Sep 10, 2011
ಅನ್ನದಾತನ ಗೋಳು ಕೇಳೋರೇ ಇಲ್ಲಣ್ಣ
ನಮ್ಮ ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರದಿಂದ ದೇಶದ ಪ್ರಗತಿ ಸಾದ್ಯ ಎಂದ ಗಾಂಧಿಯ ಮಾತುಗಳಿಗೆ ಬೆಲೆಯೇ ಇಲ್ಲದಾಗಿದೆ. ರಾಜಕಾರಣಿಗಳ ಸ್ವಾರ್ಥಕ್ಕೆ ರೈತರು ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಮಾತ್ರವಲ್ಲ ದೇಶಕ್ಕೆ ಅನ್ನ ನೀಡುವ ಜನ ಇಂದು ತುತ್ತು ಅನ್ನಕ್ಕೆ ಹೆಣಗಾಡುವ ಪರಿಸ್ಥಿತಿಯು ಉಂಟಾಗಿದೆ. ರಾಜಕಾರಣಿಗಳ ರಾಜಕೀಯ ದೊಂಬರಾಟಕ್ಕೆ ಬಲಿಯಾಗುತ್ತಿರುವುದು ಮಾತ್ರ ನಮ್ಮ ರೈತರೇ. ರೈತರು ವರ್ಷಾನುಗಟ್ಟಲೆ ಬಿಸಿಲು ಮಳೆಯೆನ್ನದೇ ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ಸಿಗದೇ ಕಂಗಲಾಗಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬರುವ ಸರಕಾರಗಳು ಅಧಿಕಾರದ ಗದ್ದುಗೆ ಹಿಡಿದ ನಂತರ ಅವರನ್ನು ಮರೆಯುತ್ತಿದ್ದಾರೆ. ಇವರ ಈ ವರ್ತನೆಗೆ ಕಾರಣ ಬಹುಪಾಲು ರೈತರು ಅನಕ್ಷರಸ್ಥರಾಗಿರುವುದು. ಆದ್ದರಿಂದ ರೈತರ ಪರ ದನಿಯನ್ನು ವಿದ್ಯಾವಂತರು ಇಂತಹ ಬಂಡ ಸರಕಾರಗಳನ್ನು ಕೇಳಬೇಕಾಗಿದೆ.