Saturday, November 19, 2011

ಪ್ರಶ್ನೋತ್ತರ ಮಾಲಿಕೆ - 10

1. ಸಣ್ಣ ಕಥೆಗಳ ಜನಕ ಎಂದುಮಾಸ್ತಿ ವೆಂಕಟೇಶ ಅಯ್ಯಂಗಾರ್ರವರನ್ನ ಕರೆಯುತ್ತಾರೆ.


2. ಬಾಣನಕಾದಂಬರಿಕೃತಿಯ ಆಧಾರದಿಂದ ಕನ್ನಡದ ಒಂದನೇ ನಾಗವರ್ಮನು ಚಂಪೂ ಶಾಲಿಯಲ್ಲಿಕರ್ನಾಟಕ ಕಾದಂಬರಿಯನ್ನು ರಚಿಸಿದರು.

3.  ರಾಮಾಯಣವನ್ನು ರಚಿಸಿದ ಮಹರ್ಷಿ ಎಂದುವಾಲ್ಮಿಕಿಕವಿಯನ್ನ ಕರೆಯುತ್ತಾರೆ.


4. ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೇ ಏಕರೂಪವಾಗಿರುವ ಶಬ್ದಗಳಿಗೆಅವ್ಯಯಗಳುಎಂದು ಕರೆಯುವರು.

5. ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಏಪ್ರಿಲ್ 2 ”.

6. ಸೂರ್ಯ ಉದಯಿಸುವ ನಾಡು ಎಂದುಜಪಾನ್”.

7. ಕರ್ನಾಟಕದಲ್ಲಿ ಸುಮಾರು 300 – 320 ರಷ್ಟು ಹುಲಿಗಳಿದ್ದು ದೇಶದಲ್ಲಿಯೆ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

8. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

9. ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.

10.ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಸ್ಥಾಪನೆ :ಎಪ್ರಿಲ್ 1, 1935 ( ಜನವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. ) 

Friday, November 18, 2011

ಕನ್ನಡಕ್ಕೆ ಮೊದಲ ಸರಸ್ವತಿ ಸನ್ಮಾನ


ಕನ್ನಡಕ್ಕೆ ಮೊದಲ ಸರಸ್ವತಿ ಸನ್ಮಾನವನ್ನ ತಂದು ಕೊಟ್ಟಿರುವ ಎಸ್ ಎಲ್ ಭೈರಪ್ಪನವರಿಗೆ ಧನ್ಯವಾದಗಳು  

Wednesday, November 16, 2011

ಪ್ರಶ್ನೋತ್ತರ ಮಾಲಿಕೆ - 9

1. ಮೈಸೂರು ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಬಂಗಾರಪೇಟೆ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಕೆ.ಚಂಗಲರಾ ರೆಡ್ಡಿ ”.


2.ವಿಶ್ವದಲ್ಲಿಯೆ ಅತ್ಯಂತ ಅಧಿಕ ಯುರೇನಿಯಂ ನಿಕ್ಷೇಪಆಸ್ಟ್ರೇಲಿಯಾದಲ್ಲಿದೆ.


3. ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಇರುವ ಅಧಿಕಾರದ ಬಗ್ಗೆ ಸಂವಿಧಾನದ 368 ನೇ ಅನುಚ್ಛೇದದಲ್ಲಿ ವಿವರಿಸಲಾಗಿದೆ.


4. ಸುನಾಮಿ ಎಂದರೆ “ ಅಲೆಗಳ ಬೀಭತ್ಸ್ಯಎಂದು ಅರ್ಥ.

5. ಸೂರ್ಯನ ನಂತರ ನಮಗೆ ಅತ್ಯಂತ ಹತ್ತಿರವಿರುವ ನಕ್ಷತ್ರವೆಂದರೆಫಾಕ್ಸಿಮಾ ಸೆಂಟಾರಿ ”.

6. ಜೇಡಿಮಣ್ಣು ಮತ್ತು ಅಲ್ಯೂಮಿನಿಯಂ ಸಿಲಿಕೇಟ್ ಸಂಯುಕ್ತಗಳ ಮಿಶ್ರಣದಿಂದಪಿಂಗಾಣಿವಸ್ತು ತಯಾರಿಸುತ್ತಾರೆ.

7. ಉತ್ತರ ಭಾರತದ ಮಹಾ ಮೈದಾನದ ನೈರುತ್ಯಕ್ಕೆ ಇರುವ ಮರುಭಾಮಿಥಾರ್ ಮರುಭೂಮಿ ”.


8. ಉತ್ತರ ಕರ್ನಾಟಕದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಸುಮಾರು 550 .ಕಿ.ಮೀ. ಉದ್ದವಾಗಿರುವ ಕರಾವಳಿ ಮೈದಾನಮಲಬಾರ್ ”.


9.ಕಪ್ಪೆ ಅರಭಟ್ಟನ ಶೌರ್ಯ ಪರಾಕ್ರಮಗಳ ಬಗ್ಗೆ ಉಲ್ಲೇಖವಿರುವ ಶಾಸನಬಾದಾಮಿ ಶಾಸನ ”.


10. ಬಾದಾಮಿ ಶಾಸನ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿರುವ ಕನ್ನಡದ ಪ್ರಮುಖ ಶಾಸನ ಇದರ ಕಾಲ ಸುಮಾರು ಕ್ರಿ..7 ನೇ ಶತಮಾನ.

Saturday, November 5, 2011

ಕನ್ನಡದ / ಕರ್ನಾಟಕದ ಮೊದಲಿಗರು

ಕನ್ನಡದ ಮೊದಲುಗಳು
ದೊರೆ - ಮಯೂರವರ್ಮ

ಗಣಿತ ಶಾಸ್ತ್ರಜ್ಞ - ಮಹಾವೀರಾಚಾರ್ಯ

ವಚನಗಾರ - ದೇವರದಾಸಿಮಯ್ಯ

ಕನ್ನಡ ಅಕ್ಷರ ಅಚ್ಚಿನಮೊಳೆ ವಿನ್ಯಾಸ - ಅತ್ತಾವರ ಅನಂತಾಚಾರಿ

ಕನ್ನಡ ಬೆರಳಚ್ಚು ಯಂತ್ರ / ಕೀಲಿಮಣೆ -  ಅನಂತ ಸುಬ್ಬರಾವ್

ಕನ್ನಡ ಲಿಪಿಯನ್ನ ಕಂಪ್ಯೂಟರ್ ಗಳವಡಿಸಿ ಸರಳ FONT ರಚನೆ - ಕೆ.ಪಿ.ರಾವ್

ಕನ್ನಡ ಶೀಘ್ರಲಿಪಿ - ರೆವರೆಂಡ್ ಬಿ.ಲೂಥಿ

ಪ್ರಾಧ್ಯಾಪಕ - ಟಿ.ಎಸ್.ವೆಂಕಣ್ಣಯ್ಯ

ರಾಜಕೀಯ / ಅತ್ಯುನ್ನತ ಹುದ್ದೆ

ಸೇನಾ ದಂಡನಾಯಕ - ಕೆ.ಎಂ.ಕಾರ್ಯಪ್ಪ

ಪ್ರಧಾನಮಂತ್ರಿ - ಹೆಚ್.ಡಿ.ದೇವೇಗೌಡ

ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್ಮುಖ್ಯಮಂತ್ರಿ - ಕೆ.ಸಿ.ರೆಡ್ಡಿ 

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್.ನಿಜಲಿಂಗಪ್ಪ


ಪ್ರಶಸ್ತಿ ವಿಜೇತರು
ಭಾರತರತ್ನ ಪ್ರಶಸ್ತಿ ವಿಜೇತರು - ಸರ್ ಎಂ.ವಿಶ್ವೇಶ್ವರಯ್ಯ


ಮ್ಯಾಗ್ಸೆಸೇ ಪ್ರಶಸ್ತಿ ವಿಜೇತರು - ಕೆ.ವಿ.ಸುಬ್ಬಣ್ಣ

ಜ್ಞಾನಪೀಠ ಪ್ರಶಸ್ತಿ ವಿಜೇತರು - ಕುವೆಂಪು

ಪಂಪ ಪ್ರಶಸ್ತಿ ವಿಜೇತರು - ಕುವೆಂಪು

ರಾಷ್ಟ್ರಕವಿ - ಗೋವಿಂದ ಪೈ

ಕಾಳಿದಾಸ್ ಸಮ್ಮಾನ್ ವಿಜೇತರು - ಮಲ್ಲಿಕಾರ್ಜುನ ಮನ್ಸೂರ್

ಕಬೀರ್ ಸಮ್ಮಾನ್ ವಿಜೇತರು - ಗೋಪಾಲಕೃಷ್ಣ ಅಡಿಗ

ಜಮನ್ ಲಾಲ್ ಪ್ರಶಸ್ತಿ ವಿಜೇತರು - ತಗಡೂರು ರಾಮಚಂದ್ರರಾವ್

ಗೋಯೆಂಕಾ ಪ್ರಶಸ್ತಿ ವಿಜೇತರು - ಪಾ.ವೆಂ.ಆಚಾರ್ಯ

ರಾಷ್ಟ್ರ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ - ಹಾರಾಡಿ ರಾಮಗಾಣಿಗ 

ಕನ್ನಡ ಕೆಲಸಕ್ಕೆ ಡಾಕ್ಟರೇಟ್ - ಫರ್ಡಿನೆಂಡ್ ಕಿಟ್ಟೆಲ್

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ


ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ - ಜಿ.ಬಿ.ಜೋಷಿ


ಸೋವಿಯತ್ ಲ್ಯಾಂಡ್ ಪ್ರಶಸ್ತಿ - ಬಸವರಾಜ್ ಕಟ್ಟಿಮನಿ ಮೊದಲಿಗ ಮಹಿಳೆಯರು


ವಚನಗಾರ್ತಿ - ಅಕ್ಕಮಹಾದೇವಿ

ಪತ್ರಕರ್ತೆ / ಪ್ರಕಾಶಕಿ - ನಂಜನಗೂಡು ತಿರುಮಲಾಂಬಾ

ನಾಟಕ ರಂಗದ ಮೇಲೆ ಮೊದಲ ಸ್ತ್ರೀ - ಗಂಗೂಬಾಯಿ ಗುಳೇದಗುಡ್ಡ 

ಮಹಿಳಾ ಮಂತ್ರಿ - ಗ್ರೇಸ್ ಠಕ್ಕರ್ 

ಸಾಹಿತ್ಯ ಸಮ್ಮೇಳನದ ಮಹಿಳಾ ಅಧ್ಯಕ್ಷರು - ಜಯದೇವಿ ತಾಯಿ ಲಿಗಾಡೆ 

ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಕನ್ನಡಿತಿ - ಅನುಪಮಾ ನಿರಂಜನ

ನವೋದಯ ಕವಯಿತ್ರಿ - ಬೆಳಗೆರೆ ಜಾನಕಮ್ಮ


ಪತ್ರಿಕಾ ಲೋಕ

ಪತ್ರಿಕೆ - ಮಂಗಳೂರು ಸಮಾಚಾರ (೧೮೪೮)

ದಿನಪತ್ರಿಕೆ - ಸೂರ್ಯೋದಯ ಪ್ರಕಾಶಿಕ (೧೮೭೦)

ಕನ್ನಡ e-ಪತ್ರಿಕೆ - ವಿಶ್ವಕನ್ನಡ 

ವಾರ ಪತ್ರಿಕೆ - ಸುಬುದ್ಧಿ ಪ್ರಕಾಶ (೧೮೫೦)


ವಿಜ್ಞಾನ ಪತ್ರಿಕೆ - ವಿಜ್ಞಾನ

ವಿಡಿಯೋ ಪತ್ರಿಕೆ - ಬೆಳ್ಳಿಚುಕ್ಕಿ

ಮಕ್ಕಳ ಪತ್ರಿಕೆ - ಮಕ್ಕಳ ಪುಸ್ತಕ

ಮಹಿಳಾ ಪತ್ರಿಕೆ - ಕರ್ನಾಟಕ ನಂದಿನಿ (೧೯೧೩)

ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ - ಕರ್ನಾಟಕ ಜ್ಞಾನ ಮಂಜರಿ (೧೮೭೮)

ಶಿಕ್ಷಣ ಪತ್ರಿಕೆ - ಕನ್ನಡ ಜ್ಞಾನ ಬೋಧಿನಿ (೧೮೬೨)

ಜಿಲ್ಲಾ ಪತ್ರಿಕೆ - ಜ್ಞಾನೋದಯ (ಶಿವಮೊಗ್ಗ)

ಕಾಮಶಾಸ್ತ್ರ ಪತ್ರಿಕೆ - ಪ್ರೇಮ

ಕಾನೂನು ಪತ್ರಿಕೆ - ನ್ಯಾಯ ಸಂಗ್ರಹ

ಚಲನಚಿತ್ರ ಪತ್ರಿಕೆ - ಸಿನಿಮಾ

ಹಾಸ್ಯ ಪತ್ರಿಕೆ - ವಿಕಟ ಪ್ರತಾಪ

ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪತ್ರಿಕೆ - ಉದಯವಾಣಿ ಸಾಹಿತ್ಯ ಲೋಕ  
ಕೃತಿ - ಕವಿರಾಜಮಾರ್ಗ

ಕಾವ್ಯ - ಆದಿಪುರಾಣ

ಗದ್ಯ - ವಡ್ಡಾರಾಧನೆ 

ನಾಟಕ - ಮಿತ್ರಾವಿಂದಾ ಗೋವಿಂದಾ

ಗೀತ ನಾಟಕ - ಮುಕ್ತದ್ವಾರ 

ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ ( ಶ್ರೀಧರಾಚಾರ್ಯ )

ಸ್ವತಂತ್ರ ಪೌರಾಣಿಕ ನಾಟಕ - ಪೃಥು ವಿಜಯ

ಗಾದೆಗಳ ಸಂಕಲನ - ಕನ್ನಡ ಗಾದೆಗಳು

ಒಗಟುಗಳ ಸಂಗ್ರಹ - ಮಕ್ಕಳ ಒಡಪುಗಳು 

ಪ್ರಬಂಧ ಸಂಕಲನ - ಲೋಕರಹಸ್ಯ

ಛಂದಶಾಸ್ತ್ರ ಗ್ರಂಥ - ಛಂದೋಂಬುಧಿ

ವೈದ್ಯ ಗ್ರಂಥ - ಗೋವೈದ್ಯ ( ಕೀರ್ತಿವರ್ಮ ) 

ವಿಷಯ ವಿಶ್ವಕೋಶ - ವಿವೇಕ ಚಿಂತಾಮಣಿ

ವಿಶ್ವಕೋಶ - ಲೋಕೋಪಕಾರ

ಮಕ್ಕಳ ವಿಶ್ವಕೋಶ - ಬಾಲ ಪ್ರಪಂಚ 

ನವ್ಯತೆಯನ್ನೊಳಗೊಂಡ ಕಾದಂಬರಿ - ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ) 

ಮನೋವೈಜ್ಞಾನಿಕ ಕಾದಂಬರಿ - ಅಂತರಂಗ ( ದೇವುಡು )

ವ್ಯಾಕರಣ ಗ್ರಂಥ - ಶಬ್ದಮಣಿ ದರ್ಪಣ

ಲಾಕ್ಷಣಿಕ ಗ್ರಂಥ - ಕವಿರಾಜ ಮಾರ್ಗ

ಬೈಬಲ್ ಕನ್ನಡೀಕರಣ - ಜಾನ್ ಹ್ಯಾಂಡ್ಸ್ 

ಐತಿಹಾಸಿಕ ನಾಟಕಕಾರ - ಸಂಸ

ಪ್ರವಾಸ ಕಥನ - ದಕ್ಷಿಣ ಭಾರತ ಯಾತ್ರೆ

ಪತ್ತೇದಾರಿ ಕಾದಂಬರಿ - ಚೋರಗ್ರಹಣ ತಂತ್ರ

ಆಯುರ್ವೇದ ಗ್ರಂಥ - ಕರ್ಣಾಟಕ ಕಲ್ಯಾಣಕಾರಕ

ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ

ಐತಿಹಾಸಿಕ ಕಾದಂಬರಿ - ಮುದ್ರಾಮಂಜೂಷ

ಜೀವನಚರಿತ್ರೆ - ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ

ಅಭಿನಂದನಾ ಗ್ರಂಥ - ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ ) 

ಇಂಗ್ಲೀಷ್ - ಕನ್ನಡ ನಿಘಂಟುಕಾರ - ವಿಲಿಯಮ್ ರೀವ್ಸ್

ತಾಂತ್ರಿಕ ಪದಕೋಶ - ಔದ್ಯಮಿಕ ನಿಘಂಟು

ಕಾವ್ಯ ನಿಘಂಟು - ರನ್ನಕಂದ

ಗದ್ಯ ನಿಘಂಟು - ಕರ್ಣಾಟಕ ಶಬ್ದಸಾರ

ವೈದ್ಯಕೀಯ ನಿಘಂಟು - ವೈದ್ಯ ಪದಕೋಶ


ಬಣ್ಣದ ಲೋಕ

ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ - ಬೇಡರ ಕಣ್ಣಪ್ಪ

ಐತಿಹಾಸಿಕ ಚಿತ್ರ - ರಣಧೀರ ಕಂಠೀರವ

ಮೂಕಿ ಚಿತ್ರ - ಮೃಚ್ಛಕಟಿಕ

ವರ್ಣ ಚಲನಚಿತ್ರ - ಅಮರಶಿಲ್ಪಿ ಜಕಣಾಚಾರಿ

ಚಿತ್ರಮಂದಿರ - ಪ್ಯಾರಾಮೌಂಟ್ ( ೧೯೦೫ ) 

ಕಾದಂಬರಿ ಆಧಾರಿತ ಚಲನಚಿತ್ರ - ಕರುಣೆಯೇ ಕುಟುಂಬದ ಕಣ್ಣು

ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ - ನಕ್ಕರೆ ಅದೇ ಸ್ವರ್ಗ 

ಸಾಮಾಜಿಕ ಚಲನಚಿತ್ರ - ಸಂಸಾರ ನೌಕೆ (೧೯೩೬) 

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ - ಬಿ.ವಿ.ಕಾರಂತ್

ಭಾವಗೀತೆ ಧ್ವನಿಸುರುಳಿ - ನಿತ್ಯೋತ್ಸವ

ವೃತ್ತಿನಾಟಕ ಕಂಪೆನಿ - ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ

ಬೀದಿ ನಾಟಕ ಪ್ರಯೋಗ -  ಕಟ್ಟು

ಹವ್ಯಾಸಿ ನಾಟಕ ತಂಡ - ಭಾರತ ಕಲೋತ್ತೇಜಕ ಸಂಗೀತ ಸಮಾಜ

ರೇಡಿಯೋ ನಾಟಕ - ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )

ಪ್ರದರ್ಶನಗೊಂಡ ಅಸಂಗತ ನಾಟಕ - ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )

ನಾಡಿನ ಮೊದಲುಗಳು
ರಾಜವಂಶ - ಕದಂಬ

ಕೆರೆ - ಚಂದ್ರವಳ್ಳಿ

ಶಿಲ್ಪ - ನಾಗಶಿಲ್ಪ

ಶಾಸನ - ಹಲ್ಮಿಡಿ

ಕೋಟೆ - ಬಾದಾಮಿ ಕೋಟೆ

ಜೈನ ದೇವಾಲಯ - ಪ್ರಣವೇಶ್ವರ ದೇವಾಲಯ, ತಾಳಗುಂದ

ಬೌದ್ಧ ವಿಹಾರ - ಬನವಾಸಿ

ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ - ಹಲಸಿಯ ಜೈನ ಬಸದಿ 

ವಿಶ್ವವಿದ್ಯಾಲಯ - ಮೈಸೂರು ವಿ.ವಿ.

ಕಾಲೇಜು - ಸೆಂಟ್ರಲ್ ಕಾಲೇಜು, ಬೆಂಗಳೂರು

ವೈದ್ಯಕೀಯ ಕಾಲೇಜು - ಮೈಸೂರು 

ಪಾಲಿಟೆಕ್ನಿಕ್ ಕಾಲೇಜು - ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು

Tuesday, November 1, 2011

ಶಿಖರಸೂರ್ಯ ಕಾದಂಬರಿಯ ವಿಮರ್ಶೆ

  ಜ್ಞಾನಪೀಠ ಪ್ರಶಸ್ತಿ ವಿಜೇತ ಕಂಬಾರರ ಈ ಕಾದಂಬರಿಯನ್ನು ನಾನು ಎಂ.ಫಿಲ್ ಪದವಿಯಲ್ಲಿ ಅಧ್ಯಯನ ವಿಷಯವಾಗಿ ತೆಗೆದು ಕೊಂಡಿದ್ದೆ. ಇಲ್ಲಿ ಈ ಕಾದಂಬರಿಯ ಓದಿನ ಸಾರಾಂಶವನ್ನು ತಿಳಿಸಲು ಪ್ರಯತ್ನಿಸುತ್ತೇನೆ.

    'ಶಿಖರಸೂರ್ಯ' ಕಾದಂಬರಿಯು ಜನಪದ ಕತೆಯನ್ನು ಆಧರಿಸಿ ರಚಿತವಾಗಿದೆ. ಚಂದ್ರಶೇಖರ ಕಂಬಾರರ ಐದನೆಯ ಹಾಗೂ ಇಲ್ಲಿವರೆಗಿನ ಕೊನೆಯ ಕಾದಂಬರಿ 'ಶಿಖರಸೂರ್ಯ'. ಈ ಕಾದಂಬರಿಯು 2006 ರಲ್ಲಿ  ಪ್ರಕಟಗೊಂಡಿತು. ಜಾನಪದ ಮೈಯ್ಯಿಗೆ ಆಧುನಿಕ ಸಂವೇದನೆಯನ್ನು ಕಸಿ ಮಾಡಿದ ನಮ್ಮ ಅದ್ವೀತಿಯ ಕವಿಯಾದ ಕಂಬಾರರ 'ಶಿಖರ ಸೂರ್ಯ' ಕಾದಂಬರಿ ಮಹಾಕಾವ್ಯ ಸ್ವರೂಪದ ಒಂದು ವಿಶಿಷ್ಟ ಕೃತಿ. ಇದು ಒಂದು ರೀತಿಯಲ್ಲಿ ಅವರ 'ಚಕೋರಿ' ಮಹಾಕಾವ್ಯದ ಮುಂದುವರಿದ ಭಾಗವಾಗಿದೆ. ಈ ಕೃತಿಯು 2010ರಲ್ಲಿ ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ 2009ರ ಠಾಕೂರ್ ಸಾಹಿತ್ಯ ಪ್ರಶಸ್ತಿಯನ್ನು ಗಳಿಸಿರುವುದು ಈ ಕಾದಂಬರಿಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ಕಾದಂಬರಿಯು ಅತ್ಯಂತ ರೋಮಾಂಚನಕಾರಿಯಾಗಿ ಹಲವು ತಿರುವುಗಳನ್ನು ಪಡೆಯುತ್ತ ಓದುಗರಿಗೆ ಹೊಸ ಲೋಕವೊಂದನ್ನು ತೋರಿಸುತ್ತ, ಕ್ಷಣ ಕ್ಷಣಕ್ಕೂ ವಿಸ್ಮಯವನ್ನು ಮೂಡಿಸುವ ಅದ್ಭುತವಾದ ಕಲಾಕೃತಿಯಾಗಿದೆ.
    ಕಾದಂಬರಿಯ ಕಥಾ ಸಾರಾಂಶವನ್ನು ನೋಡುವುದಾದರೆ ಈ ಕಾದಂಬರಿಯ ನಾಯಕ ಶಿಖರ ಸೂರ್ಯ. ಇವನ ಸುತ್ತ ಕಾದಂಬರಿ ರೂಪು ಪಡೆದಿದೆ. ಶಿಖರಸೂರ್ಯ ಮೊದಲು ಚಿನ್ನಮುತ್ತನಾಗಿದ್ದಾಗ(ಅವನ ಮೊದಲ ಹೆಸರು) ಕಲಾವಿದನಾಗಲು ಪ್ರಯತ್ನಿಸಿ ಅದರಲ್ಲಿ ವಿಫಲಗೊಂಡು, ನಂತರದಲ್ಲಿ ಹೇಗಾದರೂ ಮಾಡಿ ಅದನ್ನು ಸಾಧಿಸಬೇಕೆಂಬ ಹಟದಿಂದ ವಾಮಮಾರ್ಗಗಳನ್ನು ಅನುಸರಿಸುತ್ತಾನೆ, ಅದರಲ್ಲೂ ಸಾಧ್ಯವಾಗದೇ ತನ್ನ ಗುರುಗಳ ಶಾಪಕ್ಕೆ ಗುರಿಯಾಗಿ ಅಲ್ಲಿಂದ ತಪ್ಪಿಸಿ ಕೊಳ್ಳಲು ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ.

    ಚಿನ್ನಮುತ್ತನ ಆತ್ಮಹತ್ಯೆಯ ಪ್ರಯತ್ನವು ವಿಫಲವಾಗಿ ಕಾಡಿನ ದೊಡ್ಡ ಕಂದಕಕ್ಕೆ ಬೀಳುತ್ತಾನೆ. ಅಲ್ಲಿಂದ ಆತನನ್ನು ಜಟ್ಟಿಗ ಎಂಬುವನು ಅಲ್ಲಿಂದ ಶಿವಾಪುರಕ್ಕೆ ಕರೆತಂದು ಉಪಚರಿಸುತ್ತಾನೆ. ಶಿವಾಪುರದ ಶಿವಪಾದನ ಮಾತಿನಂತೆ ಜಟ್ಟಿಗ ಮತ್ತು ಆತನ ಮಡದಿ ಬೆಳ್ಳಿಯರಯ ಔಷದೋಪಾಚಾರಗಳಿಂದ ಆತನನ್ನು ಗುಣಪಡಿಸುತ್ತಾರೆ. ನಂತರ ಆತನನ್ನು ಶಿವಾಪುರದ ಅಮ್ಮನ ಬೆಟ್ಟದಲ್ಲಿರುವ ಶಿವಪಾದನ ಬಳಿಗೆ ಕರೆತರುತ್ತಾರೆ. ಇಲ್ಲಿ ಚಿನ್ನಮುತ್ತನಾಗಿದ್ದವನು ಜಯಸೂರ್ಯನ್ನಾಗಿ ಪರಿಚಯಿಸಿಕೊಳ್ಳುತ್ತಾನೆ. ಅಲ್ಲಿನ ವಿಶಿಷ್ಟವಾದ ವಿದ್ಯೆಗಳನ್ನು ಶಿವಪಾದನಿಂದ ಕಲಿಯಬೇಕೆಂಬ ಆಸೆಯಿಂದ, ಬಹುಪ್ರಮುಖ ವೈದ್ಯ ವಿದ್ಯೆಯಾದ ಸಸ್ಯ ಹೃದಯ ವಿದ್ಯೆಯನ್ನು ಕಲಿಯಬೇಕೆಂದು ಶಿವಪಾದನ ಶಿಷ್ಯನಾಗಿ ಸೇರಿಕೊಳ್ಳುತ್ತಾನೆ. ಸಸ್ಯ ವಿದ್ಯೆ ಕಲಿತು, ಅಲ್ಲಿಯೇ ರಹಸ್ಯೆವಾಗಿ ವಜ್ರದೇಹಿ ವಿದ್ಯೆಯನ್ನು ಕಲಿತು ವಜ್ರದೇಹಿಯಾಗಿ ಮಾರ್ಪಟ್ಟು ಶಿವಪಾದನ ನಿಂದನೆಗೆ ಒಳಗಾಗೊ ಅಲ್ಲಿಂದ ಹೊರಹಾಕಲ್ಪಡುತ್ತಾನೆ. ಆಗ ತನಗೆ ಉಪಚರಿಸಿ ಮರುಜೀವವನ್ನು ನೀಡಿದ ಬೆಳ್ಳಿಯ ಮೇಲಿನ ವ್ಯಾಮೋಹದಿಂದ ಅವಳ ಗಂಡ ಜಟ್ಟಿಗನನ್ನು ಕೊಲೆ ಮಾಡಿ ಅವಳನ್ನು ತನ್ನವಳಾಗಿ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲಗೊಂಡು ಊರಿನ ಜನರಿಂದ ಛೀಮಾರಿ ಹಾಕಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಕನಕಪುರಿ ನಗರಕ್ಕೆ ಸೇರುತ್ತಾನೆ.

   ಕನಕಪುರಿಯಲ್ಲಿ ತಾನು ವೈದ್ಯೆನೆಂದು ಪರಿಚಿತನಾಗುವ ಜಯಸೂರ್ಯ. ಇಲ್ಲಿ ಶಿಖರಸೂರ್ಯನಾಗಿ ಬದಲಾಗುತ್ತಾನೆ. ಕನಕಪುರಿಗೆ ಬಂದ ಮೊದಲು ಮಾಡಿದ ಕೆಲಸವೆಂದರೆ ಬಹಳ ದಿನಗಳಿಂದ ರೋಗದಿಂದ ನರಳುತ್ತಿದ್ದ ಕನಕಪುರಿಯ ರಾಜನನ್ನು ಒಂದೇ ದಿನದಲ್ಲಿ ಗುಣಪಡಿಸಿ ಬಹುಬೇಗನೆ ಕನಕಪುರಿಯ ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತಾನೆ. ನಂತರ ಕನಕಪುರಿಯ ರಾಜ್ಯವೈದ್ಯನಾಗಿ ನಿಯೋಜನೆಗೊಂಡು ಅರಮನೆಯಲ್ಲುರುವವರ ದೌರ್ಬಲ್ಯಗಳನ್ನು ಬಳಸಿಕೊಂಡು ಕನಕಪುರಿಯ ರಾಜನ ಮಗಳು ಛಾಯಾದೇವಿಯನ್ನು ವಿವಾಹವಾಗುತ್ತಾನೆ. ನಂತರ ಕನಕಪುರಿಯ ಅಧಿಕಾರವನ್ನು ಪಡೆಯಬೇಕೆಂಬ ಹಂಬಲದಿಂದ ಚಂಡೀದಾಸ ಎಂಬುವವನ ಸಹಾಯದಿಂದ ನಾಗಾರ್ಜುನನೆಂಬ ಮುನಿಯ ಬಳಿ ಧಾನ್ಯದಿಂದ ಚಿನ್ನ, ಮೇವಿನಿಂದ ಸೈನಿಕರನ್ನು ಸೃಷ್ಟಿಸುವ ರಸ ವಿದ್ಯೆಯನ್ನು ಕಲಿತು ನಂತರ ಬುಡಕಟ್ಟು ಜನಾಂಗದವರ ಸಹಾಯದಿಂದ ಕನಕಪುರಿಯನ್ನು ಆಕ್ರಮಿಸಿಕೊಳ್ಳುತ್ತಾನೆ. ಆಗ ಇವನ ಸಂಚಿಗೆ ಮಹಾರಾಣಿ, ರಾಜ, ಪ್ರದಾನಿ ಅರ್ಥಪಾಲ, ಸೇನಾಧಿಕಾರಿ ಬದೆಗ ಮುಂತಾದವರು ಬಲಿಪಶುಗಳಾಗುತ್ತಾರೆ. ಇವನ ಆಡಳಿತ ಬಂದ ನಂತರ ಕನಕಪುರಿಯ ಜನ ಮೊದಲು ಚಿನ್ನದ ಆಸೆಯಿಂದ ತಮ್ಮ ಧಾನ್ಯವೆನ್ನೆಲ್ಲಾ ಶಿಖರಸೂರ್ಯನಿಗೆ ಮಾರಿಕೊಂಡು ನಂತರದಲ್ಲಿ ತಮಗೆ ತಿನ್ನಲು ಧಾನ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

   ಕೊನೆಗೆ ಕನಕಪುರಿಗೆ ದೊಡ್ಡ ರೋಗ ಬಂದು ಅವನತಿಯನ್ನು ಹೊಂದುವ ಸ್ಥಿತಿಯನ್ನು ತಲುಪುತ್ತದೆ. ಇದನ್ನು ಶಿಖರಶೂರ್ಯ ತಾನು ವ್ಯೆದ್ಯನಾದರೂ ನಿರ್ಲಕ್ಷಿಸುತ್ತಾನೆ. ನಾಗಾರ್ಜುನನ ಮಾತಿನಂತೆ ಶಿವಾಪುರದಲ್ಲಿನ ಚಿನ್ನದ ಬೆಟ್ಟವನ್ನು ಪಡೆಯಬೇಕೆಂಬ ಆಸೆಯಿಂದ ಶಿವಾಪುರಕ್ಕೆ ದಾಳಿಯಿಡುತ್ತಾನೆ. ನಿನ್ನಡಿ ಎಂಬ ಶಿವಪಾದನ ತಿರುಮಂತ್ರದಿಂದ ತನ್ನ ದುರ್ವಿದ್ಯೆಯ ಫಲದಿಂದ ನಿರ್ಮಾಣವಾಗಿದ್ದ ಸ್ಯನಿಕರು, ಚಿನ್ನವೆಲ್ಲಾ ಮೂಲ ಸ್ಥಿತಿಗೆ ಬರುತ್ತದೆ. ನಂತರ ನಿನ್ನಡಿಯಿಂದ ಪರಾಭವಗೊಂಡು ಮತ್ತೆ ಕನಕಪುರಿಗೆ ಮರಳುತ್ತಾನೆ. ಮಹಾರೋಗದಿಂದ ತತ್ತರಿಸಿದ ಜನರ ದಂಗೆಯಿಂದ ತಪ್ಪಿಸಿಕೊಳ್ಳಲಾಗದೇ ಅಲ್ಲಿಂದ ತಪ್ಪಿಸಿಕೊಂಡು ದುರಂತ ಹೊಂದುತ್ತಾನೆ.

    ಹೀಗೆ ಕಾದಂಬರಿ ಮಾನವನ ಅತಿಯಾದ ದುರಾಸೆ, ಸ್ವಾರ್ಥಗಳಿಂದ ಹಲವು ತಿರುವುಗಳನ್ನು ಪಡೆಯುತ್ತಾ ಕೊನೆಗೆ ದುರಂತ ಹೊಂದುವುದನ್ನು ಈ ಕಾದಂಬರಿ ತಿಳಿಸುತ್ತದೆ. ವಾಮಾಚಾರ ವಿದ್ಯೆಯ ಅಹಂಕಾರದಿಂದಾಗಿ ದಾರುಣ ದುರಂತವಾಗುವುದೇ ಈ ಕಾದಂಬರಿಯ ತಿರುಳಾಗಿದೆ.

ನನ್ನೂರು - ಮಾಕಳಿಚನ್ನಪಟ್ಟಣದಿಂದ ಉತ್ತರಕ್ಕೆ ೧೫ ಕಿಲೋ ಮೀಟರ್ ದೂರವಿರುವ ಮಾಕಳಿಗ್ರಾಮ. ಸುಮಾರು ೩೫೦೦ ರಿಂದ ೪೦೦೦ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮ. ಸುಮಾರು ಹನ್ನೆರಡು ಸಾವಿರ ಎಕರೆಯ ಸುಂದರವಾದ ಹಸಿರಿನ ಅರಣ್ಯದ ನಡುವೆ ಇರುವಮಾಕಳಿಗ್ರಾಮ. ರಾಜ ಮಹಾರಾಜರ ಕಾಲದ ಇತಿಹಾಸದ ಪುಟಗಳನ್ನೇ ತೆರೆದಿಡಲು ಇಲ್ಲಿ ಐವತ್ತಕ್ಕು ಹೆಚ್ಚಿನದಾಗಿ ದೊರೆಯುವ ವೀರಗಲ್ಲುಗಳು, ಮಾಸ್ತಿಗಲ್ಲುಗಳು ಒಂದು ಪುಟ್ಟ ಇತಿಹಾಸವನ್ನೇ ತೆರೆದಿಡುತ್ತವೆ ಆದರೆ ಇವುಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯತೆ ಅವಶ್ಯಕ ವಾಗಿದೆ ಹಾಗೂ ಇಲ್ಲಿ ದೊರೆಯುವ ಶಾಸನದಿಂದ ಈ ಪ್ರದೇಶವನ್ನು ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಗೋಪಿನಾಯಕ ಎಂಬುವವನು ಆಳ್ವಿಕೆ ಮಾಡುತ್ತಿದ್ದುದಾಗಿ ತಿಳಿದುಬರುತ್ತದೆ. ಊರಿನ ಪಕ್ಕದಲ್ಲಿ ರಾಮಚಂದ್ರ ಕಲ್ಲು ಎಂಬ ಪ್ರದೇಶದಲ್ಲಿ ಈ ಹಿಂದೆ ಕೋಟೆ ಇತ್ತು ಎಂಬುದಕ್ಕೆ ಮೂಕ ಸಾಕ್ಷಿಯಾಗಿ ನಿಂತ ಬೆಟ್ಟದ ಮೇಲಿನ ಕಲ್ಲುಗಳನ್ನು ಕಾಣಬಹುದು. ವೀರಗಲ್ಲುಗಳಿಗಿಂತ ಹೆಚ್ಚಿನದಾಗಿ ಮಾಸ್ತಿಗಲ್ಲುಗಳು ದೊರೆಯುವುದರಿಂದ ಈ ಊರಿನಲ್ಲಿ ಸತಿಸಹಗಮನ ಪದ್ದತಿ ಅಸ್ತಿತ್ವದಲ್ಲಿತ್ತು ಎಂಬುದನ್ನು ತಿಳಿಯಬಹುದಾಗಿದೆ.
  • ಮಾಕಳಿಯ ಗೋಪಾಲಕೃಷ್ಣ ದೇವಾಲಯವು ಇಲ್ಲಿನ ಶಾಸನದ ಪ್ರಕಾರ ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆಂದು ತಿಳಿಯುತ್ತದೆ. ಈ ದೇವಾಲಯದಲ್ಲಿ ಸುಂದರವಾದ ಕೃಷ್ಣನ ವಿಗ್ರಹವನ್ನು ಹೊಂದಿದೆ. ದೇವಾಲಯವು ಈಗ ಜೀರ್ಣೋದ್ದಾರದಿಂದಾಗಿ ಕಾಂಕ್ರೀಟ್ ಗೋಡೆಯನ್ನು ಪಡೆದಿದ್ದು ತನ್ನ ಹಳೆಯ ಸೊಬಗನ್ನು ಕಳೆದುಕೊಂಡಿದೆ.
  • ಮಾಕಳಿಯು ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಮಾಕಳಿ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವೆಂದರೆ ಮಾಕಳಿಹೊಸಹಳ್ಳಿ, ಕೋಟೆಹೋಲ(ರಾಮರಾಜಪುರ), ನಾಯಿದೊಳ್ಳೆ, ಪ್ಲಾಂಟೆಷನ ದೊಡ್ಡಿ, ರಾಮನರಸಿಂಹರಾಜಪುರ ಗ್ರಾಮಗಳನ್ನು ಒಳಗೊಂಡಿದೆ. ಮಾಕಳಿಯ ಪ್ರಖ್ಯಾತ ದೇವಸ್ಥಾನಗಳೆಂದರೆ ಶ್ರೀ ಹಿರಿಯಮ್ಮ ದೇವಸ್ಥಾನ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀ ಬಲ್ಲೆಲಿಂಗೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪ ದೇವಸ್ಥಾನ, ಶ್ರೀ ವೆಂಕಟೇಶ್ವರ ದೇವಸ್ಥಾನ ಮುಂತಾದವು. ಮಾಕಳಿ ಎಂದೊಡನೆಮಾಕಳಿ ಬೇರು ಪ್ರಸಿದ್ಧ ಮಾಕಳಿ ಬೇರಿನ ಉಪ್ಪಿನಕಾಯಿ ತುಂಬ ವಿಶಿಷ್ಟ. ಮಾಕಳಿಯಲ್ಲಿ ಒಂದನೆ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಶಾಲಾ-ಕಾಲೇಜು ಸುತ್ತ ಮುತ್ತಲಿನ ಗ್ರಾಮಗಳ ಮಕ್ಕಳಿಗೆ ವ್ಯಾಸಂಗ ಮಾಡಲು ಅನುಕೂಲವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಒಟ್ಟಿನಲ್ಲಿ ಉತ್ತಮವಾದ ವಾತವಾರಣದಿಂದ ಕೂಡಿದ ಗ್ರಾಮ ಇದಾಗಿದೆ. ಇಲ್ಲಿನ ಜನರ ಪ್ರಮುಖ ಕಸುಬು ವ್ಯವಸಾಯ. ಪ್ರಮುಖವಾದ ಬೆಳೆಗಳೆಂದರೆ ರಾಗಿ, ಭತ್ತ, ಮಾವು, ತರಕಾರಿ ಬೆಳೆಗಳು ಇತ್ಯಾದಿ. ವ್ಯವಸಾಯದ ಜೊತೆಗೆಹೈನುಗಾರಿಕೆ, ಕುರಿ ಸಾಕಣೆ, ರೇಷ್ಮೆ ಸಾಕಣೆ ಮುಂತಾದ ಈ ಜನರ ಮುಖ್ಯ ಆಧಾಯದ ಮೂಲಗಳಾಗಿವೆ.

  • ಮಾಕಳಿಯ ಮತ್ತೊಂದು ವಿಶಿಷ್ಟತೆಯೆಂದರೆ ಪ್ರತಿವರ್ಷವು ನಡೆಯುವ ಹಿರಿಯಮ್ಮ ಗ್ರಾಮ ದೇವತೆಯ ಹಬ್ಬವು ಬಹು ವಿಜೃಭಣೆಯಿಂದ ಜರಗುತ್ತದೆ. ಈ ಹಬ್ಬವು ಒಂದು ವಾರಗಳ ಕಾಲ ನಡೆಯುತ್ತದೆ.ಸುತ್ತ ಮುತ್ತಲ ಗ್ರಾಮದವರಿಗೂ ಒಂದು ಸಡಗರದ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ನಡೆಯುವ ದೇವರ ಉತ್ಸವ, ಕೋಲಾಟ, ಕೊಂಡ(ಬೆಂಕಿಯ ಕೆಂಡದ ಮೇಲೆ ನಡೆಯುವುದು), ನೀರ್ಗಾಲಿ, ಡೊಳ್ಳು ಕುಣಿತ ಮುತಾಂದ ಕಾರ್ಯಕ್ರಮಗಳು ಜನರ ಮನ ಸೆಳೆಯುತ್ತವೆ.
  • ಮಾಕಳಿ ಎಂಬ ಹೆಸರು ಮತ್ತೊಂದರ ಪ್ರಕಾರ ಮಾಕಳಿ ರಾಜ್ಯ ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನ ಕಾಯಿಗೆ ಬಳಸುವ "ಮಾಗಣಿ ಬೇರು" ದೊರೆಯುತ್ತಿದ್ದರಿಂದ ಮಾಗಣಿ ಊರು ತದನಂತರದಲ್ಲಿ "ಮಾಕಳಿ"ಯಾಗಿರಬೇಕು. ಇನ್ನೊಂದು ಐತಿಹ್ಯದ ಪ್ರಕಾರ ಈ ಊರಿನಲ್ಲಿ ನೂರಾರು ವರ್ಷಗಳ ಹಿಂದೆ ಮಹಾಕಾಳಿ ದೇವಾಲಯವಿತ್ತೆಂದು ಅದರಿಂದ ಮಹಾಕಾಳಿ ಊರೆಂದು ನಂತರದಲ್ಲಿ ಮಾಕಳಿಯಾಯಿತ್ತೆಂದು ತಿಳಿಯುತ್ತದೆ. ಆದರೆ ಈಗ ಮಹಾಕಾಳಿ ದೇವಾಲಯ ನಶಿಸಿಹೋಗಿ ಈಗಿನ ಹಿರಿಯಮ್ಮ ದೇವಾಲಯವೇ ಹಿಂದೆ ಮಹಾಕಾಳಿ ದೇವಾಲಯವಾಗಿರಬೇಕು ಎನಿಸುತ್ತದೆ.
ಮಾಕಳಿ ಶಾಸನ : -
ಮಾಕಳಿ ಗ್ರಾಮದಿಂದ ಉತ್ತರಕ್ಕೆ ಸಿಗುವ ಈ ಶಾಸನದ ಕಾಲ ಕ್ರಿ.ಶ.೧೪೧೪. ಇದನ್ನು ಬಿ.ಎಲ್.ರೈಸ್ ರವರು ತಮ್ಮ ಎಫಿಗ್ರಾಫಿಯಾ ಆಫ್ ಕರ್ನಾಟಕದ ೯ನೇ ಸಂಪುಟದಲ್ಲಿ ಪ್ರಕಟಿಸಿದ್ದಾರೆ. ಇದೊಂದು ದಾನ ಶಾಸನವಾಗಿದೆ. ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಈ ಸೀಮೆಯನ್ನು ಗೋಪಿನಾಯಕ ಎಂಬುವವನು ಆಳ್ವಿಕೆ ಮಾಡುತ್ತಿರುವಾಗ ಕೇತುಗೌಡ ಎಂಬುವವನು ಈ ಪ್ರದೇಶದಲ್ಲಿ ಹೊಸದಾದ ಹಳ್ಳಿಯನ್ನು ಹಾಗೂ ಕೆರೆಯನ್ನು ಕಟ್ಟಿಸಿ ದತ್ತಿ ಬಿಟ್ಟ ವಿಚಾರ ಈ ಶಾಸನದಿಂದ ತಿಳಿದುಬರುತ್ತದೆ. ಈ ಶಿಲಾಶಾಸನದ ಭಾಷೆ ಹಾಗೂ ಲಿಪಿ ಕನ್ನಡದಲ್ಲಿದ್ದು, ೨೫ ಸಾಲುಗಳಿಂದ ಕೂಡಿದೆ.

ನಮ್ಮ ಕನ್ನಡ ನಾಡು - ನನ್ನ ಕವನ

ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ*

ಕರ್ನಾಟಕ ಜಿಲ್ಲೆಗಳು

ನಮ್ಮ ಕರ್ನಾಟಕ ಜಿಲ್ಲೆಗಳು


೧ : ಬಾಗಲಕೋಟೆ
೨ : ಬೆಂಗಳೂರು ಗ್ರಾಮಾಂತರ
೩ : ಬೆಂಗಳೂರು ನಗರ
೪ : ಬೆಳಗಾವಿ
೫ : ಬಳ್ಳಾರಿ
೬ : ಬೀದರ್
೭ : ಬಿಜಾಪುರ
೮ : ಚಾಮರಾಜನಗರ
೯ : ಚಿಕ್ಕಮಗಳೂರು
೧೦ : ಚಿತ್ರದುರ್ಗ
೧೧ : ದಕ್ಷಿಣ ಕನ್ನಡ
೧೨ : ದಾವಣಗೆರೆ
೧೩ : ಧಾರವಾಢ
೧೪ : ಗದಗ್
೧೫ : ಗುಲ್ಬರ್ಗ
೧೬ : ಹಾಸನ
೧೭ : ಹಾವೇರಿ
೧೮ : ಕೊಡಗು
೧೯ : ಕೋಲಾರ
೨೦ : ಕೊಪ್ಪಲ
೨೧ : ಮಂಡ್ಯ
೨೨ : ಮೈಸೂರು
೨೩ : ರಾಯಚೂರು
೨೪ : ಶಿವಮೊಗ್ಗ
೨೫ : ತುಮಕೂರು
೨೬ : ಉಡುಪಿ
೨೭ : ಉತ್ತರ ಕನ್ನಡ
೨೮ : ಚಿಕ್ಕಬಳ್ಳಾಪುರ
೨೯ : ರಾಮನಗರ

೦ : ಯಾದಗಿರಿಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು


ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ಕನ್ನಡದ ಹಬ್ಬವು ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಿರದೇ ಸದಾ ಕಾಲ ಕನ್ನಡದ ಕಂಪು ತುಂಬಿರಲಿ ಎಂದು ಹಾರೈಸುತ್ತೇನೆ. ಕಸ್ತೂರಿ ಕನ್ನಡ ವಿಶ್ವ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ 56ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಜೈ ಕರ್ನಾಟಕ ಮಾತೆ................ ಜೈ ಕನ್ನಡ........