Oct 22, 2008

ಅಳಿಯದ ನೆನಪು - ನನ್ನ ಕವನ

ಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು


ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ
ನನ್ನ ಮನಸ್ಸ ನೀ ಮರೆತಿರುವೆ

ಗುಡುಗು ಸಿಡಿಲು ಬಂದರೂ ಸರಿಯೇ
ನಿನ್ನ ನೆನಪು ಅಳಿಯುವುದೇ?
ಲೋಕದ ಸೃಷ್ಟಿಗೆ ದೇವರ ಕೃಪೆಯು
ನನ್ನ ಕವನಕ್ಕೆ ನೀ ಸ್ಪೂರ್ತಿಯು
-ಮಾಕೃಮ

Oct 16, 2008

ಭಾವನೆಯ ಹಕ್ಕಿ - ನನ್ನ ಕವನ

ಭಾವನೆಯ ಹಕ್ಕಿ
ಭಾವನೆಯ ಹಕ್ಕಿಯು ಹಾಡುತ್ತಿದೆ
ಮನಸ್ಸಿನ ಮಾತನು ಹೇಳುತ್ತಿದೆ
ಬದುಕಿನ ಸುಂದರ ಪುಟಗಳಲ್ಲಿ
ಕನಸ್ಸಿನ ಸಾವಿರ ಪುಟಗಳನು

ಕಲ್ಲು - ಮುಳ್ಳಿನ ಬಾಳಿಗೆ
ಪ್ರೀತಿ ಮಮತೆಯ ಆಶ್ರಯವು
ನೋವು ನಲಿವುಗಳ ಬಡಿತಕೆ
ತಾಳ್ಮೆ ಬಾಳಿನ ಜೊತೆಗೆರಲಿ

ಮನಸಿನ ದುಃಖವ ನುಂಗಿ
ನಗುವಿನ ದೀಪವ ಹಚ್ಚಿದೆ
ಯಾರು ಕಾಣದ ಅಂತರಂಗದಿ
ಮೌನದ ಮಾತುಗಳು ಹೊರಡುತ್ತಿವೆ
-ಮಾಕೃಮ-

ಹೆಣ್ಣು - ನನ್ನ ಕವನ

ಹೆಣ್ಣಿನ ಮಾಯಾ ಮೋಹಕ್ಕೆ
ಸಿಲುಕದವರಿಲ್ಲ ಜಗತ್ತಿನಲ್ಲಿ
ಆದಿಯ ಸೃಷ್ಟಿಕರ್ತಳು ಇವಳು
ಅಂತ್ಯದ ರೂವಾರಿಯು ಆಗಬಲ್ಲಳು

ರಾಜ ಮಹಾರಾಜರು ಇವಳಿಗಾಗಿ
ಹರಿಸಿದರು ರಕ್ತದ ಕೋಡಿ
ಆದರೂ ಯಾರಿಗೂ ತಿಳಿಯುತ್ತಿಲ್ಲ
ಇವಳ ಮನಸ್ಸಿನ ಮರ್ಮದ ಮೋಡಿ

ರಾಜ್ಯ ಕಟ್ಟಲು ಇವಳೇ ಸ್ಪೂರ್ತಿ
ರಾಜ್ಯ ನಿರ್ನಾಮಕ್ಕೂ ಇವಳೇ ಕುತಂತ್ರಿ
ಏನೇ ಇದ್ದರೂ ಬದುಕಿನಲ್ಲಿ
ಇವಳದೇ ಕಾರುಬಾರು.
-ಮಾಕೃಮ-

ಅಮೃತ ಮುತ್ತು - ನನ್ನ ಕವನ




ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ

ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ

ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು
-ಮಾ.ಕೃ.ಮ*

Oct 5, 2008

ಅನಾಥ ಮಗುವಾದೆ ನಾನು - ಹೊಸ ಜೀವನ


ನನ್ನನ್ನು ಸದಾ ಕಾಡುತ್ತಿರುವ ಗೀತೆ.

[ಹೆಣ್ಣು]ಉಳ್. ಳ್ ಳ್ ಳ್... ಆಯಿ ಆಯಿ.....
ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ.....
[ಗಂಡು]ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಕೇಳೋ ದೇವನೇ ೧
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಹೇಳೋ ದೇವನೇ ೨
ಸಾಹಿತ್ಯ ಮತ್ತು ಸಂಗೀತ : ಹಂಸಲೇಖಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್