Feb 24, 2016

ಕಾಣದ ಕಡಲಿಗೆ

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….ಮನಾ.......

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ, ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಸಾವಿರ ಹೊಳೆಗಳು ತುಂಬಿ ಹರಿದರೂ, ಒಂದೇ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ, ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ, ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ,........  ಅಪಾರವಂತೆ..........
ಕಾಣಬಲ್ಲೆನೆ ಒಂದು ದಿನ, ಅದರೊಳು ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ…. 

ಜಟಿಲ ಕಾನನದ ಕುಟಿಲ ಪಥಗಳಲಿ, ಹರಿವ ತೊರೆಯು ನಾನು
ಎಂದಿಗಾದರು.... ಎಂದಿಗಾದರು.... ಎಂದಿಗಾದರು....
ಕಾಣದ ಕಡಲನು, ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ, ಹರಿವ ತೊರೆಯು ನಾನು
ಎಂದಿಗಾದರು....,ಕಾಣದ ಕಡಲನು ಸೇರಬಲ್ಲೆನಾನು
ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೇ ನಾನು
ಕರಗಬಹುದೇ ನಾನು......... ಕರಗಬಹುದೇ ನಾನು...... 

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್.