ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣ (ಕ್ರಿ.ಶ. ೧೨೬೦) ದ ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಮೂಲಭೂತ ಅಂಶಗಳು
- ಅಕ್ಷರ:
- ಸ್ವರ: ಒಟ್ಟು ೧೫, ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
- ವ್ಯಂಜನ: ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ.ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ.
1. ವರ್ಗೀಯ ವ್ಯಂಜನ 2. ಅವರ್ಗೀಯ ವ್ಯಂಜನ.
'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.
'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. - ಪದ ಅಥವಾ ಶಬ್ದ: ಶಬ್ದವು ಘನ,ದ್ರವ,ಅನಿಲಗಳ ಮೂಲಕ ಹಾದು ಬರುವ ಕಂಪನ.ನಮ್ಮ ಕಿವಿಯ ಮೂಲಕ ಗ್ರಹಿಸಲ್ಪಡುವ ತರಂಗಾಂತರದ ಕಂಪನವನ್ನು ನಾವು ಶಬ್ದವೆಂದು ಸಾಮಾನ್ಯ ಅರ್ಥದಲ್ಲಿ ಹೇಳುತ್ತೇವೆ.
- ನಾಮಪದ: ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ.ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ್ತಿಗಳ ಇತರ ಬಗೆಗಳೊಂದಿಗೆ ಹೇಗೆ ಬೆರೆಯುತ್ತವೆ ಎಂಬುದರ ಪರಿಭಾಷೆಯಲ್ಲಿ ನಿಘಂಟಿನ ವರ್ಗಗಳು ವ್ಯಾಖ್ಯಾನಿಸಲ್ಪಡುತ್ತವೆ. ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ. ಇಂಗ್ಲಿಷ್ ಭಾಷೆಯಲ್ಲಿ, ನಾಮಪದಗಳನ್ನು ವ್ಯಾಖ್ಯಾನಿಸುವಾಗ, ಗುಣವಾಚಿಗಳು ಹಾಗೂ ಗುಣವನ್ನು ಸೂಚಿಸುವ ಗುಣವಾಚಕಗಳೊಂದಿಗೆ ಸಂಭವಿಸಬಲ್ಲ ಮತ್ತು ನಾಮಪದದ ವಾಕ್ಯಾಂಗವೊಂದರ ಪ್ರಧಾನಭಾಗವಾಗಿ ಕಾರ್ಯನಿರ್ವಹಿಸಬಲ್ಲ ಪದಗಳಾಗಿ ನಾಮಪದಗಳು ವಿವರಿಸಲ್ಪಡುತ್ತವೆ.
ಸಾಂಪ್ರದಾಯಿಕ ಇಂಗ್ಲಿಷ್ ವ್ಯಾಕರಣದಲ್ಲಿ, ನಾಮಪದವು ಎಂಟು ಪದವರ್ಗ ವಾಚಕಗಳಲ್ಲಿ ಒಂದೆನಿಸಿಕೊಂಡಿದೆ. - ಕ್ರಿಯಾಪದ: ವಾಕ್ಯದಲ್ಲಿ ಕತೃವಿನ ಕ್ರಿಯೆಯನ್ನು ಸೂಚಿಸುವ ಪದವನ್ನು ಕ್ರಿಯಾ ಅದ ಎನ್ನುತ್ತಾರೆ ಈ ಕ್ರಿಯಾ ಪದವೂ ಮೂಲರೂಪವನ್ನು ಧಾತು ಅಥವಾ ಕ್ರಿಯಾ ಪ್ರಕೃತಿ ಎನ್ನುತ್ತೇವೆ.
- ಸರ್ವನಾಮ: ನಾಮಪದಕ್ಕೆ ಬದಲಾಗಿ ಬಳಿಸುವ ಪದಗಳು ಇದರಲಿ 4 ವಿಧ 1. ಪುರುಷಾರ್ಥಕ, 2ಆತ್ಮಾರ್ಥಕ 3ಪ್ರಶ್ನಾರ್ಥಕ 4. ನೆರ್ದೇಶನಾತ್ಮಕ/ ದರ್ಶಕಪುರುಷಾರ್ಥಕ: ಪುರುಷಗಲ ಹಿನ್ನೆಲೆಯಲ್ಲಿ ವರ್ಗೀಕರಣಕೊಂಡ ಸರ್ವನಾಮ ಪುರುಷ ಏಕವಚನ ಬಹುವಚನ, ಉತ್ತಮ ನಾನು ನಾವು, ಮದ್ಯಮ ನೀನು ನೀವು, ಪ್ರಥಮ ಪುಲಿಂಗ ಅವನು ಅವರು, ಸ್ತ್ರೀಲಿಂಗ ಅವಳು ಅವರು, ನ. ಲಿಂಗ ಅದು ಅವು.
- ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ
- ಸಾಲು ಅಥವಾ ವಾಕ್ಯ
- ವಿಭಕ್ತಿ: ವಿಭಕ್ತಿ ಪ್ರಥ್ಯಯಗಳು ಪ್ರಥಮ - ಉ ದ್ವಿತೀಯಾ - ಅನ್ನು ತೃತೀಯಾ - ಇಂದ ಚತುರ್ಥಿ - ಗೆ,ಇಗೆ, ಕೆ, ಕ್ಕೆ ಪಂಚಮಿ - ದೆಶೆಯಿಂದ ಷಷ್ಠಿ - ಅ ಸಪ್ತಮಿ - ಅಲ್ಲಿ ಸಂಭೋಧನಾ - ಏ.
- ಧಾತು:
- ಲಿಂಗ:
- ಅಂಕಿ: ಅಂಕಿಯು ಸಂಖ್ಯೆಗಳನ್ನು ಪ್ರತಿನಿಧಿಸಲು ಬಳಸುವ ಚಿನ್ಹೆ.
ಪ್ರಮುಖ ವಿಭಾಗಗಳು
- ತತ್ಸಮ-ತದ್ಭವ:
- ವಿಭಕ್ತಿ ಪ್ರತ್ಯಯ:
- ಕಾಲ:
- ಜೋಡಿ ಪದ:
- ಸಂಧಿ: ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು.
ಒರೆಗೂಡಿಕೆಯನ್ನು ತೋರಿಸಲು ಬರೆಯಲು ಸಮಾನಾರ್ಥಕ /ಒಟ್ಟು(=) ಮತ್ತು ಸಂಕಲನ/ಕೂಡು (+) ಗುರುತುಗಳನ್ನು ಬಳಸುತ್ತಾರೆ. '=' ಮತ್ತು '+' ಗುರುತುಗಳನ್ನು ಬಳಸಿ, ಮೇಲಿನ ಉದಾಹರಣೆಗಳನ್ನು ಹೀಗೆ ಬರೆಯಲಾಗುವುದು.
ಮನದ + ಆಳ = ಮನದಾಳ
ಮರದ + ಎಲೆ = ಮರದೆಲೆ
ಮನೆ + ಕೆಲಸ = ಮನೆಗೆಲಸ
ಹೆರ್ + ದಾರಿ = ಹೆದ್ದಾರಿ
ಕನ್ನಡ ನುಡಿಯಲ್ಲಿ ಬಹಳಷ್ಟು ಸಂಸ್ಕೃತದ ಪದಗಳು ಬರೆತಿಯುವರಿಂದ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳನ್ನು ಸೇರಿಸಲಾಗಿದೆ. ಆದುದರಿಂದ ಸಂಧಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು - ಸಮಾಸ: ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.
ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.
ಉದಾ: 'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.ವಿಗ್ರಹವಾಕ್ಯ: ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ. - ಛಂದಸ್ಸು: ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ.
ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ. - ಅಲಂಕಾರ:
- ವೃತ್ತ:
- ತ್ರಿಪದಿ: ತ್ರಿಪದಿ ಅಂದರೆ ಮೊರು ಸಾಲಿನ ಪದ್ಯ , ಇದರಲ್ಲಿ ವಿಶೇಷವಾಗಿ ಸರ್ವಜ್ಝನ ವಚನಗಳಲ್ಲಿ ಕಂಡುಬರುತ್ತದೆ.
- ಕಾಂಡ:
- ಷಟ್ಪದಿ: ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.
- ಸಾಂಗತ್ಯ: