Jan 13, 2016

ಉಚಿತವೇ ಅಪಾಯ

ದಂಪತಿಗಳ ಹೆಸರಿಗೆ ಒಂದು ಲಕೋಟೆ ಅಂಚೆ ಮೂಲಕ ಬಂತ್ತು. ಲಕೋಟೆ ಒಡೆದು ನೋಡಿದಾಗ ಪತ್ರದಲಿ ನಿಮಗೆ ನಾಳೆ ಬಿಡುಗಡೆಯಾಗುವ ಖ್ಯಾತ.ತಾರೆಯರ ಚಿತ್ರವನು ಮಲ್ಚಿಪ್ಲೇಕ್ಸನಲಿ  ವಿಕ್ಷಸಲು ಎರಡು ಗೋಲ್ಡ ಟೀಕೆಟ್ ಉಚಿತವಾಗಿ ಕೊಟ್ಟಿದೆ, ನಾವು ಯಾರು ಎಂದು ಊಹೆ ಮಾಡಿ ಹೇಳಿ ಎಂದಿತ್ತು.

ದಂಪತಿಯರು ಎಷ್ಟು ಯೋಚನೆ ಮಾಡಿದರು ಯಾರು ಎಂದು ತಿಳಿಯಲಿಲ.  ಆದರೆ ಉಚಿತವಾಗಿ ಬಂದದನ್ನು ವ್ಯರ್ಥ ಮಾಡಬಾರದೆಂದು ಸಿನೆಮಾ ನೋಡಲು ಹೋದರು.

ಸಿನೆಮಾ ನೋಡಿ ಖುಷಿಯಾಗಿ ಬಂದ ದಂಪತಿಗಳಿಗೆ ಆಘಾತವಾಯಿತು, ಕಾರಣ ಅವರ ಮನೆ ಬೀಗ ಮುರಿದು ಹಣ, ಒಡವೆ, ವಸ್ತುಗಳನ್ನೆಲಾ ಕಳ್ಳರು ದೋಚಿಕೊಂಡು ಹೋಗಿದರು. ಮನೆಯಲಿ ಮತ್ತೂಂದು ಪತ್ರ  ಇಟ್ಟುಹೋಗಿದರು-  ಈಗ ನಿಮಗೆ ಉಚಿತವಾಗಿ ಟಿಕೇಟುಕೊಟ್ಟವರು ಯಾರೆಂದು ಗೂತಾಗಿ ಬೈಯುತೀರಿ ಎಂದು ಬರೆದಿತ್ತು.

ದಂಪತಿಗಳಬ್ಬರು ಅಯ್ಯೋ ಪಾಪಿ ಮುಂಡೆ ಮಕ್ಕಳೆ ನಮಗೆ ಮೋಸ ಮಾಡಿ ನಮ್ಮನು ಹಾಳು ಮಾಡಿರುವಿರಿ  ನೀವು ನಾಶ ವಾಗಿ ಎಂದು ಶಾಪ ಹಾಕುತ ಅಳುತ್ತಾ ಕೂತರು.

ನೀತಿಪಾಠ:-

ರಾಜಕೀಯ ಪಕ್ಷದವರು ನಿಮ್ಮ ಓಟಿಗಾಗಿ ಯಾವುದನ್ನೆ ಉಚಿತವಾಗ ಕೊಟ್ಟರು ಅದಕ್ಕೆ ನೊರರಷ್ಟು ನಿಮ್ಮಿಂದ ದೋಚುತ್ತಾರೆ. ಉಚಿತವಾಗಿ ಪ್ರಪಂಚದಲಿ ಏನು ಸಿಗುವುದಿಲ.ಗಾಳಿಯೊಂದು ಬಿಟ್ಟು ಅದಕ್ಕೂ ಸಹ ಹೆಚ್ಚು ಮರಬೆಳಸಬೇಕು.  ಇನ್ನು ಮುಂದೆ ಯಾರು ಏನೇ ಉಚಿತವಾಗಿ ಕೊಡಲು ಬಂದರೆ ಯೋಚಿಸಿ.