Nov 10, 2009

ಪಂಪ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳು


ಪಂಪ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳು





























 ಯಶವಂತ ಚಿತ್ತಾಲ 2007
 
ಟಿ.ವಿ. ವೆಂಕಟಾಚಲ ಶಾಸ್ತ್ರಿ 2008

Jun 25, 2009

ಓ ನನ್ನ ಜೀವವೇ - ನನ್ನ ಕವನ

ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ

ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ

ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು

ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ

ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*

Jun 24, 2009

ಅರವತ್ನಾಲ್ಕು ವಿದ್ಯೆಗಳು

ಅರವತ್ನಾಲ್ಕು ವಿದ್ಯೆಗಳು

ವೇದ

೩೩

ಜಲಸ್ತಂಭ

ವೇದಾಂಗ

೩೪

ವಾಯುಸ್ತಂಭ

ಇತಿಹಾಸ

೩೫

ಖಡ್ಗಸ್ತಂಭ

ಆಗಮ

೩೬

ವಶ್ಯಾ

ನ್ಯಾಯ

೩೭

ಆಕರ್ಷಣ

ಕಾವ್ಯ

೩೮

ಮೋಹನ

ಅಲಂಕಾರ

೩೯

ವಿದ್ವೇಷಣ

ನಾಟಕ

೪೦

ಉಚ್ಚಾಟನ

ಗಾನ

೪೧

ಮಾರಣ

೧೦

ಕವಿತ್ವ

೪೨

ಕಾಲವಂಚನ

೧೧

ಕಾಮಶಾಸ್ತ್ರ

೪೩

ವಾಣಿಜ್ಯ

೧೨

ದೂತನೈಪುಣ್ಯ

೪೪

ಪಶುಪಾಲನ

೧೩

ದೇಶ ಭಾಷಾ ಜ್ಞಾನ

೪೫

ಕೃಷಿ

೧೪

ಲಿಪಿ ಕರ್ಮ

೪೬

ಸಮಶರ್ಮ

೧೫

ವಾಚ

೪೭

ಲಾವುಕಯುದ್ಧ

೧೬

ಸಮಸ್ತಾವಧಾನ

೪೮

ಮೃಗಯಾ

೧೭

ಸ್ವರಪರೀಕ್ಷಾ

೪೯

ಪುತಿಕೌಶಲ

೧೮

ಶಾಸ್ತ್ರಪರೀಕ್ಷಾ

೫೦

ದೃಶ್ಯಶರಣಿ

೧೯

ಶಕುನಪರೀಕ್ಷಾ

೫೧

ದ್ಯೂತಕರಣಿ

೨೦

ಸಾಮುದ್ರಿಕಪರೀಕ್ಷಾ

೫೨

ಚಿತ್ರಲೋಹ, ಪಾರ್ಷಾಮೃತ್,ದಾರು ವೇಣು ಚರ್ಮ ಅಂಬರ ಕ್ರಿಯೆ

೨೧

ರತ್ನಪರೀಕ್ಷಾ

೫೩

ಚೌರ್ಯ

೨೨

ಸ್ವರ್ಣಪರೀಕ್ಷಾ

೫೪

ಔಷಧಸಿದ್ಧಿ

೨೩

ಗಜಲಕ್ಷಣ

೫೫

ಮಂತ್ರಸಿದ್ಧಿ

೨೪

ಅಶ್ವಲಕ್ಷಣ

೫೬

ಸ್ವರವಂಚನಾ

೨೫

ಮಲ್ಲವಿದ್ಯಾ

೫೭

ದೃಷ್ಟಿವಂಚನಾ

೨೬

ಪಾಕಕರ್ಮ

೫೮

ಅಂಜನ

೨೭

ದೋಹಳ

೫೯

ಜಲಪ್ಲವನ

೨೮

ಗಂಧವಾದ

೬೦

ವಾಕ್ ಸಿದ್ಧಿ

೨೯

ಧಾತುವಾದ

೬೧

ಘಟಿಕಾ ಸಿದ್ಧಿ

೩೦

ಖನಿವಾದ

೬೨

ಪಾದುಕಾ ಸಿದ್ಧಿ

೩೧

ರಸವಾದ

೬೩

ಇಂದ್ರ ಜಾಲ

೩೨

ಅಗ್ನಿಸ್ತಂಭ

೬೪

ಮಹೇಂದ್ರ ಜಾಲ

Jun 17, 2009

ಪ್ರಶ್ನೋತ್ತರ ಮಾಲಿಕೆ - ೬

.’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿತಿಳಿದವನುಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?

ಉತ್ತರ: ರಕ್ತಾಕ್ಷಿ
. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?

ಉತ್ತರ: ಅಗ್ನಿ ಮತ್ತು ಮಳೆ / ಗಿರೀಶಕಾರ್ನಾಡ

.ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?

ಉತ್ತರ: ಚಿತ್ತಾಲರ ಶಿಕಾರಿ

. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವಪ್ರಾಣಿ ಯಾವುದು?

ಉತ್ತರ: ಅಜ

. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?

ಉತ್ತರ: ಗೊಲ್ಗೊಥಾ

. ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]

ಉತ್ತರ: ಸತಿ ಸುಲೋಚನ

೭. ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಯು ಆರ್ ಅನಂತಮೂರ್ತಿ ಕಥೆಯಾಧಾರಿತ ಕನ್ನಡ ಚಿತ್ರಯಾವುದು?

ಉತ್ತರ: ಘಟಶ್ರಾದ್ಧ

. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?

ಉತ್ತರ: ಬನಾರಸ್ ಹಿಂದೂ ವಿಶ್ವವಿದ್ಯಾಲಯ, BHU

೯. ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಸಿರು ಹೊನ್ನು ಎಂಬ ಪ್ರಸಿದ್ಧಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ. ಬಿ ಜಿ ಎಲ್ ಸ್ವಾಮಿಯವರ ಹೆಸರನ್ನು ವಿಸ್ತರಿಸಿರಿ.

ಉತ್ತರ: ಬೆಂಗಳೂರುಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ