ಜ್ಯೋತಿಶಾಸ್ತ್ರದ ನಕ್ಷತ್ರಗಳು
ಜ್ಯೋತಿಷದ ನಕ್ಷತ್ರ ಗಳ ಅರ್ಥ
ಆಕಾಶ ದಲ್ಲಿ ಮಕರ ಮತ್ತು ಕರ್ಕಾಟಕ ಸಂಕ್ರಾತಿ ಮಧ್ಯ ಅವಕ್ಕೆ ಎರಡು ಕಡೆ ಸ್ಪರ್ಶೆಸುವಂತೆ ವೃತ್ತವನ್ನು ರಚಿಸಿದರೆ , ಅದು ಕ್ರಾಂತಿವೃತ್ತ ವೆನಿಸುವುದು. ಅದು ಆಕಾಶದಲ್ಲಿ ೩೬೦ ಡಿಗ್ರಿಯ ಊಹಾ ವೃತ್ತವಾಗುವುದು. ಆ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ಮೊದಲಾದ ೨೭ ನಕ್ಷತ್ರ ಸ್ಥಾನಗಳು. ಆ ಹೆಸರಿನ ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ -ಆ ಸ್ಥಳ ಕ್ಕೆ ನಕ್ಷತ್ರದ ಹೆಸರು). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಡಿಗ್ರಿ ಸ್ಥಳ- ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಚಂದ್ರನು ಸುಮಾರು ಪ್ರತಿದಿನ ಒಂದು ನ್ಕ್ಷತ್ರ ದಂತೆ ಒಂದು ತಿಂಗಳಲ್ಲಿ (೨೮/೨೯.೫ ದಿನ) ಈ೨೭ ನಕ್ಷತ್ರ ಗಳಲ್ಲಿ ಸಂಚರಿಸುತ್ತಾನೆ. ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರ ನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಆ ವ್ಯಕ್ತಿಯ ನಕ್ಷತ್ರವಾಗುತ್ತದೆ (ಚಂದ್ರ ನಕ್ಷತ್ರ- ನಿತ್ಯ ನಕ್ಷತ್ರ -ಎಂದು ಹೆಸರು)
ನಕ್ಷತ್ರ ಪಾದ
ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ (ಆಕಾಶದಲ್ಲಿ) ಬರುವುದು. ಅದು ನಕ್ಷತ್ರದ ಒಂದು ಪಾದ (೩ ೧/೩ಡಿಗ್ರಿ ಸ್ಥಳ) ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು (೩೬೦ ಡಿಗ್ರಿಗಳನ್ನು) ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ.
ನಕ್ಷತ್ರ ಮತ್ತು ಪುರಾಣ
ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣುಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.) ಆದರೆ ಅವಲ್ಲಿ ಕೆಲವು ನಕ್ಷತ್ರಗಳನ್ನು ಪುಲ್ಲಿಂಗದಲ್ಲಿ ಕರೆಯುವ ರೂಢಿ ಇದೆ! ಸೃಷ್ಟಿ ಮತ್ತು ಮಹಾಭಾರತಈಗಲೂ ಸಿನೇಮಾ ನಟ - ನಟಿಯರನ್ನು ತಾರೆ ಯರೆಂದು ಕರೆಯುತ್ತಾರೆ - ಆಕಾಶದ ತಾರೆಯರಂತೆ ಸುಂದರವಾಗಿ ಮಿನುಗುವರೆಂದು ಹಾಗೆ ಕರೆಯುತ್ತಾರೆ.
ನಕ್ಷತ್ರ ಮತ್ತು ವಿಜ್ಞಾನ
ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತ್ತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಮೂಲಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಗೆ ತಲುಪಲು ೩೦ ಕೋಟಿ ವರ್ಷ ಬೇಕು. ಅವು (ಈ ನಕ್ಷತ್ರಗಳು) ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು.ಈ ನಕ್ಷ ತ್ರಗಳು ಒಂದೇ ದೂರದಲ್ಲೂ ಇಲ್ಲ. . ಅವು ಭೂಮಿಯಿಂದ ಕೋಟಿ ಕೋಟಿ ಮೈಲಿ ಗಳ ದೂರದಲ್ಲಿವೆ, ಬೇರೆ ಬೇರೆ ಅಂತರದಲ್ಲಿವೆ.ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ, ಪರಿಣಾಮಗಳನ್ನು ತಿಳಿಯುವ ಸಾಧನಗಳಿರಲಿಲ್ಲ. ಅವೆಲ್ಲಾ ಚಂದ್ರನ ಜೊತೆಗೆ ಒಂದೇ ದೂರದಲ್ಲಿರುವುವು ಎಂದು ತಿಳಿದಿದ್ದರು. ಅವನ್ನೆಲ್ಲಾ ದೇವತೆಗಳು ಅಥವಾ ದೇವಕನ್ಯೆಯರೆಂದು ಹಿಂದಿನ ಶಾಸ್ತ್ರಕಾರರು ಭಾವಿಸಿದ್ದರು. ಈಗಿನ ಜ್ಯೋತಿಷಿ ಗಳೂ ಅನೇಕರು ಹಾಗೆಯೇ ತಿಳಿದಿದ್ದಾರೆ , ಕಾರಣ ಅವರಿಗೆ ಖಗೋಲ ಶಾಸ್ತ್ರ ಗೊತ್ತಿಲ್ಲ . ಗೊತ್ತಿದ್ದರೂ ಹಳೆಯ ನಂಬುಗೆಯ ಮೇಲೇ ಫಲಜ್ಯೋತಿಷದ ಶಾಸ್ತ್ರ ಭವಿಷ್ಯ ಹೇಳುತ್ತಾರೆ.ಈ ಕೆಳಗಿನ ನಕ್ಷತ್ರ ಗಳು ಬಹಳಷ್ಟು ಸ್ತ್ರೀ ಲಿಂಗ ಪದಗಳು ; ಅವು ಧೀರ್ಘಾಕ್ಷರ ದಿಂದ ಕೊನೆಗೊಳ್ಳಬೇಕು
೨೭ ನಕ್ಷತ್ರಗಳ ಹೆಸರುಗಳು
೧.ಅಶ್ವಿನಿ ನಕ್ಷತ್ರ ೨.ಭರಣಿ ೩.ಕೃತಿಕಾ ೪.ರೋಹಿಣಿ ೫.ಮೃಗಶಿರ ೬.ಆರ್ದ್ರಾ ೭.ಪುನರ್ವಸು ೮.ಪುಷ್ಯಾ ನಕ್ಷತ್ರ (ಪುಷ್ಯಮಾಸ ) ೯.ಆಶ್ಲೇಷ ೧೦.ಮಖೆ ೧೧.ಪುಬ್ಬ ೧೨.ಉತ್ತrರಾ ಉತ್ತರಾ ಫಲ್ಗುಣೀ ೧೩.ಹಸ್ತ ೧೪.ಚಿತ್ರಾ ನಕ್ಷತ್ರ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜೇಷ್ಠಾ ೧೯.ಮೂಲಾ ೨೦.ಪೂರ್ವಾಷಾಡಾ ೨೧.ಉತ್ತರಾಷಾಡಾ ೨೨.ಶ್ರವಣಾ೨೩.ಧನಿಷ್ಠಾ ೨೪.ಶತಭಿಷ ೨೫.ಪೂರ್ವಾಭಾದ್ರ ೨೬.ಉತ್ತರಭಾದ್ರ ೨೭.ರೇವತಿ