೧.’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?
ಉತ್ತರ: ರಕ್ತಾಕ್ಷಿ
೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?
ಉತ್ತರ: ಅಗ್ನಿ ಮತ್ತು ಮಳೆ / ಗಿರೀಶಕಾರ್ನಾಡ
೩.ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?
ಉತ್ತರ: ಚಿತ್ತಾಲರ ಶಿಕಾರಿ
೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವಪ್ರಾಣಿ ಯಾವುದು?
ಉತ್ತರ: ಅಜ
೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?
ಉತ್ತರ: ಗೊಲ್ಗೊಥಾ
೬. ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
ಉತ್ತರ: ಸತಿ ಸುಲೋಚನ
೭. ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಯು ಆರ್ ಅನಂತಮೂರ್ತಿ ಕಥೆಯಾಧಾರಿತ ಕನ್ನಡ ಚಿತ್ರಯಾವುದು?
ಉತ್ತರ: ಘಟಶ್ರಾದ್ಧ
೮. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?
ಉತ್ತರ: ಬನಾರಸ್ ಹಿಂದೂ ವಿಶ್ವವಿದ್ಯಾಲಯ, BHU
೯. ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಸಿರು ಹೊನ್ನು ಎಂಬ ಪ್ರಸಿದ್ಧಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ. ಈ ಬಿ ಜಿ ಎಲ್ ಸ್ವಾಮಿಯವರ ಹೆಸರನ್ನು ವಿಸ್ತರಿಸಿರಿ.
ಉತ್ತರ: ಬೆಂಗಳೂರುಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ