Wednesday, June 17, 2009

ಪ್ರಶ್ನೋತ್ತರ ಮಾಲಿಕೆ - ೫

. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?

ಉತ್ತರ : ಇಟಗಿಯ ಮಹಾದೇವ ದೇವಾಲಯ
. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?

ಉತ್ತರ : ಕೆ.ವಿ.ಪುಟ್ಟಪ್ಪ
. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?

ಉತ್ತರ : ಬೆನಗಲ್ ರಾಮರಾವ್
. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?

ಉತ್ತರ : ಶಿವಮೊಗ್ಗ ಜಿಲ್ಲೆಯ ಶ್ರೀರಾಮಪುರ ಮಠದಲ್ಲಿ
. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?

ಉತ್ತರ : ಕೆಮ್ಮಣ್ಣ ಗುಂಡಿ " ಕೃಷ್ಣ ರಾಜೇಂದ್ರ ಗಿರಿಧಾಮ
. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?

ಉತ್ತರ : ಮಲಪ್ರಭ ನದಿಗೆ
. ಕರ್ನಾಟಕದ ಮಠವೂಂದರಲ್ಲಿ "ಬೈಬಲ್"ಗೆ ಪೂಜೆಯಾಗುತ್ತಿದೆ ಅದು ಯಾವ ಮಠ?

ಉತ್ತರ : ನವಲಗುಂದದ ನಾಗಾಲಿಂಗಸ್ವಾಮಿ ಮಠದಲ್ಲಿ.
. ನಂಜನಗೂಡಿಗಿರುವ ಹಳೆಯ ಹೆಸರೇನು?

ಉತ್ತರ : ಗರಳಪುರಿ
. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು?

ಉತ್ತರ : ಬನವಾಸಿ
೧೦. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ?

ಉತ್ತರ : ಶ್ರವಣ ಬೆಳಗೊಳದಲ್ಲಿ


No comments:

Post a Comment