100 ಸೆಂಚೂರಿಯ ಸರದಾರ ಅಭಿನಂದನೆಗಳ ಮಹಾಪೂರ ಪ್ರೀತಿಯ ಸಚಿನ್ ಗೆ ಕೋಟಿ ಕೋಟಿ ಭಾರತೀಯರ ಹಾರೈಕೆಗಳು......
ಕ್ರಿಕೆಟ್ ಪ್ರೇಮಿಗಳು ಕಳೆದ ಒಂದು ವರ್ಷದಿಂದ ಕಾತರದಿಂದ ಕಾಯುತ್ತಿದ್ದ ಸಚಿನ್ ಅವರ ಶತಕಗಳ ಶತಕದ ಕನಸನ್ನು ಸಚಿನ್ ಇಂದು ನನಸುಗೊಳಿಸಿದರು. ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದಲ್ಲಿ ಶುಕ್ರವಾರ ಶತಕ ಸಂಭ್ರಮದ ದಿನವಾಗಿದೆ. ಬಾಂಗ್ಲಾದೇಶ ನಡೆದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಸಚಿನ್, ತಮ್ಮ ವೃತ್ತಿ ಜೀವನದಲ್ಲಿ 100ನೇ ಶತಕದ ದಾಖಲೆ ಬರೆದಿದ್ದಾರೆ.