ಧರ್ಮ ಆಶ್ರಮಗಳು
ನಮಗೆ ನಾಲ್ಕು ಆಶ್ರಮ ಧರ್ಮಗಳಿವೆ.
೧. ಬ್ರಹ್ಮಚರ್ಯ
೨. ಗೃಹಸ್ಥ
೩. ವಾನಪ್ರಸ್ಥ
೪. ಸನ್ಯಾಸ
ಬ್ರಹ್ಮಚರ್ಯದಲ್ಲಿ ಧರ್ಮ ಒಂದೇ ಮುಖ್ಯ. ಇಲ್ಲಿ ಗೃಹಸ್ಥ ಅಥವಾ ವಾನಪ್ರಸ್ಥದ ಆಚರಣೆ ಇರುವುದಿಲ್ಲ. ಆದ್ದರಿಂದಲೇ ಬ್ರಹ್ಮಚಾರಿಗೆ ಯಾರು ದುಡ್ಡನ್ನು ಕೊಡಬಾರದು. ಬ್ರಹ್ಮಚಾರಿಗೆ ಮನೆಯಲ್ಲೇ ವಾಸ ಮಾಡಬೇಕೆಂಬ ನಿಯಮ ವಿರುವುದಿಲ್ಲ.
ಇನ್ನಾ ವಿವಾಹವಾದ ನಂತರ ಆತ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಕೇವಲ ಧರ್ಮವನ್ನೇ ಆಚರಿಸುತ್ತಿದ್ದರೆ ಆಗದು ಆದ್ದರಿಂದ ಇಲ್ಲಿಂದ ಅವನಿಗೆ ಅರ್ಥ ಕಾಮಗಳು ಅಂಟಿಕೊಳ್ಳುತ್ತವೆ.
ವಾನಪ್ರಸ್ಥ ಅಂದ್ರೆ retired life. ಮನುಷ್ಯನಿಗೆ 50 - 60 ವಯಸ್ಸು ಆಯ್ತು ಅಂದ್ರೆ ಅವನಲ್ಲಿ ಮನಸ್ಸನ್ನು control ಮಾಡುವಲ್ಲಿ, ಬುದ್ಧಿ ಯಲ್ಲಿ ಒಂದು ಪಕ್ವತೆ ಕಂಡುಬರುತ್ತದೆ. ಈ ಸಮಯದಲ್ಲಿ ಅವನಲ್ಲಿ ಕಾಮಗಳ ಮೇಲೆ ಅಷ್ಟು ಆಸಕ್ತಿ ಇರುವುದಿಲ್ಲ. ಇದೇ ಸನ್ಯಾಸಕ್ಕೆ ಪಾಯ ವಾಗುತ್ತದೆ.
ಇನ್ನು ಸನ್ಯಾಸ ಆಶ್ರಮದಲ್ಲಿ ಮನುಷ್ಯ ಅರ್ಥ ಕಾಮಗಳ ಮೇಲೆ ನಿರಾಸಕ್ತನಾಗಿ ಅಥವಾ ಅವುಗಳಿಂದ ದೂರನಾಗಿ ಪರಮ ಪುರುಷಾರ್ಥವಾದ ಮೋಕ್ಷ ವೇ ತನ್ನ ಧರ್ಮವೆಂದು ಆಚರಿಸುವ.
ಈ ಧರ್ಮದಲ್ಲಿ ಕೇವಲ ಆತ್ಮ ವಿದ್ಯೆ , ಆತ್ಮ ಸಂಯಮ ಬಗ್ಗೆ ತಿಳಿದುಕೊಳ್ಳಬೇಕೆಂಬ ಅಪಾರ ಆಸಕ್ತಿ ಇರುತ್ತದೆ.
ಹೀಗಾಗಿ ಬ್ರಹ್ಮಚರ್ಯದಲ್ಲಿ ಧರ್ಮವು, ಗೃಹಸ್ಥಾಶ್ರಮದಲ್ಲಿ ಧರ್ಮ+ಅರ್ಥ+ಕಾಮವು, ವಾನಪ್ರಸ್ಥಾಶ್ರಮದಲ್ಲಿ ಧರ್ಮ+ಅರ್ಥ-ಕಾಮವು, ಸನ್ಯಾಸಾಶ್ರಮದಲ್ಲಿ ಎಲ್ಲಾ ಬಿದ್ದು ಹೋಗಿ ಮೋಕ್ಷವೇ ಪ್ರಮುಖ ಧರ್ಮವಾಗುತ್ತದೆ. ಅದಕ್ಕೆ ಹೇಳಿರುವುದು "ಸರ್ವ ಧರ್ಮಂ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ, ಅಹಂತ್ವಂ ಸರ್ವ ಪಾಪೇಭ್ಯೊ, ಮೋಕ್ಷ ಇಷ್ಯಾಮಿ ಮಾ ಸುಛಃ"
ಸೂಕ್ಷ್ಮವಾಗಿ ಗಮನಿಸಿದರೆ ಅರ್ಥ ಕಾಮವನ್ನು
ನಮ್ಮವರು ಮಧ್ಯದಲ್ಲಿ ಇಟ್ಟಿದ್ದಾರೆ. ಯಾಕಂದ್ರೆ ಅವು ಮಧ್ಯದಲ್ಲಿ ಬಂದು ಮಧ್ಯದಲ್ಲೇ ಹುರಟು ಹೋಗುತ್ತವೆ. ಇಲ್ಲಿ ಇನ್ನೊಂದು ಅದ್ಭುತ ಅಂಶವಿದೆ. ಅರ್ಥದ ಹಿಂದೆ ಧರ್ಮವಿದೆ ಹಾಗೂ ಕಾಮದ ಮುಂದೆ ಮೋಕ್ಷವಿದೆ. ಇದರ ಅರ್ಥ ಏನು ಅಂದ್ರೆ ಸಂಪಾದನೆ ಮಾಡುವ ಪ್ರತಿಯೊಂದು ಪೈಸ ಧರ್ಮ ಬದ್ದವಾಗಿರಬೇಕು, ಕಾಮ ಅಥವಾ ಕೊರಿಕೆ ಯಾವಾಗಲೂ ಮೋಕ್ಷದ ಅಥವಾ final destination ಕಡೆ ಇರಬೇಕು.