Dec 5, 2008

ಕನ್ನಡ ಭಾಷೆ



ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು, ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಸರಕಾರೀ ಭಾಷೆ.

ಪರಿಚಯ

ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು.
ಕನ್ನಡ ನುಡಿಯಲ್ಲಿ ಸಂಸ್ಕೃತದಂತೆ ಏಳು ವಿಭಕ್ತಿ ಪ್ರತ್ಯಯಗಳು ಇವೆ ಎಂದು ಹಲವು ವ್ಯಾಕರಣದ ಹೊತ್ತಿಗೆಗಳು ಹೇಳಿದರೂ, ಕನ್ನಡದಲ್ಲಿ ಸಂಸ್ಕೃತದ ಪ್ರಥಮ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಮೆ. ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ನಾಮಪದದ ಕೊನೆಯಲ್ಲಿ ಪ್ರತ್ಯಯಗಳನ್ನಾಗಿ (postfix) ಸೇರಿಸಲಾಗುವುದು. ಅಲ್ಲದೆ ಸಂಸ್ಕೃತದಲ್ಲಿ ಬಳಕೆಯಾಗುವ ವಿಭಕ್ತಿಯ ಸಂದರ್ಭ, ಸನ್ನಿವೇಶಗಳು ಕನ್ನಡದ ಬಳಕೆಗಿಂತ ವಿಭಿನ್ನ.
ಉದಾ: ಗ್ರಾಮಂ ಗತಃ = ಗ್ರಾಮಕ್ಕೆ ಹೋದನು. "ಗ್ರಾಮಂ" ದ್ವಿತೀಯಾ ವಿಭಕ್ತಿ ಆದರೆ, ಗ್ರಾಮಕ್ಕೆ ಚತುರ್ಥಿ ವಿಭಕ್ತಿ. ಅದನ್ನೇ ಇನ್ನೊಂದು ರೀತಿ ಬರೆದಾಗ, ಗ್ರಾಮಂ ಗತಃ = ಗ್ರಾಮವನ್ನೈದಿದನು. "ಗ್ರಾಮಂ" ದ್ವಿತೀಯಾ ವಿಭಕ್ತಿ ಅಂತೆಯೇ, "ಗ್ರಾಮವನ್ನು" ಕೂಡ ದ್ವಿತೀಯಾ ವಿಭಕ್ತಿಯೇ.
ಹಾಗೆಯೇ ಕನ್ನಡದಲ್ಲಿ ಸಂಸ್ಕೃತದ ವ್ಯಾಕರಣದಂತೆ, ಮೂರು ಲಿಂಗಗಳು (ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ), ಎಂದು ಹೇಳಿದರೂ, ಕನ್ನಡದ ನಿಜ ಸ್ವರೂಪದಂತೆ ಕನ್ನಡದಲ್ಲಿ ನಾಲ್ಕು ಲಿಂಗಗಳನ್ನು(ಗಂಡು, ಹೆಣ್ಣು, ಮಾನುಷ, ಅಮಾನುಷ) ಗುರುತಿಸಬಹುದು. ಈ ಸಂಗತಿ ಕನ್ನಡದ ವಚನಗಳ ಬಗ್ಗೆ ತಿಳಿದಾಗ ಇನ್ನು ತಿಳಿಯಾಗುವುದು.
ಕನ್ನಡವೂ ಬೇರೆ ದ್ರಾವಿಡ ನುಡಿಗಳಂತೆ ಮಾನವರಲ್ಲದ ಎಲ್ಲ ಪ್ರಾಣಿಗಳನ್ನೂ ನಪುಂಸಕಗಳಂತೆ ನೋಡುವುದು.
ಉದಾ: ಎತ್ತು ಬಂದಿತು. ಗೂಳಿ ಗುದ್ದಿತು.
ಕನ್ನಡದಲ್ಲಿ ಎರಡು ವಚನಗಳು (ಏಕ ಮತ್ತು ಬಹು) ಇವೆ. ಏಕವಚನ ರೂಪಗಳು ( ಗಂಡು, ಹೆಣ್ಣು, ಮಾನುಷ, ಅಮಾನುಷ ) ಈ ನಾಲ್ಕು ಲಿಂಗದಲ್ಲಿ ಬರುವುದು.
ಉದಾ:
ಅವನು (ಪುಲ್ಲಿಂಗ, ಮಾನುಷ)
ಅವಳು (ಸ್ತ್ರೀಲಿಂಗ, ಮಾನುಷ)
ಅದು (ಅಮಾನುಷ) (ಆದರೆ 'ಅದು' ಎತ್ತನ್ನು ಕುರಿತು ಇದ್ದರೆ ಆಗ ಅದು ಪುಲ್ಲಿಂಗ, ಹಸುವನ್ನು ಕುರಿತು ಇದ್ದರೆ ಅದು ಸ್ತ್ರೀಲಿಂಗ).

ಸಾಮಾನ್ಯವಾಗಿ ಬಹುವಚನ ರೂಪಗಳ ಮಾನುಷ ಮತ್ತು ಅಮಾನುಷ ಲಿಂಗಗಳಲ್ಲಿ ಮಾತ್ರ ಬರುವುದು. ಉದಾ:
ಅವರು ಬಂದರು; ಇಲ್ಲಿ 'ಅವರು' ಪದವು "ಒಂದಿಷ್ಟು ಮನುಷ್ಯರು" ಎಂದು ಹೇಳುತ್ತದೆ. ಹಾಗೆ
ಅವು ಬಂದವು; ಇಲ್ಲಿ 'ಅವು' ಪದವು "ಒಂದಿಷ್ಟು ಅಮಾನುಷಗಳು" ಎಂದು ಹೇಳುತ್ತದೆ.
ಕನ್ನಡದ ವಿಭಕ್ತಿ, ಲಿಂಗ, ವಚನಗಳು ಸಂಸ್ಕೃತದ ವಿಭಕ್ತಿ, ಲಿಂಗ, ವಚನಗಳಿಗಿಂತ ವಿಭಿನ್ನವಾಗಿದೆ.
ಕನ್ನಡ ಭಾಷೆಯ ಮಾತನ್ನಾಡಲ್ಪಡುವ (ಆಡುಮಾತು) ಮತ್ತು ಬರೆಯಲ್ಪಡುವ (ಬರಹ) ರೂಪಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ (ಆಗುವುದು-->ಆಗುತ್ತೆ, ಆಗುವುದಿಲ್ಲ-->ಆಗಲ್ಲ, ಇತ್ಯಾದಿ). ಮಾತನ್ನಾಡುವ ಶೈಲಿ, ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳುತ್ತದೆಯಾದರೂ (ಮಂಗಳೂರು ಕನ್ನಡ, ಧಾರವಾಡ ಕನ್ನಡ ಇತ್ಯಾದಿ) ಬರವಣಿಗೆಯಲ್ಲಿ ಕರ್ನಾಟಕದಾದ್ಯಂತ ಕನ್ನಡ ಭಾಷೆ ಸರಿಸುಮಾರು ಏಕರೂಪವಾಗಿದೆ. ಸುಮಾರು ಇಪ್ಪತ್ತು ಕನ್ನಡದ ಉಪಭಾಷೆಗಳು ಗುರುತಿಸಲ್ಪಟ್ಟಿವೆ.

ಬೆಳವಣಿಗೆ

ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿತಿಂತಲೂ ಹಳೆಯದು.ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.
ಕನ್ನಡದ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಲು ಕೆಲವು ಕಾಲಮಾನಗಳನ್ನು ನಿರ್ಧರಿಸಿದ್ದಾರೆ.
  1. ಪೂರ್ವದ ಹಳಗನ್ನಡ ಅನಿಶ್ಚಿತ ಪ್ರಾರಂಭದಿಂದ ೭ನೆಯ ಶತಮಾನದವರೆಗೆ
  2. ಹಳಗನ್ನಡ ೭ ರಿಂದ ೧೨ ನೆಯ ಶತಮಾನದವರೆಗೆ
  3. ನಡುಗನ್ನಡ ೧೨ ನೇ ಶತಮಾನದ ಪ್ರಾರಂಭದಿಂದ ೧೬ನೇ ಶತಮಾನದವರೆಗೆ
  4. ಹೊಸಗನ್ನಡ ೧೬ನೆಯ ಶತಮಾನದ ಆದಿಯಿಂದ ಈಚೆಗೆ
ಕಳೆದ ಶತಮಾನದಲ್ಲಿ ಆಗಿರುವ ಅತಿವ್ಯಾಪಕವಾದ ಕನ್ನಡದ ಅಭಿವೃದ್ಧಿಯನ್ನು ಗಮನಿಸಿದರೆ ೨೦ನೆಯ ಶತಮಾನದಿಂದ ಈಚಿನ ಕಾಲವನ್ನು ಆಧುನಿಕ ಕನ್ನಡ ಎಂದು ಹೊಸ ಯುಗವಾಗಿ ಪರಿಗಣಿಸಬೇಕಾಗುತ್ತದೆ. ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯಲು ಅರ್ಹವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು ಯಥೇಚ್ಛವಾಗಿ ಉಪಯೋಗಿಸಲಾಗುತ್ತಿದೆ..

ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ

ಕುಮುದೇಂದು ಮುನಿ ರಚಿಸಿದ ಸಿರಿಭೂವಲಯ ಗ್ರಂಥದ ಆಧಾರದಿಂದ ಕನ್ನಡ ಭಾಷೆ ಗುಪ್ತಭಾಷೆಯಾಗಿದ್ದಿತು(ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದ ಕಾಲದಿಂದಲೂ ೪ ಗುಪ್ತ ಭಾಷೆಗಳಿವೆಯಂತೆ ಅದರಲ್ಲಿ ಕನ್ನಡ ಭಾಷೆಯೂ ಒಂದು ಎಂದು ಅನಿಸುತ್ತದೆ) ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಕುಮುದೇಂದು ಮುನಿಯು ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾರೆ.
  • "ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ ಬ್ರಾಹ್ಮೀಲಿಪಿ ಎಂದು ಅಂಕ ಲಿಪಿಗೆ ಸೌಂದರಿ ಲಿಪಿ ಎಂದು ಹೆಸರಾಗಿದೆ. ಈ ಖಚಿತವಾದ ಮಾಹಿತಿ ಯನ್ನು ಸಿರಿ ಭೂ ವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆಯೂ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿ ಭಾಷೆಯಾಗಿ ಬೆಳೆಯುತ್ತಿದೆ.
ಉದಾಹರಣೆಗೆ:
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂ ದೆನ್ನುವುದನು ಕಲಿಸಿದನು
ಸರ್ವಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ

ಭೌಗೋಳಿಕ ವ್ಯಾಪಕತೆ

ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಇ.) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತುಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರು ಈಚೆಗೆ ಕೆಲಸ ಹುಡುಕಿಕೊಂಡು ವಲಸೆ ಹೋದವರು. ಇ೦ದು ಕನ್ನಡವು ಮಲ್ಲಿಗೆಯ೦ತೆ ಅರಳಿ ತನ್ನ ಕ೦ಪನ್ನು ಎಲ್ಲೆಡೆಯು ವ್ಯಾಪಿಸಿದೆ.

ಅಧಿಕೃತ ಮಾನ್ಯತೆ ಮತ್ತು "ಚೆನ್ನುಡಿ"

ಕನ್ನಡದ ಬಾವುಟ
 
 
ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು. ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ. ಕರ್ನಾಟಕದಲ್ಲಿ ಕನ್ನಡಿಗರಿಗೇ ಆದ್ಯತೆ.
ಅಕ್ಟೋಬರ್ ೩೧, ೨೦೦೮ ರಂದು ಭಾರತ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನ ನೀಡಿದೆ. ಶಾಸ್ತ್ರೀಯ ಭಾಷೆಗೆ ಕನ್ನಡದಲ್ಲಿ "ಚೆನ್ನುಡಿ" ಎಂದೂ ಕರೆಯಬಹುದು.

ಕನ್ನಡ ಅಕ್ಷರಮಾಲೆ

ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಆಂಗ್ಲ (ಇಂಗ್ಲೀಷ್) ಮೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ.
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಮತ್ತು ಹಳೆಗನ್ನಡದ ಱ ಮತ್ತು ೞ - ಜೊತೆಗೆ (ಂ = ಅನುಸ್ವಾರ, ಃ = ವಿಸರ್ಗ) = ಒಟ್ಟು ೫೧.
ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼ ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೩.
ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಆಂಗ್ಲ (ಇಂಗ್ಲೀಷ್) ಮೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ.
ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರಲಿಪಿಯಿಂದ ಹಿಡಿದು ಇಂದಿನ ಮುದ್ರಣ— ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯೇ ಮೂಲ. ಶತಮಾನಗಳು ಕಳೆದ ಮೇಲೆಯೂ ಈಗ ಕನ್ನಡದ ಅಕ್ಷರಗಳು ಬ್ರಾಹ್ಮೀಲಿಪಿಯಿಂದ ಹೇಗೆ ಬೆಳೆದು ಬಂದಿವೆ ಎಂಬುದನ್ನು ಕ್ರಮವಾಗಿ ವಿವರಿಸಬಹುದು. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇದರಿಂದ ಅಕ್ಷರಗಳು ಬದಲಾದ ಸ್ವರೂಪವನ್ನು ಪಡೆದ ಕ್ರಮವನ್ನು ನಾವು ಕಣ್ಣಾರೆ ಕಾಣಬಹುದು. ಮುದ್ರಣ ಬಂದ ಮೇಲೆ ಕನ್ನಡಕ್ಕೆ ಈಗಿನ ರೂಪ ನಿಂತಿದೆ. ಪ್ರಪಂಚದಲ್ಲಿ ೧೮ ಬಗೆಯ ಲಿಪಿಗಳಿವೆ. ಇವುಗಳಲ್ಲಿ ೮ ಅಕ್ಷರ ಲಿಪಿಗಳು. ಮಿಕ್ಕವು ಚಿತ್ರಲಿಪಿ ಮುಂತಾದವು. ಭಾರತದಲ್ಲಿ ಅನೇಕ ಭಾಷೆಗಳಿಗೆ ಬ್ರಾಹ್ಮಿಲಿಪಿಯಿಂದ ಬಂದ ಅನೇಕ ಲಿಪಿಗಳೇ ಇವೆ. ಜೊತೆಗೆ ಪರ್‍ಸೋ-ಅರಾಬಿಕ್ ಲಿಪಿಗಳೂ ಇವೆ. ಉದಾ: ಉರ್ದು, ಕಾಶ್ಮೀರಿ, ಪುಷ್ಟು.
ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ಅಕ್ಷರಗಳ ಬಗ್ಗೆ ವಿದ್ವಾಂಸರಲ್ಲಿ ಬೇಕಾದಷ್ಟು ಚರ್ಚೆಯಾಗಿದೆ. ಕೊನೆಯದಾಗಿ ಈಗ ಕನ್ನಡದ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:
ವರ್ಣ ವ್ಯವಸ್ಥೆ: ಕನ್ನಡ ಭಾಷೆಯಲ್ಲಿ ಕೆಲವು ವರ್ಣಗಳು ತನ್ನ ರಚನೆಯಲ್ಲಿ (ಉಚ್ಛಾರಣೆಯಲ್ಲಿ) ಸ್ವತಂತ್ರವಾಗಿ ಉಪಯೋಗಿಸಲ್ಪಡುತ್ತವೆ. ಇವುಗಳನ್ನು ಸ್ವರಗಳೆಂದು ಕರೆಯುತ್ತೇವೆ. ಹಾಗೂ, ಸ್ವರ ಸಹಾಯದಿಂದ ಉಪಯೋಗಿಸಲ್ಪಡುವ ವರ್ಣಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.
ಸ್ವರಗಳು: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ವ್ಯಂಜನಗಳು: ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ
ಮತ್ತು ಹಳೆಗನ್ನಡದ ಱ ಮತ್ತು ೞ - ಜೊತೆಗೆ (ಂ = ಅನುಸ್ವರ, ಃ = ವಿಸರ್ಗ, ಇವುಗಳನ್ನು ಯೋಗವಾಹಕಗಳು ಎನ್ನುತ್ತಾರೆ) = ಒಟ್ಟು ೪೯. ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼ ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೧.
ಸ್ವರಗಳ ವಿಧಗಳು: ಸ್ವರಗಳನ್ನು ಅವುಗಳ ಉಚ್ಛಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.
ಹ್ರಸ್ವಸ್ವರವನ್ನು ಉಚ್ಛಾರಣೆ ಮಾಡಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ. ಉದಾಹರಣೆಗೆ: ಅ, ಇ, ಉ, ಋ, ಎ, ಒ
ದೀರ್ಘಸ್ವರಗಳ ಉಚ್ಛಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ: ಆ, ಈ, ಊ, ಏ, ಐ, ಓ, ಔ
"ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ.
"ಐ" ಮತ್ತು "ಔ"ಗಳ ಸ್ವರೂಪ: ಇವು ವಾಸ್ತವದಲ್ಲಿ ಎರಡು ಬೇರೆ ಬೇರೆ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಸುವಿಕೆಯಿಂದ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನ್ಮಿಸಿದೆ. ಈ ಎರಡು ಸ್ವರಗಳು ಇಜಾತೀಯ ಸ್ವರಗಳ ಸಂಧಿಸುವಿಕೆಯಿಂದ ಆಗಿದ್ದು, ಅವುಗಳ ದೀರ್ಘ ಸ್ವರೂಪದಿಂದಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರಿಸಲಾಗಿವೆ.
ವ್ಯಂಜನದ ವಿಧಗಳು: ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ. "ಯ್"ಕಾರದಿಂದ "ಳ್"ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ.
ಕೃಪೆ : ವಿಕಿಪೀಡಿಯ

Nov 13, 2008

ನಿನ್ನಯ ಗುರುತು - ನನ್ನ ಕವನ

ನನ್ನ ಎದೆಯಲಿ ಮೂಡಿದ ನೆನೆಪು
ನಿನ್ನ ಒಲವಿನ ಗುರುತು ಕಣೇ
ಗಗನದಿ ಮಿನುಗುವ ಚುಕ್ಕಿಯು ಕೂಡ
ನಿನ್ನ ಕಂಗಳ ಪ್ರತಿಬಿಂಬ ಕಣೇ


ಅರಳಿದ ತಾವರೆ ಎಲೆಗಳ ಮೇಲೆ
ನಾಟ್ಯವಾಡುವ ಪುಟ್ಟ ಇಬ್ಬನಿಯೇ
ದುಂಬಿಯ ರಂಜಿಸಿ ಗಮಗಮ ಎನ್ನುವ
ಹೂವಿನ ಪರಿಮಳ ಮಕರಂದವು ನೀ


ನಿನ್ನ ಹೃದಯದಿ ನೆಲೆಸಿರುವ
ನನ್ನ ಮನಸ್ಸನ್ನು ನಾ ಕಂಡೆ ಕಣೇ
-ಮಾ.ಕೃ.ಮಂಜು

Nov 1, 2008

ಕನಸು - ನನ್ನ ಕವನ

ಕನಸು
ಕನಸಲ್ಲಿ ಬರುವವಳು
ಸದಾ ನನ್ನ ಕಾಡುತಿಹಳು
ಪ್ರೀತಿಯ ಕೊಟ್ಟವಳು
ಹೃದಯದಿ ನೆಲೆಸಿಹಳು
*********************
ನನ್ನವಳು ನನಗೆಲ್ಲಾ
ಪ್ರೀತಿಯ ತೊರೆದಿಲ್ಲ
ನೆನಪನ್ನು ಮರೆತಿಲ್ಲ
ಕನಸ್ಸಾಗಿ ಉಳಿದಳಲ್ಲ
**********************
ನನ್ನ ಮೇಲೆ ತೋರದಿರು ಕೋಪ
ಸಹಿಸಲಾರೇ ಅದರ ತಾಪ
ಬಿಟ್ಟುಬಿಡು ಈ ನಿನ್ನ ಮುಂಗೋಪ
ಮಾಡುತ್ತಿರುವೇ ಸದಾ ನಿನ್ನದೇ ಜಪ
**ಮಾ.ಕೃ.ಮಂಜು**

Oct 22, 2008

ಅಳಿಯದ ನೆನಪು - ನನ್ನ ಕವನ

ಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು


ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ
ನನ್ನ ಮನಸ್ಸ ನೀ ಮರೆತಿರುವೆ

ಗುಡುಗು ಸಿಡಿಲು ಬಂದರೂ ಸರಿಯೇ
ನಿನ್ನ ನೆನಪು ಅಳಿಯುವುದೇ?
ಲೋಕದ ಸೃಷ್ಟಿಗೆ ದೇವರ ಕೃಪೆಯು
ನನ್ನ ಕವನಕ್ಕೆ ನೀ ಸ್ಪೂರ್ತಿಯು
-ಮಾಕೃಮ

Oct 16, 2008

ಭಾವನೆಯ ಹಕ್ಕಿ - ನನ್ನ ಕವನ

ಭಾವನೆಯ ಹಕ್ಕಿ
ಭಾವನೆಯ ಹಕ್ಕಿಯು ಹಾಡುತ್ತಿದೆ
ಮನಸ್ಸಿನ ಮಾತನು ಹೇಳುತ್ತಿದೆ
ಬದುಕಿನ ಸುಂದರ ಪುಟಗಳಲ್ಲಿ
ಕನಸ್ಸಿನ ಸಾವಿರ ಪುಟಗಳನು

ಕಲ್ಲು - ಮುಳ್ಳಿನ ಬಾಳಿಗೆ
ಪ್ರೀತಿ ಮಮತೆಯ ಆಶ್ರಯವು
ನೋವು ನಲಿವುಗಳ ಬಡಿತಕೆ
ತಾಳ್ಮೆ ಬಾಳಿನ ಜೊತೆಗೆರಲಿ

ಮನಸಿನ ದುಃಖವ ನುಂಗಿ
ನಗುವಿನ ದೀಪವ ಹಚ್ಚಿದೆ
ಯಾರು ಕಾಣದ ಅಂತರಂಗದಿ
ಮೌನದ ಮಾತುಗಳು ಹೊರಡುತ್ತಿವೆ
-ಮಾಕೃಮ-

ಹೆಣ್ಣು - ನನ್ನ ಕವನ

ಹೆಣ್ಣಿನ ಮಾಯಾ ಮೋಹಕ್ಕೆ
ಸಿಲುಕದವರಿಲ್ಲ ಜಗತ್ತಿನಲ್ಲಿ
ಆದಿಯ ಸೃಷ್ಟಿಕರ್ತಳು ಇವಳು
ಅಂತ್ಯದ ರೂವಾರಿಯು ಆಗಬಲ್ಲಳು

ರಾಜ ಮಹಾರಾಜರು ಇವಳಿಗಾಗಿ
ಹರಿಸಿದರು ರಕ್ತದ ಕೋಡಿ
ಆದರೂ ಯಾರಿಗೂ ತಿಳಿಯುತ್ತಿಲ್ಲ
ಇವಳ ಮನಸ್ಸಿನ ಮರ್ಮದ ಮೋಡಿ

ರಾಜ್ಯ ಕಟ್ಟಲು ಇವಳೇ ಸ್ಪೂರ್ತಿ
ರಾಜ್ಯ ನಿರ್ನಾಮಕ್ಕೂ ಇವಳೇ ಕುತಂತ್ರಿ
ಏನೇ ಇದ್ದರೂ ಬದುಕಿನಲ್ಲಿ
ಇವಳದೇ ಕಾರುಬಾರು.
-ಮಾಕೃಮ-

ಅಮೃತ ಮುತ್ತು - ನನ್ನ ಕವನ




ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ

ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ

ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು
-ಮಾ.ಕೃ.ಮ*

Oct 5, 2008

ಅನಾಥ ಮಗುವಾದೆ ನಾನು - ಹೊಸ ಜೀವನ


ನನ್ನನ್ನು ಸದಾ ಕಾಡುತ್ತಿರುವ ಗೀತೆ.

[ಹೆಣ್ಣು]ಉಳ್. ಳ್ ಳ್ ಳ್... ಆಯಿ ಆಯಿ.....
ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ.....
[ಗಂಡು]ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಕೇಳೋ ದೇವನೇ ೧
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಹೇಳೋ ದೇವನೇ ೨
ಸಾಹಿತ್ಯ ಮತ್ತು ಸಂಗೀತ : ಹಂಸಲೇಖಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್

Sep 26, 2008

ನನ್ನ ಹಳ್ಳಿ - ನನ್ನ ಕವನ


ನನ್ನ ಹಳ್ಳಿ
ಹಳ್ಳಿಯ ಸೌಂದರ್ಯ ಸೊಬಗು
ಹಚ್ಚ ಹಸಿರಿನ ಕಾಂತಿಯ ಮೆರಗು
ದಟ್ಟವಾದ ಮರಗಳ ಸಾಲು
ಪ್ರಕೃತಿಯ ಉಳಿವಿಗೆ ಇದರ ಸವಾಲು

ತಣ್ಣನೆಯ ಗಾಳಿಯ ತಂಪು
ಸೊಗಸಾದ ಹಕ್ಕಿಯ ಧ್ವನಿಯ ಇಂಪು
ಸತ್ಯ ನಿಷ್ಟತೆಗೆ ಹೆಸರಾದ ಜನ
ಮೋಸವರಿಯದ ಮುಗ್ಧ ಜನ

ಅಜ್ಜಿಯು ಹೇಳುವ ಚೆಂದದ ಕಥೆ
ಮಾಸಿಹೋದ ನೆನಪುಗಳ ವ್ಯಥೆ
ಜನರಾಡುವ ಕಸ್ತೂರಿ ಕನ್ನಡ
ಕೇಳಲು ನಿಂತರೆ ಮಹಾದಾನಂದ

ಉಳಿದಿದೆ ಸಂಸ್ಕೃತಿಯ ಬೇರು
ಸರ್ವರೂ ಒಂದಾಗಿ ಬಾಳುವ ಊರು
ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ
ಸೌಂದರ್ಯ ಸಾರುವ ಶಾಂತಿಧಾಮದಲಿ
-* ಮಾ.ಕೃ.ಮ*

Sep 19, 2008

ಪ್ರಶೋತ್ತರ ಭಾಗ ೨

೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು?
ಉತ್ತರ : ದುರ್ವಿನೀತ

೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ?
ಉತ್ತರ : ಸಂಸ್ಕಾರ

೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು?
ಉತ್ತರ : ಸದ್ಧರ್ಮ ವಿಜಯ

೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸ ಮತ್ತು ಪದ್ಯಗಳೆಷ್ಟು?
ಉತ್ತರ : ೧೪ ಆಶ್ವಾಸ - ೧೬೦೯ ಪದ್ಯ

೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು?
ಉತ್ತರ : ವಿನೋಭಾ ಭಾವೆ

೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ?
ಉತ್ತರ : ಅಚ್ಛೋದ ಸರೋವರ

೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
ಉತ್ತರ : ದ್ವೈತ

೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು?]
ಉತ್ತರ : ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು?
ಉತ್ತರ : ಹಯವದನ

೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು?
ಉತ್ತರ : ಶ್ರೀರಂಗವಿಠಲ

Sep 18, 2008

ಓ ನನ್ನ ಜೀವವೇ -ನನ್ನ ಕವನ


ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ

ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ

ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು

ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ

ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*

ಪ್ರಶೋತ್ತರ ಭಾಗ ೧

೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು?
ಉತ್ತರ : ಬೀchi

೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು?
ಉತ್ತರ : ವಿ. ಸೀತಾರಾಮಯ್ಯ

೩. "ಜಾನಪದ ಲೋಕ" ಎಲ್ಲಿದೆ?
ಉತ್ತರ : ರಾಮನಗರ ಬಳಿಯಿದೆ

೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ?
ಉತ್ತರ :ಪಂಜೆ ಮಂಗೇಶರಾವ್

೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು?
ಉತ್ತರ: ಬಾಳಪ್ಪ ಹುಕ್ಕೇರಿ
೬. ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು?
ಉತ್ತರ: ಜಯದೇವಿತಾಯಿ ಲಿಗಾಡೆ

೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ?
ಉತ್ತರ : ವಿದ್ಯಾರಣ್ಯರು

೮. "ಕನ್ನಡ" ಎಂಬ ಹೆಸರಿನ ಊರು ಎಲ್ಲಿದೆ?
ಉತ್ತರ : ಮಹಾರಾಷ್ಟ್ರದಲ್ಲಿದೆ

೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು?
ಉತ್ತರ : ಸುಬ್ಬಯ್ಯ ನಾಯ್ಡು

೧೦. ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಊರಿನಲ್ಲಿ ನಡೆಯಿತು?
ಉತ್ತರ : ತುಮಕೂರು

Aug 15, 2008

MAKRUMANJU

WELCOME TO MAKRUMANJU.BLOGSPOT.COM
 
 
 
 
             (ಮಾಕಳಿ)
 

MAKRUMANJU @GMAIL.COM

Apr 10, 2008

ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರು -ಕನ್ನಡಕ್ಕೆ ಕೀರ್ತಿ ತಂದವರು

 
ಕುವೆಂಪು-1968 ಶ್ರೀ ರಾಮಾಯಣ ದರುಶನಂ

 
ದ.ರಾ.ಬೇಂದ್ರೆ-1974 ನಾಕುತಂತಿ

 
ಡಾ.ಶಿವರಾಮ ಕಾರಂತ-1978 ಮೂಕಜ್ಜಿಯ ಕನಸುಗಳು

 
ಮಾಸ್ತಿ ವೆಂಕಟೇಶ ಅಯ್ಯಂಗಾರ್ 1983 ಚಿಕವೀರರಾಜೇಂದ್ರ

 
ಡಾ.ಗೋಕಾಕ್ 1991 ಭಾರತ ಸಿಂಧುರಶ್ಮಿ

 
ಯು.ಆರ್. ಅನಂತಮೊರ್ತಿ 1994 ಸಮಗ್ರ ಸಾಹಿತ್ಯ
 
ಗಿರೀಶ್  ಕಾರ್ನಾಡ್ 1998 ಸಮಗ್ರ ಸಾಹಿತ್ಯ

Mar 12, 2008

ಕನ್ನಡ ನಾಡಿನ ಇತಿಹಾಸ

ಕರ್ನಾಟಕದ ಇತಿಹಾಸದ ದಾಖಲೆ ೨ ಸಾವಿರವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ.

ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಳಲ್ಲೂ ಕಂಡುಬರುತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯ ಗಳೆಂದು ಕರೆದುಕೊಳ್ಳುತಿದ್ದರು,ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದಮೇಲೆ ರಾಜ್ಯ ಅಳುತಿದ್ದರು ಅವರು ಕೂಡ ತಮ್ಮನು ತಾವುಕರ್ನಾಟ ವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು. ಮದ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒರಿಸ್ಸಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು, ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.



ಇತಿಹಾಸ-ಪೂರ್ವ
ಕರ್ನಾಟಕದ ಇತಿಹಾಸ ಪೂರ್ವದ ವಿಸ್ತಾರವಾದ ಅಧ್ಯಯನ ಮಾಡಿದ ಹೆಗ್ಗಳಿಕೆ ರೋಬೇರ್ತ್ ಬ್ರೂಸ್-ಫೂಟೇ ಅವರದು, ಇವರ ಈ ಕಾರ್ಯವನ್ನು ನಂತರ ಬೇರೆ ವಿದ್ವಾಂಸರು ಮುಂದುವರಿಸಿದರು. ಕರ್ನಾಟಕ (ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ) ಇತಿಹಾಸ ಪೂರ್ವ ಸಂಸ್ಕೃತಿಯನ್ನು ಕೈ-ಕೊಡಲಿ(hand-axe) ಸಂಸ್ಕೃತಿಯೆಂದು ಕರೆಯಲಾಗುತದ್ದೆ, ಉತ್ತರ ಭಾರತದ ಸಂಸ್ಕೃತಿಯನ್ನು ಸೋಹನ್ ಸಂಸ್ಕೃತಿಯೆನ್ನಲಾಗುತದೆ.. ಪೂರ್ವಶಿಲಾಯುಗದ ಬೆಣಚಿಯ ಉರುಳುಗಲ್ಲು ಆಕಾರದ ಕೈ ಕೊಡಲಿ ಹಾಗು ತಡಕತ್ತಿ ಚಿಕ್ಕಮಗಳೂರುನ ಲಿಂಗದಹಳ್ಳಿ ಹಾಗು ಗುಲ್ಬರ್ಗದ ಹುಣಸಿಗಿ ಯಲ್ಲಿ ಕೊಂಡುಬಂದಿದೆ, ಹಾಗು ತುಮಕೂರಿನ ಕಿಬ್ಬನಹಳ್ಳಿಯಲ್ಲಿ ಮರದ ಕತ್ತಿ ಸಿಕ್ಕಿರುವುದು ಹಳೆ ಕಲ್ಲು ಯುಗದ ಸಾಮಗ್ರಿಯ ಉದಾಹರಣೆಗಳು. ರಾಯಚೂರಿನ ಲಿಂಗಸೂಗೂರಿನಲ್ಲಿ ನುಣುಪಾದ ಕಲ್ಲು ಕೊಡಲಿ ಸಿಕ್ಕಿರುವ ವರದಿ ಕೂಡ ಬಂದಿದೆ. ಹೊಸ ಶಿಲಾಯುಗದ ಉದಾಹರಣೆ.  ರಾಯಚೂರು ಜಿಲ್ಲೆಯ ಮಸ್ಕಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮುಂತಾದವು, ಮನುಷ್ಯ ಪ್ರಾಣಿಗಳನ್ನು (ಹಸು, ನಾಯಿ ಹಾಗು ಕುರಿ) ಪಳಗಿಸಲು ಆರಂಬಿಸಿರುವ ಹಾಗು ತಾಮ್ರದ ಹಾಗು ಕಂಚಿನ ಆಯುಧಗಳನ್ನು ಬಳಸಿರುವ ಮತ್ತು ಬಳೆ, ಉಂಗುರ, ಮಣಿಗಳ ಸರ ಹಾಗು ಕಿವಿ ಓಲೆ ಧರಿಸಿರುವದಕ್ಕೆ ಹಲವು ಪುರಾವೆಗಳು ಸಿಕ್ಕಿವೆ ಮತ್ತು ಸಮಾಧಿಗಳು ಕೂಡ ಕಂಡುಬಂದಿವೆ. ನವಶಿಲಾಯುಗ ಯುಗ ಕೊನೆಯಲ್ಲಿ, ಬೃಹತ್ ಶಿಲೆಯಯುಗದಲ್ಲಿ, ಕರ್ನಾಟಕದಲ್ಲಿ ಜನರು ಕಬ್ಬಿಣದ ಅಯುಧಗಳನ್ನು ದೊಡ್ಡ ಖಡ್ಗಗಳು, ಕುಡುಗೋಲು, ಕೊಡಲಿ, ಸುತ್ತಿಗೆ, ತೆನೆ, ಉಳಿ ಹಾಗು ಬಾಣಗಳನ್ನು ಉಪಯೋಗಿಸಲು ಆರಂಬಿಸಿದರು.
ಪಾಂಡಿತ್ಯಪೂರ್ಣ ಸಿದ್ಧಾಂತ ಊಹೆಪ್ರಕಾರ ೩೦೦೦ ಕ್ರಿ.ಪೂ ದಲ್ಲೇ ಹರಪ್ಪದ ಸಿಂಧೂ ಕಣಿವೆ ನಗರಗಳು ಹಾಗು ಲೋಥಾಲ್ನ ನಡುವೆ ಸಂಪರ್ಕ ಇರುವುದಾಗಿ ಹಾಗು ಇದಕ್ಕೆ ಪುರಾವೆ ಹರಪ್ಪದ ತಾಣಗಳಲ್ಲಿ ಸಿಕ್ಕಿರುವ ಬಂಗಾರ ಕರ್ನಾಟಕದ ಗಣಿಗಳಿಂದ ತರಿಸಲ್ಪಟ್ಟಿತು ಎನ್ನಲಾಗುತ್ತದೆ.

ಆಧುನಿಕ ಕರ್ನಾಟಕದಲ್ಲಿ ನವಶಿಲಾಯುಗ ವಸತಿಯಿದ್ದ ಹಾಗು ಕ್ರಿ.ಪೂ ೨ನೆಯ ಶತಮಾನದ ಪ್ರಾಚೀನ ಕಾಲದ ಕಲ್ಲಿನ ಅಥವಾ ಲೋಹದ ಆಯುಧಗಳನ್ನೂ ಮೊದಲಿಗೆ ೧೮೭೨ರಲ್ಲಿ ಶೋಧಿಸಲಾಯಿತು. ವರದಿಗಳ ಪ್ರಕಾರ ಕಲ್ಲು ಕೊಡಲಿಯನ್ನು ರೈಚುರು ಜಿಲ್ಲೆಯಾ ಲಿಂಗ್ಸುಗುರ್ನಲ್ಲಿ ಸಿಕಿವೆ; ಆದರೆ ಇ ವರದಿಯನ್ನು ಕಚಿತ ಪಡಿಸಲು ಇನ್ನು ಆಗಿಲ.ಬೃಹತ್ ಶಿಲೆಯ ರಚನೆಗಳು ಹಾಗು ಸಮಾದಿಗಳನ್ನೂ ೧೮೬೨ರಲ್ಲಿ ಕೊಡಗು ಹಾಗು ಮೂರೆಯ್ ಬೆಟ್ಟದಲ್ಲಿ ಶೋದಿಸಲಾಗಿದೆ, ಆಗೆಯೇನವಶಿಲಾಯುಗದ ತಾಣಗಳು ಉತ್ತರ ಕರ್ನಾಟಕದಲ್ಲಿ ಸಿಕ್ಕಿವೆ.

ಸೋಮನಾಥಪುರ
ಆರಂಭಿಕ ಇತಿಹಾಸ

    ಮುಖ್ಯ ಲೇಖನಗಳು: ಶಾತವಾಹನರು ಮತ್ತು ಕದಂಬರು

ವರ್ತುಲವಾಗಿ ಕ್ರಿ.ಪೂ ೨೩೦ ರಲ್ಲಿ , ಶಾತವಾಹನ ರಾಜಮನೆತನಅಧಿಕಾರಕ್ಕೆ ಬಂದರುಹಾಗು ಅವರ ಆಳ್ವಿಕೆ ಸರಿ ಸುಮಾರು ನಾಲ್ಕು ಶತಮಗಳವರೆಗೆ ನಡೆಯಿತು,೩ನೆಯ ಶತಮಾನದವರಗೆ. ಶಾತವಾಹನ ರಾಜಮನೆತನದ ವಿಯೋಜನೆ ಇಂದಾಗಿ ಮೊಟ್ಟ ಮೊದಲ ಸ್ಥಳೀಯ ಸಾಮ್ರಾಜ್ಯ ಬನವಾಸಿಯ ಕದಂಬ ರಾಜಮನೆತನದ ಆಧುನಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆದೋರಿತು, ಇದರ ಸ್ಥಾಪಕ ಇಂದಿನ ಶಿವಮೊಗ್ಗ ಜಿಲ್ಲೆಯಾ ತಾಳಗುಂದದ ಸ್ಥಳೀಯ ಬ್ರಾಹ್ಮಣ ಮಯೂರಶರ್ಮ,  ಹಾಗು ಪಶ್ಚಿಮ ಗಂಗಾ ರಾಜಮನೆತನ ದಕ್ಷಿಣ ಕರ್ನಾಟಕದಲ್ಲಿ ತನ್ನ ರಾಜ್ಯವು ಆರಂಬವಾಯಿತು ,ಈ ಘಟನೆಗಳು ಇಲ್ಲಿಯ ಪ್ರದೇಶ ಸ್ವಾಧಿಪತ್ಯದ ರಾಜಕೀಯದ ಅಸ್ತಿತ್ವಕ್ಕೆ ನಾಂದಿ ಹಾಡಿದವು. ಇವುಗಳು ಕನ್ನಡ ಭಾಷೆಗೆ ಆಡಳಿತ ದರ್ಜೆ ಕೊಟ್ಟ ಮೊದಲ ಸಾಮ್ರಾಜ್ಯಗಳು, ಇದಕ್ಕೆ ಪುರಾವೆಯಾಗಿ ೪೫೦ರ ಹಲ್ಮಿಡಿ ಬರೆಹಗಳಿವೆ, ಇದನ್ನು ಕದಂಬ ರಾಜಮನೆತನದ ರಾಜ ಕಾಕುಸ್ಥವರ್ಮನಗೆ ಸಮರ್ಪಿಸಲಾಗಿದೆ . ಅಗೆಯೇ, ಇತೀಚೆಗೆ ೫ನೆಯ ಶತಮಾನದ ತಾಮ್ರದ ನಾಣ್ಯ ಕದಂಬರ ರಾಜಧಾನಿ ಬನವಾಸಿಯಲ್ಲಿ ಸಿಕ್ಕಿವೆ, ಇದರಮೆಲ್ಲೇ ಕನ್ನಡ ಲಿಪಿ ಬರಹ ಇದೆ, ಇದು ಕನ್ನಡ ಭಾಷೆ ಆಡಳಿತವಾಗಿ ಬಲಿಸುತಿದಕ್ಕೆ ಪುರಾವೆಯಾಗಿವೆ. ಮಧ್ಯಯುಗದ ಇತಿಹಾಸ

ಮಧ್ಯಯುಗದ ಇತಿಹಾಸ

ಮುಖ್ಯ ಲೇಖನಗಳು: ಚಾಲುಕ್ಯರು, ರಾಷ್ಟ್ರಕೂಟರು, ಪಶ್ಚಿಮ ಚಾಲುಕ್ಯರು, ಹೊಯ್ಸಳ, ಪಶ್ಚಿಮ ಗಂಗರು, ಮತ್ತು ವಿಜಯನಗರ ಸಾಮ್ರಾಜ್ಯ

ನಂತರ ದೊಡ್ಡ ಸಾರ್ವಭೌಮ ಸಾಮ್ರಾಜ್ಯಗಳು ಆಳ್ವಿಕೆ ಮಾಡಿದವು, ಇದರಲ್ಲಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ರಾಜಮನೆತನ ಹಾಗು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯಸೇರಿವೆ, ಇವುಗಳ ವೈಭವದಿಂದ ಕೂಡಿದ ರಾಜಧಾನಿಗಳು ಆಧುನಿಕ ಕರ್ನಾಟಕ ಪ್ರದೇಶದಲ್ಲಿವೆ ಹಾಗು ಇವರು ಕನ್ನಡ ಭಾಷೆ ಹಾಗು ಸಾಹಿತ್ಯವನ್ನು ಪೋಷಿಸಿದರು.

ಕರ್ನಾಟಕದ ಮಲೆನಾಡುವಿನ ಸ್ಥಲಿಯರಾದ, ಹೊಯ್ಸಳರು ಹೊಯ್ಸಳ ಸಾಮ್ರಾಜ್ಯವನ್ನು ಸಹಸ್ರವರ್ಷದ ತಿರುವಿನಲ್ಲಿ ಸ್ತಾಪಿಸಿದರು. ಈ ಸಮಯದಲ್ಲಿ ಈ ಸ್ಥಳದಲ್ಲಿ ಕಲೆ ಹಾಗು ವಾಸ್ತುಕಲೆ ಪ್ರವರ್ಧಮಾನಕ್ಕೆ ಬಂದವು, ಇದರಿಂದಾಗಿ ಪ್ರತ್ಯೇಕವಾದ ಕನ್ನಡ ಸಾಯಿತ್ಯ ನಾಂದಿ ಹಾಡಿತು ಹಾಗು ವಿಶಿಷ್ಟವಾದ ವೇಸರ ಕನುಗುಣವಾದ ದೇವಸ್ತನಗಳು ವಿನ್ಯಾಸಗಳು ಕಟ್ಟಲ್ಪಟವು.ಹೊಯ್ಸಳ ಸಾಮ್ರಾಜ್ಯದ ವಿಸ್ತರಣದಿಂದಾಗಿ ಅಧುನಿಕ ಆಂಧ್ರಪ್ರದೇಶ ಹಾಗು ತಮಿಳು ನಾಡು ಹಲವು ಬಾಗಗಳು ಆವರ ಆಳ್ವಿಕೆಯಲ್ಲಿ ಬಂದವು.

೧೪ನೆಯ ಶತಮಾನ ಆರಂಭಿಕ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯ ಅದರ ರಾಜಧಾನಿ ಹೊಸಪಟ್ಟಣ (ನಂತರ ವಿಜಯನಗರಎಂದು ಕರೆಯಲ್ಪಟ್ಟ) ದಕ್ಷಿಣದಲ್ಲಿ ಮುಸ್ಲಿಮ ಆಕ್ರಮಣ ಎಶಸ್ವಿಯಾಗಿ ಸದೆಬಡೆದರು. ಈ ಸಾಮ್ರಾಜ್ಯದ ಸ್ತಾಪಕರು ಹರಿಹರ ಹಾಗು ಬುಕ್ಕ ರಾಯ ಇವರನ್ನು ಹಲವು ಚರಿತ್ರಕಾರರು ಕೊನೆಯ ಹೊಯ್ಸಳ ರಾಜನ ವೀರ ಬಲ್ಲಾಳ ೩ ಸೇನಾಧಿಪತಿಗಳು ಎನ್ನುತಾರೆ ಹಾಗು ಇ ಸಾಮ್ರಾಜ್ಯ ಎರಡು ಶತಮಾನಗಳಿಗಿಂತ ಎಚ್ಚು ಸಮಯ ಸಂರಾಯ ಆಳಿದರು. ಬೀದರ್ನ ಬಹಮನಿ ಸುಲ್ತಾನರು,ವಿಜಯನಗರ ಸಾಮ್ರಾಜ್ಯದ ಮುಕ್ಯ ಶತ್ರುಗಲಾಗಿದರು ಆಗು ವಿಜನತರ ಸಾಮ್ರಾಜ್ಯ ಬಿದ್ದ ನಂತರ ಅವರು ಮುಖ್ಯ ಸ್ತಾನ ಗಳಿಸಿದರು, ಬಿಜಾಪುರದ ಸುಲ್ತಾನರು ದಕ್ಷಿಣ ಭಾರತದ ಆಳ್ವಿಕೆಗೆ ಹೊಡೆದಾಡಲು ಆರಂಬಿಸಿದರು. ಸುಲ್ತನಗಳ ಮೈತ್ರಿಯಾ ವಿರುಧ ೧೫೬೫ನಲ್ಲಿ ತಾಳಿಕೋಟ ಯುದದಲ್ಲಿ ವಿಜಯನಗರ ಸಾಮ್ರಾಜ್ಯದ ಸೋಲು ಹಾಗು ವಿಯೋಜನೆದ ನಂತರ, ಬಿಜಾಪುರ ಸುಲ್ತಾನರು ಮುಕ್ಯ ಶಕ್ತಿಯಾಗಿ ಹೊಮ್ಮಿದರು ಕೊನೆಗೆ ಅವರು ಮೊಗುಲ್ ಸಾಮ್ರಾಜ್ಯಕ್ಕೆ ೧೭ನೆಯ ಶತಮದಲ್ಲಿ ಸೋತರು. ಬಹಮನಿ ಹಾಗು ಬಿಜಾಪುರ ಆಡಳಿತಗಾರರು ಉರ್ದು ಹಾಗು ಪೆರ್ಸಿಯನ್ ಸಾಯಿತ್ಯ ಹಾಗು ಭಾರತೀಯ ಹಾಗು ಅರೆಬ್ಬಿಯವನು ಯಾ ಮುಸಲ್ಮಾನರ ವಾಸ್ತುಶಾಸ್ತ್ರಕ್ಕೆ ಪ್ರೋತ್ಸಾಹಿಸಿದರು, ಗೋಲ್ ಗುಂಬಜ್ ಇದರ ಒಂದು ಮುಖ್ಯ ಕೊಡುಗೆ.

ಆಧುನಿಕ ಇತಿಹಾಸ

ಒಡೆಯರ್ ಮತ್ತು ಟಿಪ್ಪು ಸುಲ್ತಾನ,  
ಮೈಸೂರು ಅರಮನೆ

ಮೈಸೂರಿನ ಒಡೆಯರ್ಗಳು, ಹಿಂದಿನ ವಿಜಯನಗರ ಸಾಮ್ರಾಜ್ಯದ ಹಿಡುವಳಿದಾರರು, ರಾಜ್ಯವನ್ನು ಮುಘಲ್ ರಾಜ ಔರಂಗಜೇಬ್‌ಇನಿಂದ ೧೫ನೆಯ ಶತಮಾನದಲ್ಲಿ ಗುತ್ತಿಗೆ ಪಡೆದರು. ಇಮ್ಮಡಿ ಕೃಷ್ಣರಾಜ ಒಡೆಯರ್ರ ಮರಣದ ನಂತರ , ಹೈದೆರ್ ಅಲಿ, ಮೈಸೂರು ಸೇನೆಯಾ ಮಹಾದಂಡ ನಾಯಕ, ಪ್ರಾಂತಡ ಅಧಿಕಾರವನ್ನು ವಹಿಸಿಕೊಂಡ, ಹೈದೆರ್ ಅಲಿಯಾ ಮರಣದ ನಂತರ ಆಳ್ವಿಕೆ ಅವನ ಪುತ್ರ ಟೀಪು ಸುಲ್ತಾನ್ಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಕ್ಯತವಾದ ಟೀಪು ಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪೆಯನ್ ವಿಸ್ತರಣೆ ತಡೆಗಟಲು , ನಾಲ್ಕು ಯುದಗಳನ್ನು ಮಾಡಿದ ಅಂಗ್ಲೋ-ಮೈಸೂರು ಯುಧಗಳು, ಕೊನೆಯದರಲ್ಲಿ ಅವನು ಮರಣವನೋಪ್ಪಿದ ಹಾಗು ಮೈಸೂರು ರಾಜ್ಯ ಬ್ರಿಟಿಶ್ ರಾಜ್ಕ್ಕೆ ಏಕೀಕರಣವಾಯಿತು.
 ಕರ್ನಾಟಕ ಏಕೀಕರಣ

    ಕರ್ನಾಟಕದ ಏಕೀಕರಣ

ಸ್ವಾತಂತ್ರದ ನಂತರ, ಒಡೆಯರ್ ಮಹಾರಾಜ ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ರಲ್ಲಿ , ಮೈಸೂರು ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೭೫ರ ವರಗೆ ಅದರ ರಾಜಪ್ರಮುಖ , ಅಥವಾ ರಾಜ್ಯಪಾಲರಾದರು. ''ಏಕೀಕರಣ'' ಚಳುವಳಿ ೧೯ನೆಯ ಶತಮಾನಡ ಎರಡನೇ ಭಾಗದಲ್ಲಿ ಶುರ್ವಾಗಿ ೧೯೫೬ ರಾಜ್ಯ ಪುನಸ್ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು, ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ೧೯೭೩ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಮೈಸೂರು ರಾಜ್ಯವನ್ನು ನವೆಂಬರ್ ೧, ೧೯೫೬ರಲ್ಲಿ ರಚನೆಯಾಯಿತು ಅಂದಿನಿಂದ ನವೆಂಬರ್ ೧ ನ್ನು ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.