ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಕರ್ನಾಟಕದ ಚನ್ನಪಟ್ಟಣ ಬೊಂಬೆಗಳ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದೆ. ಆದರೆ, ಚನ್ನಪಟ್ಟಣ ಗೊಂಬೆಗಳ ಹಿಂದೆ 200 ವರ್ಷಗಳ ಇತಿಹಾಸವಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪರಿಚಯಿಸಿದ ಈ ಕಲೆ ಇಂದು ದೇಶ- ವಿದೇಶಗಳಲ್ಲಿ ತನ್ನ ಚೆಲುವಿನ ಕಂಪು ಬೀರುತ್ತಿವೆ. ಚನ್ನಪಟ್ಟಣ ಬೊಂಬೆಗಳು ಅಮೆರಿಕದ ಶ್ವೇತ ಭವನದಲ್ಲೂ ಸ್ಥಾನ ಪಡೆದಿವೆ. ಈ ಬೊಂಬೆಗಳ ಮೇಲೆ ಅಪಾರ ಒಲವು ಬೆಳೆಸಿಕೊಂಡಿವ ಮೆಶೆಲ್ ಒಬಾಮಾ ಅವರಿಗೆ ಪ್ರೀತಿಯ ಧೊÂàತಕವಾಗಿ ಸಾಂಪ್ರದಾಯಿಕ ಕಲೆಯಲ್ಲಿ ಕೆತ್ತಿದ ಚನ್ನಪಟ್ಟಣದಗೊಂಬೆಗಳನ್ನೇ ನೀಡಲಾಗುತ್ತಿದೆ.
ಹೀಗಾಗಿ ಬೊಂಬೆಗಳ ಇತಿಹಾಸದ ಮೇಲೆ ಕಣ್ಣುಹಾಸಿದಾಗ..... ಟಿಪ್ಪು ಸುಲ್ತಾನ್ ಪರಿಚಯಿಸಿದ ಪರಂಪರೆ! ಚನ್ನಪಟ್ಟಣ ಗೊಂಬೆ ಉದ್ಯಮಕ್ಕೆ ಸುಮಾರು 200 ವರ್ಷಗಳ ಇತಹಾಸವಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಈ ಉದ್ಯಮದ ಕಾರಣಕರ್ತರು. 1759-1799ರಲ್ಲಿ ಪರ್ಷಿಯಾ ದೇಶದ ಕುಶಲಕರ್ಮಿಗಳನ್ನು ಕರೆಸಿ ರಾಮನಗರದ ಚನ್ನಪಟ್ಟಣದ ಜನತೆ ಬೊಂಬೆಯನ್ನು ನಿರ್ಮಿಸುವ ಕಲೆ ತಿಳಿಸಿಕೊಟ್ಟಿದ್ದರಿಂದ ಬೊಂಬೆ ಉದ್ಯಮ ಬೆಳೆಯಿತು. ನಂತರ ಇಲ್ಲಿನ ಬಾಬಾ ಸಾಹೇಬ್ಮಿಯಾ ಎಂಬ ಕುಶಲಕರ್ಮಿ ಆಧುನಿಕ ವಿಧಾನದ ಬೊಂಬೆ ಕೆತ್ತನೆಯ ಬಗ್ಗೆ ತಿಳಿದುಕೊಂಡು ಬಂದರು. ಬಳಿಕ ಮೈಸೂರು ದಿವಾನರಿಗೆ ತಮ್ಮ ಕಲೆಯ ಬಗ್ಗೆ ತಿಳಿಸಿದರು. ಇದರಿಂದಪ್ರೇರೇಪಿತರಾದ ಮೈಸೂರು ದಿವಾನರು 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭಿಸಿದರು. ಇಲ್ಲಿ ಅರಗು, ಬಣ್ಣ, ತೆಂಗಿನ ನಾರಿನ ಬೊಂಬೆಗಳ ತಯಾರಿಗಳ ಕುರಿತು ತರಬೇತಿ ನೀಡಲಾಗುತ್ತಿತ್ತು. ಕಾಲ ಕಳೆದಂತೆ ಬೊಂಬೆಗಳ ತಯಾರಿ ಬದಲಾವಣೆ ಗೊಂಡಿತು.
ಆನೆಯ ದಂತ ಮತ್ತು ಮರಗಳನ್ನು ಬಳಸಿ ಸಾಂಪ್ರದಾಯಿಕ ಬೊಂಬೆಗಳನ್ನು ತಯಾರಿಸುವ ಕಲೆ ಬೆಳೆದುಬಂದಿದೆ. ಇಂದು ಗಂಧದ ಮರ, ಆಲೆ, ರಬ್ಬರ್, ಪೈನ್, ತೇಗದಮರಗಳನ್ನು ಬೊಂಬೆಗಳ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಬೊಂಬೆಗಳ ತವರು ಚನ್ನಪಟ್ಟಣ: ಚನ್ನಪಟ್ಟಣ ಬೊಂಬೆಗಳ ತವರು ಎಂದೇ ಕರೆಸಿಕೊಂಡಿದೆ. ಬೊಂಬೆಗಳ ಉದ್ಯಮವನ್ನೇ ಅವಲಂಬಿಸಿದ 3200 ಕುಶಲಕರ್ಮಿಗಳಿದ್ದು, 400ರಿಂದ 500 ಮಂದಿ ಪರಿಣತರೂ ಇದ್ದಾರೆ. ಉದ್ಯಮವನ್ನು ನೇರ ಮತ್ತು ಪರೋಕ್ಷವಾಗಿ 10 ಸಾವಿರಕ್ಕೂ ಅಧಿಕ ಮಂದಿ ಅವಲಂಬಿಸಿದ್ದಾರೆ. 1985ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಚ್ ಸರ್ಕಾರದ ನೆರವಿನಿಂದ ಕಲಾನಗರ ಬಡಾವಣೆಯನ್ನು ನಿರ್ಮಿಸಿವೆ.
ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ಬೊಂಬೆಗಳು ಸಿದ್ಧವಾಗುತ್ತವೆ. 10 ರೂ. ನಿಂದ 1000 ರೂ. ವರೆಗಿನ ಬೊಂಬೆಗಳೂ ಲಭ್ಯ. 450 ಬಗೆಯ ಬೊಂಬೆಗಳಿಗೆ ಹೆಚ್ಚು ಬೇಡಿಕೆ. ಗುಲಗಂಜಿ ಗಾತ್ರದ ಬೊಂಬೆ ಕೆತ್ತನೆಯಲ್ಲೂ ಇಲ್ಲಿನ ಕುಶಲಕರ್ಮಿಗಳು ನಿಪುಣರು. ಚೀನಾ ಬೊಂಬೆಗಳ ಆಕ್ರಮಣ ತಡೆಯಬಲ್ಲದೇ? ದಶಕಗಳಿಂದೀಚೆ ಚೀನಾ ಗೊಂಬೆ, ಪ್ಲಾಸ್ಟಿಕ್ ಗೊಂಬೆ, ಪಿಂಗಾಣಿ ಆಟಿಕೆ- ಅಲಂಕಾರಿಕ ಆಟಿಕೆಗಳ ದಾಳಿಯಿಂದ ಬೊಂಬೆ ಉದ್ಯಮ ಸಂಕಷ್ಟಕ್ಕೆ ಒಳಗಾಗಿದೆ. ಚೀನಾದ ಬೊಂಬೆಗಳು ಅಗ್ಗದ ಬೆಲೆಗಳಿಗೆ ಲಭ್ಯವಾಗುತ್ತಿವೆ. ಆದರೆ, ವಿವಿಧ ಕೆಮಿಕಲ್ಸ್ಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಹೀಗಾಗಿ ಚೀನಾದ ಬಹುತೇಕ ಬೊಂಬೆಗಳು ವಿಷಕಾರಿಯಾಗಿವೆ. ಆದರೂ, ಚನ್ನಪಟ್ಟಣ ಬೊಂಬೆ ಮಾರಾಟ ಮಳಿಗೆಗಳಲ್ಲಿಯೇ ಚೀನಾದ ಬೊಂಬೆಗಳು ಮಾರಾಟವಾಗುತ್ತಿವೆ. ಚೀನಾ ರೇಷ್ಮೆಯಂತೆಯೇ ಅಲ್ಲಿನ ಬೊಂಬೆಗಳೂ ಈ ಭಾಗದ ಜನರನ್ನು ಸಂಕಷ್ಟಕ್ಕೆ ತಳ್ಳಿವೆ.ಈ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ಕುಶಲಕರ್ಮಿಗಳು ಸಾಂಪ್ರದಾಯಿಕ ಬೊಂಬೆಗಳ ಜತೆಜತೆಗೇ ಗೃಹಾಲಂಕಾರಿ ವಸ್ತು, ನಿತ್ಯ ಬಳಕೆಯ ಪದಾರ್ಥಗಳು, ಮರದ ಆಭರಣ, ಪೀಠೊಪಕರಣ, ಕಾರ್ಪೊರೇಟ್ ಗಿಫ್ಟ್, ತಯಾರಿಕೆ ಮೂಲಕ ತಮ್ಮ ಅಸ್ತಿವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಮಾರುಕಟ್ಟೆ ವಿಸ್ತರಿಸಲೂ ಯತ್ನಿಸುತ್ತಿದ್ದಾರೆ. ಬಗೆಬಗೆಯ ಬೊಂಬೆಗಳು! ಬಣ್ಣದ ಬುಗುರಿ, ಆಕರ್ಷಕ ರೈಲು ವಿಶ್ವಪ್ರಸಿದ್ಧ. ಇದನ್ನೇ ಮಿಶೆಲ್ ಒಬಾಮಾ ಖರೀದಿಸಿದ್ದು! ಅಲ್ಲದೆ, ದಿಬ್ಬಣ ಬ್ಯಾಂಡ್ ಸಟ್, ದಸರಾ ಬೊಂಬೆ, ದೇವರ ಗೋಪುರ ಪ್ರಾಣಿಪಕ್ಷಿಗಳ ಮಾದರಿ, ನರ್ತಿಸುವ ಗೊಂಬೆ, ಮರದ ಕೀ ಬಂಚ್, ಕಿವಿಯೋಲೆ, ಬಳೆ, ನೆಕ್ಲೆಸ್, ಚೂಡಿದಾರದ ಮೇಲೆ ಬಳಸುವ ಅಲಂಕಾರದ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಜೀಕುವ ಆಟದ ಕುದುರೆ, ಕ್ರಿಸ್ಮಸ್ ಗಿಡ, ಎತ್ತಿನ ಬಂಡಿ ಮಕ್ಕಳನ್ನು ಆಕರ್ಷಿಸುತ್ತವೆ. ಗ್ರಾಹಕರಿಗೆ ಬೇಕಾದಂತ ಬೊಂಬೆ ಮತ್ತು ಪದಾರ್ಥಗಳನೂ ಇಲ್ಲಿನ ಕುಶಲಕರ್ಮಿಗಳು ತಯಾರಿಸಿಕೊಡುತ್ತಾರೆ.
ನೂರಾರು ಕೋಟಿ ರೂ. ವಹಿವಾಟು: ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೊಂಬೆಗಳ ವಾರ್ಷಿಕ ವಹಿವಾಟು 50 ರಿಂದ 60 ಕೋಟಿ ರೂ. ಇದ್ದರೆ. ಡೀಮ್ಡ್ ಎಕ್ಸ್ಪೋರ್ಟ್ (ವಿವಿಧ ದೇಶಗಳಿಗೆ ರಫ್ತು ಮಾಡುವ ಏಜನ್ಸಿ)ಗಳ ವಹಿವಾಟು 100 ಕೋಟಿ ರೂ. ಮೀರಿದೆ. ಹಲವು ಕಾರ್ಪೊರೇಟ್ ಸಂಸ್ತೆಗಳೂ ಮಾದರಿ ಉಡುಗೊರೆಗಳನ್ನು ಖರೀದಿಸುತ್ತವೆ. ಅಮೆರಿಕ, ಜಪಾನ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಮಲೇಷಿಯಾ ಸೇರಿದಂತೆ ಹಲವೆಡೆಗೆ ಇಲ್ಲಿನ ಚನ್ನಪಟ್ಟಣದ ಬೊಂಬೆಗಳು ಮತ್ತು ಅಲಂಕಾರಿಕ ವಸ್ತುಗಳು ರಫ್ತಾಗುತ್ತಿದೆ. ವಿದೇಶಿ ವಿನಿಮಯವೂ ಸಣ್ಣ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಗಣ್ಯರ ನಿಮಾಸದಲ್ಲಿ ಸ್ಥಾನ! ಇಂಗ್ಲೆಂಡ್ ರಾಣಿಯ ಅರಮನೆ, ಶ್ರೀಲಂಕಾದ ಪ್ರಧಾನಿ ನಿವಾಸ ಸೇರಿದಂತೆ ದೇಶವಿದೇಶದ ಗಣ್ಯರ ಮನೆಯಲ್ಲಿ ಈ ಬೊಂಬೆಗಳು ಅಲಂಕಾರದ ಸ್ಥಾನಪಡೆದಿವೆ.
ಬ್ರಿಟನ್ರಾಣಿ ಡಯಾನಾ ಮತ್ತು ದೊರೆ ಚಾರ್ಲ್ಸ್ ವಿವಾಹಕ್ಕೆ ಪೌಡರ್ ಬಾಕ್ಸ್ಗಳು ಚನ್ನಪಟ್ಟಣದಿಂದ ರವಾನೆಯಾಗಿದ್ದವು. ಶ್ರೀಲಂಕಾ ಪ್ರಧಾನಿಯಾಗಿದ್ದ ಭಂಡಾರು ನಾಯಕೆ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿ ಕೆಲವು ಬೊಂಬೆಗಳನ್ನು ಖರೀದಿಸಿ ಹೋಗಿದ್ದರು. ಚನ್ನಪಟ್ಟಣ ಟು ಶ್ವೇತಭವನ! 2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕುಟುಂಬ ಸಮೇತ ಭಾರತ ಪ್ರವಾಸ ಕೈಗೊಂಡಿದ್ದಾಗ ದೆಹಲಿಯ ವಸ್ತಪ್ರದರ್ಶನದಲ್ಲಿ ಚನ್ನಪಟ್ಟಣದ ಬೊಂಬೆಗಳನ್ನು ಕಂಡು ಕಣ್ಣರಳಿಸಿದ್ದರು. ಕೆಲವುಬೊಂಬೆಗಳನ್ನು ಖರೀದಿಸಿದ್ದರು. ಹೀಗೆ ಚನ್ನಪಟ್ಟಣಗೊಂಬೆಗಳು ಶ್ವೇತಭವನ್ನು ತಲುಪಿದವು. ಅಂತರ್ಜಾಲದಲ್ಲೂ ಮಾರಾಟ: ಚನ್ನಪಟ್ಟಣ ಗೊಂಬೆಗಳು ಕೇವಲ ಮಾರುಕಟ್ಟೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ನಿಧಾನವಾಗಿ ಅಂತರ್ಜಾಲದಲ್ಲೂ ಸದ್ದು ಮಾಡಲು ಆರಂಭಿಸಿವೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ಪ್ರಾಧಿಕಾರ ( (ಕೆಎಸ್‌ಎಚ್ಡಿಸಿ)ಚನ್ನಪಟ್ಟಣ ಬೊಂಬೆಗಳ ಮಾರಾಟಕ್ಕೆ ತನ್ನದೇ ಆದ ಆನ್ಲೈನ್ ಜಾಲತಾಣವನ್ನು ನಿರ್ಮಿಸಿದೆ. ಅಲ್ಲದೆ, ಎನ್ಜಿಒಗಳೂ ಚನ್ನಪಟ್ಟಣಗೊಂಬೆಗಳನ್ನು ಖರೀದಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿವೆ. ಕೆಎಸ್‌ಎಚ್ಡಿಸಿಯ ವಾರ್ಷಿಕ ವಹಿವಾಟು 2011-12 47.27 ಲಕ್ಷ ರೂ. 2012-13 64.71 ಲಕ್ಷ ರೂ. 2013-14 69.34 ಲಕ್ಷ ರೂ.
source : prajavani