Mar 8, 2013

ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ! (ಮರೆಯಬಾರದು )

ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ! (ಮರೆಯಬಾರದು )
ಹೆಣ್ಣಿನ ಬಗ್ಗೆ ವಿವರಿಸುವುದು ತುಂಬಾ ಕಷ್ಟದ ವಿಷಯ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನುತ್ತಾರೆ. ಒಬ್ಬ ವ್ಯಕ್ತಿಯ ನಾಶಕ್ಕೂ ಹೆಣ್ಣೆ ಕಾರಣಕರ್ತಳಾಗಿರುತ್ತಾಳೆ. ಒಮ್ಮೆ ಅಬಲೆ ಅನಿಸಿದರೂ, ಮತ್ತೊಮ್ಮೆ ವಿಶ್ವವನ್ನು ನಿಯಂತ್ರಿಸುವ ಶಕ್ತಿ ಹೆಣ್ಣಗಿದೆ ಎಂದು ಅನಿಸುತ್ತದೆಯಲ್ಲವೇ? ಒಬ್ಬ ಪುರುಷನಿಗೆ ತನ್ನ ಬಾಳಿನಲ್ಲಿ ಉತ್ತಮ ಸ್ತ್ರೀಯರು ದೊರಕಿದರೆ ಅವನೇ ಅದೃಷ್ಟ ಶಾಲಿ. ಆ ಸ್ತ್ರೀಯರಲ್ಲಿ ಅವನ ತಾಯಿ ಹಾಗೂ ಕೈ ಹಿಡಿದವಳು ಪುರುಷನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಗನನ್ನು ಉತ್ತಮ ಹಾದಿಯಲ್ಲಿ ಬೆಳೆಸುವಲ್ಲಿ ತಾಯಿಯ ಮಾತ್ರ ಮಹತ್ವವಾದರೆ, ಅವನನ್ನು ಉತ್ತಮನಾಗಿಯೇ ಉಳಿಸಿಕೊಳ್ಳುವಲ್ಲಿ ಹೆಂಡತಿಯ ಪಾತ್ರ ಪ್ರಮುಖವಾಗಿರುತ್ತದೆ. ಮಾರ್ಚ್ 8. ಅಂತರಾಷ್ಟ್ರೀಯ ಮಹಿಳೆಯರ ದಿನ. ಮಹಿಳೆಯರ ದಿನದ ವಿಶೇಷವಾಗಿ ಪ್ರತೀಯೊಬ್ಬ ಪುರುಷನ ಜೀವನದಲ್ಲಿ ಬರುವ 7 ಪ್ರಮುಖ ಸ್ತ್ರೀಯರ ಬ್ಗಗೆ ಹೇಳಲಾಗಿದೆ

1) ಅಮ್ಮ:-ಅಮ್ಮನ ಪಾತ್ರವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ನಾವು ಬೆಳೆದ ಒಂದೊಂದು ಹಂತದಲ್ಲಿ ಅಮ್ಮನ ಶ್ರಮವಿರುತ್ತದೆ, ತ್ಯಾಗವಿರುತ್ತದೆ. ಅದರಲ್ಲೂ ಸಾಮಾನ್ಯವಾಗಿ ಗಂಡು ಮಕ್ಕಳು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನನ್ನು ಹಚ್ಚಿಕೊಂಡಿರುತ್ತಾರೆ.

2) ಅಕ್ಕ-ತಂಗಿ :-ಅಕ್ಕ-ತಂಗಿ ಇವರ ಜೊತೆ ಕಳೆದ ಯಾವುದೇ ನೆನಪನ್ನು ಮರೆಯಲು ಸಾಧ್ಯವಿಲ್ಲ. ಸ್ವಂತ ಅಕ್ಕ-ತಂಗಿ ಇಲ್ಲದಿದ್ದರೂ ಚಿಕ್ಕಪ್ಪನ-ದೊಡ್ಡಪ್ಪನ ಮಕ್ಕಳನ್ನು ಅಕ್ಕ -ತಂಗಿ ಎಂದು ಕರೆಯುತ್ತಾ ಅವರ ಜೊತೆ ಆಟ ಆಡಿ ಕಳೆದ ಕ್ಷಣಗಳು ನೆನಪಿನಲ್ಲಿ ಇದ್ದೇ ಇರುತ್ತದೆ.

3) ಅಜ್ಜಿ :-ಪ್ರೀತಿಯ ಅಜ್ಜಿಯನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ತನ್ನ ಬಾಲ್ಯದ ಬಗ್ಗೆ ನೆನೆಸುವಾಗ ಪ್ರತಿಯೊಬ್ಬರಿಗೂ ಅಜ್ಜಿ ನೆನೆಪಿಗೆ ಬಂದೇ ಬರುತ್ತಾಳೆ.

4) ಟೀಚರ್ :-ಯಾವುದೇ ಪುರುಷನನ್ನು ಕೇಳಿ ನೋಡಿ, ಅವರ ನೆನೆಪಿನಲ್ಲಿ ಒಂದಾದರೂ ಅವರ ಪ್ರೀತಿಯ ಟೀಚರ್ ನ ನೆನಪು ಇದ್ದೇ ಇರುತ್ತದೆ.

5) ಮೊದಲ ಪ್ರೇಮ :-ಪುರುಷ ತಾನು ಮೊದಲು ಇಷ್ಟಪಟ್ಟ ಹುಡುಗಿಯನ್ನು ತಮ್ಮ ಜೀವನದ ಕೊನೆಯವರೆಗೂ ನೆನೆಪಿನಲ್ಲಿಟ್ಟು ಕೊಳ್ಳುತ್ತಾರೆ. ಒಂದು ವೇಳೆ ತಾನು ಪ್ರೀತಿಸಿದ ಹುಡುಗಿ ಬಾಳಿನಲ್ಲಿ ದೊರಕದೇ ಹೋದರೆ ಅಥವಾ ಅವಳು ಮೋಸ ಮಾಡಿ ಹೋದರೂ ಕೂಡ ಅವಳನ್ನು ಅವನು ಯಾವತ್ತಿಗೂ ಮರೆಯುವುದಿಲ್ಲ.

6) ಹೆಂಡತಿ :-ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಒಳ್ಳೆಯ ಹೆಂಡತಿ ಸಿಕ್ಕಿದರೆ ಜೀವನದಲ್ಲಿ ಎಂತಹ ಕಷ್ಟವನ್ನು ಎದುರಿಸುವ ಸಾಮರ್ಥ್ಯ ಪುರುಷನಿಗೆ ಬರುತ್ತದೆ.

7) ಮಗಳು :-ಪ್ರತಿಯೊಬ್ಬ ಉತ್ತಮ ತಂದೆಯೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಾನೆ. ಎಂತಹ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅಪ್ಪ-ಅಮ್ಮನ ಮರ್ಯಾದೆಗೆ ಕುಂದು ಬರದಂತೆ ನನ್ನ ಮಗಳು ನಡೆದುಕೊಳ್ಳಬೇಕೆನ್ನುವುದೇ ಪ್ರತಿಯೊಬ್ಬ ಹೆತ್ತವರ ಆಶಯ.

♥ ♥ ♥


ವಿಶ್ವ ಮಹಿಳಾ ದಿನಾಚರಣೆಯ ಶುಭಾಷಯಗಳು.....