Sunday, February 26, 2012

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು


ಕವಿ/ಸಾಹಿತಿಯ ಹೆಸರು ಕಾವ್ಯನಾಮ     
1 ಅಜ್ಜಂಪುರ ಸೀತಾರಾಂ ಆನಂದ
2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅ.ನ.ಕೃ
3 ಅರಗದ ಲಕ್ಷ್ಮಣರಾವ್ ಹೊಯ್ಸಳ
4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅ.ರಾ.ಮಿತ್ರ
5 ಆದ್ಯರಂಗಾಚಾರ್ಯ ಶ್ರೀರಂಗ
6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕೆ.ಎಸ್.ಎನ್
7 ಕೆ.ವಿ.ಪುಟ್ಟಪ್ಪ ಕುವೆಂಪು
8 ಕುಂಬಾರ ವೀರಭದ್ರಪ್ಪ ಕುಂವೀ
9 ಕಯ್ಯಾರ ಕಿಞ್ಞಣ್ಣರೈ ದುರ್ಗಾದಾಸ
10 ಕಸ್ತೂರಿ ರಘುನಾಥಚಾರ ರಂಗಾಚಾರ ರಘುಸುತ
11 ಕುಳಕುಂದ ಶಿವರಾಯ ನಿರಂಜನ
12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪೂಚಂತೇ
13 ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಜಿ ಎಸ್ ಎಸ್
14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ ಜಡಭರತ
15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ ಮಧುರಚೆನ್ನ
16 ಚಂದ್ರಶೇಖರ ಪಾಟೀಲ ಚಂಪಾ
17 ಜಾನಕಿ ಶ್ರೀನಿವಾಸ ಮೂರ್ತಿ ವೈದೇಹಿ
18 ತಳುಕಿನ ರಾಮಾಸ್ವಾಮಿ ಸುಬ್ಬರಾವ್ ತ.ರಾ.ಸು.
19 ತಿರುಮಲೆ ರಾಜಮ್ಮ ಭಾರತಿ
20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ತೀನಂಶ್ರೀ
21 ದ.ರಾ.ಬೇಂದ್ರೆ ಅಂಬಿಕಾತನಯದತ್ತ
22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ ಡಿವಿಜಿ
23 ದೇ.ಜವರೇಗೌಡ ದೇಜಗೌ
24 ದೊಡ್ಡರಂಗೇಗೌಡ ಮನುಜ
25 ದೇವುಡು ನರಸಿಂಹ ಶಾಸ್ತ್ರಿ ಕುಮಾರ ಕಾಳಿದಾಸ
26 ನಂದಳಿಕೆ ಲಕ್ಷ್ಮೀನಾರಾಯಣ ಮುದ್ದಣ
27 ಪಾಟೀಲ ಪುಟ್ಟಪ್ಪ ಪಾಪು
28 ಪಂಜೆ ಮಂಗೇಶರಾಯ ಕವಿಶಿಷ್ಯ
29 ಪುರೋಹಿತ ತಿರುನಾರಾಯಣ ನರಸಿಂಗರಾವ್ ಪುತಿನ
30 ರಾಯಸಂ ಭಿಮಸೇನರಾವ್ ಬೀಚಿ
31 ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ ಶಾಂತಕವಿ
32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಬಿಎಂಶ್ರೀ
33 ಬೆಟಗೇರಿ ಕೃಷ್ಣಶರ್ಮ ಆನಂದಕಂದ
34 ಅಂಬಳ ರಾಮಕೃಷ್ಣಶಾಸ್ತ್ರಿ ಶ್ರೀಪತಿ
35 ಎ.ಆರ್.ಕೃಷ್ಣಶಾಸ್ತ್ರಿ ಎ.ಆರ್.ಕೃ
36 ಮಾಸ್ತಿ ವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ
37 ರಾಮೇಗೌಡ ರಾಗೌ
38 ವಿನಾಯಕ ಕೃಷ್ಣ ಗೋಕಾಕ್ ವಿನಾಯಕ
39 ವೆಂಕಟೇಶ ತಿರುಕೊ ಕುಲಕರ್ಣಿ ಗಳಗನಾಥ
40 ಸಿದ್ದಯ್ಯಪುರಾಣಿಕ ಕಾವ್ಯಾನಂದ
41 ಎಂ.ಆರ್.ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ
42 ಸಿ.ಪಿ.ಕೃಷ್ಣಕುಮಾರ್ ಸಿ.ಪಿ.ಕೆ
43 ಎಚ್.ಎಸ್.ಅನುಸೂಯ ತ್ರಿವೇಣಿ

Saturday, February 18, 2012

ಪ್ರಶ್ನೋತ್ತರ ಮಾಲಿಕೆ - 14

ಕನ್ನಡ ನಾಡಿನ ಪ್ರಮುಖ ಘಟನೆಗಳು
1. ೧೯೬೩ - ಕನ್ನಡ ರಾಜ್ಯಭಾಷಾ ಅಧಿನಿಯಮ ಜಾರಿ.
2.
೧೯೬೮ - ತಾಲೂಕು ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
3.
೧೯೭೦ - ಉಪವಿಭಾಗ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
4.
೧೯೭೨ - ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
5.
೧೯೭೪ - ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
6.
೧೯೭೮ - ಸಿವಿಲ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ .
7.
೧೯೭೯ - ಸೆಷನ್ಸ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
8.
೧೯೮೦ - ಗೋಕಾಕ್ ಆಯೋಗ ರಚನೆ.
9.
೧೯೮೩ - ಕನ್ನಡ ಆಡಳಿತ ಭಾಷಾ ಸಮಿತಿ ರಚನೆ.
10.
೧೯೮೩ - ಸಚಿವಾಲಯದಲ್ಲಿ ಆಡಳಿತ ಕನ್ನಡ ಕಡ್ಡಾಯ.
11.
೧೯೮೪ - ಗಡಿ ಸಲಹಾ ಸಮಿತಿ ರಚನೆ.
12.
೧೯೮೪ - ಸರೋಜಿನಿ ಮಹಿಷಿ ಸಮಿತಿ ರಚನೆ.
13.
೧೯೮೫ - ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶ.
14.
೧೯೯೨ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ.
15.
೧೯೯೩ - ಕನ್ನಡ ಜಾಗೃತಿ ವರ್ಷಾಚರಣೆ
.

Thursday, February 16, 2012

ಪ್ರಶ್ನೋತ್ತರ ಮಾಲಿಕೆ - 13


1. ಕರ್ನಾಟಕದಲ್ಲಿ ಅತಿ ದೊಡ್ಡ ಪುಸ್ತಕ ಮಳಿಗೆ - ಸಪ್ನಾ ಬುಕ್ ಸ್ಟಾಲ್ಬೆಂಗಳೂರು

2. ಕರ್ನಾಟಕದಲ್ಲಿ ಅತಿ ದೊಡ್ಡ ಕೆರೆ - ಶಾಂತಿಸಾಗರ (ಸೂಳೆಕೆರೆ), ಚನ್ನಗಿರಿ (.ಭಾರತದ 2ನೇ ಅತಿ ದೊಡ್ಡ ಕೆರೆ)

3. ಕರ್ನಾಟಕದಲ್ಲಿ ಅತಿ ದೊಡ್ಡ ಆಲದಮರವಿರುವ ಊರು - ರಾಮೋಹಳ್ಳಿಬೆಂಗಳೂರು

4. ಕರ್ನಾಟಕದಲ್ಲಿ ಅತಿ ದೊಡ್ಡ ಗ್ರಾಮಪಂಚಾಯಿತಿ - ಹಾರೂಗೇರಿರಾಯಬಾಗ ವಿ..ಕ್ಷೇತ್ರ.

5. ಕರ್ನಾಟಕದಲ್ಲಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ - ........., ಬೆಂಗಳೂರು

6. ಕರ್ನಾಟಕದಲ್ಲಿ ಅತಿ ದೊಡ್ಡ ಲೋಕಸಭಾ ಕ್ಷೇತ್ರ - ಬೆಂಗಳೂರು ಉತ್ತರ (ದೇಶದಲ್ಲಿ 2ನೇ ಅತಿ ದೊಡ್ಡ)

7. ಕರ್ನಾಟಕದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ - ಬೃ.ಬೆಂ..ಪಾ. (ಚುನಾವಣಾ ಆಯೋಗ ಬೃ.ಬೆಂ..ಪಾ.ಅನ್ನು ಚುನಾವಣಾ ಜಿಲ್ಲೆ ಎಂದು ಪರಿಗಣಿಸಿದೆ.)

8. ಕರ್ನಾಟಕದಲ್ಲಿ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ - ರಾಮನಗರ ಮಾರುಕಟ್ಟೆರಾಮನಗರ

9. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಬೆಂಗಳೂರು ನಗರ

10. ಕರ್ನಾಟಕದಲ್ಲಿ ಅತಿ ಜನಸಂಖ್ಯೆ ಹೊಂದಿರುವ ನಗರ / ಜಿಲ್ಲೆ - ಬೆಂಗಳೂರು ನಗರ

Tuesday, February 14, 2012

ಕಿರಂ ಹೇಳಿದ ಕತೆಗಳು


ಕಿರಂ ಹೇಳಿದ ಕತೆಗಳು

 (ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು)
   ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬನ್ನಿ ಕಿರಂ,  ನೋಡಿ ಪಾಪ ಕೆ.ಎಸ್. ನರಸಿಂಹಸ್ವಾಮಿಯವರನ್ನು ಬನಶಂಕರಿಯ ಯಾವುದೋ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಸಾಧ್ಯವಾದರೆ ಬಿಡುವಿನ ವೇಳೆಯಲ್ಲಿ ಹೋಗಿ ಅವರನ್ನು ನೋಡಿಕೊಂಡು ಬನ್ನಿ, ಅವರ ಯೋಗಕ್ಷೇಮದ ಬಗ್ಗೆ ಬಂದು ನನಗೆ ತಿಳಿಸಿ” ಎಂದು ತುಂಬ ಕಾಳಜಿಯಿಂದ ಕೇಳಿದರು. ನಾನು “ಆಗಲಿ ಸರ್, ನಾಳೆ ಯೂನಿವರ್ಸಿಟಿ ಕ್ಲಾಸ್‍ಗಳು ಮುಗಿದ ಕೂಡಲೆ ಹೋಗುತ್ತೇನೆ” ಎಂದು ಹೇಳಿ ಮರುದಿನ ತರಗತಿಗಳು ಮುಗಿದ ಮೇಲೆ ಸಂಜೆ ಬನಶಂಕರಿ ಕಡೆ ಹೋಗುವ ವಿಶ್ವವಿದ್ಯಾಲಯದ ಬಸ್ ಹಿಡಿದು ನೇರವಾಗಿ ಆಸ್ಪತ್ರೆಗೇ ಹೋದೆ. ಸಾಧಾರಣವಾಗಿ ಆಸ್ಪತ್ರೆಗೆ ಭೇಟಿ ನೀಡುವವರೆಲ್ಲರೂ ’ಆರೋಗ್ಯ ಹೇಗಿದೆ’, ’ವೈದ್ಯರು ಏನು ಹೇಳಿದರು’ ಇತ್ಯಾದಿ ಸಂತಾಪದಾಯಕ ಪ್ರಶ್ನೆಗಳನ್ನೇ ಕೇಳಿ ರೋಗಿಗಳಿಗೆ ವಿಪರೀತ ಇರಿಸು ಮುರುಸು ಉಂಟು ಮಾಡುತ್ತಾರೆ. ನಾನೂ ಸಹ ಹಾಗೆಯೇ ಮಾಡಿ ಕವಿ ಮನಸ್ಸಿಗೆ ಬೇಸರ ಉಂಟುಮಾಡಬಾರದೆಂದು ಯೋಚಿಸಿಕೊಂಡು ಹೊರಟೆ. ಅವರಿದ್ದ ವಾರ್ಡಿನ ಒಳಗೆ ಹೋದ ಕೂಡಲೆ ಕಾಯಿಲೆಯ ಬಗ್ಗೆ ಏನೂ ತಿಳಿಯದವನಂತೆ ಸುಮ್ಮನೆ ಅವರ ಕಾವ್ಯದ ಬಗ್ಗೆ ಹಾಗು ಅವರು ನಿರ್ಮಿಸಿದ್ದ ಹಲವು ಪ್ರತಿಮೆ-ರೂಪಕಗಳ ಬಗ್ಗೆ ಚರ್ಚಿಸಲಾರಂಭಿಸಿದೆ. ನಿಶ್ಯಕ್ತರಾಗಿ ಮಲಗಿದ್ದ ಅವರೊಳಗೆ ಇದ್ದಕ್ಕಿದ್ದಂತೆ ಅದೆಂತಹ ಚೈತನ್ಯ ಬಂದಿತೋ ಏನೋ ತಿಳಿಯದು! ಅರ್ಧ ಗಂಟೆಗಳ ಕಾಲ ನನ್ನೊಡನೆ ಉತ್ಸಾಹದಿಂದ ಚರ್ಚಿಸಿದರು. ನರಸಿಂಹಸ್ವಾಮಿಯವರಿಗೆ ಕಾಯಿಲೆ ಇದ್ದಾಗ ಅವರ ಧರ್ಮಪತ್ನಿ ಶ್ರೀಮತಿ ವೆಂಕಮ್ಮನವರು ಹಾಗೆಲ್ಲ ಯಾರಿಗೂ ಅವರ ಬಳಿ ಚರ್ಚೆ, ಸಂಭಾಷಣೆ ನಡೆಸಲು ಬಿಡುತ್ತಿರಲಿಲ್ಲ. ಆದರೆ ಅಂದು ನಾನು ಹೊರಡುವಾಗ ಮಾತ್ರ ಅವರು “ನಾಗರಾಜ್, ದಯವಿಟ್ಟು ನಾಳೆಯೂ ಬನ್ನಿ, ನಿಮ್ಮ ಜೊತೆ ಮಾತನಾಡುವಾಗ ಅವರು ತುಂಬ ಲವಲವಿಕೆಯಿಂದ ಇರುತ್ತಾರೆ” ಎಂದು ಹೇಳಿ ಕಳಿಸಿದರು. ಅಂದು ಸಂಜೆ ನಾನು ನೇರವಾಗಿ ಲಂಕೇಶರ ಕಛೇರಿಗೆ ಬಂದು ಕೆ.ಎಸ್.ನ.ರ ಯೋಗಕ್ಷೇಮದ ಕುರಿತು ತಿಳಿಸಿದ್ದಲ್ಲದೆ ಅಲ್ಲಿ ನನ್ನ ಹಾಗು ಕವಿಯ ನಡುವೆ ನಡೆದ ಮಾತುಕತೆಯನ್ನೂ, ಅವರ ಧರ್ಮಪತ್ನಿಯ ಕೋರಿಕೆಯನ್ನೂ ಅವರಿಗೆ ತಿಳಿಸಿದೆ. ಆಗ ಲಂಕೇಶ್ “ಅರೆ, ಹಾಗಾದರೆ ಪ್ರತಿದಿನ, ಅವರು ಆಸ್ಪತ್ರೆಯಲ್ಲಿ ಇರುವಷ್ಟೂ ಕಾಲ ಹೋಗಿಬಾರಯ್ಯ” ಎಂದು ನನಗೆ ಹೇಳಿದರು.

ನಾನೂ ಸಹ ವಿಶ್ವವಿದ್ಯಾಲಯದ ತರಗತಿಗಳು ಮುಗಿಯುತ್ತಿದ್ದಂತೆಯೇ ಬನಶಂಕರಿ ಬಸ್ ಹಿಡಿದು ನೇರವಾಗಿ ಆಸ್ಪತ್ರೆಗೆ ಹೋಗುತ್ತಿದ್ದೆ. ಪ್ರತಿಸಲ ಹೋದಾಗಲೂ ಅವರ ಕಾವ್ಯವನ್ನು ಬಿಟ್ಟು ಬೇರೆ ಮತ್ತೇನನ್ನೂ ಚರ್ಚಿಸಬಾರದು ಎಂದು ಮುನ್ನವೇ ನಿರ್ಧರಿಸಿದ್ದೆ. ಕೆಲವು ಸಲ ಅವರ ಕವಿತೆಯ ಯಾವುದಾದರೂ ಒಂದು ಸಾಲನ್ನು ಗುಣುಗುಟ್ಟುತ್ತಲೇ ವಾರ್ಡಿನೊಳಗೆ ಪ್ರವೇಶಿಸುತ್ತಿದ್ದೆ. ನಾನು ಹೋಗುತ್ತಿದ್ದಂತೆಯೇ ಕೆ.ಎಸ್.ನ. ಗುಣಮುಖರಾದಂತೆ ಹಾಸಿಗೆಯ ಮೇಲೆ ಕುಳಿತುಬಿಡುತ್ತಿದ್ದರು. ನಮ್ಮ ಸಂಭಾಷಣೆ ನಡೆಯುವಾಗ ವೆಂಕಮ್ಮನವರು ಹೊರಗೇ ಇದ್ದು ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ನಾವಿಬ್ಬರೂ ಕುಳಿತು ಗಂಟೆ ಗಟ್ಟಲೆ ಮಾತನಾಡುತ್ತಿದ್ದೆವು. ತಪಾಸಣೆಗೆ ಬರುತ್ತಿದ್ದ ವೈದ್ಯರುಗಳು ಸಹ ನಿಂತುಕೊಂಡೇ ನಮ್ಮ ಸಂಭಾಷಣೆಯನ್ನು ಸವಿಯುತ್ತಿದ್ದರು. ಬಳಿಕ ಅಲ್ಲಿಂದ ನೇರವಾಗಿ ಲಂಕೇಶರ ಆಫೀಸಿಗೆ ಹೋಗಿ ಅವರಿಗೆ ಕವಿಯ ಯೋಗಕ್ಷೇಮದ ಕುರಿತು ತಿಳಿಸುತ್ತಿದ್ದೆ. ಹೀಗೆ ಒಂದು ವಾರಗಳ ಕಾಲ ಪ್ರತಿದಿನ ಇದೇ ನನ್ನ ದಿನಚರಿಯಾಗಿತ್ತು. ಕೊನೆಯ ದಿನ ಲಂಕೇಶ್‍ಗೆ “ಸರ್, ಕವಿಗಳು ಈಗ ಎಷ್ಟೋ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ನಿನ್ನೆ ರಾತ್ರಿ ಕೆ.ಎಸ್.ನ.ಗೆ ಒಂದು ವಿಚಿತ್ರ ಕನಸು ಬಿದ್ದಿತಂತೆ, ಒಂದು ಕೋಗಿಲೆಯ ಸುತ್ತ ಹಲವು ಕಾಗೆಗಳು ಕುಳಿತುಕೊಂಡು ಆ ಕೋಗಿಲೆಯ ತಲೆಗೆ, ನೆತ್ತಿಗೆ ಒಂದೇ ಸಮನೆ ಕುಟುಕುತ್ತಿದ್ದವಂತೆ. ’ಆ ದುಃಸ್ವಪ್ನದಿಂದಾಗಿ ನನಗೆ ಸರಿಯಾಗಿ ನಿದ್ದೆಯೇ ಬರಲಿಲ್ಲ ನಾಗರಾಜ್’ ಎಂದು ಹೇಳಿದರು” ಎಂದೆ. ವಾಸ್ತವವಾಗಿ ಅಂದು ರಾತ್ರಿ ತಪಾಸಣೆ ಮಾಡಲು ಕೆಲವು ಕಾಂತೀಯ ಸೆನ್ಸರ್‍ಗಳನ್ನು ಅವರ ತಲೆಯ ಎಲ್ಲ ಭಾಗಗಳಿಗೂ ಅಳವಡಿಸಿದ್ದರು. ಆ ಬಾಧೆಯಿಂದಾಗಿ ಅವರಿಗೆ ಆ ರಾತ್ರಿ ನಿದ್ರೆ ಬರದೆ ಅಂಥದೊಂದು ಕನಸು ಬಿದ್ದಿತ್ತು. ಇದನ್ನು ಲಂಕೇಶರಿಗೆ ತಿಳಿಸಿದಾಗ ಅವರು ಬೆರಗಿನಿಂದ “ಎಂತಹ ಮೆಟಫರ್ ಕಣಯ್ಯ” ಎಂದು ಅವರು ಅಚ್ಚರಿ ಪಟ್ಟಿದ್ದರು.
ಕೃಪೆ : ಸಂಪದ

Tuesday, February 7, 2012

ಕನ್ನಡ ಬಳಸಿ ಕನ್ನಡ ಉಳಿಸಿ


        ಕನ್ನಡ ರಾಜ್ಯ ಉದಯವಾಗಿ 55 ವರ್ಷಗಳೇ ಕಳೆದರೂ ಕೂಡ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಭದ್ರವಾದ ನೆಲೆಯಿಲ್ಲದಾಗಿರುವುದು ಸೋಚನೀಯ ಸ್ಥಿತಿಯಾಗಿದೆ. ಕನ್ನಡ ನಾಡು ಉದಯವಾಗಲು ಸಾವಿರಾರು ಮಹಾನೀಯರ ಹೋರಾಟ ವ್ಯರ್ಥವಾಗುತ್ತಿದೆ ಅನಿಸುತ್ತದೆ. ಏಕೆಂದರೆ ಇದುವರೆಗೂ ಕನ್ನಡ ಭಾಷೆ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಜಾರಿಯಾಗಿಲ್ಲ. ಕೇವಲ ಹಳ್ಳಿಗಳಲ್ಲಿ ಮಾತ್ರ ಕನ್ನಡ ಬಳಸುವವರನ್ನು ಕಾಣಬಹುದಾಗಿದೆ. ನಗರಗಳನ್ನು ನೋಡುವುದಾದರೆ ಅನ್ಯ ಭಾಷೆಗಳ ದರ್ಬಾರಿನಲ್ಲಿ ಕನ್ನಡ ತನ್ನ ಮೂಲ ನೆಲೆಯನ್ನು ಕಳೆದುಕೊಂಡಿದೆ. ಉದಾಹರಣೆಗೆ ರಾಜಧಾನಿ ಬೆಂಗಳೂರನ್ನೇ ನೋಡುವುದಾದರೆ ಶೇ.50ಕ್ಕೂ ಹೆಚ್ಚಿನ ಜನರು ಅನ್ಯ ಭಾಷಿಗರ ನೆಲೆಯಾಗಿದೆ. ಮುಂದೊಂದು ದಿನ ಬೆಂಗಳೂರು ಬೇರೆ ಭಾಷಿಗರ ತಾಣವಾಗಿ ಮಾರ್ಪಟ್ಟು ಕನ್ನಡ ಭಾಷಿಗರು ಬೆಂಗಳೂರಿನಲ್ಲಿ ನೆಲೆ ಕಳೆದುಕೊಳ್ಳಬೇಕಾಗಿ ಬರಬಹುದರಲ್ಲಿ ಯಾವುದೇ ಅನುಮಾನವಿಲ್ಲ. 
      ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಜನರನ್ನು ಭಾಗವಹಿಸಿವಂತೆ ಮಾಡುವಲ್ಲಿ ಕವಿಗಳ ಪಾತ್ರ ತುಂಬಾ ದೊಡ್ಡದು. ಕವಿಗಳು ತಮ್ಮ ಕವಿತೆಗಳ ಮೂಖಾಂತರ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದದು ಈಗ ಇತಿಹಾಸ. ಈಗ ಅಂತಹದೇ ಪರಿಸ್ಥಿತಿ ಎದುರಾಗಿದೆ. ಕವಿಗಳು ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಬೇಕಾಗಿದೆ. ಈ ಹಿಂದಿನ ಕವಿಗಳ ಕವಿಗಳು ಈಗಲೂ ಪ್ರಸ್ತುತವಾಗಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಕಾಣಬಹುದು.

ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ!
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ 
ಗರ್ಜಿಸುವುದ ಕಲಿತು ಸಿಂಹವಾಗಿ!
ಮೇಲಿನ ರಾಷ್ಟ್ರಕವಿ ಕುವೆಂಪುರವರ ಕವಿತೆ ಈಗ ತುಂಬಾ ಪ್ರಸ್ತುತವಾಗಿದೆ. ಕನ್ನಡದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆಗೆ ಕೊನೆಯಿಲ್ಲದಾಗಿದೆ. ಇಂಥ ಪ್ರಕರಣ ಎಷ್ಟೋ ಇವೆ. ಉದಾ: ಕೇರಳದಲ್ಲಿರುವ ಕಾಸರಗೂಡು ಪ್ರದೇಶ ಅಪ್ಪಟ ಕನ್ನಡ ನೆಲೆಗೆ ರಕ್ಷಣೆ ಇಲ್ಲದಾಗಿದೆ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲಹಿನ ನಿಧಿಯು ಸದಭಿಮಾನದ ಗೂಡು
ಈ ಕಾವ್ಯವನ್ನು ಏಕೀಕರಣದಲ್ಲಿ ಹುಯಿಲಗೊಳ ನಾರಾಯಣರಾವ್ ಅವರು ಕನ್ನಡ ರಾಜ್ಯದ ಉದಯವಾಗಲೀ ಎಂಬ ಆಶಯದಿಂದ ಬರೆದರು. 56ವರ್ಷಗಳು ಕಳೆದರೂ ಸದಭಿಮಾನದ ಗೂಡಾಗಿ ನಿರ್ಮಾಣವಾಗಿಲ್ಲ. ಇಂಥ ಕವಿತೆಗಳು ಇಂದಿಗೂ ಕನ್ನಡಿಗರಲ್ಲಿ ಜಾಗೃತಿಯ ಕಹಳೆ ಮೊಳಗಿಸಲು ಸಹಕಾರಿಯಾಗಿವೆ.

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೇ ಎನ್ನುಸಿರು ಹೆತ್ತೆನ್ನ ತಾಯಿ
ಕನ್ನಡವೇ ಧನ ಧಾನ್ಯ ಕನ್ನಡವೇ ಮನೆ ಮಾನ್ಯ
ಕನ್ನಡವೇ ಎನಗಾಯ್ತು ಕಣ್ಣು ಕಿವಿ ಬಾಯಿ
ಬೆನಗಲ್ ರಾಮರಾವ್ ರ ಈ ಕವಿತೆಯಲ್ಲಿ ಕನ್ನಡವೆಂದರೇ ಕೇವಲ ನುಡಿಯಲ್ಲ. ಪ್ರತಿಯೊಬ್ಬ ಕನ್ನಡಿಗರ ಜೀವನ ಹಾಗೂ ಉಸಿರಾಗಬೇಕಿದೆ.

ಹಚ್ಚೇವು ಕನ್ನಡದ ದೀಪ 
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ
ಡಿ.ಎಸ್.ಕರ್ಕಿಯವರ ಸಾಲುಗಳಂತೆ ಕನ್ನಡದ ದೀಪ ಎಲ್ಲರ ಮನಗಳಲ್ಲಿ ಬೆಳಗಲಿ ಎಂಬುದು ನನ್ನ ಅಭಿಲಾಷೆ.

     ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಈ ಚೆನ್ನವೀರ ಕಣವಿಯವರ ಮಾತುಗಳಂತೆ ಕೇವಲ ಕರ್ನಾಟಕ ಎಂಬ ರಾಜ್ಯ  ಇದ್ದರೆ ಸಾಲುದು ಕರ್ನಾಟಕ ರಾಜ್ಯದಲ್ಲಿ ಬದುಕುವ ಎಲ್ಲರ ಉಸಿರು, ಜೀವನ ಕನ್ನಡವಾಗಬೇಕು. ಕನ್ನಡದ ಹೋರಾಟಕ್ಕೆ ಕುವೆಂಪುರವರ ಈ ಕೆಳಕಂಡ ಸಾಲುಗಳು ಸದಾ  ಸ್ಪೂರ್ತಿದಾಯಕವಾಗಿರುತ್ತವೆ. 
ಕನ್ನಡಕ್ಕಾಗಿ ಕೈ ಎತ್ತು ಅದು ಕಲ್ಪವೃಕ್ಷವಾಗುತ್ತದೆ
ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಅದೇ ಗೋವರ್ಧನಗಿರಿಯಾಗುತ್ತದೆ.

ಕನ್ನಡ ನುಡಿ ನದಿಯಂತೆ ಸದಾ ಹರಿಯುತ್ತಿರಲಿ. ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ. 
- ಮಾ.ಕೃ.ಮಂಜುನಾಥ್

Monday, February 6, 2012

ಜನಪ್ರಿಯ ಒಗಟುಗಳು

೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ-    ಕಣ್ಣು
೨. ಕಾಸಿನ ಕುದುರೆಗೆ ಬಾಲದ ಲಗಾಮು-       ಸೂಜಿ ದಾರ
೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ-     ಗಿಳಿ
೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?-    ಮೂಗು, ಬಾಯಿ
೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?-   ಮೊಟ್ಟೆ
೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?   ಕೋಳಿ
೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?-    ರೈಲು
೮. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ-    ಗಡಿಯಾರ
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ ಹಣ್ಣು
೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ-ತೆಂಗು
೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ-ನೀರು
೧೩.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ.-ದಾರಿ
೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.-ಯುಗಾದಿ
೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.
೧೬. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು
೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ
೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.
೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ
೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.-ಕೋಳಿ
೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-ಮೂಗುಬೊಟ್ಟು
೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು
೨೩. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ
೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ-ಶ್ಯಾವಿಗೆ
೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು-ತೆಂಗಿನಕಾಯಿ
೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ-ತಂಬೂರಿ
೨೭. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ-ಕಪ್ಪೆ
೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪೊರಕೆ
೨೯. ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು-ಉಪ್ಪು
೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?-ನಕ್ಷೆ
೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- ಅನ್ನದ ಅಗುಳು.
೩೨. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.-ಸಾಬೂನು.
೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.-ಬದನೆಕಾಯಿ.
೩೪. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.-ನೀರು
೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.-ಎಣ್ಣೆ ದೀಪ.
೩೬. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.-ಬಾಳೆ ಹಣ್ಣು.
೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.-ಕನ್ನಡಿ
೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?-ದತ್ತುರಿಯ ಮುಳ್ಳು.
೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-ಕಮಲ.
೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.-ಗಿರಣಿ
೪೧. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.-ದುಡ್ಡು.
೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- ಗರಗಸ.
೪೪. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ .-ರೊಟ್ಟಿ, ದೋಸೆ
೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.-ಬೆಣ್ಣೆ ಉಂಡೆ.
೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಹಲಸಿನ ಹಣ್ಣು , ಬೀಜ
೫೫. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
೫೮. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
೬೧. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
೬೬.ಅಮ್ಮನ ಆಕಾಶವಾಣಿ ನಾನು-ಮಗು
೬೭. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೭೧. ನೀನಿಲ್ಲದೆ ಊಟವಿಲ್ಲ- ಉಪ್ಪು
೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
೭೪. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
೭೫. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
೭೬ . ಒಂದು ಮನೆಗೆ ಒಂದೇ ತೊಲೆ-ತಲೆ
೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
೭೯. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
೮೦. ಎರಡು ಮನೆಗೆ ಒಂದೇ ದೂಲ-ಮೂಗು
೮೧. ನೀರಿರೋತಾವ ನಿಲ್ಲಲೇ ಕೋಣ-ಚಪ್ಪಲಿ
೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-ನೆರಳು
೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-ಮನುಷ್ಯನ ಹುಟ್ಟು ಮಗು
೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ -ಸುಣ್ಣ
೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ -ದೀಪ
೮೬. ಹೋಗುತ್ತಾ, ಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು-ಸಿರಿತನ-ಬಡತನ, ಪ್ರಾಣ -ಬಡತನ
೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-ಬಾಳೆಗೊನೆ
೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ -ಜರಡಿ
೮೯. ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ-ಬಾಯಿ
೯೦. ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ-ಸೂರ್ಯ , ಚಂದ್ರ
೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ -ಅಡಿಕೆ ಮರ
೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ-ಧ್ವಜ
೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?-ಛತ್ರಿ
೯೫. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
೯೬. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
೧೦೬. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
೧೦೯ . ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
೧೧೦.ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
೧೧೧. ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
೧೧೩. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
೧೧೪.ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
೧೧೫. ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
೧೧೮. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
೧೨೧. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
೧೨೨. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
೧೨೪. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ , ತಟ್ಟೆ
೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-ಬೆಕ್ಕು
೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ-ಕಪ್ಪೆ
೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-ಸುಣ್ಣ
೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ-ದೀಪ
೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು-ನದಿ
೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ-ಮೇಡು
೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ-ಜೋಳದ ದಂಟು
೧೪೧. ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?-ಸಾಲಿಗ್ರಾಮ
೧೪೨. ಕರಿ ಹುಡುಗನಿಗೆ ಬಿಳಿ ಟೋಪಿ -ಹೆಂಡದ ಮಡಿಕೆ
೧೪೩. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು-ನಾಣ್ಯ
೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.-ತಿಗಣೆ
೧೪೫. ಕುದುರೆ ಬಾಲದಿಂದ ನೀರು ಕುಡಿಯುತ್ತದೆ-ಹೇನು
೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.-ಸೀತ ಫಲ
೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-ಕಣ್ಣು
೧೪೮. ಮನೆ ಮೇಲೆ ಮಲ್ಲಿಗೆ ಹೂವು.-ಮಂಜು
೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-ಕಪ್ಪೆ
೧೫೦. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.-ಸುಣ್ಣ
೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.-ಪೋಸ್ಟ್ ಕಾರ್ಡ್
೧೫೨. ಬಿಳಿ ಕುದುರೆಗೆ ಹಸಿರು ಬಾಲ.-ಮೂಲಂಗಿ
೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-ಕುಂಕುಮ
೧೫೪. ಬರೋದ ಕಂಡು ಕೈ ಒಡ್ತಾರೆ.-ಬಸ್
೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
೧೫೬. ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿ, ಬಳ್ಳಿ
೧೬೦. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ