ಚೋಳರ ಹೃದಯ ಭಾಗವು ಕಾವೇರಿ ನದಿಯ, ಫಲವತ್ತಾದ ಕಣಿವೆಯಾಗಿತ್ತು. ಆದರೆ ತಮ್ಮ
ಅಧಿಕಾರದ ಬಹುಪಾಲು ಭಾಗವನ್ನು ಪ್ರಮುಖವಾಗಿ 9ನೇ ಶತಮಾನದ ಅರ್ಧದಿಂದ 13ನೆ ಶತಮಾನದ
ಪ್ರಾರಂಭದವರೆಗೂ ಆಳಿದರು.
ತುಂಗಭದ್ರಾದ ಇಡೀ ದಕ್ಷಿಣಭಾಗವನ್ನು ಒಂದಾಗಿಸಿ ಒಂದು ರಾಜ್ಯವನ್ನಾಗಿ ಮಾಡಿ ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದರು.
ರಾಜರಾಜ ಚೋಳ I ಮತ್ತು ಅವನ ಮಗನಾದ ರಾಜೇಂದ್ರಚೋಳ Iನ ಕಾಲದಲ್ಲಿ ಈ ವಂಶವು ದಕ್ಷಿಣ
ಏಷ್ಯಾದ ಮತ್ತು ಆಗ್ನೇಯ ಏಷ್ಯಿಯಾದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು
ಸಾಂಸ್ಕೃತಿಕವಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿತು. ಪೂರ್ವಭಾಗದಲ್ಲಿ ಆಗ ತಾನೆ
ಉದಯವಾಗುತ್ತಿದ್ದ ಗಂಗರ ಸಾಮ್ರಾಜ್ಯದ ಅಧಿಕಾರವನ್ನು ರಾಜೇಂದ್ರ ಚೋಳI ಕಸಿದುಕೊಂಡನು
ಮತ್ತು ಚೀನಾದ ಪುನರಾವರ್ತಿತ ದಾಳಿ ಹಾಗೂ ಶ್ರೀವಿಜಯನ, ಸಮುದ್ರ ಕದನವು ಆ ಸಮ್ರಾಜ್ಯದ
ಮೇಲೆ ಪ್ರಭಾವ ಬೀರಿದವು. 1010–1200ರ ಅವಧಿಯಲ್ಲಿ, ಚೋಳರ ಪ್ರಾಂತಗಳು ದಕ್ಷಿಣದ
ಮಾಲ್ಡೀವ್ಸ್ ದ್ವೀಪಗಳಿಂದ ಉತ್ತರದ ಆಂದ್ರಪ್ರದೇಶದ ಗೋದಾವರಿ ನದಿಯ ದಂಡೆಯವರೆಗೂ
ಹರಡಿಕೊಂಡಿತು. ರಾಜರಾಜಚೋಳನು ದಕ್ಷಿಣ ಭಾರತದ, ಈಗಿನ ಶ್ರೀಲಂಕಾದ ಭಾಗಗಳನ್ನು ಮತ್ತು
ಮಾಲ್ಡೀವ್ಸ್ ದ್ವೀಪಗಳನ್ನು ಆಕ್ರಮಿಸಿಕೊಂಡನು. ರಾಜೇಂದ್ರ ಚೋಳನು ತನ್ನ
ವಿಜಯಯಾತ್ರೆಯನ್ನು ಉತ್ತರದ ಗಂಗಾ ನದಿಯವರೆಗೂ ಮುಟ್ಟಿಸಿ, ಪಾಟಲಿಪುತ್ರದ ರಾಜನಾದ ಪಾಲ
ಮತ್ತು ಮಹಿಪಾಲರನ್ನು ಸೋಲಿಸಿದನು. ಈತನು ಯಶಸ್ವಿಯಾಗಿ ಮಲೆ ಆರ್ಕಿಪೆಲಗೋದ
ಸಾಮ್ರಾಜ್ಯಗಳನ್ನು ಆಕ್ರಮಿಸಿದನು. 13ನೇ ಶತಮಾನದ ಆರಂಭದಲ್ಲಿ ಪಾಂಡ್ಯರ, ಉದಯದಿಂದ ಚೋಳರ
ಅವನತಿ ಪ್ರಾರಂಭವಾಯಿತು. ಕಡೆಗೆ ಇವರೇ ಚೋಳರ ಸಂಪೂರ್ಣ ಪತನಕ್ಕೆ ಕಾರಣರಾದರು.
ಚೋಳರು ಶಾಶ್ವತವಾದ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ನಮಗೆ ಬಿಟ್ಟು ಹೋಗಿದ್ದಾರೆ.
ತಮಿಳು ಸಾಹಿತ್ಯದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ದೇವಾಲಯಗಳನ್ನು ಕಟ್ಟುವುದರಲ್ಲಿ
ಅವರಲ್ಲಿದ್ದ ಕೌತುಕ ತಮಿಳು ಸಾಹಿತ್ಯ ಮತ್ತು ಶಿಲ್ಪಕಲೆಗೆ ಅವರು ಕೊಟ್ಟ ಅಪಾರ
ಕೊಡುಗೆಗಳಿಗೆ ಕಾರಣವಾದವು. ಚೋಳ ಅರಸರು ಕಟ್ಟಡಗಳನ್ನು ಕಟ್ಟುವುದರಲ್ಲಿ
ಅತ್ಯಾಸಕ್ತಿಯನ್ನು ಹೊಂದಿದ್ದರು ಮತ್ತು ತಮ್ಮ ದೇವಸ್ಥಾನಗಳನ್ನು ಪೂಜಾ ಕೇಂದ್ರಗಳನ್ನಾಗಿ
ಅಷ್ಟೇ ಅಲ್ಲದೆ ಆರ್ಥಿಕ ಚಟುವಟಿಕೆಯ ಕೇಂದ್ರಗಳನ್ನಾಗಿ ಮಾಡಿದ್ದರು. ಅವರು
ಕೇಂದ್ರಾಡಳಿತಮಾದರಿಯ ಸರ್ಕಾರ ಅಧಿಕಾರಶಾಹಿಯನ್ನು ಸ್ಥಾಪಿಸಿದ ಮೊದಲಿಗರು.
ಮೂಲಗಳು: ಚೋಳ ವಂಶದ ಉದಯದ ಬಗ್ಗೆ ನಮಗೆ ಬಹಳ ಕನಿಷ್ಟ ಮಾಹಿತಿ
ದೊರೆತಿದೆ. ಈ ವಂಶದ ಪ್ರಾಚೀನತೆಯು ಪ್ರಾಚೀನ ತಮಿಳು ಸಾಹಿತ್ಯ ಮತ್ತು ಶಾಸನಗಳ
ಉಲ್ಲೇಖಗಳಿಂದ ಸ್ಪಷ್ಟವಾಗುತ್ತವೆ. ನಂತರದ ಮಧ್ಯಕಾಲೀನ ಚೋಳರು ಸಹ ತಮ್ಮ ರಾಜವಂಶದ
ದೀರ್ಘವಾದ ಮತ್ತು ಪ್ರಾಚೀನ ವಂಶಾವಳಿಯನ್ನು ಉಳಿಸಿಕೊಂಡರು. ಪ್ರಾಚೀನ ಸಂಗಮ
ಸಾಹಿತ್ಯದಲ್ಲಿ ಇದರಬಗ್ಗೆ ಉಲ್ಲೇಖಗಳಿವೆ(c. 150 ಸಿಇ)[೧೪] ಎಂಬುದು ಈ ವಂಶದ ಮೊದಲ
ಅರಸರುಗಳು 100 ಸಿಇ ಹಿಂದಿನ ದಿನಾಂಕವನ್ನು ದಾಖಲಿಸಿದ್ದು ಸೂಚಿಸುತ್ತದೆ. ತಮಿಳಿನ
ಶಾಸ್ತ್ರೀಯ ತಿರುಕ್ಕಲ್ನ್ನು ಬರೆದ ಟಿಪ್ಪಣಿಕಾರ ಪರಿಮೆಲಲಗರ್‌ನ ಪ್ರಕಾರ ಇದು ಒಬ್ಬ
ಪ್ರಾಚೀನ ಅರಸನ ಹೆಸರು ಇದ್ದಿರಬಹುದು.
ಇದರ ಬಗ್ಗೆ ಇರುವ ಸಾಮಾನ್ಯವಾದ ಅಭಿಪ್ರಾಯವೆಂದರೆ, ಇದು ಚೇರರು ಮತ್ತು ಪಾಂಡ್ಯರ
ವಂಶದ ಹೆಸರು ಅಥವಾ ಪ್ರಾಚೀನ ಬುಡಕಟ್ಟಿನ ಹೆಸರು ಇರಬಹುದು. ಪರಿಮೆಲಗರ್‍ನ ಬರಹಗಾರ
ಹೇಳುವಂತೆ, “ಜನರ ಪ್ರಾಚೀನ ವಂಶಾವಳಿಯ ಧಾರ್ಮಿಕ ಕಾರ್ಯಗಳು ( ಚೋಳರು, ಪಾಂಡ್ಯರುಮತ್ತು
ಚೇರರು) ಅವರ ಕನಿಷ್ಟ ಮಾರ್ಗಗಳ ಹೊರತಾಗಿಯೂ ಅವರ ಉದಾರತೆಯನ್ನು ಮೆರೆಯುತ್ತವೆ.” ಚೋಳರ
ಕಾಲದಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ಇತರ ಹೆಸರುಗಳೆಂದರೆ ಕಿಲ್ಲಿ, ವಾಲ್ವನ್ ಮತ್ತು
ಸೆಂಬಿಯನ್. ಕಿಲ್ಲಿ ಎಂಬ ಶಬ್ದವು ಪ್ರಾಯಶಃ ತಮಿಳು ಪದ ಕಿಲ್ ಅಂದರೆ ಗುಂಡಿ ತೋಡುವುದು
ಅಥವಾ ಸೀಳುವುದು ಎಂದರ್ಥ, ಇದು ಗುಂಡಿ ತೋಡುವವನ ಅಥವಾ ಭೂಮಿಯಲ್ಲಿ ಕೆಲಸ ಮಾಡುವವನ
ಕುರಿತ ಅರ್ಥವಿರಬಹುದು. ಈ ಪದವು ಕೆಲವು ಸಂದರ್ಭಗಳಲ್ಲಿ ಪುರಾತನ ಚೋಳರ ಹೆಸರುಗಳಾದ
ನೆದುಂಕಿಲ್ಲಿ, ನಲಂಕಿಲ್ಲಿ ಮುಂತಾದ ಹೆಸರುಗಳ ಅವಿಭಾಜ್ಯ ಅಂಗವಾಗುತ್ತದೆ, ಆದರೆ ನಂತರದ
ಕಾಲದಲ್ಲಿ ಈ ಹೆಸರುಗಳನ್ನು ಕೈಬಿಡಲಾಯಿತು. ವಾಲ್ವನ್ ಎಂಬ ಪದವು ಹೆಚ್ಚಾಗಿ ವಲಮ್ ಎಂಬ
ಪದಕ್ಕೆ ಸಂಬಂಧಿಸಿದ್ದಾಗಿದ್ದು ಸಮೃದ್ದಿಯನ್ನು ಅಥವಾ ಒಂದು ಸಮೃದ್ದ ದೇಶದ ಅರಸನನ್ನು
ಸೂಚಿಸುತ್ತದೆ.
ಸೆಂಬಿಯನ್ ಪದವನ್ನು ಸಾಮಾನ್ಯವಾಗಿ ಶಿಬಿ ಎಂಬ ವಂಶಜನನ್ನು ಸೂಚಿಸುತ್ತದೆ. ಈತನು
ಒಂದು ಪರಿವಾಳದ ಜೀವವನ್ನು ರಕ್ಷಿಸಲು ತನ್ನನ್ನೇ ತ್ಯಾಗ ಮಾಡಿದ ಪ್ರಾಚೀನ ಚೋಳ ದಂತ ಕಥೆಯ
ನಾಯಕನ ಬಗ್ಗೆ ತಿಳಿಸುತ್ತದೆ ಮತ್ತು ಶಿಬಿ ಜಾತಕ ಎಂಬ ಬೌದ್ದ ಧರ್ಮದ ಜಾತಕ ಕಥೆಗಳ
ಕಥಾವಸ್ತುವನ್ನು ರೂಪಿಸುತ್ತದೆ.
ತಮಿಳು ಶಬ್ದಕೋಶದ ಪ್ರಕಾರ ಚೋಳ ಎಂದರೆ ಸೊಹಾಜಿ ಅಥವಾ ಸೀಯಿ ಎಂಬ ಅರ್ಥವನ್ನು ಕೊಡುವ
ಹೊಸದಾಗಿ ಸ್ಥಾಪಿಸಲ್ಪಟ್ಟ ಸಾಮ್ರಾಜ್ಯದ ಬಗ್ಗೆ ಸೂಚಿಸುತ್ತದೆ, ಇದುಪಾಂಡ್ಯ ಅಥವಾ
ಪ್ರಾಚೀನ ದೇಶದ ಸಾಲುಗಳಲ್ಲಿ ಉಲ್ಲೇಖವಾಗಿದೆ. ತಮಿಳಿನ ಸೋರ ಅಥವಾ ಚೋಝ ಸಂಸ್ಕೃತದಲ್ಲಿ
ಚೋಳ ಎಂದು ಮತ್ತು ತೆಲುಗಿನಲ್ಲಿ ಚೋಳ ಅಥವಾ ಚೋಡ .
ಚೋಳರ ಚರಿತ್ರೆಯ ಬಗ್ಗೆ ಕೇವಲ ಕೆಲವೇ ಅಧಿಕೃತ ಲಿಖಿತ ದಾಖಲೆಗಳು ದೊರೆತಿವೆ.
ಇತಿಹಾಸಕಾರರು ಕಳೆದ 150 ವರ್ಷಗಳಿಂದ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮೂಲಗಳಾದ
ಪುರಾತನ ತಮಿಳು ಸಾಹಿತ್ಯ, ಮೌಖಿಕ ಸಂಪ್ರದಾಯ, ಧಾರ್ಮಿಕ ಗ್ರಂಥಗಳು, ದೇವಾಲಯಗಳು ಮತ್ತು
ತಾಮ್ರ ಹಲಗೆಗಳ ಶಾಸನಗಳು ಮುಂತಾದವುಗಳಿಂದ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದಾರೆ.
ಮೊದಲ ಚೋಳರ ಬಗ್ಗೆ ಮಾಹಿತಿಯ ಮೂಲವೆಂದರೆ ಸಂಗಮ ಕಾಲದ ತಮಿಳು ಸಾಹಿತ್ಯ. ಎರಿತ್ರಿಯನ್
ಸಮುದ್ರದ ಪೆರಿಪ್ಲಸ್ ( ಪೆರಿಪ್ಲಸ್ ಮ್ಯಾರಿಸ್ ಎರಿತ್ರೈ ) ಒದಗಿಸುವಂತೆ ಚೋಳ ದೇಶದ
ಮತ್ತು ಅದರ ಪಟ್ಟಣಗಳು, ಬಂದರುಗಳು ಮತ್ತು ಆರ್ಥಿಕತೆಯ ಬಗ್ಗೆ ಸಂಕ್ಷಿಪ್ತ ವರದಿಗಳು
ದೊರೆಯುತ್ತವೆ. ಪೆರಿಪ್ಲಸ್ ಎಂಬುದು ಅಲೆಗ್ಸಾಂಡ್ರಿಯಾದ ಒಬ್ಬ ಅನಾಮಧೇಯ ವರ್ತಕನ
ಡೊಮಿಷಿಯನ್ (81–96) ಕಾಲದಲ್ಲಿ ಬರೆದ ಬರಹವಾಗಿದ್ದು ಇದು ಚೋಳರ ಬಗ್ಗೆ ಬಹಳ ಕನಿಷ್ಟ
ಮಾಹಿತಿಯನ್ನು ಒದಗಿಸುತ್ತದೆ. ಇದರ ಅರ್ಧ ಶತಮಾನದ ನಂತರ ಪ್ಟೋಲೆಮಿ ಎಂಬ
ಭೂಗೋಳಶಾಸ್ತ್ರಜ್ಞನು ಬರೆದ ಪುಸ್ತಕವು ಚೋಳರ ದೇಶ, ಅದರ ರೇವು ಪಟ್ಟಣಗಳು ಮತ್ತು ಒಳ
ನಗರಗಳ ಬಗ್ಗೆ ಸಂಫೂರ್ಣ ಮಾಹಿತಿ ಒದಗಿಸುತ್ತದೆ. 5ನೇ ಶತಮಾನ ಸಿಇ ದಲ್ಲಿ ಬರೆದ ಮಹಾವಂಶ
, ಎಂಬ ಒಂದು ಬೌದ್ದಿಕ ಗ್ರಂಥವು ಸಿಲೋನ್ನ ಮತ್ತು ಚೋಳರ ನಡುವೆ ಮೊದಲ ಶತಮಾನ ಬಿಸಿಇ
ನಡೆದ ಹಲಾವರು ಸಂಘರ್ಷಗಳ ಬಗ್ಗೆ ವಿವರಿಸುತ್ತದೆ. ಅಶೋಕನ ಸ್ಥಂಭಗಳಲ್ಲಿನ (273
ಬಿಸಿಇ–232 ಬಿಸಿಇ ನಡುವೆ ಕೆತ್ತಲಾದ ಶಾಸನ) ಶಾಸನಗಳಲ್ಲಿ , ಅಂದಿನ ಚೋಳರ
ಸಾಮ್ರಾಜ್ಯದ ಅರಸರುಗಳು ಆತನೊಂದಿಗೆ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿರುವುದನ್ನು
ಸೂಚಿಸುತ್ತವೆ.
ಇತಿಹಾಸ: ಚೋಳರ ಇತಿಹಾಸವು ನಾಲ್ಕು ಅವಧಿಗಳದ್ದಾಗಿದೆ: ಸಂಗಮ
ಇತಿಹಾಸದ ಮೊದಲ ಚೋಳರು, ಸಂಗಮ ಚೋಳರ ಅವನತಿ ಮತ್ತು ವಿಜಯಾಲಯ ವಂಶವಾದ ವಿಜಯಾಲಯ (ಸಿ.
848) ಮಧ್ಯಕಾಲೀನ ಚೋಳರ ಉದಯದ ಮಧ್ಯದ ಅವಧಿ ಮತ್ತು ಕೊನೆಯಲ್ಲಿ 11ನೆಯ ಶತಮಾನದ
ನಾಲ್ಕುಭಾಗಗಳಲ್ಲಿ ಮೂರನೆಯ ಭಾಗದಲ್ಲಿ ಕುಲೋತುಂಗ ಚೋಳ I ವಂಶದ ಅಂತಿಮ ಚೋಳರು.
ಮೊದಲ ಚೋಳರು: ಸಂಗಮರ ಸಾಹಿತ್ಯದಲ್ಲಿರುವ ಉಲ್ಲೇಖಗಳು ಅತ್ಯಂತ
ಪ್ರಾಚೀನ ಚೋಳರ ಇರುವಿಕೆಯ ಬಗ್ಗೆ ಪುರಾವೆಗಳನ್ನು ಒದಗಿಸುತ್ತವೆ. ಈ ಸಾಹಿತ್ಯವು
ಸಾಮಾನ್ಯ ಯುಗದ ಮೊದಲನೆಯ ಕೆಲವು ಶತಮಾನಗಳದ್ದಾಗಿರಬಹುದು ಎಂಬುದನ್ನು ವಿದ್ವಾಂಸರು
ಒಪ್ಪುತ್ತಾರೆ. ಈ ಸಾಹಿತ್ಯದ ಆಂತರಿಕ ಕಾಲಗಣನೆಯು ಇನ್ನೂ ಇತ್ಯರ್ಥವಾಗದೇ ದೂರ ಉಳಿದಿದೆ.
ಪ್ರಸ್ತುತ ಇತಿಹಾಸದ ಈ ಕಾಲಮಾನವನ್ನು ಇನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲ. ಸಂಗಮರ
ಸಾಹಿತ್ಯವು ಕೆಲವು ಅರಸರ ರಾಜಕುಮಾರರ ಮತ್ತು ಅವರನ್ನು ಹೊಗಳುತ್ತಿದ್ದ ಕವಿಗಳ ಕುರಿತು
ದಾಖಲಿಸಿದೆ. ಒಂದು ಶ್ರೀಮಂತ ಸಾಹಿತ್ಯ ಈ ಜನರಜೀವನ ಮತ್ತು ಕೆಲಸಕಾರ್ಯಗಳ ಬಗ್ಗೆ
ತಿಳಿಸಿದರೂ ಸಹ , ಇದನ್ನು ಚರಿತ್ರೆಯೊಂದಿಗೆ ಸೇರಿಸಲು ಕಷ್ಟಸಾಧ್ಯ.
ಸಂಗಮರ ಸಾಹಿತ್ಯವು ಚೋಳ ಅರಸರ ಪೌರಾಣಿಕ ದಂತ ಕಥೆಗಳ ಕುರಿತೂ ದಾಖಲೆಗಳನ್ನು
ಒದಗಿಸುತ್ತವೆ. ಈ ದಂತಕಥೆಗಳು ಈಗಿನ ಕಾವೇರಿ ನದಿಯನ್ನು ತನ್ನ ಭಕ್ತಿಯ ಮೂಲಕ
ಧರೆಗಿಳಿಸಿದ ಅಗಸ್ತ್ಯ ಮಹಾಮುನಿಯ ಸಮಕಾಲೀನನಾದ ಕಾಂತಮನ್ ಎಂಬ ರಾಜನ ಬಗ್ಗೆ
ತಿಳಿಸುತ್ತವೆ.
ಸಂಗಮಸಾಹಿತ್ಯದಲ್ಲಿ ಬರುವ ಚೋಳ ಅರಸರ ಎರಡು ಹೆಸರುಗಳೆಂದರೆ, ಕರಿಕಾಲ ಚೋಳ ಮತ್ತು
ಕೋಸೆಂಗಾನನ್. ಉತ್ತರಾಧಿಕಾರಿಗಳನ್ನು ನೇಮಿಸುವ, ಅವರ ಸಂಬಂಧಗಳನ್ನು ಇತರೊಂದಿಗೆ
ಬೆಸೆಯುವ ಮತ್ತು ಇದೇ ಅವಧಿಯಲ್ಲಿ ಹಲವಾರು ಬೇರೆ ರಾಜಕುಮಾರರೊಂದಿಗಿನ ಸಂಬಂಧಗಳಿಗೆ
ಸರಿಯಾದ ಮಾನದಂಡಗಳಿರಲಿಲ್ಲ. ಉರೈಯೂರ್ (ಈಗಿನ ತಿರುಚನಾಪಳ್ಳಿಯ ಒಂದು ಭಾಗ) ಚೋಳರ ಹಳೇಯ
ರಾಜಧಾನಿಯಾಗಿತ್ತು.. ಕಾವೇರಿಪಟ್ಟಣಂ ಕೂಡಾ ಮೊದಲಿಗೆ ಚೋಳರ ರಾಜಧಾನಿಯಾಗಿತ್ತು. ಮಹಾವಂಶ
ದಲ್ಲಿ ಉಲ್ಲೇಖಿಸಿರುವಂತೆ , ಚೋಳರ ರಾಜಕುಮಾರನಾದ ಎಲಾರ, ಎಂಬ ತಮಿಳು ಜನಾಂಗದ
ಸಾಹಸಿಯೊಬ್ಬ , ಸುಮಾರು 235 ಬಿಸಿಇ ಯಲ್ಲಿ ಈ ದ್ವೀಪದ ಮೇಲೆ ದಾಳಿ ನಡೆಸಿರುವ ಬಗ್ಗೆ
ಮತ್ತು ಸುಮಾರು 108 ಸಿಇ.ಯಲ್ಲಿ ರಾಜನಾದ ಗಜಬಾಹು ಚೇರ ಸೆಂಗುಟ್ಟವನ್ನು ಭೇಟಿ
ನೀಡಿದ್ದರ ಬಗ್ಗೆ ದಾಖಲೆಗಳಿವೆ.
ಮಧ್ಯಂತರ ಆಳ್ವಿಕೆ: ತಮಿಳು ನಾಡನ್ನು ಆಳಿದ ಸಂಗಮ ಕಾಲದ(c.
300) ಅಂತಿಮ ಮತ್ತು ಪಾಂಡ್ಯ ಮತ್ತು ಪಲ್ಲವರ ನಡುವಿನ ಸುಮಾರು ಮೂರು ಶತಕಗಳ
ಸಂಕ್ರಮಣಕಾಲದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಲಭ್ರಾಸ್, ಎಂಬ ಒಂದು ಅಸ್ಪಷ್ಟ
ಸಮ್ರಾಜ್ಯ , ಆಗ ಇದ್ದ ಸಾಮ್ರಾಜ್ಯಗಳನ್ನು ಸ್ಥಳಾಂತರಿಸಿ ತಮಿಳು ನಾಡನ್ನು ಸುಮಾರು ಮೂರು
ಶತಕಗಳ ಕಾಲ ಆಳಿತು. ಆರನೇ ಶತಮಾನದಲ್ಲಿ ಪಲ್ಲವರು ಮತ್ತು ಪಾಂಡ್ಯರು ಇವರನ್ನು
ಸ್ಥಳಾಂತರಿಸಿದರು. 9ನೇ ಶತಮಾನದ ಎರಡನೇ ಚತುರ್ಥದಲ್ಲಿ ವಿಜಯಾಲಯನ ಪ್ರವೇಶದವರೆಗೂ, ಚೋಳರ
ನಂತರದ ಮೂರು ಶತಮಾನಗಳ ಬಗ್ಗೆ ಅಷ್ಟಾದ ಮಾಹಿತಿ ಇಲ್ಲ.
ಶಿಲಾಶಾಸನ ಮತ್ತು ಸಾಹಿತ್ಯ ಈ ಧೀರ್ಘಕಾಲದ ಮದ್ಯಂತರದಲ್ಲಿ ಪುರಾತನ ಅರಸರ ವಂಶಾವಳಿಯ
ಮಾರ್ಪಾಡುಗಳ ಬಗ್ಗೆ ಕೆಲವು ಸುಳಿವುಗಳನ್ನು ಒದಗಿಸುತ್ತದೆ. ಚೋಳರ ಸಮ್ರಾಜ್ಯ ಅವನತಿಯ
ಅತ್ಯಂತ ಕೆಳಮಟ್ಟದಲ್ಲಿದ್ದಾಗ , ಉತ್ತರ ಮತ್ತು ದಕ್ಷಿಣದಲ್ಲಿ ಪಾಂಡ್ಯರು ಮತ್ತು
ಪಲ್ಲವರು ಬೆಳೆಯಲು ಪ್ರಾರಂಭಿಸಿದಾಗ, ಈ ಸಾಮ್ರಾಜ್ಯವು ತನ್ನ ಯಶಸ್ವಿ ವಿರೋಧಿಗಳ ಆಶ್ರಯ
ಮತ್ತು ರಕ್ಷಣೆಯನ್ನು ಕೋರಬೇಕಾಗಿ ಬಂತು. ಚೋಳರು ಉರೈಯೂರ್‌ನ ಅಕ್ಕಪಕ್ಕದ ಕುಗ್ಗಿದ ಅನೇಕ
ಪ್ರಾಂತಗಳ ಮೇಲೆ ತಮ್ಮ ಅಧಿಕಾರವನ್ನು ಮುಂದುವರೆಸಿರು, ಆದರೆ ಇದು ಹೆಚ್ಚು
ಪ್ರಾಬಲ್ಯವಾಗಿರಲಿಲ್ಲ. ಅವರ ಅಧಿಕಾರ ಕುಂದಿದ ಹೊರತಾಗಿಯೂ, ಪಾಂಡ್ಯರು ಮತ್ತು ಪಲ್ಲವರು
ಅವರ ಮೇಲಿನ ಗೌರವದಿಂದ ಚೋಳ ರಾಜಕುಮಾರಿಯರನ್ನು ಮದುವೆಯಾಗಲು ಒಪ್ಪುತ್ತಿದ್ದರು.
ಪಲ್ಲವರ, ಪಾಂಡ್ಯರಮತ್ತು ಚಾಲುಕ್ಯರ ಹಲವಾರು ಶಾಸನಗಳು “ಚೋಳ ಸಾಮ್ರಾಜ್ಯ” ದ ವಿಜಯದ
ಬಗ್ಗೆ ತಿಳಿಸುತ್ತವೆ. ಈ ಪ್ರಭಾವ ಮತ್ತು ಅಧಿಕರಾದ ನಷ್ಟದ ಹೊರತಾಗಿಯೂ, ಚೋಳರು ತಮ್ಮ
ಹಳೆಯ ರಾಜಧಾನಿಯಾದ ಉರೈಯೂರ್‌ನ ಪ್ರಾಂತಗಳ ಮೇಲಿನ ಹಿಡಿತವನ್ನು ಕಳೆದುಕೊಂಡರು, ಏಕೆಂದರೆ
ವಿಜಯಾಲಯನು ಈ ಭೌಗೋಳಿಕ ಪ್ರದೇಶದಲ್ಲಿತನ್ನ ಪ್ರಭಾವವನ್ನು ಬೆಳೆಸಲು ಆರಂಭಿಸಿದನು.
ಸುಮಾರು 7ನೇ ಶತಮಾನದಲ್ಲಿ , ಚೋಳ ಸಾಮ್ರಾಜ್ಯವು ಇಂದಿನ ಆಂದ್ರ ಪ್ರದೇಶದಲ್ಲಿ ತನ್ನ
ಅಭಿವೃದ್ಧಿಯನ್ನು ಸಾಧಿಸಿತು. ಈ ತೆಲುಗು ಚೋಳರು (ಅಥವಾ ಚೋಡರು) ಪೂರ್ವ ಸಂಗಮ ವಂಶದ
ಮೂಲದವರು. ಹೇಗೂ,ಅವರಿಗೆ ಪೂರ್ವ ಚೋಳರೊಂದಿಗೆ ಯಾವುದೇ ಸಂಬಂಧಗಳು ಇದ್ದವು ಎಂಬುದು
ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಪಲ್ಲವರ ಕಾಲದಲ್ಲಿ ತಮಿಳು ಚೋಳರ ಒಂದು ಭಾಗ
ಉತ್ತರಕ್ಕೆ ವಲಸೆಹೋಗಿ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸುವುದರ ಮೂಲಕ , ಪಾಂಡ್ಯ
ಮತ್ತು ಪಲ್ಲವರ ಪ್ರಾಬಲ್ಯದಿಂದ ದೂರ ಉಳಿದಿರಬಹುದಾದ ಸಾಧ್ಯತೆಗಳಿವೆ. 639–640 ರಲ್ಲಿ
ಕಾಂಚಿಪುರಂನಲ್ಲಿ ಕೆಲವು ತಿಂಗಳು ಕಳೆದ ಚೀನಾದ ಯಾತ್ರಿಕ ಜುವಾನ್ ಜಾಂಗ್ ” ಕಿಂಗ್ ಡಮ್
ಆಫ್ ಕುಲಿ-ಯಾ” ಎಂಬ ಗ್ರಂಥದಲ್ಲಿ ತೆಲುಗು ಚೋಡರ ಬಗ್ಗೆ ಉಲ್ಲೇಖಿಸಿದ್ದಾನೆ.
ಮಧ್ಯಕಾಲೀನ ಚೋಳರು: ಆದರೆ ಪ್ರಾಚೀನ ಚೋಳರು ಮತ್ತು ವಿಜಯಾಲಯ
ಸಾಮ್ರಾಜ್ಯಗಳ ನಡುವಿನ ಕಾಲಗಳ ಬಗ್ಗೆ ಸಾಕಷ್ಟು ವಸ್ತುನಿಷ್ಟ ಮಾಹಿತಿ ದೊರೆತಿಲ್ಲ.
ವಿಜಯಾಲಯ ಮತ್ತು ಪ್ರಾಚೀನ ಚೋಳ ಸಾಮ್ರಾಜ್ಯಗಳಿಂದ ವೈವಿದ್ಯಮಯವಾದ ಮೂಲಗಳಿಂದ ಸಮೃದ್ದವಾದ
ವಿಷಯಗಳು ದೊರೆತಿವೆ. ಚೋಳರಿಂದಲೇ ನಿರ್ಮಿಸಲ್ಪಟ್ಟ ದೊಡ್ದ ಪ್ರಮಾಣದ ಶಿಲಾಶಾಸನಗಳು
ಮತ್ತು ಅವರ ವಿರೋಧಿ ಅರಸರಾದ, ಪಾಂಡ್ಯರು ಮತ್ತು ಚಾಲುಕ್ಯರು, ಮತ್ತು ತಾಮ್ರದ ಹಲಗೆಗಳು ,
ಆ ಕಾಲದ ಚೋಳರ ಚರಿತ್ರೆಯನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಸುಮಾರು
850,ವಿಜಯಾಲಯ ಎಂಬ ಅಷ್ಟೇನು ಪ್ರಭಾವಿತನಲ್ಲದ ಅರಸನು ಪಾಂಡ್ಯರು ಮತ್ತು ಪಲ್ಲವರ ನಡುವಿನ
ಸಂಘರ್ಷಣೆಯ ಅವಕಾಶವನ್ನು ಬಳಸಿಕೊಂಡು, ತಂಜಾವೂರನ್ನು ಆಕ್ರಮಿಸಿದನು, ಇದರ ಮೂಲಕ
ಮಧ್ಯಕಾಲಿಕ ಚೋಳರ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಮಧ್ಯಕಾಲೀನ ಯುಗದಲ್ಲಿ ಚೋಳರ ಪ್ರಭಾವ ಮತ್ತು ಅಧಿಕಾರ ಉತ್ತುಂಗಕ್ಕೆ ಏರಿತು. ಚೋಳರ
ಎರಡನೇ ಅರಸನಾದ ಆದಿತ್ಯ I ಮತ್ತು ಮುಂತಾದವರ ಅಧಿಕಾರ ಮತ್ತು ದೂರ ದೃಷ್ಟಿಯ ಮೂಲಕ
ಪಲ್ಲವರನ್ನು ಪತನಗೊಳಿಸುವುದರೊಂದಿಗೆ,ಮದುರೈನ ಪಾಂಡ್ಯರನ್ನು ಸೋಲಿಸಿ, ಕರ್ನಾಟಕದ
ಬಹುಪಾಲು ಭಾಗಗಳನ್ನು ಆಕ್ರಮಿಸಿಕೊಂಡರು. ಗಂಗ, ರೊಂದಿಗೆ ವಿವಾಹ ಸಂಬಂಧವನ್ನು
ಬೆಳೆಸಿದರು.885 ಎಡಿ ಯಲ್ಲಿ ಆತನ ಮಗನಾದ ಪರಕಾಂತ Iನು ಶ್ರೀಲಂಕಾದ ಇಲ್ಲೈಂಗೈಯನ್ನು
ವಶಪಡಿಸಿಕೊಂಡನು. 925 ಎಡಿರಲ್ಲಿ ಪರಕಾಂತ ಚೋಳ II ಎಂದೂ ಕರೆಯಲ್ಪಡುವ ಸುಂದರ ಚೋಳ, ನು
ರಾಷ್ಟ್ರಕೂಟ ರಿಂದ ತಮ್ಮ ಪ್ರಾಂತಗಳನ್ನು ಮರುವಶಪಡಿಸಿಕೊಂಡನು ಮತ್ತು ಕರ್ನಾಟಕದ
ಭಟ್ಕಳದವರೆಗೂ ಚೋಳರ ಚಕ್ರಾಧಿಪತ್ಯವನ್ನು ವಿಸ್ತರಿಸಿದನು. ರಾಜರಾಜ ಚೋಳ I ಮತ್ತು
ರಾಜೆಂದ್ರಚೋಳ I ಚೋಳರ ಸಾಮ್ರಾಜ್ಯವನ್ನು ತಮಿಳು ನಾಡಿನ ತಮ್ಮ ಸಾಂಪ್ರದಾಯಿಕ
ಪ್ರಾಂತಗಳನ್ನು ಮೀರಿ ವಿಸ್ತರಿಸಿದರು. ಇದರ ಉತ್ತುಂಗದಲ್ಲಿ, ಚೋಳಸಾಮ್ರಾಜ್ಯವು
ಶ್ರೀಲಂಕಾ ದ್ವೀಪದಿಂದ ಹಿಡಿದು ದಕ್ಷಿಣದಗೋದಾವರಿಯವರೆಗೂ-ಉತ್ತರದಲ್ಲಿ ಕೃಷ್ಣ ನದಿ
ಯವರೆಗೂ, ಕೊಂಕಣ ಕರಾವಳಿಯಲ್ಲಿ ಭಟ್ಕಳದವರೆಗೂ, ಮಲಬಾರ್ ಕರಾವಳಿಯಲ್ಲಿ ಲಕ್ಷದ್ವೀಪ,
ದೊಂದಿಗೆ, ಮಾಲ್ಡೀವ್ಸ್ ಮತ್ತು ಚೇರ ನಾಡಿನ ವಿಶಾಲವಾದ ಪ್ರದೇಶಗಳಲ್ಲಿ
ವಿಸ್ತರಿಸಲ್ಪಟ್ಟಿತು. 1000-1075 ಎಡಿ ರ ಅವಧಿಯಲ್ಲಿಚಾಲುಕ್ಯ ಮತ್ತು ದಕ್ಕನ್
ಸಾಮ್ರಾಜ್ಯಹಾಗೂ ಪೂರ್ವ ಕರಾವಳಿಯ ಸಾಮಂತರು, ಅಧೀನ ರಾಜರುಗಳು ಚೋಳರಿಗೆ
ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದರು.
ರಾಜೇಂದ್ರಚೋಳ I ನು ಶ್ರೀಲಂಕಾದ ಮೇಲಿನ ದಂಡಯಾತ್ರೆಯನ್ನು ಮುಗಿಸಿ, ಸಿಂಹಳ ರಾಜನಾದ
ಮಹಿಂದಾ V ನ್ನು ಬಂಧಿಸಿದನು, ಇದರೊಂದಿಗೆ ರತ್ತಪದಿ( ರಾಷ್ಟ್ರಕೂಟರ, ಪ್ರಾಂತಗಳು),
ಚಾಲುಕ್ಯರ ನಾಡುಗಳು, ಕರ್ನಾಟಕದ ತಲಕಾಡು, ಕೋಲಾರ (ಇಲ್ಲಿನ ಕೋಲಾರಮ್ಮನ ದೇವಸ್ಥಾನ
ಇಂದಿಗೂ ಈತನ ಚಿತ್ರಪಟವಿದೆ)ಗಳ ಮೇಲೆ ವಿಜಯ ಸಾಧಿಸಿದನು.
ಇದರೊಂದಿಗೆ ರಾಜೇಂದ್ರನ ಪ್ರಾಂತಗಳು ಗಂಗಾ-ಹೂಗ್ಲಿ-ದಾಮೋದರ ಬೋಗುಣಿಗಳು, ಬರ್ಮಾದ,
ಹೆಚ್ಚಿನ ಭಾಗಗಳು,ಥೈಲ್ಯಾಂಡ್ , ಇಂಡೋ-ಚೀನಾ ಲಾವೋಸ್, ಕಾಂಬೋಡಿಯಾ, ಮಲಯ ಪರ್ಯಾಯ ದ್ವೀಪ
ಮತ್ತು ಇಂಡೋನೇಷ್ಯಿಯಾಗಳನ್ನು ಒಳಗೊಂಡಿತ್ತು. ಭಾರತದ ಪೂರ್ವಕರಾವಳಿ ಭಾಗದಿಂದ
ಗಂಗಾನದಿಯವರೆಗೂ ಇರುವ ಸಾಮ್ರಾಜ್ಯಗಳಲ್ಲಿ ಚೋಳರು ತಮ್ಮ ಚಕ್ರಾದಿಪತ್ಯ ಸ್ಥಾಪಿಸಿದರು.
ಚೋಳರ ಹಡಗುಗಳು ಮಲಯನ್ ಆರ್ಚಿಪೆಲಗೂ ನಲ್ಲಿ ಶ್ರೀವಿಜಯನ ಮೇಲೆ ದಾಳಿ ನಡೆಸಿ ಅವನನ್ನು
ಸೋಲಿಸಿದರು.
ಸತ್ಯಾಶ್ರಯ ಮತ್ತು ಸೋಮೇಶ್ವರI ರ ಆಡಳಿತದಲ್ಲಿದ್ದ ಪಶ್ಚಿಮಚಾಲುಕ್ಯರು ವೆಂಗಿ
ಸಾಮ್ರಾಜ್ಯದಲ್ಲಿ ಚೋಳರ ಪ್ರಭಾವದಿಂದಾಗಿ ಕಾಲಕಾಲಕ್ಕೆ ಅವರ ಪ್ರಾಬಲ್ಯದಿಂದ
ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಪಶ್ಚಿಮ ಚಾಲುಕ್ಯರು ಚೋಳರನ್ನು ಯುದ್ಧದಲ್ಲಿ
ತೊಡಗಿಸಿಕೊಳ್ಳಲು ಹಲವಾರು ನಿಷ್ಪ್ರಯೋಜನ ಪ್ರಯತ್ನಗಳನ್ನು ಮಾಡಿದರು. 1118–1126 ರ
ಅವಧಿಯ ವೆಂಗಿಯ ಸಂಕ್ಷಿಪ್ತ ಕಾರ್ಯಾಚರಣೆಯನ್ನು ಬಿಟ್ಟರೆ, ಅವರ ಎಲ್ಲಾ ಪ್ರಯತ್ನಗಳೂ
ಮುಂದಿನ ಚೋಳ ಅರಸರಿಂದ ಹಲವಾರು ಯುದ್ಧಗಳಲ್ಲಿ ಪರಾಭವಗೊಳ್ಳುವುದರ ಮೂಲಕ ವಿಫಲವಾದವು.
ಚೋಳರು ಪಶ್ಚಿಮ ದಖನ್ ನಲ್ಲಿ ಚಾಲುಕ್ಯರನ್ನು ಯುದ್ದದಲ್ಲಿ ಸದೆಬಡಿಯುವುದರಮೂಲಕ
ಮತ್ತು ಅವರ ಮೇಲೆ ತರಿಗೆ ವಿಧಿಸುವುದರ ಮೂಲಕ ಯಶಸ್ವಿಯಾಗಿ ಚಾಲುಕ್ಯರನ್ನು
ನಿಯಂತ್ರಿಸಿದರು. ಕುಲೋತುಂಗ I, ವಿಕ್ರಮಚೋಳರಂತಹ ದುರ್ಬಲ ಅರಸರುಗಳ ಹೊರತಾಗಿಯೂ,
ಕರ್ನಾಟಕ ಅಥವಾ ತೆಲುಗು ಪ್ರಾಂತಗಳಾದ ವೆಂಗಿ, ಕಾಕಿನಾಡ, ಅನಂತಪುರ ಅಥವಾ ಗುಟ್ಟಿಯಲ್ಲಿ
ಚಾಲುಕ್ಯರ ಪ್ರಾಂತಗಳಲ್ಲಿ ನಡೆದ ಚಾಲುಕ್ಯರ ವಿರುದ್ಧದ ಯುದ್ದಗಳಲ್ಲಿ ಚೋಳರು ವಿಜಯ
ಸಾಧಿಸಿದ್ದನ್ನೂ ಸಹ ಮರೆಯುವಂತಿಲ್ಲ. ಯಾವುದೇ ಪ್ರಕರಣದಲ್ಲಿ , ಕದಂಬ,
ಹೊಯ್ಸಳ,ವೈದುಂಬರು ಅಥವಾ ಕಾಲಚೂರಿಯರು ಇವರ ನಡುವಿನ ಸಣ್ಣಪ್ರಮಾಣದ ವಿನಾಶಕ
ಯುದ್ಧಗಳಲ್ಲಿ ಚಾಲುಕ್ಯರ ಪ್ರವೇಶ ಅವರೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸುವುದರೊದಿಗೆ
ಅವರ ಮೇಲಿನ ನಂಬಿಕೆಯನ್ನು ಹೆಚ್ಚಿಸಿತು, ಆದರೆ ಅಂತಿಮವಾಗಿ ಹೊಯ್ಸಳರು, ಕಕಾಟಿಯರು,
ಕಾಳಚೂರ್ಯರು ಮತ್ತು ಸೇನರು ಚಾಲುಕ್ಯರನ್ನು ಬಳಸಿಕೊಂದರಲ್ಲದೆ ಅವರನ್ನು ಸ್ಮರಿಸದೆ
ಹೋದರು. ಸುಮಾರು1135 ಎಡಿ ಯಲ್ಲಿ ಕಾಳಚೂರ್ಯರು 35 ವರ್ಷಗಳ ನಂತರ ಚಾಲುಕ್ಯರ
ರಾಜಧಾನಿಯನ್ನು ಆಕ್ರಮಿಸಿಕೊಡರು. ಹೊಯ್ಸಳರ ವಿಷ್ಣುವರ್ಧನನ ಉತ್ತರ ಮಧ್ಯ ಕರ್ನಾಟಕದ
ಧಾರವಾಡದಲ್ಲಿನ ಕಾರ್ಯಾಚರಣೆಯೊಂದಿಗೆ ಆತನ ಮಗನಾದ ನರಸಿಂಹ ವರ್ಮನ್I ನ್ನು
ಸೋಲಿಸಲಾಯಿತು. ಎಡಿ 1149ಯಲ್ಲಿ ಹೊಯ್ಸಳರ ರಾಜಧಾನಿಯಾದ ದ್ವಾರಸಮುದ್ರದಲ್ಲಿ ಈ ಘಟನೆ
ನಡೆಯಿತು. ಇಷ್ಟರಲ್ಲಿ ಚಾಲುಕ್ಯರ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಿದ್ದು, 1120 ಎಡಿ
ನಂತರ ಅಸಮರ್ಥ ರಾಜರಿಂದ ಪತನಗೊಳ್ಳಲಿ ಪ್ರಾರಂಭಿಸಿತು.
ಕುಲೋತ್ತುಂಗ ಚೋಳ III ನ ಅವಧಿಯಲ್ಲಿ ಚೋಳರು, ಚೋಳರ ಅರಸನ ಅಳಿಯನಾದ ವೀರಬಲ್ಲಾಳ IIನ
ಮುಖಾಂತರ ಹೊಯ್ಸಳರ ಸಹಾಯವನ್ನು ಪಡೆದುಚಾಲುಕ್ಯರ ಪತನಕ್ಕೆ ಕಾರಣರಾದರು.1185-1190 ಎಡಿ
ರ ಅವಧಿಯಲ್ಲಿ ಸೋಮೇಶ್ವರIV ನೊಂದಿಗೆ ನಡಿಸಿದ ಸರಣಿ ಯುದ್ಧಗಳಲ್ಲಿಪಶ್ಚಿಮ ಚಾಲುಕ್ಯ ರ
ಅವನತಿಗೆ ಕಾರಣರಾದರಲ್ಲದೆ, ಚಾಲುಕ್ಯರ ಕೊನೆಯ ದೊರೆಯಾದ ಈತನ ಕಾಲದಲ್ಲಿ ಅವರ ಮೊದಲಿನ
ರಾಜಧಾನಿಯಾದ ಬಾದಮಿ, ಮಾನ್ಯಕೇತ ಅಥವಾ ಕಲ್ಯಾಣಿಯನ್ನೂ ಸಹ ವಶಪಡಿಸಿಕೊಂಡರು. ಚಾಲುಕ್ಯರ
ಹೆಸರು 1135-1140ನಿಂದ ಕಂಡು ಬಂದಿದ್ದರೂ, ಇದು ಅವರ ಅಧಿಕಾರದ ಅಂತಿಮ
ವಿಸರ್ಜನೆಯಾಗಿತ್ತು. ಇದಕ್ಕೆ ಬದಲಾಗಿ, 1215 ಎಡಿರವರೆಗೆ ಚೋಳರು ಸ್ಥಿರವಾಗಿದ್ದು,
ಅಂತಿಮವಾಗಿ ಪಾಮ್ಡಿಯನ್ ಸಾಮ್ರಾಜ್ಯದಿಂದ ಕಬಳಿಸಲ್ಪಡುತ್ತಾ, 1280 ಎಡಿ ಹೊತ್ತಿಗೆ ಅವರ
ಅಸ್ತಿತ್ವವು ನಾಶವಾಯಿತು.
ಮತ್ತೊಂದು ಕಡೆ 1150-1280 ಎಡಿ ವರೆಗೂ, ಚೋಳರ ಸಾಂಪ್ರದಾಯಿಕ ಎದುರಾಳಿಗಳಾದ
ಪಾಂಡ್ಯರ ರಾಜಕುಮಾರರು ತಮ್ಮ ಸಾಂಪ್ರದಾಯಿಕ ಪ್ರಾಂತಗಳ ಮೇಲೆ ಸ್ವತಂತ್ರ ಸಾಧಿಸಲು
ಪ್ರಯತ್ನಿಸುತ್ತಲೇ ಇದ್ದರು. ಈ ಕಾಲದಲ್ಲಿ ಚೋಳರು ಮತ್ತು ಅವರ ವಿರೋಧಿಗಳ ನಡುವೆ ಸತತವಾದ
ಯುದ್ಧಗಳನ್ನು ಕಾಣಬಹುದು. ಚೋಳರು ಕಳಿಂಗದ ಪೂರ್ವ ಗಂಗ ರೊಂದಿಗೆ ಸತತವಾದ ಯುದ್ದಗಳನ್ನು
ಮಾಡಿದರು. ವೆಂಗಿಯಿಂದ ರಕ್ಷಣೆ ಪಡೆದಿದ್ದರೂ ಇದು ಚೋಳರ ಹೆಚ್ಚಾಗಿ ಹತೋಟಿಯಲ್ಲಿತ್ತು.
ಸಂಪೂರ್ಣ ಪೂರ್ವ ಕರಾವಳಿಯ ಸಾಮಂತರಾದ ತೆಲುಗು ಚೋಡರು,ವೆಲಂತಿ ಚೋಳರು,ರೆನಾಂದು ಚೋಳರು
ಮುಂತಾದವರು ಚಾಲುಕ್ಯ ರ ವಿರುದ್ಧ ಚೋಳರ ಯಶಸ್ಸಿಗೆ ಸಹಾಯ ಹಸ್ತ ಚಾಚುತ್ತಿದ್ದರು.ಮತ್ತು
ಕರ್ನಾಟಕದ ಸಾಮ್ರಾಜ್ಯಗಳು ಅವರಿಗೆ ಕಪ್ಪಕಾಣಿಕೆಗಳನ್ನು ಕೊಡುವಲ್ಲಿ
ಸಹಕರಿಸುತ್ತಿದ್ದರು. ಚೋಳರ ಕಡೆಯ ದೊರೆ ಕುಲೋತ್ತುಂಗ ಚೋಳ I ವರೆಗೂ ಸಿಂಹಳದ ಮೇಲಿನ
ಸತತವಾದ ಯುದ್ಧಗಳಿಂದ ಅವರನ್ನು ಲಂಕೆಯಿಂದ ಹೊರದೂಡುವ ಪ್ರಯತ್ನದ ಹೊರತಾಗಿಯೂ ಚೋಳರು
ಲಂಕೆಯ .ಮೇಲಿನ ಹಿಡಿತ ಸಾಧಿಸಿದರು. ವಾಸ್ತವವಾಗಿ, ರಾಜಾಧಿರಜ ಚೋಳ II ಎಂಬ ಒಬ್ಬ ಕಡೇ
ಚೋಳ ರ ದೊರೆ ಪಾಂಡ್ಯರ ಐದು ರಾಜಕುಮಾರರ ಒಂದು ಒಕ್ಕೂಟದ ಮೇಲೆ ಹಿಡಿತ ಸಾಧಿಸುವಷ್ಟು
ಬಲಾಡ್ಯನಾಗಿದ್ದನು .ಇದು ಅವರ ಸಾಂಪ್ರದಾಯಿಕ ಗೆಳೆಯನಾಗಿದ್ದ ಶ್ರೀಲಂಕಾದ ದೊರೆಯಿಂದ
ಸಹಾಯ ಪಡೆಯುತ್ತಿತ್ತು.ಇದರಿಂದ ರಾಜಾಧಿರಾಜ ಚೋಳ II ಅಡಿಯಲ್ಲಿ ಚೋಳರು
ಬಲಿಷ್ಟರಾಗಿದ್ದರೂ ಕೂಡ ಶ್ರೀಲಂಕಾ ದ ಮೇಲಿನ ಹತೋಟಿಯನ್ನು ಕಳೆದುಕೊ೦ಡಿತು. ಹೇಗೂ,
ರಾಜಾಧಿರಾಜ ಚೋಳ IIನ ಉತ್ತರಾಧಿಕಾರಿಯಾದ, ಕುಲೋತ್ತುಂಗಚೋಳIII ನು ವಿರೋಧಿಗಳನ್ನು
ಸದೆಬಡಿಯುವುದರಮೂಲಕ ಮತ್ತೆ ಹಿಡಿತವನ್ನು ಸಾಧಿಸಿದನು. ಶ್ರೀಲಂಕಾ ಮತ್ತು ಮದುರೈ
ಗಲಭೆಗಳನ್ನು ನಿವಾರಿಸಿದ್ದಲ್ಲದೆ, ಕಾರವಾರದಲ್ಲಿ ಹೊಯ್ಸಳರ ವೀರಬಲ್ಲಾಳ II ನ್ನು
ಸೋಲಿಸಿ, ತಮಿಳು ನಾಡಿನಲ್ಲಿ ತನ್ನ ಸಂಸ್ಥಾನಗಳು, ಪೂರ್ವ ಗಂಗಾವತಿ,ದ್ರಾಕ್ಷರಮ,
ವೆಂಗಿಮತ್ತು ಕಳಿಂಗ.ದ ಮೇಲೆ ಹಿಡಿತ ಸಾಧಿಸಿದನು. ಇದರ ನಂತರ , ಈತನು ವೀರಬಲ್ಲಾಳ II (
ಚೋಳರ ರಾಜಕುಮಾರಿಯನ್ನು ಬಲ್ಲಾಳನಿಗೆ ಮದುವೆ ಮಾಡಿಕೊಡುವುದರಮೂಲಕ) ನೊಂದಿಗೆ ವಿವಾಹ
ಸಂಬಂಧ ಬೆಳೆಸಿದನು ಮತ್ತು ಹೊಯ್ಸಳರೊಂದಿಗಿನ ಈತನ ಸಂಬಂಧ ಸ್ನೇಹಪೂರ್ವಕವಾಗಿತ್ತು.
ಚೋಳರ ನಂತರದ ಅವಧಿ: ರಾಜರಾಜ ವೆಂಗಿಯನ್ನು ವಶಪಡಿಸಿಕೊಂಡ
ತದನಂತರದ ಆಳ್ವಿಕೆಯ ಕಾಲದಲ್ಲಿ ಪೂರ್ವದ ಚಾಲುಕ್ಯರ ಮತ್ತು ಚೋಳರ ನಡುವೆ ವೈವಾಹಿಕ ಮತ್ತು
ರಾಜಕೀಯ ಸಂಬಂಧಗಳು ಆರಂಭಗೊಂಡವು. ರಾಜರಾಜ ಚೋಳನ ಮಗಳು ಚಾಲುಕ್ಯ ರಾಜಕುಮಾರ
ವಿಮಲಾದಿತ್ಯನನ್ನು ಮದುವೆಯಾಗಿದ್ದಳು. ರಾಜೇಂದ್ರ ಚೋಳನ ಮಗಳು ಕೂಡ ಒಬ್ಬ ಪೂರ್ವದ
ಚಾಲುಕ್ಯ ರಾಜಕುಮಾರ ರಾಜರಾಜ ನರೇಂದ್ರನನ್ನು ವರಿಸಿದ್ದಳು.
ಕ್ರಿ.ಶ. 1070ರಲ್ಲಿ ನಡೆದ ದಂಗೆಯಲ್ಲಿ ವೀರರಾಜೇಂದ್ರ ಚೋಳನ ಮಗ ಅತಿರಾಜೇಂದ್ರ
ಚೋಳನನ್ನು ಹತ್ಯೆ ಮಾಡಲಾಯಿತು ಮತ್ತು ರಾಜರಾಜ ನರೇಂದ್ರ ಚೋಳನ ಮಗ ಕುಲೋತುಂಗ ಚೋಳ-I ಚೋಳ
ಸಿಂಹಾಸನವನ್ನೇರಿ ನಂತರದ ಚೋಳ ಸಾಮ್ರಾಜ್ಯವನ್ನು ಮುನ್ನಡೆಸಿದ.
ನಂತರದ ಚೋಳ ಸಾಮ್ರಾಜ್ಯ ಕುಲೋತುಂಗ ಚೋಳ-I, ಅವನ ಮಗ ವಿಕ್ರಮ ಚೋಳ, ಇತರ ಅವರ
ಉತ್ತರಾಧಿಕಾರಿಗಳಾದ ರಾಜರಾಜ ಚೋಳ II, ರಾಜಾಧಿರಾಜ ಚೋಳ II ಮತ್ತು ಕಳಿಂಗವನ್ನು ಜಯಿಸಿದ
ಕುಲೋತುಂಗ ಚೋಳ III, ಇಲಮ್ ಮತ್ತು ಕಟಹಾ ಇವರುಗಳಿಂದ ಸಮರ್ಥ ಆಡಳಿತವನ್ನು ಕಂಡಿತು;
ಆದರೂ, ನಂತರದ ಚೋಳರ ಆಳ್ವಿಕೆ ರಾಜೇಂದ್ರ ಚೋಳ II ವರೆಗಿನ ಚಕ್ರವರ್ತಿಗಳಷ್ಟು
ಉತ್ತಮವಾಗಿರಲಿಲ್ಲ. ಕ್ರಿ.ಶ. 1215 ರ ವರೆಗೆ ಕುಲೋತುಂಗ ಚೋಳ IIIನ ಆಡಳಿತ
ದೃಢವಾಗಿತ್ತು ಮತ್ತು ಉಚ್ರಾಯ ಸ್ಥಿತಿಯಲ್ಲಿದ್ದರೂ, ಅವನ ಆಡಳಿತ ಕಾಲದಲ್ಲಿಯೇ, ಕ್ರಿ.ಶ.
1215-16 ರ ಅವಧಿಯಲ್ಲಿ ಮಾರವರ್ಮನ್ ಸುಂದರ ಪಾಂಡಿಯನ್ II ನಿಂದ ಸೋಲನುಭವಿಸುವ ಮೂಲಕ
ಚೋಳ ಸಾಮ್ರಾಜ್ಯದ ಅವನತಿ ಆರಂಭವಾಯಿತು. ಚೋಳರು ಲಂಕಾ ದ್ವೀಪದ ಹಿಡಿತವನ್ನು
ಕಳೆದುಕೊಂಡರು ಮತ್ತು ಪುನರುಜ್ಜೀವನಗೊಳ್ಳುತ್ತಿದ್ದ ಸಿಂಹಳೀಯರಿಂದ ಹೊರದೂಡಲ್ಪಟ್ಟರು.
ಸುಮಾರು ಕ್ರಿ.ಶ.1118ರ ಹೊತ್ತಿಗಾಗಲೆ ಪಶ್ಚಿಮದ ಚಾಲುಕ್ಯರ ಕೈಯಲ್ಲಿ ಸೋತು ವೆಂಗಿಯನ್ನು
ಮತ್ತು ಹೊಯ್ಸಳರಿಗೆ ಗಂಗವಾಡಿ (ದಕ್ಷಿಣದ ಮೈಸೂರು ಜಿಲ್ಲೆ) ಯನ್ನು ಕಳೆದುಕೊಂಡರು.
ಆದರೂ, ಇವುಗಳು ಕೇವಲ ತಾತ್ಕಾಲಿಕ ಹಿನ್ನಡೆಗಳಾಗಿದ್ದವು, ಏಕೆಂದರೆ ಕುಲೋತುಂಗ ಚೋಳ Iನ
ಉತ್ತರಾಧಿಕಾರಿ ವಿಕ್ರಮ ಚೋಳನ ಆಡಳಿತದ ಕಾಲದಲ್ಲಿ ಚೋಳರು ಯಾವುದೇ ಸಮಯವನ್ನು
ವ್ಯರ್ಥಮಾಡದೆ, ಚಾಲುಕ್ಯ ಸೋಮೇಶ್ವರ III ನನ್ನು ಸೋಲಿಸುವ ಮೂಲಕ ವೆಂಗಿ ಸಂಸ್ಥಾನವನ್ನು
ಮತ್ತು ಹೊಯ್ಸಳರನ್ನು ಸೋಲಿಸುವ ಮೂಲಕ ಗಂಗವಾಡಿಯನ್ನು ಪುನಾ ವಶಪಡಿಸಿಕೊಂಡರು. ಪಾಂಡ್ಯರ
ಪ್ರದೇಶಗಳಲ್ಲಿ, ಸಮರ್ಥವಾಗಿ ನಿಯಂತ್ರಿಸುವ ಕೇಂದ್ರೀಯ ಆಡಳಿತದ ಕೊರತೆಯಿಂದಾಗಿ ಪಾಂಡ್ಯರ
ಸಿಂಹಾಸನಕ್ಕಾಗಿ ಹಲವಾರು ಹಕ್ಕುದಾರರು ಹುಟ್ಟಿಕೊಳ್ಳುವ ಮೂಲಕ ಅಂತರ್ಯುದ್ಧಕ್ಕೆ
ಕಾರಣರಾದರು ಮತ್ತು ಇದರಲ್ಲಿ ಸಿಂಹಳೀಯರು ಮತ್ತು ಚೋಳರು ಪರೋಕ್ಷವಾಗಿ ಪಾಲ್ಗೊಂಡಿದ್ದರು.
ನಂತರದ ಚೋಳ ರಾಜ ಕುಲೋತುಂಗ ಚೋಳ III ಮಧುರೈ, ಕರುವೂರು (ಕರೂರು), ಈಳಂ (ಶ್ರೀಲಂಕಾ),
ದ್ರಕ್ಷರಾಮ ಮತ್ತು ವೆಂಗಿಯ ಮೇಲಿನ ಹಿಡಿತವನ್ನು ಪುನಾ ಸಾಧಿಸಿದ. ಚಾಲುಕ್ಯರಿಗೆ
ವಿರುದ್ಧವಾಗಿ ಮೊದಲು ಹೊಯ್ಸಳ ವೀರ ಬಲ್ಲಾಳ II ನಿಗೆ ಮತ್ತು ನಂತರದಲ್ಲಿ ಕಲಚೂರಿಗಳಿಗೆ
ಸಹಾಯ ಮಾಡಿದ್ದಕ್ಕಾಗಿ, ಕುಲೋತುಂಗ ಚೋಳ III ತನ್ನ ಶಾಸನಗಳಲ್ಲಿ ’ಹೊಯ್ಸಳ
ಪುರವರಧೀಶ್ವರನ್’ ಎಂಬ ಬಿರುದನ್ನು ಹೊಂದಿದ್ದ.
ರಾಜರಾಜ ಚೋಳ III ಮತ್ತು ಆತನ ಉತ್ತರಾಧಿಕಾರಿ ರಾಜೇಂದ್ರ ಚೋಳ III ಕಾಲದಲ್ಲಿ ಚೋಳರು
ತುಂಭಾ ದುರ್ಬಲರಾಗಿದ್ದರು. ಆದ್ದರಿಂದ, ನಿರಂತರ ತೊಂದರಗಳನ್ನು ಅನುಭವಿಸಿದರು. ಒಬ್ಬ
ಸಾಮಂತ, ಕಡವರ ಮುಖ್ಯಸ್ಥ ಕೊಪ್ಪೇರುಂಚಿಂಗ I ಕೆಲವು ಸಮಯದವರೆಗೆ ರಾಜರಾಜ ಚೋಳ III
ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ. 12ನೇ ಶತಮಾನದ ಮುಕ್ತಾಯದ ವೇಳೆಗಾಗಲೆ,
ಬೆಳೆಯುತ್ತಿದ್ದ ಹೊಯ್ಸಳರ ಪ್ರಭಾವ ಪತನದತ್ತ ಸಾಗುತ್ತಿದ್ದ ಚಾಲುಕ್ಯರ ಸ್ಥಾನವನ್ನು
ತುಂಬಿ, ಕನ್ನಡ ದೇಶದಲ್ಲಿ ಮುಖ್ಯ ಆಡಳಿತಗಾರರಾಗಿದ್ದರು. ಆದರೆ ಅವರೂ ಕೂಡ ಸೀನಸ್ ಮತ್ತು
ಚಾಲುಕ್ಯರ ರಾಜಧಾನಿಯನ್ನು ವಶಪಡಿಸಿಕೊಂಡಿದ್ದ ಕಲಚೂರಿಗಳಿಂದ ನಿರಂತರ ತೊಂದರೆಯನ್ನು
ಅನುಭವಿಸಿದ್ದರು. ಆದ್ದರಿಂದ ಸ್ವಾಭಾವಿಕವಾಗಿ, ನಂತರದಲ್ಲಿ ಚೋಳ ಸಾಮ್ರಾಜ್ಯದೊಂದಿಗೆ
ವೈವಾಹಿಕ ಸಂಬಂಧವನ್ನು ಹೊಂದಿದ್ದ ಹೊಯ್ಸಳ ವೀರ ಬಲ್ಲಾಳ II ನನ್ನು ಸೋಲಿಸಿದ್ದ
ಕುಲೋತುಂಗ ಚೋಳ IIIನ ಕಾಲದಿಂದಲೂ ಹೊಯ್ಸಳರು ಚೋಳರೊಂದಿಗೆ ಸ್ನೇಹ ಸಂಬಂಧ ಹೊಂದುವುದು
ಅನುಕೂಲವೆಂದು ಕಂಡುಕೊಂಡಿದ್ದರು. ಇದು ಕುಲೋತುಂಗ ಚೋಳ IIIನ ಮಗ ಮತ್ತು ಉತ್ತರಾಧಿಕಾರಿ
ರಾಜರಾಜ ಚೋಳ IIIನ ಕಾಲದಲ್ಲಿಯೂ ಮುಂದುವರೆಯಿತು.
ದಕ್ಷಿಣದಲ್ಲಿ ಪಾಂಡ್ಯರು ಪ್ರಬಲ ಶಕ್ತಿಯಾಗಿ ಬೆಳೆದರು ಮತ್ತು ತಮಿಳು ದೇಶದ
ಚೋಳರೊಂದಿಗೆ ಮೈತ್ರಿ ಹೊಂದಿದ್ದ ಹೊಯ್ಸಳರನ್ನು ಕೊನೆಗೂ ಹೊರದೂಡಿದರು ಮತ್ತು ಕ್ರಮೇಣ
ಚೋಳರು ತಮ್ಮಷ್ಟಕ್ಕೇ ತಾವೇ ಕ್ರಿ. ಶ. 1279ರಲ್ಲಿ ಅವನತಿ ಹೊಂದುವಂತೆ ಮಾಡಿದರು.
ಮಾರವರ್ಮನ್ ಸುಂದರ ಪಾಂಡ್ಯನ್ II, ಆತನ ಸಮರ್ಥ ಉತ್ತರಾಧಿಕಾರಿ ಜಟವರ್ಮನ ಸುಂದರ
ಪಾಂಡ್ಯನ್ರು, ಚೋಳರ ರಾಜರಾಜ ಚೋಳ III, ಆತನ ಉತ್ತರಾಧಿಕಾರಿ ರಾಜೇಂದ್ರ ಚೋಳ III ಮತ್ತು
ಹೊಯ್ಸಳರ ಸೋಮೇಶ್ವರ, ಅವನ ಮಗ ರಾಮನಾಥ ಅವರ ಜಂಟಿ ಸೈನ್ಯದಿಂದ ಹಲವು ಬಾರಿ ಸೋಲು
ಅನುಭವಿಸುವುದಕ್ಕಿಂತ ಮೊದಲು ಅವರು ತಮಿಳು ದೇಶ ಮತ್ತು ಶ್ರೀಲಂಕಾ ದಲ್ಲಿನ ಕೆಲವು
ಪ್ರದೇಶಗಳು, ಚೇರ ದೇಶ ಮತ್ತು ತೆಲಗು ದೇಶದ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿದ್ದರು.
ಕ್ರಿ.ಶ. 1215 ರಿಂದ ತಮಿಳು ದೇಶದಲ್ಲಿ ಬಲಾಡ್ಯರಾಗಿ ಬೆಳೆಯುತ್ತಿದ್ದ ತಮ್ಮ
ಸಾಮರ್ಥ್ಯವನ್ನು ಮತ್ತು ಸ್ಥಾನವನ್ನು ಮಧುರೈ, ರಾಮೇಶ್ವರಂ, ಕರೂರು, ಸತ್ಯಮಂಗಲಂ ಮತ್ತು
ಕಾವೇರಿ ಮುಖಜಭೂಮಿಯಲ್ಲಿ ಒಗ್ಗೂಡಿಸಿಕೊಂಡು ತಮ್ಮ ಸಾಮ್ರಾಜ್ಯವನ್ನು ಕಾವೇರಿ ಮುಖಜಭೂಮಿಯ
ನಡುವಿನ ದಿಂಡಿಗಲ್, ತಿರುಚಿ, ಕರೂರು, ಸತ್ಯಮಂಗಲ ಮತ್ತು ಕಾವೇರಿ ಮುಖಜಭೂಮಿವರೆಗೆ
ವಿಸ್ತರಿಸಿಕೊಂಡ ಪಾಂಡ್ಯನ್ನರ ಶಕ್ತಿಯನ್ನು ಎದುರಿಸಿ ಸಾಮ್ರಾಜ್ಯ ಮುನ್ನೆಡೆಸಲು ಚೋಳರ
ರಾಜೇಂದ್ರ III ನು ಕಡವ ಪಲ್ಲವರೊಂದಿಗೆ ಮತ್ತು ಹೊಯ್ಸಳರೊಂದಿಗೆ ಮೈತ್ರಿ
ಮಾಡಿಕೊಳ್ಳುತ್ತಾನೆ. ಕ್ರಿ.ಶ. 1250ರ ಹೊತ್ತಿಗೆ, ತಂಜಾವೂರು, ಮಯೂರಂ, ಚಿದಂಬರಂ,
ವೃದ್ಧಾಚಲಂ, ಕಂಚಿ ಮತ್ತು ಕೊನೆಯಲ್ಲಿ ಆರ್ಕಾಟ್, ತಿರುಮಲೈ, ನೆಲ್ಲೂರ್, ವಿಸಯವಾಡಿ,
ವೆಂಗಿ, ಕಾಲಿಂಗಮ್ ವರೆಗೂ ವಿಸ್ತರಿಸಿದರು.
ಕ್ರಮೇಣ ಪಾಂಡ್ಯರು ಹೊಯ್ಸಳರು ಮತ್ತು ಚೋಳರಿಬ್ಬರನ್ನೂ ಬಗ್ಗುಬಡಿದರು. ತಮಿಳು ದೇಶದ
ರಾಜಕೀಯದಲ್ಲಿ ಮೂಗುತೂರಿಸುತ್ತಾ ತಮ್ಮ ಶಕ್ತಿಯನ್ನು ಅತಿಯಾಗಿ ತೋರ್ಪಡಿಸುತ್ತಿದ್ದ
ಹೊಯ್ಸಳರನ್ನು ಜಟವರ್ಮನ್ ಸುಂದರ ಪಾಂಡಿಯನ್ ಕಾಲದಲ್ಲಿ ಕಣ್ಣನೂರ್ ಕುಪ್ಪಂ ಎಂಬಲ್ಲಿ
ಬಗ್ಗುಬಡಿಯುವ ಮೂಲಕ ಅಧಿಕಾರ ಕಿತ್ತುಕೊಂಡರು ಮತ್ತು ಮೈಸೂರು ಪ್ರಸ್ಥಭೂಮಿಯವರೆಗೆ
ಹೊಯ್ಸಳರನ್ನು ಓಡಿಸಿದರು ಮತ್ತು ಆ ನಂತರವೇ ಅವರು ಯುದ್ಧವನ್ನು ನಿಲ್ಲಿಸಿದರು.
ರಾಜೇಂದ್ರ ಚೋಳನ ಆಡಳಿತದ ಕೊನೆಯಲ್ಲಿ, ಪಾಂಡ್ಯನ್ ಸಾಮ್ರಾಜ್ಯ ಅತ್ಯಂತ ಉಚ್ರಾಯ
ಸ್ಥಿತಿಯಲ್ಲಿತ್ತು ಮತ್ತು ವಿದೇಶಿ ವೀಕ್ಷಕರ ದೃಷ್ಠಿಯಲ್ಲಿ ಚೋಳ ಸಾಮ್ರಾಜ್ಯಕ್ಕೆ ಒಂದು
ಸ್ಥಾನ ಸಿಗುವಂತೆ ಮಾಡಿದರು. ಕೊನೆಯಲ್ಲಿ ದಾಖಲಾಗಿದ್ದ ರಾಜೇಂದ್ರ IIIನ ದಿನಾಂಕ 1279.
ರಾಜೇಂದ್ರನ ನಂತರ ಮೊತ್ತೊಬ್ಬ ಚೋಳ ರಾಜಕುಮಾರ ಅಧಿಕಾರ ವಹಿಸಿಕೊಂಡ ಬಗ್ಗೆ ಯಾವುದೇ
ದಾಖಲೆಗಳು ದೊರೆಯುವುದಿಲ್ಲ. ಕುಲಶೇಖರ ಪಾಂಡಿಯನ್ 1279ರಲ್ಲಿ ಹೊಯ್ಸಳರನ್ನು ಕಣ್ಣನೂರು
ಕುಪ್ಪಂನಿಂದ ಹೊರದೂಡಿದರು ಮತ್ತು ಅದೇ ಯುದ್ಧದಲ್ಲಿ ಚೋಳ ರಾಜ ರಾಜೇಂದ್ರ III ನನ್ನೂ
ಸೋಲಿಸಲಾಯಿತು ಮತ್ತು ಅದರ ನಂತರ ಚೋಳ ಸಾಮ್ರಾಜ್ಯ ಸಂಪೂರ್ಣ ಅವನತಿ ಹೊಂದಿತು. ಈ
ರೀತಿಯಾಗಿ ಚೋಳ ಸಾಮ್ರಾಜ್ಯವನ್ನು ಪಾಂಡಿಯನ್ ಸಾಮ್ರಾಜ್ಯ ಅವನತಿಯತ್ತ ದೂಡಿತು ಮತ್ತು
ಕತ್ತಲಿನಲ್ಲಿ ಮುಳುಗಿತು ಮತ್ತು 13 ನೇ ಶತಮಾನದ ಹೊತ್ತಿಗೆ ಸಂಪೂರ್ಣ ಅವನತಿ ಹೊಂದಿತು.
ಸರ್ಕಾರ ಮತ್ತು ಸಮಾಜ:
ಚೋಳ ದೇಶ: ತಮಿಳು ಸಂಪ್ರದಾಯದ ಪ್ರಕಾರ ಹಳೇ ಚೋಳರ ದೇಶವು ಈಗಿನ
ತಮಿಳು ನಾಡಿನ ತಿರುಚನಾಪಳ್ಳಿ ಜಿಲ್ಲೆ ಮತ್ತು ತಂಜಾವೂರು ಜಿಲ್ಲೆ ಯ ಭಾಗಗಳನ್ನು
ಒಳಗೊಂಡಿತ್ತು. ಕಾವೇರಿ ನದಿ ಮತ್ತು ಅದರ ಉಪನದಿಗಳು ಈ ಪ್ರಾಂತದಲ್ಲಿ ಹೆಚ್ಚಾಗಿ
ಹರಿಯುತ್ತಿದ್ದು, ಸಮುದ್ರಮಟ್ಟಕ್ಕೆ ಹೋದಂತೆಲ್ಲಾ ಯಾವುದೇ ಪರ್ವತಗಳು ಅಥವಾ
ಕಣುವೆಗಳಿಲ್ಲದ ಇಳಿಜಾರು ಪ್ರದೇಶವಾಗುತ್ತದೆ. ಕಾವೇರಿ ನದಿಯುಪೊನ್ನಿ (ಬಂಗಾರ) ನದಿ
ಎಂದು ಕರೆಯಲ್ಪಡುತ್ತಿದ್ದು ಚೋಳದ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಕಾವೇರಿ ನದಿಯ ವಾರ್ಷಿಕ ಪ್ರವಾಹವು ಆದಿಪೆರುಕ್ಕು , ಎಂಬ ಆಚರಣೆಯ ಮೂಲಕ ದೇಶದ ಎಲ್ಲಾ ಜನರು ಭಾಗವಹಿಸುವ ಒಂದು ಹಬ್ಬಕ್ಕೆ ಸಂಕೇತವಾಗಿದೆ.
ಕಾವೇರಿಯ ಪ್ರಸ್ಥಭೂಮಿಯಲ್ಲಿರುವ ಕಾವೇರಿಪೊಂಪಟ್ಟಿನಂ ಎಂಬುದು ಪ್ರಮುಖ ರೇವು
ಪಟ್ಟಣವಾಗಿತ್ತು. ಪೋಲೆಮಿ ಎಂಬ ಹೊಸ ಮತ್ತು ನಾಗಪಟ್ಟಿನಂ ಎಂಬ ಇನ್ನುಂದು ರೇವು
ಪಟ್ಟಣಗಳು ಚೋಳರ ಪ್ರಮುಖ ಕೆಂದ್ರಗಳಾಗಿದ್ದವು. ಈ ಎರಡು ನಗರಗಳು ವ್ಯಾಪಾರ ಮತ್ತು
ವಾಣಿಜ್ಯ ಕೇಂದ್ರಗಳಾದದ್ದಷ್ಟೇ ಅಲ್ಲದೆ, ಬೌದ್ಧ ಧರ್ಮವನ್ನು ಒಳಗೊಂಡಂತೆ ಹಲವಾರು
ಧರ್ಮಗಳನ್ನು ಆಕರ್ಷಿಸಿತು.. ರೋಮನ್ ಹಡಗುಗಳೂ ಸಹ ಈ ರೇವು ಪಟ್ಟನಗಳ ಮೂಲಕ ಹಾದು
ಹೋಗುತ್ತಿದ್ದವು. ಕಾವೇರಿ ನದಿಯ ಮುಖಜ ಭೂಮಿಯ ಬಳಿಯಲ್ಲಿ ಸಾಮಾನ್ಯಯುಗದ ಮೊದಲ
ಶತಮಾನಗಳಬಗ್ಗೆ ಹೇಳುವ ರೋಮನ್ ನ ಕೆಲವು ನಾಣ್ಯಗಳನ್ನು ಪತ್ತೆ ಹಚ್ಚಲಾಗಿದೆ.
ಇತರ ಪ್ರಮುಖನಗರಳೆಂದರೆ ತಂಜಾವೂರು, ಉರೈಯೂರ್ ಮತ್ತು ಈಗಿನ ಕುಂಬಕೋಣಂಎಂದು
ಕರೆಯಲ್ಪಡುವಕುದಾಂತೈ. ರಾಜೆಂದ್ರ ಚೋಳನು ರಾಜಧಾನಿಯನ್ನು ಗಂಗೈಕೊಂಡ ಚೋಳಪುರಂಗೆ
ಬದಲಾಯಿಸಿದ ನಂತರ ತಂಜಾವೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.
ನಂತರದ ಚೋಳರ ದೊರೆಗಳು ತಮ್ಮ ರಾಜಧಾನಿಗಳನ್ನು ಆಗಾಗ್ಗೆ ಬದಲಯಿಸುತ್ತಿದ್ದು,
ಚಿದಂಬರಂ, ಮದುರೈ ಮತ್ತು ಕಾಂಚಿಪುರಂನಂತಹ ನಗರಗಳನ್ನು ತಮ್ಮ ಸಂಸ್ಥಾನಗಳ
ರಾಜಧಾನಿಗಳನ್ನಾಗಿ ಮಾಡಿಕೊಂಡರು.
ಸರ್ಕಾರದ ಗುಣಲಕ್ಷಣಗಳು: ಚೋಳರ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ
ಸಂಪೂರ್ಣ ದಕ್ಷಿಣಭಾರತವು ಏಕ ಸರ್ಕಾರದ ಅಡಿಗೆ ಒಳಪಟ್ಟಿತು, ಇದರಿಂದ ಸಾರ್ವಜನಿಕ
ಆಡಳಿತದ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಯಿತು. ಸಂಗಮರ ಕಾಲದಲ್ಲಿ ಚೋಳರ
ಸರ್ಕಾರವು ಏಕಚಕ್ರಾಧಿಪತ್ಯ ವ್ಯವಸ್ಥೆಯನ್ನು ಹೊಂದಿತ್ತು. ಹೇಗೂ, ಆರಂಭ ಕಾಲದ ಸ್ಥಳೀಯ
ನಾಯಕರಿಗೂ ಮತ್ತು ರಾಜರಾಜಚೋಳನ ಸಾಮ್ರಾಜ್ಯಗಳಂತಹ ಮತ್ತು ಅವನ ಉತ್ತರಾಧಿಕಾರಿಗಳ ನಡುವೆ
ಕೆಲವೇಸಾಮಾನ್ಯ ಲಕ್ಷಣಗಳಿದ್ದವು.
980ಮತ್ತು c. 1150ರ ನಡುವೆ ಚೋಳ ಸಾಮ್ರಾಜ್ಯವು ಇಡೀ ದಕ್ಷಿಣ ಭಾರತದ ಪರ್ಯಾಯ
ದ್ವೀಪವನ್ನು ಆಕ್ರಮಿಸಿಕೊಂಡಿತ್ತು.ಇದು ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಯವರೆಗೂ
ಮತ್ತು ಉತ್ತರದಲ್ಲಿ ತುಂಗಭದ್ರಾನದಿ ಮತ್ತು ವೆಂಗಿಯ ಗಡಿಭಾಗದಿಂದ
ಸುತ್ತುವರೆಯಲ್ಪಟ್ಟಿತ್ತು. ವೆಂಗಿ ತನ್ನದೇ ಆದ ರಾಜಕೀಯ ಅಸ್ಥಿತ್ವವನ್ನು ಹೊಂದಿದ್ದರೂ,
ಅದು ತನ್ನ ಎಲ್ಲಾ ಕಾರ್ಯಾಚರಣೆಗಳಿಗಾಗಿ ಚೋಳ ಸಮ್ರಜ್ಯವನ್ನು ಅವಲಂಬಿಸಿತ್ತು. ಚೋಳರ
ಚಕ್ರಾಧಿಪತ್ಯ ಗೋದಾವರಿ ನದಿಯ ತಟದವರೆಗೂ ವಿಸ್ತರಣೆ ಹೊಂದಿತು.
ತಂಜವೂರು ಮತ್ತು ನಂತರ ಗಂಗೈಕೊಂಡ ಚೋಳಪುರಂ ಸರ್ವಭೌಮ ರಾಜಧಾನಿಗಳಾದವು. ಹೇಗೂ.
ಕಾಂಚಿಪುರಂ ಮತ್ತು ಮದುರೈಗಳು ಪ್ರಾಂತೀಯ ರಾಜಧಾನಿಗಳಾಗಿದ್ದು, ಅಲ್ಲಿ ಕೆಲವು
ಸಾಂಧರ್ಬಿಕ ಸಭೆಗಳನ್ನು ನಡೆಸಲಾಗುತ್ತಿತ್ತು. ರಾಜನು ಪರಮಶ್ರೇಷ್ಟ ನಾಯಕ ಹಾಗೂ
ದಯಾಳುವಾದ ಸರ್ವಾಧಿಕಾರಿಯಾಗಿದ್ದನು. ಆತನ ಆಡಳಿತ ಪಾತ್ರವು ಯಾವುದೇ ವಿಚಾರಗಳನ್ನು ತನ್ನ
ಗಮನಕ್ಕೆ ತಂದಾಗ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕ ಆದೇಶಗಳನ್ನು
ಕೊಡುವುದನ್ನು ಒಳಗೊಂಡಿತ್ತು. ರಾಜನಿಗೆ ತನ್ನ ಆಡಳಿತ ಕಾರ್ಯಗಳಗೆ ಸಹಕರಿಸಲು ಮತ್ತು ಆತನ
ಆದೇಶಗಳನ್ನು ಕಾರ್ಯಾಚರಣೆಗೆ ತರಲು.ಒಬ್ಬ ಸಾಮರ್ಥ್ಯವುಳ್ಳ ಅಧಿಕಾರಿಯು ಸಹಾಯ
ಮಾಡುತ್ತಿದ್ದನು. ಶಾಸಕಾಂಗ ಅಥವಾ ಶಾಸಕಾಂಗವ್ಯವಸ್ಥೆಯ ಕೊರತೆಯಿಂದ , ರಾಜನ ನ್ಯಾಯಗಳು
ಒಬ್ಬ ವ್ಯಕ್ತಿಯ ಒಳ್ಳೆಯತನವನ್ನು ಅವಲಂಬಿಸಿತ್ತುಮತ್ತು ಆತನಿಗೆ ಧರ್ಮ ದಲ್ಲಿದ್ದ
ನಂಬಿಕೆ – ಆತನ ನ್ಯಾಯತೀರ್ಪಿಗೆ ಕಾರಣವಾಗಿತ್ತು.
ಚೋಳರು ಅನೇಕ ದೇವಾಲಯ ಗಳನ್ನು ನಿರ್ಮಿಸಿ ಅವುಗಳಲ್ಲಿ ತಮ್ಮ ಬೆಲೆಬಾಳುವ
ವಸ್ತುಗಳನ್ನು ಇರಿಸಿದ್ದರು. ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿ ಅಷ್ಟೇ ಅಲ್ಲದೇ, ತಮ್ಮ
ಸಮುದಾಯಕ್ಕೆ ಅನುಕೂಲವಾಗುವಂತಹ ವಾಣಿಜ್ಯ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು.
ಸ್ಥಳೀಯ ಸರ್ಕಾರ: ಪ್ರತಿಯೊಂದು ಹಳ್ಳಿಯೂ ಸ್ವ-ಸರ್ಕಾರ
ಘಟಕವನ್ನು ಹೊಂದಿತ್ತು. ಹಲವಾರು ಗ್ರಾಮಗಳು ಸೇರಿ ಆಯಾ ಸ್ಥಳಗಳಿಗೆ ತಕ್ಕಂತೆ ಅವುಗಳನ್ನು
ಕುರ್ರಂ , ನಾಡು ಅಥವಾ ಕೊಟ್ಟ್ರಮ್ , ಎಂದು ಕರೆಯಲಾಗುತ್ತಿತ್ತು.. ಹಲವಾರು ಕುರ್ರಮ್
ಗಳು ಸೇರಿ ಒಂದುವಲನಾಡು ಎಂದು ಕರೆಯಲಾಗುತ್ತಿತ್ತು. ಈ ರಚನೆಗಳು ನಿರಂತರ ಬದಲಾವಣೆಗಳಿಗೆ
ಒಳಗಾಗುತ್ತಾ, ಚೋಳರ ಕಾಲದುದ್ದಕ್ಕೂ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಲೇ
ಇತ್ತು.
ಚೋಳ ಸಾಮ್ರಾಜ್ಯದಲ್ಲಿ ನ್ಯಾಯ ವಿಚಾರಣೆ ಎಂಬುದು ಸ್ಥಳೀಯ ಸಂಗತಿಯಾಗಿದ್ದು, ಚಿಕ್ಕ
ಪುಟ್ಟ ವ್ಯಾಜ್ಯಗಳನ್ನು ಗ್ರಾಮದ ಹಂತದಲ್ಲೇ ಬಗೆಹರಿಸಲಾಗುತ್ತಿತ್ತು. ಸಣ್ಣ ಪ್ರಮಾಣದ
ಅಪರಾಧಗಳಿಗೆ ದಂಡಗಳನ್ನು ವಿಧಿಸಲಾಗುತ್ತಿತ್ತು ಅಥವಾ ಅಪರಾಧಿಯು ಧಾರ್ಮಿಕ ಕಾರ್ಯಗಳಿಗೆ
ಕೆಲವು ದಾನಗಳನ್ನು ನೀಡಬೇಕಾಗಿತ್ತು. ನರಹತ್ಯೆ ಮತ್ತು ಕೊಲೆಯಂತಹ ಅಪರಾಧಗಳಿಗೂ ದಂಡ
ವಿಧಿಸುವುದರ ಮೂಲಕ ಶಿಕ್ಷೆ ಕೊಡಲಾಗುತ್ತಿತ್ತು. ರಾಜದ್ರೋಹದಂತಹ ಅಪರಾಧಗಳನ್ನು ಸ್ವತಃ
ರಾಜನೇ ತೀರ್ಪುಕೊಡುತ್ತಿದ್ದು, ಅದಕ್ಕೆ ಶಿಕ್ಷೆ ಮರಣದಂಡನೆ ಅಥವಾ ಆಸ್ತಿಯನ್ನು
ಮುಟ್ಟುಗೋಲು ಹಾಕಿಕೊಳ್ಳುವುದಾಗಿತ್ತು.
ವಿದೇಶಿ ವ್ಯಾಪಾರ: ಚೋಳರು ವಿದೇಶಿ ವ್ಯಾಪಾರ ಮತ್ತು ಸಮುದ್ರ
ಸಂಬಂಧ ಚಟುವಟಿಕೆಗಳಲ್ಲಿ ಮೇಲುಗೈ ಸಾಧಿಸಿದ್ದು, ಚೀನ ಮತ್ತು ಆಗ್ನೇಯ ಏಷಿಯಾಗಳಲ್ಲೂ
ತಮ್ಮ ಪ್ರಭಾವಬೀರಿದರು. 9ನೇ ಶತಮಾನದಹೊತ್ತಿಗೆ , ದಕ್ಷಿಣ ಭಾರತವು ಸಮುದ್ರ ಚಟುವಟಿಕೆ
ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಉನ್ನತ ಬೆಳವಣಿಗೆಯನ್ನು ಸಾಧಿಸಿತ್ತು. ಭಾರತದ ಪರ್ಯಾಯ
ದ್ವೀಪದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳ ಅಧಿಪತಿಗಳಾಗಿದ್ದ ಚೋಳರು, ಈ ಸಾಹಸ
ಕಾರ್ಯಗಳಲ್ಲಿ ಮಂಚೂಣಿಯಲ್ಲಿದ್ದರು. ಚೀನಾದ ಟಾಂಗ್ ಸಾಮ್ರಾಜ್ಯ , ಶೈಲೇಂದ್ರನ
ಆಡಳಿತದಲ್ಲಿದ್ದ ಮಲಯನ್ ಆರ್ಚಿಪೆಲಗೋ ದ ಶ್ರೀವಿಜಯನ ಸಾಮ್ರಾಜ್ಯಮತ್ತು ಬಾಗ್ದಾದ್ ನ
ಅಬ್ಬಾಸಿದ್ ಕಾಲಿಫತ್ ಅವರ ಪ್ರಮುಖ ವ್ಯಪಾರ ಪಾಲುದಾರರಾಗಿದ್ದರು.
ಚೀನಾದ ಸಾಂಗ್ ಸಾಮ್ರಾಜ್ಯದ ವರದಿಗಳು ದಾಖಲಿಸಿರುವಂತೆ ಚುಲಿಯನ್ (ಚೋಳ) ಎಂಬ
ರಾಯಭಾರಿ 1077, ರಲ್ಲಿ ಚೀನಾದ ಒಂದು ರಾಜಸಭೆಯನ್ನು ಭೇಟಿ ಮಾಡಿದ್ದನು. ಆ ಕಾಲದ
ಚುಲಿಯನನ್ನು ಟಿ-ಹುವಾ-ಕಿಯಾ-ಲೊ ಎಂದು ಕರೆಯುತ್ತಿದ್ದರು. ಈ ಅಕ್ಷರಗಳು
“ದೇವಕುಲೋ(ತುಂಗಾ)”(ಕುಲೋತ್ತುಂಗ ಚೋಳI).ಎಂದಿರಬಹುದು. ಈ ರಾಯಭಾರತ್ವವು ವ್ಯಾಪರ
ಉದ್ದೇಶದಿಂದ ಭೇಟಿ ನೀಡಿದವರಿಗೆ ಅತ್ಯಂತ ಹೆಚ್ಚಿನ ಲಾಭವನ್ನು ತಂದುಕೊಟ್ಟಿದ್ದು,
ವಸ್ತುರೂಪದ ಕಾಣಿಕೆಗಳು, ಗಾಜಿನ ವಸ್ತುಗಳುಮತ್ತು ಸಾಂಬರ ಪದಾರ್ಥಗಳಿಗೆ ಬದಲಾಗಿ 81,800
ತಾಮ್ರದ ನಾಣ್ಯಗಳು ದೊರೆತವು.
ಸುಮಾತ್ರದಲ್ಲಿ ದೊರೆತ ಒಂದು ತಮಿಳಿನ ಶಾಸನದಲ್ಲಿ ನಾನಾದೇಶ ತಿಸೈಯಾಯಿರತ್ತು
ಐನ್ನುತ್ರುವರ್ (“ನಾಲ್ಕು ದೇಶಗಳಿಂದ ಐದು ನೂರು ಮತ್ತು ಹಲವಾರು ಮಾರ್ಗಗಳು” ಎಂದರ್ಥ)
ಎಂಬ ಒಂದು ವ್ಯಾಪಾರ ಸಂಘವು ಚೋಳ ದೇಶದಲ್ಲಿತ್ತು ಎಂದು ತೋರಿಸುತ್ತದೆ. 1088ರ ಶಾಸನಗಳು ,
ಚೋಳರ ಕಾಲದಲ್ಲಿ ಸಮುದ್ರದ ಆಚೆಗಿನ ವ್ಯಾಪಾರಗಳು ಅತ್ಯಂತ ಕ್ರಿಯಾಶೀಲವಾಗಿದ್ದವು
ಎಂಬುದನ್ನು ತೋರಿಸುತ್ತವೆ.
ಚೋಳ ಸಮಾಜ: ಚೋಳರ ಆಳ್ವಿಕೆಯಲ್ಲಿ ಆಗಿದ್ದ ಜನಸಂಖ್ಯೆ ನಿಭಿಡತೆ
ಬಗ್ಗೆ ಅಲ್ಪ ಮಾಹಿತಿ ಇದೆ. ಚೋಳರ ಕ್ಷೇತ್ರದಲ್ಲಿ ಉತ್ತಮ ಜೀವನ ನಡೆಸಲು
ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು ಸಕ್ಷಮರಾಗಬೇಕಿತ್ತು. ಚೋಳರ ಆಳ್ವಿಕೆಯ ಪೂರ್ಣ ಅವಧಿ
ಸಂದರ್ಭದಲ್ಲಿ ಯಾವುದೇ ನಾಗರಿಕನು ಅಶಾಂತಿಯಿಂದಿದ್ದ ಒಂದೇ ಒಂದು ದಾಖಲಾತಿಯು ಇಲ್ಲ.
ಆದರೂ, ಪ್ರಾಕೃತಿಕ ದುರಂತದಿಂದಾಗಿ ಹಸಿವಿಂದ ಸತ್ತಂತಹ ವರದಿಗಳು ದೇಶದಾದ್ಯಂತ
ಹರಡಿತ್ತು.
ಶಾಸನಗಳ ಗುಣಮಟ್ಟವ ಆಗಿನ ಸಮಾಜದಲ್ಲಿ ಅತ್ಯಂತ ಗುಣಮಟ್ಟದ ಸಾಕ್ಷರತೆ ಮತ್ತು
ಶಿಕ್ಷಣವು ಇದ್ದಿತೆಂದು ತೋರಿಸುತ್ತದೆ. ಈ ಶಾಸನಗಳಲ್ಲಿರುವ ಮಾಹಿತಿಯನ್ನು
ಆಸ್ತಾನದಲ್ಲಿದ್ದ ಕವಿಗಳು ಮತ್ತು ಪ್ರತಿಭಾವಂತ ವಿದ್ಯಾವಂತ ಪಂಡಿತರು ಬರೆದಿದ್ದಾರೆ.
ಶಿಕ್ಷಣದ ಸಮಕಾಲೀನತೆಯನ್ನು ಅತಿಮುಖ್ಯವೆಂದು ಪರಿಗಣಿಸಲಾಗಿರಲಿಲ್ಲ:
ವಿಲೇಜ್‍ಕೌನ್ಸಿಲ್‌ಗಳು ಕೆಲವು ಗ್ರಾಮಗಳಲ್ಲಿ ಓದುವುದನ್ನು ಮತ್ತು ಬರೆಯುವದನ್ನು
ಕಲಿಯಲಿಕ್ಕಾಗಿ ಮಕ್ಕಳಿಗೆ ಶಾಲೆಗಳನ್ನು ತೆರೆದಿರುವುದಿದ್ದಾಗಿ ಕೆಲವು ಸಾಂದರ್ಭಿಕ
ಸಾಕ್ಷಿಗಳು ಇವೆ, ಹಾಗೆಯೇ ಸಾಮಾನ್ಯಜನರಿಗೆ ಶಿಕ್ಷಣ ಪದ್ದತಿಯು ಇರಲಿಲ್ಲವೆಂಬುದಕ್ಕೆ
ಸಾಕ್ಷಿಯು ಇದೆ.ಸಾಂದರ್ಭಿಕ ಶಿಕ್ಷಣವು ಸಾಮಾನ್ಯವಾಗಿ ಪರಂಪರೆಯ ತರಬೇತಿಯಾಗಿದ್ದು ಆ
ಪ್ರತಿಭೆಯನ್ನು ತಂದೆಯು ತನ್ನ ಮಗನಿಗೆ ಧಾರೆ ಎರೆಯುತ್ತಿದ್ದನು. ತಮಿಳು ಭಾಷೆಯು
ಸಾಮೂಹಿಕ ಮಾಧ್ಯಮವಾಗಿತ್ತು; ಧಾರ್ಮಿಕ ಮಠಗಳು (ಮಾತಾ ಅಥವಾ ಗತಿಕಾ )ಗಳು ಕಲಿಕೆಯ
ಕೇಂದ್ರಗಳಾಗಿದ್ದವು. ಅವುಗಳು ಸರಕಾರದಿಂದ ಪ್ರೋತ್ಸಾಹಿಸಲ್ಪಡುತ್ತಿದ್ದವು.
ಸಾಂಸ್ಕೃತಿಕ ಕೊಡುಗೆಗಳು: ಚೋಳರ ಆಳ್ವಿಕೆಯಲ್ಲಿ, ತಮಿಳು ದೇಶವು
ಕಲೆ, ಧಾರ್ಮಿಕತೆ ಮತ್ತು ಸಾಹಿತ್ಯದಲ್ಲಿ ಹೊಸ ಭಾಷ್ಯವನ್ನು ಹೊಂದಿ ಉತ್ತುಂಗದ
ಸ್ಥಿತಿಯನ್ನು ಮುಟ್ಟಿತ್ತು. ಈ ಕ್ಷೇತ್ರಗಳಲ್ಲಿ ಚೋಳರ ಕಾಲದಲ್ಲಾದ ಆಂದೋಲನಗಳು ಪಲ್ಲವರ
ಆಳ್ವಿಕೆಯ ಆರಂಭದಲ್ಲಿ ಕಾಲದಲ್ಲಿ ಪ್ರಾರಂಭವಾಗಿತ್ತು. ರಾಜಮಂದಿರದ ದೇವಸ್ಥಾನಗಳ
ಮಾದರಿಯಲ್ಲಿ ನಿರ್ಮಿಸಿದ ವಾಸ್ತುಶಿಲ್ಪದ ಸ್ಮಾರಕಗಳು ಮತ್ತು ಕಲ್ಲಿನ ವಾಸ್ತುಶಿಲ್ಪವು
ಮತ್ತುಕಂಚಿನ ವಾಸ್ತುಶಿಲ್ಪಗಳು ಈ ಮೊದಲು ಭಾರತದಲ್ಲಿ ಇರಲಿಲ್ಲ.
ಚೋಳರ ಕದರಂ (ಕೇಡ)ದ ವಿಜಯದಿಂದಾಗಿ ಮತ್ತು ಶ್ರೀವಿಜಯ ಮತ್ತು ಚೀನಿಯರ
ಸಾಮ್ರಾಜ್ಯದೊಂದಿಗೆ ಮುಂದುವರಿದ ವಾಣಿಜ್ಯಕ ಸಂಪರ್ಕದಿಂದಾಗಿ ಸ್ಥಳೀಯ ಸಾಂಸ್ಕೃತಿ ಮೇಲೆ
ಪ್ರಭಾವ ಬೀರಿತು. ಇಂದಿಗೂ ದೊರಕುವ ಅನೇಕ ಉದಾಹರಣೆಗಳೆಂದರೆ ಹಿಂದೂ ಸಂಸ್ಕೃತಿ
ಪ್ರಭಾವವನ್ನು ಇಂದಿಗೂ ದಕ್ಷಿಣ ಏಷ್ಯಾದುದ್ದಕ್ಕೂ ಚೋಳರ ಕೊಡುಗೆಗೆ ಆಭಾರಿಯಾಗಿದ್ದಾರೆ.
ಕಲೆ: ಚೋಳರು ಪಲ್ಲವ ವಂಶ ಮತ್ತು ಗುರುತರ ಕೊಡುಗೆಗಳನ್ನು
ದ್ರಾವಿಡನ್ ದೇವಸ್ಥಾನಗಳ ಮಾದರಿಯಲ್ಲಿ ದೇವಸ್ಥಾನಗಳ ನಿರ್ಮಾಣವನ್ನು ಮುಂದುವರಿಸಿದರು.
ಅವರು ಕಾವೇರಿ ನದಿಯ ತಟದಲ್ಲಿ ಅಸಂಖ್ಯಾತ ಶಿವನ ದೇವಸ್ಥಾನಗಳನ್ನು ನಿರ್ಮಿಸಿದರು. 10ನೇ
ಶತಮಾನದ ಅಂಚಿನವರೆಗೂ ಈ ದೇವಸ್ಥಾನಗಳ ವಿಸ್ತಾರವು ತುಂಬಾ ದೊಡ್ಡದಗಿರಲಿಲ್ಲ.
ಪ್ರತಿಭಾವಂತ ರಾಜರಾಜಚೋಳ ಮತ್ತು ಅವನ ಮಗ ಒಂದನೇ
ರಾಜೇಂದ್ರ ಚೋಳರಿಂದ ದೇವಸ್ಥಾನಗಳ ಕಟ್ಟಡಗಳು ಅಭಿಯಾನವನ್ನು ಹೊಂದಿದವು. ಚೋಳರ
ವಾಸ್ತುಶಿಲ್ಪವು ತಂಜಾವೂರಿನ ಮತ್ತು ಗಂಗೈಕೊಂಡಚೋಳಪುರಂ ದೇವಸ್ಥಾನಗಳಲ್ಲಿ ಪ್ರಬುದ್ಧತೆ
ಮತ್ತು ಭವ್ಯತೆಯ ಭಾವನೆಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಅತ್ಯಂತ
ಉತ್ಕ್ರುಷ್ಟವಾದ ತಂಜಾವೂರಿನಲ್ಲಿರುವ ಶಿವ ದೇವಸ್ಥಾನವು 1009ರ ಸುಮಾರಿನಲ್ಲಿ
ಪೂರ್ಣಗೊಂಡಿತು. ಇದು ರಾಜರಾಜನ ಸಾಧನೆಗಳ ಸ್ಮರಿಸುವಂತಹ ಸ್ಮರಣಿಕೆಯಾಗಿದೆ. ಆ ಸಮಯದಲ್ಲಿ
ಭಾರತದಾದ್ಯಂತವಿದ್ದ ದೇವಸ್ಥಾನಗಳಲ್ಲಿ, ಇದು ಅತ್ಯಂತ ವಿಸ್ತಾರವಾದ ಮತ್ತು ಎತ್ತರವಾದ
ದಕ್ಷಿಣ ಭಾರತದ ವಾಸ್ತುಶಿಲ್ಪವಾಗಿದೆ.
ರಾಜೇಂದ್ರ ಚೋಳನು ಅವನ ಪೂರ್ವಿಕರ ಉತ್ಕ್ರುಷ್ಟತೆಯನ್ನು ಪ್ರತಿಬಿಂಭಿಸುವ ಇರಾದೆಯಿಂದ
ಗಂಗೈಕೊಂದಚೋಳಪುರಂನಲ್ಲಿನ ಗಂಗೈಕೊಂದಚೋಳಿಸ್ವರಂ ದೇವಸ್ಥಾನವನ್ನು ನಿರ್ಮಿಸಿದನು. ಅದು
ಸುಮಾರು 1030 ರಲ್ಲಿ ಪೂರ್ಣಗೊಂಡಿತು. ಇದೇ ಶೈಲಿಯಲ್ಲಿ ಕೇವಲ ಎರಡು ದಶಕಗಳಲ್ಲಿ
ತಂಜಾವೂರಿನಲ್ಲಿ ಇನ್ನೊಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಚೋಳರ ಸಾಮ್ರಾಜ್ಯದಲ್ಲಿನ
ರಾಜೇಂದ್ರನ ಆಳ್ವಿಕೆಯಲ್ಲಿ ಅವನ ರಾಜ್ಯ ಅತ್ಯಂತ ಸಮೃದ್ಧರಾಜ್ಯವಾಗಿತ್ತು.
ಯುನೆಸ್ಕೋದಿಂದ ತಂಜಾವೂರಿನಲ್ಲಿರುವ ಬೃಹದೀಶ್ವರ ಗಂಗೈಕೊಂಡಚೋಳಪುರಂ ಮತ್ತು
ದಾರಾಸುರಂನಲ್ಲಿರುವ ಐರಾವತೇಶ್ವರ ದೇವಸ್ಥಾನಗಳನ್ನು ಪ್ರಪಂಚದ ಪಾರಂಪರಿಕ
ಕ್ಷೇತ್ರಗಳೆಂದು ನಿರ್ಧರಿಸಲ್ಪಟ್ಟಿವೆ. ಮತ್ತು ಅದನ್ನು ಗ್ರೇಟ್ ಲಿವಿಂಗ್ ಚೋಳ
ದೇವಸ್ಥಾನಗಳೆಂದು ಉದಾಹರಿಸಲಾಗಿದೆ.
ಚೋಳರ ಕಾಲವು ಮೂರ್ತಿಗಳು ಮತ್ತು ಕಂಚಿನ ಪ್ರತಿಮೆಗಳಿಗಾಗಿ ಉಲ್ಲೇಖನೀಯವಾಗಿದೆ.
ಶ್ವದಾದ್ಯಂತವಿರುವ ಮ್ಯೂಸಿಯಂಗಳಲ್ಲಿ ಸಂಗ್ರಹಿಸಿರುವಂತಹ ಮತ್ತು ದಕ್ಷಿಣ ಭಾರತದ
ದೇವಸ್ಥಾನಗಳಲ್ಲಿ ಇಂತಹ ವಿವಿಧ ಭಂಗಿಯ ಶಿವನ ಕೆತ್ತನೆಗಳಾದಂತಹ ವಿಷ್ಣು ಮತ್ತು ಅವನ
ಪತ್ನಿ ಲಕ್ಷ್ಮಿ ಮತ್ತು ಶೈವ ಭಕ್ತನನ್ನು ನೋಡಬಹುದಾಗಿದೆ. ತುಂಬಾ ದೀರ್ಘವಾದ ಪರಂಪರೆ
ಮೂಲಕ ಐಕಾನೊಗ್ರಾಫಿಕ್ ಸಂವಾದವನ್ನು ಹುಟ್ಟುಹಾಕಿದರೂ, 11ನೇ ಮತ್ತು 12ನೇ
ಶತಮಾನಗಳಲ್ಲಿದ್ದ ಅತ್ಯಂತ ಹೆಚ್ಚಿದ್ದ ಸ್ವಾತಂತ್ರ್ಯದಿಂದಾಗಿ ಈ ಶಿಲ್ಪಕಲೆಗಳು
ಶಾಸ್ತ್ರೀಯ ಅನುಗ್ರಹ ಮತ್ತು ಭವ್ಯತೆಯನ್ನು ಸಾರುತ್ತವೆ. ಇದಕ್ಕೆ ಉತ್ತಮ ಉದಾಹರಣೆಯಾಗಿ
ನಟರಾಜ ನೃತ್ಯದೇವತೆಯನ್ನು ಕಾಣಬಹುದಗಿದೆ.
ಸಾಹಿತ್ಯ: ಸಾಮ್ರಾಜ್ಯಶಾಹಿ ಚೋಳರ ಅವಧಿಯು (850–1200) ತಮಿಳು
ಸಂಸ್ಕೃತಿಯ ಸುವರ್ಣ ಯುಗವಾಗಿದ್ದು, ಸಾಹಿತ್ಯದ ಪ್ರಾಮುಖ್ಯತೆಯಿಂದ ಗುರುತಿಸಲಾಗಿದೆ.
ಚೋಳರ ಕೆತ್ತನೆ ಬರಹಗಳು ಹಲವಾರು ಕೆಲಸಗಳನ್ನು ಉಲ್ಲೇಖಿಸುತ್ತವೆ ಆದರೆ ಅದರಲ್ಲಿ
ಹೆಚ್ಚಿನವುಗಳು ಕಳೆದುಹೋಗಿವೆ.
ಕಲಾಭ್ರ ವಂಶಜರ ಅವಧಿಯಲ್ಲಿ ಹಿಂದೂಧರ್ಮದ ಅಧೋಬಿಂದುವಿನಿಂದ ಅದರ
ಪುನರುಜ್ಜೀವನಕ್ಕಾಗಿ ನಿರ್ಮಿಸಿದ ಹಲವಾರು ದೇವಾಲಯಗಳು ಮತ್ತು ಇದರಿಂದಾಗಿ ಶೈವ ಮತ್ತು
ವೈಷ್ಣವ ಭಕ್ತಿ ಸಾಹಿತ್ಯವನ್ನು ಸೃಷ್ಟಿಸಿದಂತಾಯಿತು. ಹಿಂದಿನ ಶತಮಾನಗಳಿಗಿಂತ ಹೆಚ್ಚು
ಜೈನ ಮತ್ತು ಬೌದ್ಧ ಲೇಖಕರು ಕೂಡಾ ಮೆರೆದರು. ತಿರುತಕ್ಕಟೆವರ್ ರಚಿಸಿದ ಜೀವಿಕ-ಚಿಂತಾಮಣಿ
ಮತ್ತು ತೊಲಮೊಲಿ ರಚಿಸಿದ ಸುಲಾಮಣಿ ಗಳು ಹಿಂದೂಗಳಲ್ಲದ ಲೇಖಕರಾಗಿದ್ದಾರೆ. ಮಹಾಕವಿಯ
ಎಲ್ಲಾ ಗುಣಲಕ್ಷಣಗಳು ತಿರುತಕ್ಕಟೆವರ್‌ನಲ್ಲಿವೆ ಎಂದು ಗುರುತಿಸಲಾಗಿದೆ. ಕಂಬನ್‌ನ
ಮೇರುಕೃತಿ ರಾಮಾವತಾರಂ ಗೆ ಇದು ಮಾದರಿಯೆಂದು ಪರಿಗಣಿಸಲಾಗುತ್ತದೆ.
ಕುಲೋತುಂಗ ಚೋಳ IIIರ ಅಳ್ವಿಕೆಯ ವಧಿಯಲ್ಲಿ ಕದಮ್ ಮೆರೆದರು. ಅವರ ರಾಮಾವತಾರಮ್
(ಕಂಬರಾಮಾಯಣಮ್ ಎಂದು ಸಹ ಸೂಚಿಸಲ್ಪಡುವ) ತಮಿಳು ಸಾಹಿತ್ಯದಲ್ಲಿನ ಒಂದು ಮುಖ್ಯ
ಮಹಾಕೃತಿಯಾಗಿದೆ, ಮತ್ತು ಲೇಖಕ ಇವರು ವಾಲ್ಮೀಕಿ’ಯ ರಾಮಾಯಣವನ್ನು ಅನುಸರಿಸಿದರು ಎಂದು
ಹೇಳಿದ್ದರೂ, ಸಾಧಾರಣವಾಗಿ ಅವರ ಈ ಕಾರ್ಯವು ಸಾಮಾನ್ಯ ಅನುವಾದ ಅಥವಾ ಸಂಸ್ಕೃತ ಮಹಾ
ಕಾವ್ಯದ ಅನುಸರಣೆ ಅಲ್ಲ ಎಂದು ಅಂಗೀಕರಿಸಲಾಯಿತು: ಬಣ್ಣ ಮತ್ತು ಅವರ ಸ್ವಂತ ಸಮಯದ
ಕಾಲ್ಪನಿಕತೆಯೊಂದಿಗೆ ಅವರ ನಿರೂಪಣೆಗೆ ಕಂಬನ್ ಅರ್ಥ ಭಾವ ನೀಡಿದರು; ಕೋಸಲ ಬಗೆಗಿನ ಅವರ
ವರ್ಣನೆಯು ಚೋಳ ದೇಶದ ವೈಶಿಷ್ಟ್ಯತೆಯ ಒಂದು ಪ್ರಮುಖ ವರ್ಣನೆ ಆಗಿದೆ.
ಜಯಮ್‌ಕೋದಂಡರ್’ರ ಮೇರು ಕೃತಿ ಕಲಿಂಗತ್ತುಪರಾಣಿ ಯು ಇತಿಹಾಸ ಮತ್ತು ಕಾಲ್ಪನಿಕ
ಒಡಂಬಡಿಕೆಗಳ ನಡುವಿನ ಸ್ಪಸ್ಟ ಮಿತಿಯನ್ನು ತೋರಿಸುವ ನಿರೂಪಣೆಯ ಕಾವ್ಯದ
ಉದಾಹರಣೆಯಾಗಿದೆ. ಇದು ಕಲಿಂಗದಲ್ಲಿನ ಕುಲೋತುಂಗ ಚೋಳ I’ರ ಯುದ್ಧದ ಸಮಯದಲ್ಲಿನ
ಪ್ರಸಂಗಗಳನ್ನು ವರ್ಣಿಸುತ್ತದೆ ಮತ್ತು ಆಡಂಬರ ಮತ್ತು ಯುದ್ಧದ ಸಂದರ್ಭಗಳನ್ನಷ್ಟೇ
ವಿವರಿಸುವುದಲ್ಲದೆ, ಕ್ಷೇತ್ರದ ಬೆಚ್ಚಿಸುವ ವಿವರಣೆಯನ್ನು ಸಹ ನೀಡುತ್ತದೆ. ಪ್ರಸಿದ್ಧ
ತಮುಳು ಕವಿ ಒತ್ತಕುಟ್ಟನ್ ಕುಲೋತ್ತುಂಗ ಚೋಳ Iರ ಕಾಲದವರಾಗಿದ್ದಾರೆ ಮತ್ತು ಇವರು
ಕುಲೋತ್ತುಂಗರ ಮೂವರು ಉತ್ತರಾಧಿಕಾರಿಗಳ ಆಸ್ಥಾನದಲ್ಲಿ ಸೇವೆಸಲ್ಲಿಸಿದ್ದರು.
ಒತ್ತಕುಟ್ಟನ್ ಕುಲೋತ್ತುಂಗ ಚೋಳನ್ ಉಲ ವನ್ನು ಬರೆದರು, ಇದು ಚೋಳ ರಾಜನ ಸದ್ಗುಣಗಳನ್ನು
ಶ್ಲಾಘಿಸುವ ಪದ್ಯ.
ಧರ್ಮ ನಿಷ್ಠೆಯ ಸಾಹಿತ್ಯದ ರಚನೆಯ ಆಸಕ್ತಿಯು ಚೋಳರ ಅವಧಿಯಲ್ಲಿಯು ಮುಂದುವರೆಯಿತು
ಮತ್ತು ಶೈವ ಸಿದ್ದಾಂತವನ್ನು 11 ಪುಸ್ತಕಗಳಲ್ಲಿ ಯೋಜಿಸುವಿಕೆಯು ನಂಬಿ ಅಂದರ್ ನಂಬಿಯ
ಕೆಲಸವಾಗಿತ್ತು, ಇವರು 10ನೆಯ ಶತಮಾನದ ಕೊನೆಯವರಾಗಿದ್ದರು. ಅದಾಗ್ಯೂ, ಸಾಪೇಕ್ಷವಾಗಿ
ಕೆಲವೇ ವೈಷ್ಣವರ ಕೆಲಸಗಳನ್ನು ನಂತರದ ಚೋಳರ ಅವಧಿಯಲ್ಲಿ ಕಲ್ಪಿಸಲಾಯಿತು, ಬಹುಶಃ
ವೈಷ್ಣವರ ಬಗೆಗೆ ನಂತರದ ಚೋಳ ಅರಸರು ಹೊಂದಿದ್ದ ಸ್ಪಷ್ಟ ದ್ವೇಷವೇ ಇದಕ್ಕೆ
ಕಾರಣವಾಗಿರಬುದು.
ಧರ್ಮ: ಸಾಧಾರಣವಾಗಿ, ಚೋಳರು ಹಿಂದು ಧರ್ಮದ ಅನುಯಾಯಿಗಳು. ಅವರ
ಇತಿಹಾಸದ ಉದ್ದಕ್ಕೂ, ಬುದ್ದಧರ್ಮ ಮತ್ತು ಜೈನಧರ್ಮದ ಉದ್ಭವವು, ಪಲ್ಲವ ಮತ್ತು ಪಂಡ್ಯ
ರಾಜವಂಶದ ದೊರೆಗಳ ಹಾಗೆ, ಅವರ ಮೇಲೆ ಪ್ರಭಾವಬೀರಲಿಲ್ಲ. ಮುಂಚಿನ ಚೋಳರು ಸಹ ಶಾಸ್ತ್ರೀಯ
ಹಿಂದು ನಂಬಿಕೆಯ ರೂಪಾಂತರವನ್ನೇ ಅನುಸರಿಸಿದ್ದರು. ಪುರಾಣನುರು ನಲ್ಲಿ, ತಮಿಳು
ದೇಶದಲ್ಲಿನ ವೇದ ಹಿಂದುಧರ್ಮದಲ್ಲಿನ ಕರಿಕಲ ಚೋಳ’ರ ನಂಬಿಕೆಗೆ ಪುರಾವೆಗಳಿವೆ.
ಕೊಸೆಂಗನ್ನನ್, ಮುಂಚಿನ ಮತ್ತೊಬ್ಬ ಚೋಳ, ಸಂಗಮ್ ಸಾಹಿತ್ಯ ಮತ್ತು ಶೈವ ಸಿದ್ದಾಂತದಲ್ಲಿ
ಸಂತನಾಗಿ ಎರಡರಲ್ಲೂ ಆಚರಿಸಿಲಾಗಿತ್ತು.
ಶಿವ ದೇವರಿಗೆ ಅರ್ಪಿಸಿದ್ದ ಅತ್ಯಂತ ದೊಡ್ಡದಾದ ಮತ್ತು ಬಹಳ ಪ್ರಮುಖವಾದ
ದೇವಸ್ಥಾನವನ್ನು ಚೋಳರು ನಿರ್ಮಿಸಿದಾಗ, ಅವರು ನಿಷ್ಠಾವಂತ ಶೈವರ, ಅಥವಾ ಕೇವಲ ಶೈವ
ಧರ್ಮದ ಅನುಯಾಯಿಗಳು ಅಥವಾ ಅವರು ಇತರ ಧರ್ಮಗಳನ್ನು ಕಂಡಿಸಿಲ್ಲ ಎಂದು ಯಾವುದೇ
ವಿಧಾನವಿಲ್ಲದೆ ನಿರ್ಣಯಿಸಬಹುದಾಗಿದೆ. ಎರಡನೆಯ ಚೋಳ ರಾಜ ಆದಿತ್ಯ I ತಾವಾಗಿಯೇ ಶಿವ
ಮತ್ತು ಭಗವಾನ್ ವಿಷ್ಣುವಿನ ಕೆಲವು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆಂಬ ವಾಸ್ತವದಿಂದ
ಇದನ್ನು ಹೇಳಲಾಯಿತು. ಸತ್ಯವಾಗಿಯು ಎಡಿ 890ನಲ್ಲಿನ, ಅವರ ಶಿಲಾ ಶಾಸನಗಳು, ಅವರ
ಜಹಗೀರಿಯಗಳು ಮತ್ತು ಅವರೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದ ಪಾಶ್ಚಿಮಾತ್ಯ ಗಂಗರ
ದೇಶದಲ್ಲಿನ ಶ್ರೀರಂಗಪಟ್ಟಣಂ (ಈಗಿನ ಕರ್ನಾಟಕದ ಮಂಡ್ಯ ಜಿಲ್ಲೆ)ಯಲ್ಲಿ, ರಂಗನಾಥ
ದೇವಸ್ಥಾನದ ನಿರ್ಮಾಣಕ್ಕೆ ಅವರ ಕೊಡುಗೆಯನ್ನು ಸೂಚಿಸುತ್ತವೆ. ನಿಜವಾಗಿಯು ಆದಿತ್ಯ I
(871-903 ಎಡಿ)ರ ಕಾಲದಲ್ಲಿ ಕನ್ನಡ ದೇಶದ ಗಂಗರು, ಆ ಕುಟುಂಬದಲ್ಲಿನವರನ್ನು ವಿವಾಹ
ಮಾಡಿಕೊಳ್ಳುವುದರ ಮೂಲಕ ಮತ್ತು ಆಧುನಿಕ ಶ್ರೀರಂಗಪಟ್ಟಣಂನಲ್ಲಿ ಶ್ರೀ ರಂಗನಾಥ
ದೇವಸ್ಥಾನದ ನಿರ್ಮಾಣಕ್ಕೆ ಅವರು ನೀಡಿದ್ದ ಕೊಡುಗೆಯಿಂದ ಅವರು ಪಡೆದುಕೊಂಡ ಹಿರಿಮೆಯನ್ನು
ಗುರ್ತಿಸಿದರು. ಆದಿತ್ಯ I ಸಹ ಸುಮಾರು ಎಡಿ 896ನಲ್ಲಿ ಶ್ರೀರಂಗಮ್‌ನಲ್ಲಿನ ಶ್ರೀ
ರಂಗನಾಥ ದೆವಸ್ಥಾನಕ್ಕೆ ಕ್ರಮವಾಗಿ ಅನೇಕ ದಾನಗಳನ್ನು ನೀಡಿದ್ದರು ಮತ್ತು
ಶ್ರೀರಂಗಮ್‌ನಲ್ಲಿನ ಶಿವ ಮತ್ತು ರಂಗನಾಥನ ಎರಡೂ ಭವ್ಯ ದೇವಸ್ಥಾನಗಳು ಚೋಳ ಚಕ್ರವರ್ತಿಗಳ
’ಕುಲಾದಾನಮ್’ ಎಂದು ಹೇಳುವ ಸ್ಮಾರಕ ಲೇಖನದ ಶಾಸನವನ್ನು ಸಹ ಹೊರಡಿಸಿದ್ದರು.
ನಿಜವಾಗಿಯು ಇದು ಆದಿತ್ಯ I’ರ ಶಾಸನವಾಗಿದ್ದು ಇದನ್ನು ಅವರ ಪ್ರಖ್ಯಾತ ಮಗ ಪರಂತಕ ಮತ್ತು
ಅವರ ಉತ್ತರಾಧಿಕಾರಿಗಳಿಂದ ವಿಶ್ವಾಸನೀಯವಾಗಿ ಮುಂದುವರೆಸಿಕೊಂಡು ಬರಲಾಗಿದ್ದು,
ರಾಜಾಜ್ಞೆಯಲ್ಲಿ ಚಿದಂಬರಮ್‌ನ ಶಿವ ದೇವಸ್ಥಾನ (ಆ ಸಮಯದಲ್ಲಿ ತಂಜೋರ್‌ನ ಬೃಹತ್ ಶಿವ
ದೇವಸ್ಥಾನ ಮತ್ತು ಚೊಲಪುರಮ್‌ನ ಗಂಗೈಕೊಂಡ ಇರಲಿಲ್ಲ) ಮತ್ತು ಶ್ರೀರಂಗಮ್‌ನ ಶ್ರೀ
ರಂಗನಾಥ ಸ್ವಾಮಿ ದೆವಸ್ಥಾನಗಳು ’ಕುಲಾಧಾನಮ್ಸ್’ ಎಂದು ಘೋಷಿಸಲಾಗಿತ್ತು, ಅಂದರೆ ಚೋಳ
ಚಕ್ರವರ್ತಿಗಳ ಐಶ್ವರ್ಯದ ರಕ್ಷಕರು ವಾಸ್ತವವಾಗಿ ಈ ಶಾಸನವನ್ನು ಸುಮಾರು 300 ವರ್ಷಗಳ
ಹಿಂದೆ ಕುಂಬಕೋಣಮ್‌ನ ಹೊರ ಒಲಯದಲ್ಲಿ ಬೃಹತ್ ಸರಬೇಸ್ವರರ್ ದೆವಸ್ಥಾನದ ನಿರ್ಮಾಪಕ, ಚೋಳರ
ಕೊನೆಯ ದೊರೆ, ಕುಲೋತುಂಗ III, ಶ್ರೀರಂಗಮ್‌ನಲ್ಲಿ ಶ್ರಿರಂಗಮ್ ಕೋಯಿಲ್‌ನ ಶಿಲಾ
ಶಾಸನದಲ್ಲಿ ಅವರ ’ರಕ್ಷಕ ದೈವವಾಗಿ’ ಶ್ರೀರಂಗಮ್‌ನಲ್ಲಿನ ಭಗವಾನ್ ಶ್ರೀರಂಗನಾಥನನ್ನು
ಸಂಭೋದಿಸಿ ಜಯಜಯಕಾರ ಮಾಡಿದ ಸಮಯದಲ್ಲಿ ಪುನರಾವರ್ತಿಸಲಾಯಿತು ಡಾ. ಹಲ್ಝ್‌ಸ್ಚ್‌ರ
ನಿರ್ಣಯಗಳ ಪ್ರಕಾರ, ಈ ಶಿಲಾಶಾಸನದ ಒಪ್ಪಿಗೆಯಲ್ಲಿನ ಅಸಾಮಾನ್ಯ ಶಿಲಾಶಾಸನಗಳ ಅಧ್ಯಯನವು
ಮೊದಲಿನ ಶ್ರೇಷ್ಟ ಚೋಳ ದೊರೆ ಪರಂತಕರನ್ನು ಚಿದಂಬರಮ್ (ಶಿವ) ಕೋಯಿಲ್ ಮತ್ತು ಶ್ರೀರಂಗಮ್
(ವಿಷ್ಣು) ಕೋಯಿಲ್‌ನ್ನು ಚೋಳರ ’ಕುಲಾಧಾನಮ್ಸ್’ ಎಂದು ಘೋಷಿಸುವಂತೆ ಮಾಡಿತು, ಚೋಳರು
ಜಾತ್ಯಾತೀತ ಮತ್ತು ಎಲ್ಲಾ ಧರ್ಮಗಳನ್ನು ಮತ್ತು ಧರ್ಮಗಳ ಒಳಗಿನ ಉಪ ಪಂಗಡಗಳನ್ನು ಸಮನಾಗಿ
ಪ್ರೋತ್ಸಾಹಿಸಿದ್ದರು ಎಂಬುವ ಸತ್ಯಕ್ಕೆ ಇದು ಮತ್ತೊಂದು ಸೂಚಕವಾಗಿದೆ ಈ ಸತ್ಯದ
ಮತ್ತೊಂದು ಪುರಾವೆ ಎಂದರೆ, ಚೋಳ ದೇಶದಲ್ಲಿನ 108 ದೇವಸ್ಥಾನಗಳಲ್ಲಿ 40 ವೈಷ್ಣವ
ದಿವ್ಯದೇಶಂಗಳು ಇರುವುದು, ಇವು ಇಂದಿಗೂ ಚಟುವಟಿಕೆಯಿಂದ ಕೂಡಿದ್ದು
ಪ್ರವರ್ಧಮಾನಗೊಳ್ಳುತ್ತಿವೆ. ವಾಸ್ತವವಾಗಿ, ಚೋಳ ರಾಜ ಸುಂದರ (ಪರಂತಕ-II) ತಿರುಚಿ ಹೊರ
ಒಲಯದಲ್ಲಿನ ಕಾವೇರಿ ತೀರದಲ್ಲಿನ ಅನ್ಬಿಲ್‌ನ ಒರಗಿರುವ ವಿಷ್ಣು (ವಡಿವು ಅಝಾಗಿಯ ನಂಬಿ)ಯ
ನಿಷ್ಠಾವಂತ ಭಕ್ತರಾಗಿದ್ದರು, ಅವರು ವಿಷ್ಣು ದೇವರಿಗೆ ಅನೇಕ ಕಾಣಿಕೆಗಳನ್ನು ಮತ್ತು
ಅಲಂಕಾರಿಕೆಗಳನ್ನು ನೀಡಿದ್ದರು, ಮತ್ತು ರಾಷ್ಟ್ರಕೂಟರಿಂದ ಕಂಚಿ ಮತ್ತು ಅದರ
ಸುತ್ತಮುತ್ತಲಿನ ಪ್ರದೇಶಗಳನ್ನು ಮರುಪಡೆಯಲು ಯುದ್ಧಕ್ಕೆ ಹೊರಡುವ ಮೊದಲು ಮತ್ತು ಮದುರೈ
ಮತ್ತು ಇಲಾಮ್ (ಶ್ರೀಲಂಕಾ) ಎರಡರ ವಿರುದ್ದದ ದಂಡಯಾತ್ರೆಯ ಸಮಯದಲ್ಲಿ ತಮ್ಮ ಖಡ್ಗವನ್ನು
ದೈವದ ಮುಂದೆ ಇರಿಸಿ ಪ್ರಾರ್ಥಿಸಿದರು. ಪರಂತಕ I ಮತ್ತು ಸುಂದರ ಚೋಳ ಇಬ್ಬರು ಸೇರಿ ಶಿವ
ಮತ್ತು ವಿಷ್ಣು ದೇವರು ಇಬ್ಬರ ದೇವಸ್ಥಾನಗಳನ್ನು ನಿರ್ಮಿಸಿದ್ದರು. ರಾಜರಾಜ ಚೋಳ I
ಬೌದ್ಧ ಧರ್ಮದವರನ್ನು ಪ್ರೋತ್ಸಾಹಿಸಿದ್ದರು, ಮತ್ತು ಶ್ರೀವಿಜಯ ಸೈಲೇಂದ್ರ ರಾಜನ
ಕೋರಿಕೆಯ ಮೇರೆಗೆ ನಾಗಪಟ್ಟಿಣಮ್‌ನಲ್ಲಿ ಚೂಡಾಮಣಿ ವಿಹಾರ (ಬುದ್ಧರ ಮಂದಿರ)ವನ್ನು
ನಿರ್ಮಿಸಲು ಅನುವುಮಾಡಿಕೊಟ್ಟರು. ಚೋಳರ ಬೃಹತ್ ಮತ್ತು ಭವ್ಯ ದೇವಸ್ಥಾನಗಳು ಭಗವಾನ್
ಶಿವನಿಗೆ ಮೀಸಲಾಗಿವೆ ಎಂಬ ಸಥ್ಯದ ಜೊತೆಗೆ, ಎಲ್ಲಾ ಚೋಳ ರಾಜರು ಮುಖ್ಯವಾಗಿ ಆದಿತ್ಯ
ದಿಂದ ರಾಜೇಂದ್ರ IV ವರೆಗೂ, ಭಗವಾನ್ ವಿಷ್ಣುವಿಗೆ ಭವ್ಯ ದೇವಸ್ಥಾನಗಳನ್ನು
ನಿರ್ಮಿಸುವುದಲ್ಲದೆ ಅವರಿಗೆ ಅನೇಕ ಕಾಣಿಕೆಗಳನ್ನು ಮತ್ತು ದಾನಗಳನ್ನು ನೀಡಿದ್ದಾರೆ.
ನಂತರದ ಚೋಳರ ಕಾಲದ ಸಮಯದಲ್ಲಿ, ವೈಷ್ಣವರು (ವಿಷ್ಣು ಭಕ್ತರು), ಮುಖ್ಯವಾಗಿ
ವೈಷ್ಣವರಾದ ರಾಮಾನುಜ, ಮತ್ತು ಆಚಾರ್ಯರ ಬಗ್ಗೆ ಅಸಹಿಷ್ಣುತೆ ಇರುವ ಬಗ್ಗೆ
ದೃಷ್ಟಾಂತಗಳಿರುವ ಕಲ್ಪನೆಗಳಿದ್ದವು. ಕುಲೋತುಂಗ ಚೋಳ II, ನಿಷ್ಠಾವಂತ ಶಿವ ಭಕ್ತ,
ಚಿದಂಬರಮ್‌ನಲ್ಲಿನ ಶಿವ ದೇವಸ್ಥಾನದಿಂದ ವಿಷ್ಣುವಿನ ಮೂರ್ತಿಯನ್ನು
ತೆಗೆದುಹಾಕಿದ್ದಾರೆಂದು ಹೇಳಲಾಗುತ್ತದೆ, ಅದಾಗ್ಯೂ ಈ ಹೇಳಿಕೆಗೆ ಶಿಲಾಶಾಸನಕ್ಕೆ
ಸಂಬಂಧಪಟ್ಟ ಯಾವುದೇ ಪುರಾವೆಗಳಿಲ್ಲ. 1160 ಕಾಲದ ಕೆಲವು ಶಿಲಾ ಶಾಸನದ ಪ್ರಕಾರ ಶಿವ
ದೇವಸ್ಥಾನಗಳ ಪಾಲಕರು ಯಾರಾದರು ವೈಷ್ಣವರೊಂದಿಗೆ ಸಾಮಾಜಿಕ ಸಂಬಂಧ ಹೊಂದಿದ್ದರೆ ಅಂತವರು
ತಮ್ಮ ಆಸ್ತಿಯನ್ನು ದಂಡವಾಗಿ ತೆರಬೇಕಾಗುತ್ತಿತ್ತು. ಅದಾಗ್ಯೂ, ಇದು ಚೋಳ
ಚಕ್ರವರ್ತಿಗಳಿಂದ ಹೆಳಿ ಬರೆಸಿದ ಯಾವುದೇ ಲೇಖನ ಅನ್ನುವುದಕ್ಕಿಂತ ಶೈವ ಧರ್ಮದ
ಸಮುದಾಯಕ್ಕೆ ಅದರ ಧರ್ಮದ ಅಧಿಕಾರಿಗಳಿಂದ ನೀಡಿದ ಮಾರ್ಗದರ್ಶನವಾಗಿದೆ. ಚೋಳ ರಾಜರು
ಭಗವಾನ್ ಶಿವನಿಗೆ ಬೃಹತ್ತಾದ ದೇವಸ್ಥಾನಗಳನ್ನು ನಿರ್ಮಿಸಿದ್ದರೂ ಮತ್ತು ರಾಜ ರಾಜ ಚೋಳ I
ರಂತಹ ಚಕ್ರವರ್ತಿಗಳು ‘ಶಿವಪಾದಶೇಖರನ್’ ನಂತಹ ಹೆಸರುಗಳನ್ನು ಹೊಂದಿದ್ದರೂ, ಅವರ
ಯಾವುದೇ ಶಿಲಾ ಶಾಸನದಲ್ಲಿ ಚೋಳ ಚಕ್ರವರ್ತಿಗಳು ಕೇವಲ ಶೈವ ಧರ್ಮದ ಅನುಯಾಯಿಗಳಾಗಿದ್ದರು
ಅಥವಾ ಅವರ ಅಧಿಕಾರದ ಅವಧಿಯಲ್ಲಿ ಶೈವಧರ್ಮ ಮಾತ್ರ ರಾಜ್ಯದ ಧರ್ಮವಾಗಿತ್ತು ಎಂದು
ಬರೆದಿಲ್ಲ.
ಜನಪ್ರಿಯ ಸಂಸ್ಕೃತಿಯಲ್ಲಿ ಮಿಯಾಮಿ: ಚೋಳ ಸಾಮ್ರಾಜ್ಯದ
ಇತಿಹಾಸವು ಬಹುತೇಕ ತಮಿಳು ಲೇಖಕರನ್ನು ಕೊನೆಯ ಅನೇಕ ದಶಮಾನಗಳ ಸಮಯದಲ್ಲಿ ಸಾಹಿತ್ಯ
ಮತ್ತು ಕಲಾತ್ಮಕ ಸೃಷ್ಠಿಗಳನ್ನು ರಚಿಸುವಂತೆ ಪ್ರೇರೇಪಿಸಿದೆ. ಜನಪ್ರಿಯ ಸಾಹಿತ್ಯದ ಈ
ಕೆಲಸ ಕಾರ್ಯಗಳು ತಮಿಳು ಜನರಲ್ಲಿನ ಭವ್ಯ ಚೋಳರ ಜ್ಞಾಪಕಗಳು ಮುಂದುವರೆಯಲು ಕಾರಣವಾಗಿವೆ.
ಈ ಶೈಲಿಯ ಅತ್ಯಂತ ಪ್ರಮುಖ ಕೆಲಸ ಜನಪ್ರಿಯ ಪೊನ್ನಿಯಿನ್ ಸೆಲ್ವನ್ (ಪೊನ್ನಿ ಯ ಮಗ),
ಇದು ಕಲ್ಕಿ ಕೃಷ್ಣಮೂರ್ತಿಯವರಿಂದ ಬರೆಯಲ್ಪಟ್ಟ ತಮಿಳು ಭಾಷೆಯಲ್ಲಿನ ಒಂದು ಐತಿಹಾಸಿಕ
ಕಾದಂಬರಿ. ಇದನ್ನು ಐದು ಸಂಪುಟಗಳಲ್ಲಿ ಬರೆಯಲಾಗಿದ್ದು, ಇದು ರಾಜರಾಜ ಚೋಳರ ಕಥೆಯನ್ನು
ನಿರೂಪಿಸುತ್ತದೆ. ಪೊನ್ನಿಯಿನ್ ಸೆಲ್ವನ್ , ಚೋಳ ದೊರೆತನಕ್ಕೆ ಉತ್ತಮ ಚೋಳನ ಏರಿಕೆಯ
ಪ್ರಮುಖ ಸಂದರ್ಭಗಳೊಂದಿಗೆ ವ್ಯವಹರಿಸುತ್ತಿದ್ದ. ಸುಂದರ ಚೋಳನ ಮರಣದ ನಂತರದ ಚೋಳ
ದೊರೆತನದ ಉತ್ತರಾಧಿಕಾರಿ ಆಗುವಿಕೆಯಲ್ಲಿನ ಗೊಂದಲನವನ್ನು ಕಲ್ಕಿ ಉಪಯೋಗಿಸಿಕೊಂಡಿದ್ದ. ಈ
ಪುಸ್ತಕವನ್ನು 1950ರ ದಶಕದ ಮಧ್ಯ ಕಾಲದ ಸಮಯದಲ್ಲಿ ತಮಿಳು ನಿಯತಕಾಲಿಕ ಕಲ್ಕಿ ಯಲ್ಲಿ
ಧಾರಾವಾಹಿಯಾಗಿ ಪ್ರಕಟಿಸಲಾಯಿತು. ಧಾರಾವಾಹಿಯು ಸುಮಾರು ಐದು ವರ್ಷಗಳಕಾಲ ಮುಂದುವರೆಯಿತು
ಮತ್ತು ಪ್ರತೀ ವಾರವೂ ಇದರ ಪ್ರಕಾಶನಕ್ಕಾಗಿ ಅತ್ಯಂತ ಕಾತುರದಿಂದ ಕಾಯಲಾಗುತ್ತಿತ್ತು.
ಕಲ್ಕಿಯವರ ಮುಂಚಿನ ಐತಿಹಾಸಿಕ ಪ್ರೇಮ ಪ್ರಕರಣ ಪಾರ್ಥಿಬನ್ ಕಣವು , 7ನೆಯ ಶತಮಾನದ
ಸಮಯದಲ್ಲಿ ಪಲ್ಲವ ರಾಜ ನರಸಿಂಹವರ್ಮನ್ Iರ ಜಹಗೀರಿಯನಾಗಿ ಬದುಕಬೇಕಿದ್ದಂತ, ಊಹಾತ್ಮಕ
ಚೋಳ ರಾಜಕುಮಾರ ವಿಕ್ರಮಾನ್‌ನ ಅದೃಷ್ಟದ ಶೇಖರಣೆಯನ್ನು ಒಳಗೊಂಡಿರುತ್ತದೆ. ಕಥೆಯ
ಅವಧಿಯು, ವಿಜಯಲಯ ಚೋಳ ಪುನಶ್ಚೇತನಗೊಳ್ಳುವ ಮೊದಲು ಚೋಳರು ತಮ್ಮ ಪ್ರಾಮುಖ್ಯತೆಯನ್ನು
ಕಳೆದುಕೊಂಡ ಅಂತರ (ರಾಜ್ಯದಲ್ಲಿ ರಾಜನಿಲ್ಲದ ನಡುಗಾಲ)ದ್ದಾಗಿರುತ್ತದೆ. ಪಾರ್ಥಿಬನ್
ಕಣವು ಇದನ್ನು ಸಹ 1950ರ ದಶಕದಲ್ಲಿ ಕಲ್ಕಿ ವಾರಪತ್ರಿಕೆಯಲ್ಲಿ ಧಾರಾವಾಗಿಯಾಗಿ
ಪ್ರಕಟಿಸಲಾಯಿತು.
ಸಂದಿಲ್ಯನ್, ಅನ್ನುವ ಮತ್ತೊಬ್ಬ ತಮಿಳು ಪ್ರಮುಖ ಕಾದಂಬರಿಕಾರ, 1960ರ ದಶಕದಲ್ಲಿ
ಕಡಲ್ ಪುರ ವನ್ನು ಬರೆದರು. ಇದು ತಮಿಳು ವಾರಪತ್ರಿಕೆ ಕುಮುದಂನಲ್ಲಿ ಧಾರಾವಾಹಿಯಾಗಿ
ಪ್ರಕಟಗೊಂಡಿತ್ತು. ರಾಜಪದವಿಯನ್ನು ನಿರಾಕರಿಸಿದ ನಂತರ, ವೆಂಗಿ ರಾಜ್ಯದಿಂದ ಕುಲೊತುಂಗ
ಚೋಳ Iರನ್ನು ಗಡಿಪಾರುಮಾಡಿದ್ದ ಅವಧಿಯ ಸಮಯದಲ್ಲಿ, ಕಡಲ್ ಪುರ ವನ್ನು ಸೆಟ್ ಮಾಡಲಾಯಿತು.
ಈ ಅವಧಿಯ ಸಮಯದಲ್ಲಿನ ಕುಲೊತುಂಗ ಇರುವ ಸ್ಥಳಗಳನ್ನು ಕಡಲ್ ಪುರ ಊಹಿಸುತ್ತದೆ.
ಸಂದಿಲ್‌ಯನ್’ರ ಮುಂಚಿನ ಕೆಲಸವಾದ 1960ರ ದಶಕದ ಆರಂಭದಲ್ಲಿ ಬರೆದ ಯಾವನ ರಾಣಿ ಕರಿಕಾಳ
ಚೋಳರ ಜೀವನವನ್ನು ಆಧರಿಸಿರುತ್ತದೆ. ಬಹಳ ಇತ್ತೀಚೆಗೆ, ಬಾಲಕುಮಾರನ್, ಉದೈಯಾರ್
ಕಾದರಂಬರಿಯನ್ನು ಬರೆದಿದ್ದಾರೆ, ಇದು ನತಂಜಾವೂರ್‌ನಲ್ಲಿ ರಾಜರಾಜ ಚೋಳ ಬ್ರಿಹದೀಶ್ವರ
ದೇವಸ್ಥಾನವನ್ನು ನಿರ್ಮಾಣಮಾಡುವ ಸುತ್ತಮುತ್ತಲಿನ ಸನ್ನಿವೇಶಗಳನ್ನು ಆಧರಿಸಿರುತ್ತದೆ.
1950ರ ಮತ್ತು 1973ರ ದಶಕದ ಸಮಯದಲ್ಲಿ ರಾಜರಾಜ ಚೋಳರ ಜೀವನವನ್ನು ಆಧಾರಿಸಿ ವೇದಿಕೆ
ಪ್ರದರ್ಶನಗಳನ್ನು ಮಾಡಲಾಗುತ್ತಿತ್ತು, ರಾಜರಾಜ ಚೋಳನ್ ಹೆಸರಿನ ಈ ರೀತಿಯ
ಪ್ರದರ್ಶನಗಳಲ್ಲಿ ಶಿವಾಜಿ ಗಣೇಶನ್ ನಟಿಸಿದ್ದರು. ಅವಲನ್ ಹಿಲ್‌ರಿಂದ ನಿರ್ಮಾಣಗೊಂಡ,
ಹಿಸ್ಟ್ರಿ ಆಫ್ ದಿ ವರ್ಲ್ಡ್ ಬೋರ್ಡ್ ಗೇಮ್‌ನಲ್ಲಿ ಚೋಳರು ಪ್ರಾಧಾನ್ಯತೆಯನ್ನು
ಪದೆದಿದ್ದಾರೆ.
ಆಧಾರ: ವಿಕಿಪೀಡಿಯ