ಮಂಕುಂದ , ಚನ್ನಪಟ್ಟಣ ತಾಲೂಕಿನ ಒಂದು ಪುಟ್ಟ ಗ್ರಾಮವಾಗಿದ್ದು, ಹಿಂದೆ ಇದು ಗಂಗರ ಉಪರಾಜಧಾನಿ ಆಗಿತ್ತು ಎಂಬ ಅಭಿಪ್ರಾಯವೂ ಇತಿಹಾಸಕಾರರಲ್ಲಿದೆ. ಊರಲ್ಲಿ ಗಂಗರ ಕಾಲದ( ಸುಮಾರು ಕ್ರಿ.ಶ.914)ಶಿಲಾಶಾಸನವೂ ಇದ್ದು, ಅದರಲ್ಲಿ ಊರಿನ ಹೆಸರು "ಮನ್ಕುಂದ" ಎಂದೇ ಉಲ್ಲೇಖಿಸಲ್ಪಟ್ಟಿದೆ. ಸಮೀಪದ ಅಣ್ಣ-ತಮ್ಮ ಗುಡ್ಡಕ್ಕೂ, ಈ ಗ್ರಾಮ ನಾಮಕ್ಕೂ ಸಂಬಂಧವಿದ್ದು, ಅದರಿಂದಾಗಿ ಈ ಹೆಸರು ಊರಿಗೆ ಬಂದಿದೆ ಎಂಬ ಸ್ಥಳೀಯ ಹೇಳಿಕೆ ಇದೆ. "ಮಾನ್ಯಕುಂದ "ಕ್ರಮೇಣ ಮನ್ಕುಂದ ಆಗಿ ನಂತರದಲ್ಲಿ ಇಂದಿನ "ಮಂಕುಂದ" ರೂಪ ಪಡೆದಿರುವಂತೆ ತೋರುತ್ತದೆ.