,ತನ್ನ ಕಣ್ಣನ್ನು ತೆರೆಸಿದವಳು.ಅವನ ಪಾಲಿಗೆ ಸಂಸ್ಕೃತಿ ನಾಟಕದ ಪಾಠವನ್ನು ಬೋಧಿಸಿದವಳು.ಈ ಪ್ರಸಂಗದ ಕೊನೆಯಲ್ಲಿ ಎಂತಹ ಪ್ರೇಕ್ಷಕವರ್ಗ ಬೇಕು ಎಂಬುದನ್ನು ವೃಷಭನಾಥನ ಮೂಲಕ ಸೂಚಿಸಲು ಪಂಪನು ಪ್ರಯತ್ನಿಸಿದ್ದಾನೆ.ಕಲೆ ಅಂತರಂಗದಚಕ್ಷುವನ್ನುತೆರೆಸಬೇಕು.ಲೌಕಿಕ ಬೇಡಿಕೆಗಳತ್ತ ಅಂಕುಶವನ್ನೊಡ್ಡುವಂತಿರಬೇಕು. ಲೌಕಿಕದಿಂದ ಅಲೌಕಿಕದತ್ತ ನಮ್ಮನ್ನು ಸೆಳೆಯುವಂತಿರಬೇಕು.ಕಲೆಯತ್ತ ನಿಜವಾದ ಆಸಕ್ತಿ ಇರುವ ಪ್ರೇಕ್ಷಕರಲ್ಲಿ ಈ ಮನೋಭಾವಗಳಿರಬೇಕು.ಈ ಹಿನ್ನೆಲೆಯಲ್ಲಿ ಕಲೆ ಮತ್ತು ಕಲಾವಿದರನ್ನು ನೋಡುವ ಗುಣ ಸಮಾಜದಲ್ಲಿ ಬೇರೂರಬೇಕು. ಅದಕ್ಕೆ ಬೇಕಾದುದು ಕಲೆಯ ಬಗ್ಗೆ ಅನುಭಾವದ ನೆಲೆಯ ಸ್ಪಂದನ.
 ಜಾಗತೀಕರಣ, ವ್ಯಾಪಾರೀಕರಣದ ಇಂದಿನ ದಿನಗಳಲ್ಲಿ ಕಲೆ ಮತ್ತು ಸ್ತ್ರೀಯನ್ನು ನೋಡುವ ನಮ್ಮ ಕಣ್ಣುಗಳಲ್ಲಿ ಮತ್ತೊಮ್ಮೆ ಮಲಿನತೆ ಮೂಡಿಬರುತ್ತಿದೆ.ಅಂತರಂಗದ ಸೌಂದರ್ಯಕ್ಕಿಂತ ಬಹಿರಂಗದ ಸೌಂದರ್ಯವೇ ಆಕರ್ಷಣೆಯ ಪ್ರಧಾನ ವಿಷಯವಾಗಿದೆ. ಇಂದಿಗೂ ಮಾಧ್ಯಮಗಳಲ್ಲಿ ತೋರಿಸುವ ಹೆಣ್ಣಿನ ಅರೆಬರೆ ಉಡುಗೆಗಳ ಹಿಂದೆ ಬಾರೀ ಪ್ರಮಾಣದ ಆರ್ಥಿಕ ಲಾಭದ ಹುನ್ನಾರವಿದೆ.  ಕೆಲವು ಧಾರಾವಾಹಿ ಅಥವಾ ಚಲನಚಿತ್ರಗಳಲ್ಲಿ ಹೆಣ್ಣಿನ ಚಿತ್ರಣ ಇಂದಿನ ದಿನಗಳಲ್ಲಿ ವಿವೇಚನಾರ್ಹ. ಆರ್ಥಿಕಲಾಭದೃಷ್ಟಿಯಿಂದ ಕೀಳುಮಟ್ಟದ ಅಭಿರುಚಿಯ ಸಾಧನವನ್ನಾಗಿ ಕಲೆ ಮತ್ತು ಹೆಣ್ಣನ್ನು ಬಳಸಿಕೊಳ್ಳುವುದರ ವಿರುದ್ಧ ಸಮಾಜ ಜಾಗೃತವಾಗಬೇಕಾಗಿದೆ. ಈ ದೃಷ್ಟಿಯಿಂದ ಪಂಪನ ಸಂದೇಶ ಸಮಕಾಲೀನ ಸಂದರ್ಭದಲ್ಲೂ ಮಹತ್ತ್ವವಾಗಿದೆ.
       ಡಾ.ಶ್ರೀಕಾಂತ್ ಸಿದ್ದಾಪುರ.