ಸ್ವಾಮಿ ವಿವೇಕಾನಂದ ರವರ 18 ಉಲ್ಲೇಖಗಳು
ಸ್ವಾಮಿ ವಿವೇಕಾನಂದರ ಮೂಲ ನಾಮ ನರೇಂದ್ರನಾಥ ದತ್ತ ಅವರು 1863 ಜನವರಿ 13 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಬದುಕಿದ್ದು ಕೆಲವೇ ವರ್ಷಗಳಾದರೂ ಅವರ ಬದುಕು ಮತ್ತು ಅವರ ತತ್ವಗಳು ಇಡೀ ಜಗತ್ತಿಗೆ ಮಾದರಿಯಾಗಿದೆ. ಯುವ ಜನತೆಗೆ ಅವರೊಬ್ಬ ಮಾದರಿ ವ್ಯಕ್ತಿ ಆಗಿದ್ದಾರೆ. ಅವರು ಹುಟ್ಟು ಸನ್ಯಾಸಿಯಾಗಿರಲಿಲ್ಲ. ಕೇವಲ 7 ವರ್ಷಗಳಲ್ಲಿ ಇಡೀ ಪ್ರಪಂಚದ ಗಮನ ಸೆಳೆದರು. ಅವರೊಬ್ಬ ಪ್ರತಿಭಾ ಗಣಿ. ಅವರ ಉಲ್ಲೇಖಗಳನ್ನು ಓದುತ್ತಿದ್ದರೆ ಮನಸ್ಸು ನಿರ್ಮಳಗೊಳ್ಳುತ್ತದೆ. ಇಲ್ಲಿದೆ ಅಂತಹ ಕೆಲವೊಂದು ಉಲ್ಲೇಖಗಳು
1. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.
2. ಜ್ಞಾನ ನಮ್ಮ ಮಧ್ಯ ಇರುತ್ತದೆ ಆದರೆ ನಾವು ಅದನ್ನು ಹುಡುಕಿ ಅನಾವರಣಗೊಳಿಸುವ ಕಡೆ ಗಮನ ಹರಿಸಬೇಕು
3. ಮನಸಿನಂತೆ ಮಹಾದೇವ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಆವಾಗಲೇ ವಾಸ್ತವಿಕ, ಭೌತಿಕ, ಮಾನಸಿಕ ಪರಿವರ್ತನೆ ಕಂಡು ಬರುತ್ತದೆ
4. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವಂತೆ ಮಾಡಬೇಡಿ, ಅದರ ಬದಲಿಗೆ ನಿಮ್ಮ ಹೊಣೆಗಾರಿಕೆಯನ್ನು ನೀವೇ ಧೈರ್ಯವಾಗಿ ವಹಿಸಿಕೊಳ್ಳಿ ಮತ್ತು ತಪ್ಪನ್ನು ಒಪ್ಪಿಕೊಳ್ಳಿ. ನಾನು ಅನುಭವಿಸುತ್ತಿರುವ ದುಃಖ ಸಂಕಟಗಳಿಗೆ ನನ್ನ ದುಷ್ಕರ್ಮಗಳೇ ಕಾರಣ ಆದುದರಿಂದ ಅವುಗಳನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ ಎಂದು ಹೇಳಿ
5. ದುಡ್ಡು ನಿಮ್ಮ ಕೈಸೇರುವುದು ಅಥವಾ ಇಲ್ಲವೋ ಅದು ನಿಮ್ಮ ಜೀವನದ ದೈಯ್ಯ ಅಲ್ಲ, ನಿಮ್ಮ ಸಾವು ಈಗಲೇ ಆಗಬಹುದು ಅಥವಾ ಯಾವಾಗಲಾದರೂ ಆಗಬಹುದು ಆದರೆ ಅನ್ಯಾಯದ ದಾರಿಯಲ್ಲಿ ಸಾಗದೆ ನ್ಯಾಯ ದಾರಿಯಲಿ ಸಾಗುವುದು ನಿಮ್ಮ ಜೀವನದ ಗುರಿ ಆಗಿರಬೇಕು
6. ನೀವು ನಿಮ್ಮ ಮೇಲೆ ನಂಬಿಕೆ ಇಡುವ ತನಕ ನೀವು ದೇವರನ್ನು ನಂಬಲು ಸಾಧ್ಯವಿಲ್ಲ
7. ಶಕ್ತಿಯೆ ಜೀವನ ದೌರ್ಬಲ್ಯವೇ ಸಾವು
8. ನಮ್ಮ ಪಾಲಿಗೆ ಬರುವ ಯಾವುದೇ ಕೆಲಸವಾದರೂ ಖುಷಿ ಪಡುವವನೆ ನಿಜವಾದ ಕಾರ್ಯಕುಶಲ
9. ಇಡೀ ವಿಶ್ವವೇ ಒಂದು ವ್ಯಾಯಾಮ ಶಾಲೆ ಅಲ್ಲಿ ತಮ್ಮನ್ನು ತಾವೇ ಸಾಣೆ ಹಿಡಿದುಕೊಂಡು ಸದೃಢಗೊಳಿಸಿಕೊಳ್ಳಬೇಕು
10. ನಮಗೆ ಬೇಕಾದ ಸುಖ, ಶಕ್ತಿ, ರಕ್ಷಣೆ , ಜ್ಞಾನ ಇವೆಲ್ಲವೂ ಎಲ್ಲಿಂದಾನು ಬರುತ್ತದೆ ಎಂದು ಕಾಯುತ್ತಾ ಕುಳಿತಿಕೊಳ್ಳುವುದು ಸರಿಯಲ್ಲ ಕೇವಲ ಕಾಯುತ್ತಾ ಕುಳಿತರಬೇಕು ಅಷ್ಟೇ ಅದು ಎಲ್ಲಿಂದನು ಬರುವುದಿಲ್ಲ ಮತ್ತು ಯಾವುದು ಈಡೇರುವುದಿಲ್ಲ. ನಿಜ ಯಾವುದೇ ಸಹಾಯವೂ ಹೊರಗಿನಿಂದ ಬರುವಂತಹುದೇ ಅಲ್ಲ
11. ಸಾದ್ಯವಾದರೆ ಸಹಾಯ ಮಾಡಿ ಇಲ್ಲವಾದರೆ ಅವರನ್ನು ಅವರ ಪಾಲಿಗೆ ಸಾಧನೆ ಮಾಡಲು ಬಿಡಿ
12. ನಮ್ಮ ನೈತಿಕತೆ ಎಷ್ಟು ಉನ್ನತವಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದಾಗಿರುತ್ತದೆ
13. ಶಿಕ್ಷಕನಾದವನು ಯಾವುದೇ ಸ್ವಾರ್ಥ ಇಟ್ಟುಕೊಂಡು ಹಣಕ್ಕಾಗಿ, ಹೆಸರಿಗಾಗಿ ಅಥವಾ ಪ್ರಸಿದ್ಧಿಗಾಗಿ ಭೋದನೆ ಮಾಡಬಾರದು ಇಂತಹ ಉದ್ದೇಶಗಳು ಶಿಕ್ಷಕನ ಸಂವಹನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ
14. ಅನುಭವ ಜಗತ್ತಿನ ಸರ್ವಶ್ರೇಷ್ಟ ಶಿಕ್ಷಕ ಉಸಿರಿರುವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆ ಜೀವನದ ಗುರಿಯಾಗಿರಬೇಕು
15. ಏಳಿ ಎದ್ದೇಳಿ ಗುರಿಯತ್ತ ಸಾಗಿ, ಏಳಿ ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲದಿರಿ
16. ನಾವು ದೇವರನ್ನು ಕಾಣಬೇಕಾದರೆ ಮೊದಲು ಮಾನವನ ಸೇವೆ ಮಾಡಬೇಕು
17. ದಿನಕ್ಕೆ ಒಂದು ಬಾರಿಯಾದರೂ ನೀವು ನಿಮ್ಮ ಜೊತೆ ಮಾತನಾಡಿಕೊಳ್ಳಿ ಇಲ್ಲದಿದ್ದರೆ ಪ್ರಪಂಚದ ಅತ್ಯುತಮ್ಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ತಪ್ಪಿಸಿಕೊಳ್ಳುವಿರಿ
18. ಎಲ್ಲ ಶಕ್ತಿ ನಿಮ್ಮೊಳಗೆ ಇದೆ ನೀವು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದು