ಹುಟ್ಟಿದ ಮಗು ಅಳುವುದು ಯಾಕೆ ಗೊತ್ತಾ....?
ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ.... ಹುಟ್ಟಿದ ಮಗು ತುಂಬ ಅಳುವುದನ್ನು ನೀವು ನೋಡಿರುತ್ತೀರ...
ಈ ಮಗು ಯಾಕೆ ಅಳುತ್ತದೆ ಎಂದು ಕಾರಣಾಂತರಗಳಿಂದ ತಿಳಿದುಕೊಳ್ಳಾಗದಿರಬಹುದು. ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ....
ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು. ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.
ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು.....!
ಹಾಗೆ ಅಳುವ ಮಗು ತಾಯಿ ಮಡಿಲು ಸೇರಿದ ತಕ್ಷಣ ನಿಲ್ಲಿಸುವುದನ್ನು ಗಮನಿಸಬಹುದು.... ತಾಯಿ ತನ್ನನ್ನು ಹತ್ತಿರ ತೆಗೆದುಕೊಂಡ ತಕ್ಷಣ ಮತ್ತೆ ಅದೇ ಹೃದಯ ಬಡಿತದ ಶಬ್ದ ಕೇಳಿ ತನಗೆ ಯಾವುದೇ ಭಯವಿಲ್ಲ ಎಂದು ಆ ಮಗು ಅರ್ಥ ಮಾಡಿಕೊಳ್ಳುತ್ತದೆ...!
ನಿಜಕ್ಕೂ ತಾಯಿ ಮೇಲೆ ಆ ಪುಟ್ಟ ಮಗುವಿಗೆ ಎಷ್ಟು ನಂಬಿಕೆ ಅಲ್ವಾ....?!!
ತಾಯಿ ಪ್ರೀತಿಗೆ, ಅನುರಾಗಕ್ಕೆ ಸಾಟಿಯಿಲ್ಲ. ಕೊನೆಗೆ ತನ್ನ ಹೃದಯ ಬಡಿತ ಕೂಡ ಮಗುವಿಗೇ....!!
......
👏