Friday, September 26, 2008

ನನ್ನ ಹಳ್ಳಿ - ನನ್ನ ಕವನ


ನನ್ನ ಹಳ್ಳಿ
ಹಳ್ಳಿಯ ಸೌಂದರ್ಯ ಸೊಬಗು
ಹಚ್ಚ ಹಸಿರಿನ ಕಾಂತಿಯ ಮೆರಗು
ದಟ್ಟವಾದ ಮರಗಳ ಸಾಲು
ಪ್ರಕೃತಿಯ ಉಳಿವಿಗೆ ಇದರ ಸವಾಲು

ತಣ್ಣನೆಯ ಗಾಳಿಯ ತಂಪು
ಸೊಗಸಾದ ಹಕ್ಕಿಯ ಧ್ವನಿಯ ಇಂಪು
ಸತ್ಯ ನಿಷ್ಟತೆಗೆ ಹೆಸರಾದ ಜನ
ಮೋಸವರಿಯದ ಮುಗ್ಧ ಜನ

ಅಜ್ಜಿಯು ಹೇಳುವ ಚೆಂದದ ಕಥೆ
ಮಾಸಿಹೋದ ನೆನಪುಗಳ ವ್ಯಥೆ
ಜನರಾಡುವ ಕಸ್ತೂರಿ ಕನ್ನಡ
ಕೇಳಲು ನಿಂತರೆ ಮಹಾದಾನಂದ

ಉಳಿದಿದೆ ಸಂಸ್ಕೃತಿಯ ಬೇರು
ಸರ್ವರೂ ಒಂದಾಗಿ ಬಾಳುವ ಊರು
ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ
ಸೌಂದರ್ಯ ಸಾರುವ ಶಾಂತಿಧಾಮದಲಿ
-* ಮಾ.ಕೃ.ಮ*

Friday, September 19, 2008

ಪ್ರಶೋತ್ತರ ಭಾಗ ೨

೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು?
ಉತ್ತರ : ದುರ್ವಿನೀತ

೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ?
ಉತ್ತರ : ಸಂಸ್ಕಾರ

೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು?
ಉತ್ತರ : ಸದ್ಧರ್ಮ ವಿಜಯ

೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸ ಮತ್ತು ಪದ್ಯಗಳೆಷ್ಟು?
ಉತ್ತರ : ೧೪ ಆಶ್ವಾಸ - ೧೬೦೯ ಪದ್ಯ

೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು?
ಉತ್ತರ : ವಿನೋಭಾ ಭಾವೆ

೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ?
ಉತ್ತರ : ಅಚ್ಛೋದ ಸರೋವರ

೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
ಉತ್ತರ : ದ್ವೈತ

೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು?]
ಉತ್ತರ : ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು?
ಉತ್ತರ : ಹಯವದನ

೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು?
ಉತ್ತರ : ಶ್ರೀರಂಗವಿಠಲ

Thursday, September 18, 2008

ಓ ನನ್ನ ಜೀವವೇ -ನನ್ನ ಕವನ


ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ

ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ

ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು

ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ

ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*

ಪ್ರಶೋತ್ತರ ಭಾಗ ೧

೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು?
ಉತ್ತರ : ಬೀchi

೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು?
ಉತ್ತರ : ವಿ. ಸೀತಾರಾಮಯ್ಯ

೩. "ಜಾನಪದ ಲೋಕ" ಎಲ್ಲಿದೆ?
ಉತ್ತರ : ರಾಮನಗರ ಬಳಿಯಿದೆ

೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ?
ಉತ್ತರ :ಪಂಜೆ ಮಂಗೇಶರಾವ್

೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು?
ಉತ್ತರ: ಬಾಳಪ್ಪ ಹುಕ್ಕೇರಿ
೬. ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು?
ಉತ್ತರ: ಜಯದೇವಿತಾಯಿ ಲಿಗಾಡೆ

೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ?
ಉತ್ತರ : ವಿದ್ಯಾರಣ್ಯರು

೮. "ಕನ್ನಡ" ಎಂಬ ಹೆಸರಿನ ಊರು ಎಲ್ಲಿದೆ?
ಉತ್ತರ : ಮಹಾರಾಷ್ಟ್ರದಲ್ಲಿದೆ

೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು?
ಉತ್ತರ : ಸುಬ್ಬಯ್ಯ ನಾಯ್ಡು

೧೦. ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಊರಿನಲ್ಲಿ ನಡೆಯಿತು?
ಉತ್ತರ : ತುಮಕೂರು