Feb 4, 2012

ಕನ್ನಡ ನುಡಿ ಪಂಚಾಂಗ

ನಮ್ಮ ಕನ್ನಡ ನಾಡು ನುಡಿಯನ್ನು ಬಿಂಬಿಸುವ ಕನ್ನಡ ನುಡಿ ಪಂಚಾಂಗವನ್ನು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ಹೊರತಂದಿದೆ. 2012ರ ಕ್ಯಾಲೆಂಡರ್ ಕನ್ನಡ ಲಿಪಿ ಹಾಗೂ ಅಂಕಿಗಳನ್ನು ಒಳಗೊಂಡಿದೆ. ''ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ'' ಎಂಬ ಕವಿಯ ಸಾಲು ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನುಭಾವರ ಭಾವಚಿತ್ರವಿರುವ ಕನ್ನಡ ನಾಡಿನ ಭೂಪಟ  ಹೊರ ಪುಟದಲ್ಲಿರುವುದು ನಿಜಕ್ಕೂ ಈ ಕನ್ನಡದ ಪಂಚಾಂಗಕ್ಕೆ ಭೂಷಣದಂತಿದೆ. ಕನ್ನಡಿಗರಾದ ನಾವು ಕನ್ನಡವನ್ನು ಬಳಸಿ ಉಳಿಸುವ ಮಾರ್ಗಗಳಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಪ್ರಯತ್ನ ನಿಜಕ್ಕೂ ಶ್ಲಾಂಘನೀಯವಾದುದು. ಪ್ರತಿಯೊಂದು ತಿಂಗಳಿನ ಪುಟದಲ್ಲೂ  ಕನ್ನಡದ ಶ್ರೇಷ್ಟ ವ್ಯಕ್ತಿಗಳ ಭಾವಚಿತ್ರದೊಂದಿಗೆ, ಕನ್ನಡ ನಾಡನ್ನು ಕುರಿತ, ಕನ್ನಡ ಭಾಷೆಯನ್ನು ಕುರಿತ ಮಹಾನ್ ಕವಿಗಳ ಸಾಲುಗಳಿವೆ. ಪಂಚಾಂಗದ ಕೊನೆಯ ಪುಟಗಳಲ್ಲಿ ನುಡಿಮುತ್ತುಗಳ ಸಂಗ್ರಹವನ್ನು ನೀಡಲಾಗಿದೆ. ಇಂಥ ವಿಶಿಷ್ಟವಾದ ಕನ್ನಡ ನುಡಿ ಪಂಚಾಂಗವನ್ನು ಹೊರತಂದ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘಕ್ಕೆ ಸಮಸ್ಥ ಕನ್ನಡಿಗರ ಪರವಾಗಿ ಧನ್ಯವಾದಗಳು.  ಆಂಗ್ಲ ಭಾಷೆಯ ಪ್ರಭಾವದಲ್ಲಿ ನಲುಗುತ್ತಿರುವ ಕನ್ನಡವನ್ನು ಬಳಸಿ-ಉಳಿಸಿ-ಬೆಳೆಸಿ. ||ಜೈ ಕರ್ನಾಟಕ ಮಾತೆ||
- ಮಾ.ಕೃ.ಮಂಜುನಾಥ್





ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ಲಿಂಕ್ ನ್ನು ನೋಡಿ.

- ಮಾ.ಕೃ.ಮಂಜುನಾಥ್