ನುಡಿ ತಂತ್ರಾಂಶ 5.0 (KANNADA NUDI 5.0)
ನುಡಿ 5.0 ನೂತನ ಆವೃತ್ತಿಯಲ್ಲಿ ಯೂನಿಕೋಡ್ ಮತ್ತು ಯುಟಿಎಫ್-8 ವಿಶಿಷ್ಟತೆಗಳನ್ನು ಅಳವಡಿಸಲಾಗಿದೆ; ಇದರಲ್ಲಿ ಹೊಸ ಅಕ್ಷರ ಶೈಲಿಗಳು ಲಭ್ಯವಿವೆ; ಇನ್ನು ಎಂಎಸ್ವರ್ಡ್ನಲ್ಲಿ ಪದ ಪರೀಕ್ಷೆ, ನಮೂದಿಸುವಾಗಲೇ ಬದಲಾವಣೆ ಮುಂತಾದ ಸೌಲಭ್ಯವನ್ನು ನೀಡಲಾಗಿದೆ.DOWNLOAD
ಸರಳ ನುಡಿ ಕನ್ನಡ ತಂತ್ರಾಂಶ (KANNADA NUDI)
ಸುಲಭವಾಗಿ ಡೌನ್ಲೋಡ್ ಮಾಡಬಹುದಾದ ಹಾಗು ಅಂತರ್ಜಾಲ ಬಳಕೆಗೆ ಅನುಕೂಲಕರವಾಗಿರುವ ನುಡಿಯ ಸಂಕ್ಷಿಪ್ತ ಆವೃತ್ತಿಯಾದ ಸರಳನುಡಿ ಲಿಪಿ ತಂತ್ರಾಂಶಯನ್ನು ಇಲ್ಲಿ ನೀಡಲಾಗಿದೆ. ಇದು ಸುಮಾರು 287 KB ಪ್ರಮಾಣದ್ದಾಗಿದೆ.DOWNLOAD
ಪದ ತಂತ್ರಾಂಶ 4.0 (PADA 4.0)
ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ‘ಪದ 4.0’ (Pada 4.0) ತಂತ್ರಾಂಶದಲ್ಲಿ ಕನ್ನಡಕ್ಕೆ ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೇರಿ ಹಲವು ಸೌಲಭ್ಯಗಳಿವೆ. ಎರಡು ಲಕ್ಷಕ್ಕೂ ಅಧಿಕ ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ.DOWNLOAD
ಪದ ಐಎಂಇ ತಂತ್ರಾಂಶ (PADA IME)
‘ಪದ ಐಎಂಇ’ (Pada IME) ಆನ್ ಮಾಡಿಕೊಂಡು ವರ್ಡ್, ಎಕ್ಸೆಲ್ ಮುಂತಾದ ಯಾವುದೇ ಅಪ್ಲಿಕೇಶನ್ ಗಳಲ್ಲಿ ಹಾಗೂ ಇಮೇಲ್, ಚಾಟ್, ಫೇಸ್ ಬುಕ್, ಬ್ಲಾಗ್ ಮುಂತಾದ ಯಾವುದೇ ಅಂತರ್ಜಾಲ ತಾಣಗಳಲ್ಲಿ ಕನ್ನಡದಲ್ಲೇ ಟೈಪಿಸಬಹುದು. DOWNLOAD
ಗ್ನೂಕ್ಯಾಶ್ (GNUCASH 2.6.3)
ಗ್ನೂಕ್ಯಾಶ್ (GnuCash) ಇದೊಂದು ಉಚಿತ ಅಕೌಂಟಿಂಗ್ ತಂತ್ರಾಂಶ. ಇದು ವೈಯಕ್ತಿಕ ಹಾಗೂ ಸಣ್ಣ ವ್ಯಾಪರಸ್ಥರಿಗೆ ಹೇಳಿ ಮಾಡಿಸಿದಂತಿದೆ. GnuCash ಲಿನಕ್ಸ್ (Linux), ಮ್ಯಾಕ್ (Mac) OS X ಮತ್ತು ಮೈಕ್ರೋಸಾಫ್ಟ್ ವಿಂಡೋಸ್ (Microsoft Windows) ನಲ್ಲಿ ಕಾರ್ಯನಿರ್ವಸುತ್ತದೆ. ಇದು ಬಳಕೆದಾರರ ಸ್ನೇಹಿಯಾಗಿದ್ದು, GnuCash ಮೂಲಕ ನೀವು ಬ್ಯಾಂಕ್ ಖಾತೆ, ಷೇರುಗಳು, ಆದಾಯ ಮತ್ತು ವೆಚ್ಚದ ವಿವರಗಳನ್ನು ಸುಲಭವಾಗಿ ದಾಖಲಿಸಬಹುದು. DOWNLOAD