Nov 19, 2011

ಪ್ರಶ್ನೋತ್ತರ ಮಾಲಿಕೆ - 10

1. ಸಣ್ಣ ಕಥೆಗಳ ಜನಕ ಎಂದು “ ಮಾಸ್ತಿ ವೆಂಕಟೇಶ ಅಯ್ಯಂಗಾರ್ ” ರವರನ್ನ ಕರೆಯುತ್ತಾರೆ.


2. ಬಾಣನ “ ಕಾದಂಬರಿ ” ಕೃತಿಯ ಆಧಾರದಿಂದ ಕನ್ನಡದ ಒಂದನೇ ನಾಗವರ್ಮನು ಚಂಪೂ ಶಾಲಿಯಲ್ಲಿ “ ಕರ್ನಾಟಕ ಕಾದಂಬರಿ ”ಯನ್ನು ರಚಿಸಿದರು.

3.  “ ರಾಮಾಯಣ” ವನ್ನು ರಚಿಸಿದ ಮಹರ್ಷಿ ಎಂದು “ ವಾಲ್ಮಿಕಿ ” ಕವಿಯನ್ನ ಕರೆಯುತ್ತಾರೆ.


4. ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೇ ಏಕರೂಪವಾಗಿರುವ ಶಬ್ದಗಳಿಗೆ “ ಅವ್ಯಯಗಳು ” ಎಂದು ಕರೆಯುವರು.

5. ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ “ ಏಪ್ರಿಲ್ 2 ”.

6. ಸೂರ್ಯ ಉದಯಿಸುವ ನಾಡು ಎಂದು “ ಜಪಾನ್”.

7. ಕರ್ನಾಟಕದಲ್ಲಿ ಸುಮಾರು 300 – 320 ರಷ್ಟು ಹುಲಿಗಳಿದ್ದು ದೇಶದಲ್ಲಿಯೆ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

8. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

9. ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.

10.ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಸ್ಥಾಪನೆ :ಎಪ್ರಿಲ್ 1, 1935 ( ಜನವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )