Dec 5, 2011

ಹಳಗನ್ನಡ

ಹಳೆಗನ್ನಡವನ್ನು ರಾಷ್ಟ್ರಕೂಟ ಸಾಹಿತ್ಯವೆಂದೂ .(Sanskrit:राष्ट्रकूट) ಕರೆಯುವ ಭಾಷೆಯು ೮ ರಿಂದ ೧೧ನೇ ಶತಮಾನಗಳಲ್ಲಿ ದಕ್ಷಿಣ ಭಾರತ ಮತ್ತು ಮಧ್ಯ ಭಾರತವನ್ನು ಆಳಿದ ರಾಷ್ಟ್ರಕೂಟರ ಕಾಲದಲ್ಲಿ ಪ್ರಚಲಿತವಿದ್ದ ದ್ರಾವಿಡ ಭಾಷೆಗಳಲ್ಲೊಂದು. ಆ ಕಾಲದ ಆಳ್ವಿಕೆಯು ದಕ್ಷಿ‌ಣ ಭಾರತದ ಇತಿಹಾಸದಲ್ಲಿ ಸಾಹಿತ್ಯದ, ಅದರಲ್ಲೂ ಕನ್ನಡ ಸಾಹಿತ್ಯದ ಮಹತ್ವದ ಘಟ್ಟವಾಗಿತ್ತು. ಆ ಕಾಲವು ಪ್ರಾಕ್ರಿತ ಹಾಗೂ ಸಂಸ್ಕೃತ ಭಾಷೆಯ ಅಂತ್ಯವೆಂದು, ಕನ್ನಡ ಭಾಷೆಯಲ್ಲಿ ರಚಿತವಾದ ಮಹತ್ವದ ಗ್ರಂಥಗಳೇ ಸಾಕ್ಷಿಯಾಗಿವೆ. ಕನ್ನಡದ ಶ್ರೇಷ್ಠ ಕವಿಗಳಿಗೆ ರಾಷ್ಟ್ರಕೂಟರ ದರ್ಬಾರಿನಲ್ಲಿ ಮಹತ್ವದ ಸ್ಥಾನ ದೊರಕಿ, ಕವಿಗಳು ಹಾಗೂ ರಾಜರು ಪದ್ಯ, ಹಿಂದು ಗ್ರಂಥ, ಜೈನ್ ಗ್ರಂಥ (ತೀರ್ಥಂಕರ)ಗಳು ಶ್ರೇಷ್ಠ ಸಾಹಿತ್ಯಗಳಾಗಿ ಹೊರಹೊಮ್ಮಿದವು.
ಆದಿಕವಿ ಪಂಪ, ರನ್ನರ ಕಾಲದಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಈ ಭಾಷೆಯು ಕಾಲಕ್ರಮೇಣ, ನಡುಗನ್ನಡವಾಗಿ ಮಾರ್ಪಟ್ಟು ನಂತರ ಕನ್ನಡ ಭಾಷೆಯಾಗಿ ರೂಪುಗೊಂಡಿತು.
ಆದಿಕವಿ ಪಂಪನ ಪಂಪಭಾರತ, ರನ್ನನ ಸಾಹಸಭೀಮ ವಿಜಯಂ(ಗದಾಯುದ್ಧ) ಮೊದಲಾದ ಕೃತಿಗಳು ಹಳೆಗನ್ನಡದಲ್ಲಿಯೇ ರಚಿತವಾದದ್ದು.
ನೃಪತುಂಗನ ಕಾಲದಲ್ಲಿ ರಚನೆಯಾದ ” ಕವಿರಾಜಮಾರ್ಗ ” ಎಂಬ ಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಪದ್ಯ ಗ್ರಂಥ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಣಯಿಸುವ ಮೂಲಕ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಿದ್ದಾರೆ.
ಹಲ್ಮಿಡಿ ಶಾಸನ {A replica of the original Halmidi inscription at Halmidi village}
” ಸಿರಿಭೂವಲಯ ” ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗ್ಗೆ ಖಚಿತವಾದ ಹೇಳಿಕೆಗಳಿವೆ. 24ನೇ ತೀರ್ಥಂಕರ ಮಹಾವೀರರು ಕನ್ನಡ ಭಾಷೆಯಲ್ಲಿ ನೀಡಿರುವ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕವಿ ಕುಮದೇಯಮುನಿ ಸ್ಪಷ್ಟವಾಗಿ ಸೂಚಿಸಿದ್ದು, ಇದು ಕನ್ನಡ ಭಾಷೆಯು 2300 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.
ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ “ಬ್ರಾಹ್ಮೀ ಲಿಪಿ “ಎಂದೂ , ಅಂಕ ಲಿಪಿಗೆ “ಸೌಂದರಿ ಲಿಪಿ “ಎಂದೂ ಹೆಸರಾಗಿದೆ . ಈ ಖಚಿತವಾದ ಮಾಹಿತಿಯನ್ನು “ಸಿರಿಭೂವಲಯ”ವು ಬಹಳ ಸ್ಪಷ್ಟವಾಗಿ ತಿಳಿಸಿದೆ