Jan 1, 2012

ಚನ್ನಪಟ್ಟಣ

ಚನ್ನಪಟ್ಟಣ ರಾಮನಗರ ಜಿಲ್ಲೆಯ ಒಂದು ತಾಲೂಕು. ಬೆಂಗಳೂರಿನಿಂದ 'ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್' ಹಾದಿಯಲ್ಲಿ ಮುಂದೆ ಹೋದರೆ ಮೊದಲಿಗೆ ನೀವು ದಾಟುವ ನಗರ ರೇಷ್ಮೆ ನೆಲ ರಾಮನಗರ. ಆನಂತರ ಸಿಗುತ್ತದೆ ಚನ್ನಪಟ್ಟಣ. ಸುಂದರ ನಗರ ಚನ್ನಪಟ್ಟಣ ಮರದ ”’ಕರಕುಶಲ ವಸ್ತು”’ಗಳಿಗೆ ಪ್ರಸಿದ್ಧ. ಈ ತಾಲೂಕು ಮರದ ಗೊಂಬೆಗಳು ಹಾಗೂ ಆಟಿಕೆಗಳಿಗೆ ಬಹಳ ಪ್ರಸಿದ್ಧ. ಚನ್ನಪಟ್ಟಣ ತಾಲ್ಲೂಕಿನ ಪ್ರಸಿದ್ಧ ಸ್ಥಳಗಳೆಂದರೆ ಕೆಂಗಲ್, ದೊಡ್ಡ ಮಳೂರು, ಬೇವೂರು, ಚಕ್ಕರೆ, ದಶವಾರ, ಮಾಕಳಿ, ಕಣ್ವ, ನಾಗವಾರ,ಮುಂತಾದವು. ತಾಲ್ಲೂಕಿನ ಪ್ರಮುಖ ವ್ಯಕ್ತಿಗಳೆಂದರೆ, ಎಂ.ಎಸ್.ಪುಟ್ಟಣ್ಣ ಬಿ.ಜೆ.ಲಿಂಗೇಗೌಡ,ದೇ.ಜವರೆಗೌಡ,ಕೆಂಗಲ್ ಹನುಮಂತಯ್ಯ, ಚಕ್ಕರೆ ಶಿವಶಂಕರಪ್ಪ, ಸಿ.ಪಿ.ಯೋಗಿಶ್ವರ್, ಬಿ.ಸರೋಜಾದೇವಿ, ಡಾ.ಬಿ.ಎಲ್.ಜಯರಾಮು, ಮಾ.ಕೃ.ಮಂಜು ಮುಂತಾದವರು. ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ನೀರಾವರಿ ಮೂಲವೆಂದರೆ ಕಣ್ವ ಜಲಾಶಯ. ಹರಿದಾಸ ಪಂಥದ ಪ್ರಮುಖರಲ್ಲೊಬ್ಬರಾದ ಶ್ರೀಪಾದರಾಜರು, ವ್ಯಾಸರಾಯರು ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದವರು.