May 27, 2011

60 ಸಂವತ್ಸರಗಳು

1. ಪ್ರಭವ
2. ವಿಭವ
3. ಶುಕ್ಲ
4. ಪ್ರಮೋದ
5. ಪ್ರಜೋತ್ಪತ್ತಿ
6. ಆಂಗೀರಸ
7. ಶ್ರೀಮುಖ
8. ಭಾವ
9. ಯುವ
10. ಧಾತ್ರಿ
11. ಈಶ್ವರ
12. ಬಹುಧಾನ್ಯ
13. ಪ್ರಮಾಧಿ
14. ವಿಕ್ರಮ
15. ವರುಷ/ವೃಷ
16. ಚಿತ್ರಭಾನು
17. ಸ್ವಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತ್
22. ಸರ್ವಧಾರಿ
23. ವಿರೋಧಿ
24. ವಿಕೃತ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖ
31. ಹೇವಿಳಂಬಿ
32. ವಿಳಂಬಿ
33. ವಿಕಾರಿ
34. ಶಾರ್ವರಿ
35. ಪ್ಲವ
36. ಶುಭಕೃತ
37. ಶೋಭಾಕೃತ
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಿಕೃತ
46. ಪರಿಧಾವಿ
47. ಪ್ರಮಾಧಿ
48. ಆನಂದ
49. ರಾಕ್ಷಸ
50. ನಳ
51. ಪಿಂಗಳ
52. ಕಾಳಯುಕ್ತಿ
53. ಸಿದ್ಧಾರ್ಥಿ
54. ರುದ್ರ
55. ದುರ್ಮತಿ
56. ದುಂದುಭಿ
57. ರುದಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಅಕ್ಷಯ



प्र्भवो विभव शुक्लः प्रमोदूत प्रजपतिः
आन्गिरः शीमुखो भावो युवो धातुस्तथेश्वरः
बहुधान्यः प्रमाथीचविक्रमो विशुवत्सरः
चित्रभनुः स्‍वाभानुस्चा तारणः पार्थिवो व्ययः
सर्वजित्सर्वधरीच विरोधी विक्रुतिः खरः
नन्दनो विजयश्चैवा जयो मन्मथ दूर्मुखौ
हे विलम्बी विलम्बिश्च विकारी शार्वरी प्लवः
शुभाकऋतु शोभक्रुतु क्रोधी विश्वावसु पराभवौ
प्मवन्गः कीलकः सौम्यः साधारण विरोधिक्रुतु
परीधावी प्रमादीचः आनन्दो राक्शसो नलः
पिन्गलः काल्युकिश्च सिद्धार्थि रौद्र दुर्मति
दुन्दुभिः रुधिरोद्गारी रक्ताक्शी क्रोधनोक्षयः

May 2, 2011

ನನ್ನ ಕಲ್ಪನೆಯ ಚೆಲುವೆ

ನನ್ನ ಮನದಾಳದಲ್ಲಿ ಸದಾ ಮಿಡಿಯುತ್ತಿರುವ ನನ್ನ ಕಲ್ಪನೆಯ ಚೆಲುವೆ. ಎಲ್ಲಿ ಅಡಗಿರುವಳೋ ತಿಳಿಯದು, ನಾನು ಅನೇಕರಲ್ಲಿ ನನ್ನ ಚೆಲುವೆಯನ್ನು ಹುಡುಕಲು ಪ್ರಯತ್ನಿಸಿದರೂ ಸಿಗುತ್ತಿಲ್ಲ. ಅಪ್ಪಟ ಕನ್ನಡತಿಯಾದ ನನ್ನ ಕನಸಿನ ಹುಡುಗಿ, ನನ್ನ ಮನದ ಕನ್ನಡಿಯಂತೆ ಪ್ರತಿಬಿಂಬವಾಗಿ ನಿಲ್ಲಬೇಕೆಂಬ ಬಯಕೆ. ಪ್ರೀತಿಯ ಜಗತ್ತಿನಲ್ಲಿ ದೃವತಾರೆಯಾಗಿ ಸದಾ ನಗು-ನಗುತ್ತಾ ಮಿನುಗುತ್ತಾ, ನೋವು ಪದವೇ ತಿಳಿಯದಂತೆ ದೇವಕನ್ಯೆಯಂತೆ ಕಂಗೊಳಿಸಬೇಕು. ನನ್ನ ಭಾವನೆಗಳ ಧ್ವನಿ ಅವಳಾಗಬೇಕು.

ಮರಳಿ ಬರಲಿ ಬಾಲ್ಯ

 ತಾವು ದೊಡ್ಡವರಾಗುತ್ತಾ ತಾವು ಸ್ವತಂತ್ರರು ತಮಗೆ ಇಷ್ಟ ಬಂದಂತೆ ತಾವು ನಡೆದುಕೊಳ್ಳಬಹುದು ಎಂದುಕೊಳ್ಳುತ್ತೇವೆ. ಆದರೆ ನಿಜವಾಗಲು ಅವರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಬಾಲ್ಯದ ದಿನಗಳಲ್ಲಿ ಇದ್ದ ಸ್ವತಂತ್ರತೆ, ಉಲ್ಲಾಸ, ಸಂತೋಷವನ್ನು ದೊಡ್ಡವರಾಗುತ್ತಾ ಕಳೆದುಕೊಳ್ಳುತ್ತೇವೆ. ಸಮಾಜದ ನೀತಿ ನಿಯಮ, ಕಟ್ಟು ಪಾಡುಗಳಲ್ಲಿ ಬಂಧಿಗಳಾಗಿ ನಗುವೇ ಇಲ್ಲದಾಗುತ್ತದೆ. ಚಿಕ್ಕವರಿದ್ದಾಗ ಇದ್ದ ಸಂತೋಷ ಮಾಯವಾಗುತ್ತದೆ. ಸ್ವಾಭಿಮಾನಿಗಳಾಗಿ ನಾನು, ನನ್ನ ಮನೆ, ನನ್ನ ಜನ, ನನ್ನ ಕೆಲಸ ಎಂಬ ಸೀಮಿತ ಪರಿಧಿಯಲ್ಲಿ ನಮ್ಮ ಜೀವನ ನಡೆಸಲಾರೆಂಭಿಸುತ್ತೇವೆ. ಇಲ್ಲಿ ಏನೀದ್ದರೂ ಬರೀ ಕಟ್ಟು ಪಾಡುಗಳಲ್ಲೇ ನಮ್ಮ ಆಸೆ, ಕನಸ್ಸುಗಳನ್ನು ಬಲಿಕೊಡುತ್ತೇವೆ. ಬಾಲ್ಯದಲ್ಲಿರುವಾಗಲೇ ನಮಗೆ ದ್ವೇಷ, ಅಸೂಯೆಗಳನ್ನು ಮನೆಯವರಿಂದಲೇ ಕಲಿಯುತ್ತೇವೆ, ಅವರ ಜಗಳದಲ್ಲಿ ನಾವು ಬಲಿಪಶುಗಳಾಗುತ್ತೇವೆ. ದೊಡ್ಡವರ ರೀತಿ ನೀತಿಗಳಲ್ಲಿ ತಮ್ಮನ್ನು ಅಡಿಯಾಳಾಗಿ ಮಾಡಿಕೊಳ್ಳುತ್ತೇವೆ. ಇಂಥಾ ಸ್ವತಂತ್ರ ಏತಕ್ಕಾಗಿ ಬೇಕು. ಅದಕ್ಕೆ ವಯಸ್ಸಾದಂತೆ ಬಾಲ್ಯದ ಮಧುರ ನೆನಪುಗಳ ನೆನೆಯುತ್ತಾ ಅದರಲ್ಲಿ ಇಂದಿನ ದಿನಗಳಾನ್ನು ಹುಡುಕಲು ಬಯಸುತ್ತೇವೆ. ಹಿಂದಿನ  ಬಾಲ್ಯದ ಕ್ಷಣಗಳು ಮತ್ತೆ ಬರಲಿ ಎಂದು ಬಯಸುತ್ತೇವೆ.

ನಾನು ಕಂಡಂತೆ ’ಜುಗಾರಿ ಕ್ರಾಸ್’


ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ.
  ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು - ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು ಉಂಟುಮಾಡುತ್ತದೆ. ಯಾಲಕ್ಕಿಯ ಮೂಟೆಯನ್ನು ಮಾರಲು ಬಸ್ಸಿನಲ್ಲಿ ಸಾಗಿಸುವಾಗ ಸುರೇಶ - ಗೌರಿಯರು ತಮಗೆ ಗೊತ್ತಿಲ್ಲದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಭೂಗತ ಜಗತ್ತಿನ ಚಕ್ರವ್ಯೂಹದೊಳಗೆ ಸಿಲುಕಿ ಕೊನೆಗೆ ಪಾರಾಗುತ್ತಾರೆ. ಹಾಗೆ ನೋಡಿದರೆ ಇದು ಸಾಹಸ ಕಥೆಯಾಗಿದೆ. ಇವರಿಬ್ಬರ ಸಾಹಸ ಸಿದ್ದಿಯೆಂದರೆ ಕೊನೆಗೆ ಜೀವ ಉಳಿಸಿಕೊಳ್ಳುವುದಾಗಿದೆ.
 ’ಜುಗಾರಿ ಕ್ರಾಸ್’ ಕಾದಂಬರಿಯ ಮೊದಲ ಭಾಗ ಅಮೂರ್ತವಾದ ಭೂಗತ ಜಗತ್ತಿನ ಸ್ವರೂಪವನ್ನು ಪರಿಚಯ ಮಾಡಿಕೊಟ್ಟರೆ, ಎರಡನೆಯ ಭಾಗದಲ್ಲಿ ಸುರೇಶ - ಗೌರಿಯರು ಅದರಲ್ಲಿ ಸಿಕ್ಕಿ ತಪ್ಪಿಸಿಕೊಳ್ಳಲು ಹೆಣಗಾಡುವ ಚಿತ್ರಣವಿದೆ. ಈ ಹೆಣಗಾಟದಲ್ಲಿ ಮನ್ಮಥ ಬೀಡಾಸ್ಟಾಲ್ ನ ಶೇಷಪ್ಪ, ಸುರೇಶನ ಸಹಪಾಟಿ ರಾಜಪ್ಪ ಸೇರಿಕೊಳ್ಳುತ್ತಾರೆ. ಭೂಗತ ಜಗತ್ತೆಂದರೆ ಕೊಲೆ ಮಾಡುವುದು ಅಥವ ಕೊಲೆಯಾಗುವುದು ಇವೆರಡರ ನಡುವೆಯೇ ಅದರ ಅಸ್ತಿತ್ವ. ಇನ್ನೊಂದು ಸಾಧ್ಯತೆಯೆಂದರೆ ಆತ್ಮಹತ್ಯೆ ಅಷ್ಟೆ.
 ಮೂಕಿ ದ್ಯಾವಮ್ಮನ ಮಗಳು ಹೂವಿನ ಮಾಲೆಗಳನ್ನು ಮಾರುತ್ತಿರುವಾಗ ದೌಲತರಾಮ ಅವಳಿಗೆ ಹತ್ತು ರೂಪಾಯಿ ನೋಟು ಕೊಟ್ಟು ಅವಳನ್ನು ಅಲ್ಲಿಂದ  ಸಾಗಹಾಕುವುದು ತಾವು ಮಾಡುವ ಕೃತ್ಯಕ್ಕೆ ಅಡ್ಡಲಾಗಿದ್ದಾಳೆಂಬ ಕಲ್ಪನೆ ಅವರಿಗೆ. ಅವಳು ತನಗೆ ಗೊತ್ತಿಲ್ಲದೆ ಬಂದು ಅಪರಾಧದ ಕೃತ್ಯಕ್ಕೆ ಅಡ್ಡಲಾಗಿ ನಿಂತಿರುವುದೇ ಅವಳ ತಪ್ಪು. ಸುರೇಶ ಗೌರಿಯರು ಕೂಡ ಅವಳಂತೆ ತಮಗೆ ಅರಿವಾಗದಂತೆ ಅಪರಾಧದ ವಿರುದ್ಧ ನಿಂತಿದ್ದಾರೆ.
 ಈ ಅಪರಾಧಗಳ ಲೋಕದ ಅನಾವರಣವನ್ನು ಪತ್ತೇದಾರನಾದ ರಾಜಪ್ಪ ಮಾಡಲು ಹೋಗುತ್ತಾನೆ. ಹಳೆಯ ಕಾವ್ಯದ ಕಡತ - ಸಹ್ಯಾದ್ರಿ ಶಿಖರವೊಂದರಲ್ಲಿ ಕೆಂಪು ರತ್ನಗಳಿರುವ ಸ್ಥಳದ ಸುಳಿವು ಭೂಗತ ಜಗತ್ತಿನ ಅನಾವರಣದ ವಸ್ತುಗಳಾಗಿವೆ.
ಒಟ್ಟಿನಲ್ಲಿ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಅಂತರ್ಗತವಾಗಿರುವ ಸಾಹಸ ಕಥೆ ಮತ್ತು ಪತ್ತೇದಾರಿ ಕಾದಂಬರಿಯಾಗಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ  ಓದುಗನಿಗೆ ಭಾಷವಾಗುತ್ತದೆ.

ನಿನ್ನ ಪ್ರೇಮದ ಪರಿಯ ನಾನರಿಯೆ


ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು

ಸಾಗರನ ಹೃದಯದಲಿ ರತ್ನಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ

ಅಲೆಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ

ನೀನು ಯಾರೆ?


ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ,
ನಿನ್ನ ಹೆರ್‍ಅಳೊಳಗಿತ್ತು ಮಲ್ಲಿಗೆಯ ದಂಡೆ;
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ,
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ.

ಸೀರೆ ಸೆರಗನು ಹಿಡಿದು ಗಾಳಿಯಲಿ ನಿಂತ
ನಿನ್ನ ನೋಟವೆ ಸಾಕು, ಪ್ರತಿದಿನ ವಸಂತ;
ನಿನ್ನ ಮುಂಬೆರಳಲ್ಲಿ ಹೊಳೆದಿತ್ತು ಮಿಂಚು'
ನೀನುಟ್ಟ ಸೀರೆಯದು ಹೊಬಳ್ಳಿಯಂಚು.

ನಿನ್ನ ಕಿವಿಯಲಿ ಹೊಳೆಯುತಿತ್ತು ಬೇಂಡೋಲೆ,
ನಿನ್ನ ಕೊರಳೊಳಗಿತ್ತು ನವರತ್ನಮಾಲೆ;
ನಿನ್ನ ಕಾಲ್ಗೆಜ್ಜೆಗಳ ಇನಿದನಿಗಳಲ್ಲಿ
ನಾನು ಒಲವನು ಕಂಡೆ ಹಾಡಹಗಲಲ್ಲಿ.

ನಾಕಂಡ ಮಂದಹಾಸವನು ವರ್ಣಿಲಾರೆ,
ಅಪ್ಸರೆಯೊ ಕಿನ್ನರಿಯೊ, ಓ ನೀನು ಯಾರೆ?

-ಮಲ್ಲಿಗೆ ಕವಿ ಕೆ ಎಸ್ ನರಸಿಂಹಸ್ವಾಮಿ