Jan 17, 2017

ಡಿಜಿಟಲ್ ಗ್ರಂಥ ಭಂಡಾರ

*ಡಿಜಿಟಲ್ ಗ್ರಂಥ ಭಂಡಾರ*

dli.ernet.in ( digital library of  India) website ನಲ್ಲಿ ಸಿಗುವ ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಸಪ್ತಗಿರಿ ಮಾಸಪತ್ರಿಕೆಯ ಕೆಲವು ಫೈಲ್ಗಳನ್ನು ಬಿಟ್ಟರೆ ಬೇರೆಲ್ಲ ಲಭ್ಯವಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು. *ಎಲ್ಲ ಸೇರಿ ಸುಮಾರು 2700 ಪುಸ್ತಕಗಳು ಲಭ್ಯ*.. ನೀವು ಇದರ ಪ್ರಯೋಜನ ಪಡೆದುಕೊಳ್ಳಿ. ಸ್ನೇಹಿತರಿಗೂ ತಲುಪಿಸಿ.

Jan 14, 2017

ಮಕರ ಸಂಕ್ರಾಂತಿ ಮಹತ್ವ

ಮಕರ ಸಂಕ್ರಾಂತಿ:
ಏನಿದರ ಮಹತ್ವ?

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.

ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.

ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.

ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ.

ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.

ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

Jan 12, 2017

ಎಲೆ ಮಾನವಾ

ನೀನಾರಿಗಾದೆಯಾ ಎಲೆ ಮಾನವಾ- ಎಂದು ಪ್ರಶ್ನಿಸುವ ನೈತಿಕತೆ ಸಾಧುತ್ವದ ಪ್ರತಿರೂಪವಾದ ಗೋಮಾತೆಗಲ್ಲದೆ ಇನ್ನಾರಿಗಿದ್ದೀತು? ತಣ್ಣನೆ ಹಾಗೂ ಸಣ್ಣನೆ ದನಿಯಲ್ಲಿ ತನ್ನ ತ್ಯಾಗವನ್ನು ಹೇಳಿಕೊಳ್ಳುವ ಹಸು, ಅದೇಕಾಲಕ್ಕೆ ತನ್ನ ಬದುಕಿನೆದುರು ಕುಬ್ಜನಾಗುವ ಮನುಷ್ಯನ ಅಂತರಂಗ ಶೋಧನೆಗೆ ಪ್ರೇರೇಪಿಸುತ್ತದೆ. ನಾಲಗೆಗಳಲ್ಲಿ ಹೊರಳುತ್ತ ಉಳಿದುಕೊಂಡಿರುವ ‘’, ಮೇಲ್ನೋಟಕ್ಕೆ ದಾಸರ ಪದದಂತೆ ಕಾಣುತ್ತದೆ. ಇದನ್ನು ಜನಪದ ಗೀತೆಯೆಂದು ಅನೇಕರು ನಂಬಿದ್ದಾರೆ. ಇಂಥ ಅದ್ಭುತ ಗೀತೆಯನ್ನು ಬರೆದ ಕವಿ ಎಸ್‌.ಜಿ.ನರಸಿಂಹಾಚಾರ್ಯ. ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ‘’ ನೀತಿಪಾಠ!
ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು ।।1।।

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ ।।2।।

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ ।।3।।

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ ।।4।।

ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯಾ ಎಲೆ ಮಾನವಾ ।।5।।

Jan 11, 2017

ಕರುಣಾಳು ಬಾ ಬೆಳಕೆ - ಬಿ ಎಂ ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ
ಮುನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

ಸಾಹಿತ್ಯ –  ಬಿ ಎಂ ಶ್ರೀಕಂಠಯ್ಯ
ಭಾವಾರ್ಥ..   
ಇದೊಂದು ಭಕ್ತಿ ಭಾವದಿಂದ ಕೂಡಿದ ಕವನ.  ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ  ಕವಿತೆಯನ್ನು ಹಾಡುತ್ತಿದ್ದರೆ ಎಂತಹವರೂ ಭಾವಪರವಶವಾಗಿಬಿಡುತ್ತಾರೆ. ನಮಗೆ ಅರಿವಿಲ್ಲದೆ ಮನಸ್ಸು ಭಗವಂತನಲ್ಲಿ ಲೀನವಾಗಿಬಿಡುತ್ತದೆ. ಬದುಕಿನಲ್ಲಿ ಏನನ್ನೋ ಕಳೆದುಕೊಂಡ ಮನಸ್ಸು ಮತ್ತೆ ಅದನ್ನು ಪಡೆಯಲು ಹಂಬಲಿಸುತ್ತದೆ. ಮನಸ್ಸು ಸಂಸ್ಕಾರಗೊಂಡು, ಹೊಸ ಚೈತನ್ಯ ಪಡೆಯುತ್ತದೆ.
ನಮ್ಮ ಬದುಕು ಪ್ರಕೃತಿಯೊಂದಿಗೆ ಮಿಳಿತವಾಗಿದೆ. ಪ್ರಕೃತಿಯೇ ನಮಗೆ ದೇವರು. ಇಲ್ಲಿಯ ಬೆಟ್ಟಗುಡ್ಡ, ಮರಗಿಡ, ನದಿ ಸರೋವರ, ಬೆಳಕು ಎಲ್ಲವೂ ನಮಗೆ ಪೂಜನೀಯ. ಬೆಳಕು ಜ್ಞಾನದ ಸಂಕೇತ. ತಮಸೋಮಾ ಜ್ಯೋತಿರ್ಗಮಯ ಎಂಬ ಆಶಯದಂತೆ ಕತ್ತಲು ತುಂಬಿರುವ ಈ ಬಾಳಿನಲ್ಲಿ ನಮ್ಮ ಕೈಯನ್ನು ಹಿಡಿದು ನಡೆಸು  ಎಂಬ ಆರ್ತವಾದ ಬೇಡಿಕೆ ಈ ಗೀತೆಯಲ್ಲಿದೆ. ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು .. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾದ, ಅಹಂಕಾರದ ಲವಲೇಶವೂ ಇಲ್ಲದ ಹೃದಯ ಇಲ್ಲಿ ಬೇಡುತ್ತಿದೆ- ಕೈ ಹಿಡಿದು ನಡೆಸೆನ್ನನು….  ಇಷ್ಟು ದಿನ ಸಲಹಿರುವೆ ಈ ಮುರ್ಖನನು ನೀನು ಮುಂದೆಯೂ ಸಲಹಲಾರೆಯಾ ನನ್ನನು ? ಕವಿಯು ತನ್ನನ್ನು ತಾನೂ ಅಂದರೆ ಮಾನವನನ್ನು ಮುರ್ಖನೆಂದೂ , ಸಣ್ಣವನೆಂದೂ  ಭಾವಿಸುತ್ತಾನೆ. ಇಷ್ಟು ದಿನ ಕರುಣೆಯಿಂದ ಕಾಪಾಡಿದ ಹಾಗೆ ಇನ್ನು ಮುಂದೆಯೂ ಮುನ್ನಡೆಸುವಂತೆ ಜ್ಞಾನವನ್ನು, ಬೆಳಕನ್ನೂ  ಬೇಡುತ್ತಾನೆ.  ತಾಯಿ ತನ್ನಮಗುವಿನ ತಪ್ಪು ಒಪ್ಪುಗಳನ್ನೆಲ್ಲ ಮನ್ನಿಸಿ ಕೈ ಹಿಡಿದು ನಡೆಸುವಂತೆ ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ದಾಟಿಸಿ, ಇರುಳನ್ನು ಅಂದರೆ ಅಜ್ಞಾನವನ್ನು ನೂಕಿ ಬೆಳಕನ್ನು ತೋರುವಂತೆಯೂ ಬೇಡಿಕೊಳ್ಳುತ್ತಾನೆ. ಬಿ. ಎಂ. ಶ್ರೀ ಅವರು ಅನುವಾದಿಸಿದ ಈ ಕವನ ಕನ್ನಡ ಭಾವಗೀತಾ ಪ್ರಪಂಚದಲ್ಲಿ ಸುಪರಿಚಿತವಾಗಿದೆ.
The Original by John Henry Newman (1801-90), composed in 1833
Lead, kindly Light, amid the encircling gloom 
Lead thou me on; 
The night is dark, and I am far from home, 
Lead thou me on. 
Keep thou my feet; I do not ask to see 
The distant scene; one step enough for me.
I was not for ever thus, nor prayed that thou 
Shouldst lead me on; 
I loved to choose and see my path; but now 
Lead thou me on, 
I loved the garish day, and, spite of fears, 
Pride ruled my will: remember not past years.
So long thy power hath blessed me, sure it still 
Will lead me on, 
O’er moor and fen, o’er crag and torrent, till 
The night is gone; 
And with the morn those angel faces smile, 
Which I have loved long since, and lost awhile.

Jan 1, 2017

ಜೀವನ ಮತ್ತು ಜೀವದ ನುಡಿಗಳು

❤ಜೀವನದ, ಜೀವದ ಕೆಲವೊಂದು ಬರಹಗಳು...,✍
ಹುಟ್ಟುನಾವು ಕೇಳದೇ ಸಿಗುವ ವರ(ಶಾಪ).
ಸಾವುನಾವು ಹೇಳದೇ ಹೋಗುವ ಜಾಗ.
ಬಾಲ್ಯಮೈಮರೆತು ಆಡುವ ಸ್ವರ್ಗ.
ಯೌವನಅರಿವಿದ್ದರೂ ಅರಿಯದ ಮಾಯೆ.
ಮುಪ್ಪುಕಡೆಯ ಆಟ.
ಸ್ನೇಹಶಾಶ್ವತವಾಗಿ ಉಳಿಯೋ ಬಂಧ.
ಪ್ರೀತಿಪ್ರಾಣಕ್ಕೆ ಹಿತವಾದ ಅನುಬಂಧ.
ಪ್ರೇಮತ್ಯಾಗಕ್ಕೆ ಸ್ಪೂರ್ತಿ.
ಕರುಣೆಕಾಣುವ ದೇವರು.
ಮಮತೆಕರುಳಿನ ಬಳ್ಳಿ.
ದ್ವೇಷಉರಿಯುವ ಕೊಳ್ಳಿ.
ತ್ಯಾಗದೀಪ.
ಉಸಿರುಮೌನದಲೆ ಜೊತೆಗಿರುವ ಗೆಳೆಯ.
ಹ್ರದಯಎಚ್ಚರಿಕೆ ಗಂಟೆ.
ಕಣ್ಣುಸ್ರಷ್ಟಿಯ ಕನ್ನಡಿ.
ಮಾತುಬೇಸರ ನೀಗುವ ವಿದ್ಯೆ.
ಮೌನಭಾಷೆಗೂ ನಿಲುಕದ ಭಾವ.
ಕಣ್ಣೀರುಅಸ್ತ್ರ.
ನೋವುಅಸಹಾಯಕತೆ.
ನಗುಔಷಧಿ.
ಹಣಅವಶ್ಯಕತೆ.
ಗುಣಆಸ್ತಿ.
ಕಲೆಜ್ಞಾನ.
ಧರ್ಮಬುನಾದಿ.
ಕರ್ಮಕಾಣದಾ ಕೈ ಆಟ.
ಕಾಯಕದೇಹ, ಮನಸಿಗೆ ಮಿತ್ರ.
ಸಂಸ್ಕೃತಿನೆಲೆ.
ಸಾಧನೆಜೀವಕ್ಕೆ ಜೀವನಕ್ಕೆ ಬೆಲೆ.