Sep 26, 2016

ಕನ್ನಡ ನುಡಿ

ಕನ್ನಡ ಮರೆಯುವುದು ಬೇಡ... ಬನ್ನಿ ಕನ್ನಡ ಕಲಿಯೋಣ/ಕಲಿಸೋಣ.I

•ಕನ್ನಡ ವರ್ಣಮಾಲೆ
•ಸಂಧಿ ಪ್ರಕರಣ
•ನಾಮ ಪದ ಪ್ರಕರಣ
•ಲಿಂಗಳು
•ವಚನಗಳು
•ವಿಭಕ್ತಿ ಪ್ರತ್ಯಯಗಳು
•ಕ್ರಿಯಾಪದ ಪ್ರಕರಣ
•ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳು
•ಛಂದಸ್ಸು
•ಷಟ್ಟದಿ ಪದ್ಯಗಳು
•ರಗಳೆಗಳು
•ಅಕ್ಷರ ಗಣಗಳು
•ಅಲಂಕಾರಗಳು
•ನವರಸಗಳು
•ಪತ್ರಲೇಖನ
•ಪ್ರಬಂಧ

🙏🙏🙏🙏🙏🙏

ಕನ್ನಡ ವ್ಯಾಕರಣ

“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”..

ಕನ್ನಡ ವರ್ಣಮಾಲೆ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯ ವಿಧಗಳು

*.ಸ್ವರಗಳು
*.ವ್ಯಂಜನಗಳು
*.ಯೋಗವಾಹಗಳು

ಸ್ವರಗಳು:13
“ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.
ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು
*.ಹ್ರಸ್ವಸ್ವರ
*.ದೀರ್ಘ ಸ್ವರ
*.ಪ್ಲುತ ಸ್ವರ

ಹ್ರಸ್ವ ಸ್ವರ: 6
“ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.
ಉದಾ:ಅ ಇ ಉ ಋ ಎ ಒ

ದೀರ್ಘ ಸ್ವರ: 7
“ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.
ಉದಾ:ಆ ಈ ಊ ಏ ಓ ಐ ಔ

ಪ್ಲುತ ಸ್ವರ:
“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ
”.ಉದಾ:ಅಕ್ಕಾ , ಅಮ್ಮಾ,
ಕ್+ಅ=ಕ ,
ಮ್+ಅ=ಮ,
ಯ್+ಅ=ಯ.

ಸಂಧ್ಯಾಕ್ಷರಗಳು:4
ಏ,ಐ,ಒ,ಔ,

ವ್ಯಂಜನಗಳು:34
“ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.

ವ್ಯಂಜನಗಳ ವಿಧಗಳು:2
1.ವರ್ಗೀಯ ವ್ಯಂಜನಾಕ್ಷರಗಳು
2.ಅವರ್ಗೀಯ ವ್ಯಂಜನಾಕ್ಷರಗಳು

ವರ್ಗೀಯ ವ್ಯಂಜನಾಕ್ಷರಗಳು:25
“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.
ಉದಾ:
ಕ ವರ್ಗ – ಕ ಖ ಗ ಘ ಙ
ಚ ವರ್ಗ – ಚ ಛ ಜ ಝ ಞ
ಟ ವರ್ಗ – ಟ ಠ ಡ ಢ ಣ
ತ ವರ್ಗ- ತ ಥ ದ ಧ ನ
ಪ ವರ್ಗ- ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು
*.ಅಲ್ಪ ಪ್ರಾಣಾಕ್ಷರಗಳು
*.ಮಹಾ ಪ್ರಾಣಾಕ್ಷರಗಳು
*.ಅನುನಾಸಿಕಾಕ್ಷರಗಳು

ಅಲ್ಪ ಪ್ರಾಣಾಕ್ಷರಗಳು:10
“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.
ಉದಾ:
ಕ, ಚ,ಟ.ತ ,ಪ
ಗ,ಜ,ಡ,ದ,ಬ

ಮಹಾ ಪ್ರಾಣಾಕ್ಷರಗಳು:10
“ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ
ಉದಾ:
ಖ, ಛ ,ಠ ,ಧ, ಫ
ಘ ,ಝ, ಢ, ಧ, ಭ

ಅನುನಾಸಿಕಾಕ್ಷರಗಳು:5
“ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”.
ಉದಾ:
ಙ ,ಞ ,ಣ, ನ, ಮ

ಅವರ್ಗೀಯ ವ್ಯಂಜನಾಕ್ಷರಗಳು:9
“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.
ಉದಾ:
ಯ ,ರ, ಲ, ವ ,ಶ, ಷ ,ಸ ,ಹ, ಳ

ಯೋಗವಾಹಗಳು:2
“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.
ಅಂ ಅಃ

ಯೋಗವಾಹಗಳ ವಿಧಗಳು
1.ಅನುಸ್ವರ ಂ
2.ವಿಸರ್ಗ ಃ

ಅನುಸ್ವರ {ಂ}
“ಯಾವುದೇ ಅಕ್ಷರವು ಒಂದು ಸೊನ್ನೊ(ಂ) ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,
ಉದಾ:ಅಂಕ , ಒಂದು, ಎಂಬ

ವಿಸರ್ಗ {ಃ}
“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು”,
ಉದಾ:ಅಂತಃ , ದುಃಖ, ಸಃ, ನಃ

🙏🙏🙏🙏🙏

ಕನ್ನಡ ವರ್ಣಮಾಲೆ ಒಟ್ಟು ಅಕ್ಷರಗಳು ಸಂಖ್ಯೆ

ಕನ್ನಡ ವರ್ಣಮಾಲೆ(49)
ಸ್ವರಗಳು(13)
ಹ್ರಸ್ವ(06) ,
ಧೀರ್ಘ(07) ,
ಪ್ಲುತ
ವ್ಯಂಜನಾಕ್ಷರಗಳು(34)
ವರ್ಗೀಯ(25){ಅಲ್ಪಪ್ರಾಣ(10) , ಮಹಾಪ್ರಾಣ(10) , ಅನುನಾಸಿಕ(05) } ,
ಅವರ್ಗೀಯ(09)
ಯೋಗವಾಹ(02)
ಅನುಸ್ವಾರ(ಂ) ,
ವಿಸರ್ಗ(ಃ)

ಸಂಯುಕ್ತಾಕ್ಷರ
“ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ”.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ

ಸಂಯುಕ್ತಾಕ್ಷರಗಳ ವಿಧಗಳು
1.ಸಜಾತಿಯ ಸಂಯುಕ್ತಾಕ್ಷರಗಳು
2.ವಿಜಾತೀಯ ಸಂಯುಕ್ತಾಕ್ಷರಗಳು

ಸಂಜಾತಿಯ ಸಂಯುಕ್ತಾಕ್ಷರಗಳು
“ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ”.
ಉದಾ:
ಕತೇ – ಕ್ + ತ್ + ತ್ + ಎ
ಅಕ್ಕ – ಅ + ಕ್ + ಕ್ + ಅ
ಹಗ್ಗ , ಅಜ್ಜ , ತಮ್ಮ , ಅಪ್ಪ

ವಿಜಾತಿಯ ಸಂಯುಕ್ತಾಕ್ಷರಗಳು
“ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ”.
ಉದಾ:
ಅಗ್ನಿ- ಆ + ಗ್ + ನ್ + ಇ
ಆಪ್ತ – ಆ + ಪ್ + ತ್ + ಅ
ಸೂರ್ಯ , ಮಗ್ನ , ಸ್ವರ , ಪ್ರಾಣ

🙏🙏🙏🙏🙏

ಸಂಧಿ ಪ್ರಕರಣ

ಸಂಧಿ ಅರ್ಥ :
” ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು “.
ಉದಾ:
ಗಾಣ + ಇಗ =ಗಾಣಿಗ
ಆಡು + ಇಸು =ಆಡಿಸು
ಹಸು + ಇನ =ಹಸುವಿನ
‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು
*.ಸ್ವರ ಸಂಧಿ :
” ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು”.
ಉದಾ:
ಊರು(ಉ) + (ವ) ಅನ್ನು = ಊರನ್ನು
ಮನೆ(ಎ) + (ಅ) ಅಲ್ಲಿ =ಮನೆಯಲ್ಲಿ

*.ವ್ಯಂಜನ ಸಂಧಿ :
“ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಮಜನ ಸಂಧಿ ಎನಿಸುವುದು “.
ಉದಾ:
ಮಳೆ(ಕ) + (ಗ)ಕಾಲ =ಮಳೆಗಾಲ
ಬೆಟ್ಟದ(ತ) + (ದ)ತಾವರೆ =ಬೆಟ್ಟದಾವರೆ

ಸಂಧಿಗಳ ವಿದಗಳು:
1.ಕನ್ನಡ ಸಂಧಿಗಳು
2.ಸಂಸ್ಕ
ೃತ ಸಂಧಿಗಳು

ಕನ್ನಡ ಸಂಧಿಗಳ ವಿಧಗಳು
1.ಲೋಪ ಸಂಧಿ
2.ಆಗಮ ಸಂಧಿ
3.ಆದೇಶ ಸಂಧಿ
4.ಪ್ರಕ್ಥತ ಭಾವ

ಲೋಪ ಸಂಧಿ :
” ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು
ಉದಾ:
ಹಣದಾಸೆ – ಹಣದ + ಆಸೆ “ಅ” ಕಾರಲೋಪ
ನಿನಗಲ್ಲದೆ – ನಿನಗೆ +ಅಲ್ಲದೆ “ಎ”ಕಾರಲೋಪ
ಅಲ್ಲೊಂದು – ಅಲ್ಲಿ +ಒಂದು “ಇ” ಕಾರಲೋಪ
ಊರಲ್ಲಿ – ಊರು +ಅಲ್ಲಿ “ಉ” ಕಾರಲೋಪ

ಆಗಮ ಸಂಧಿ :
” ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಾಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೆಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.
ಆಗಮ ಸಂಧಿಯ ವಿಧಗಳು
ಎ: ‘ಯ’ ಕಾರ ಆಗಮ ಸಂಧಿ
ಬಿ: ‘ವ’ ಕಾರ ಆಗಮ ಸಂಧಿ

‘ಯ’ ಕಾರ ಆಗಮ ಸಂಧಿ :
” ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.
ಉದಾ:
ಕೆರೆಯನ್ನು = ಕೆರೆ + ಅನ್ನು
ಕಾಯದೆ = ಕಾ + ಅದೆ
ಬೇಯಿಸಿದ = ಬೇ + ಇಸಿದ
ಕುರಿಯನ್ನು , ಮೀಯಲು , ಚಳಿಯಲ್ಲಿ

‘ವ’ ಕಾರ ಆಗಮ ಸಂಧಿ :
“ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”.
ಉದಾ:
ಮಗುವಿಗೆ =ಮಗು + ಇಗೆ
ಗುರುವನ್ನು = ಗುರು + ಅನ್ನು
ಹೂವಿದು= ಹೂ + ಇದು
ಗೋವಿಗೆ , ಶಾಂತವಾಗಿ , ರಸವಾಗಿ ,

ಆದೇಶ ಸಂಧಿ :”ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.
ಕ – ಗ
ಚ – ಜ
ಟ – ಡ
ತ – ದ
ಪ – ಬ
ಉದಾ:
ಮಳೆಗಾಲ =ಮಳೆ +ಕಾಲ
ಕಂಬನಿ = ಕಣ್ + ಪನಿ
ಕೈದಪ್ಪು = ಕೈ + ತಪ್ಪು
ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,

ಪ್ರಕೃತಿ ಭಾವ ಸಂಧಿ:
“ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ “.
ಉದಾ:
ಅಣ್ಣ ಓಡಿಬಾ = ಅಣ್ಣ + ಓಡಿಬಾ
ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ?
ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?

ಸಂಸ್ಕೃತ ಸಂಧಿಗಳ ವಿಧಗಳು
1.ಸಂಸ್ಕೃತ ಸ್ವರ ಸಂಧಿಗಳು
2.ಸಂಸ್ಕೃತ ವ್ಯಂಜನ ಸಂಧಿಗಳು

ಸಂಸ್ಕೃತ ಸ್ವರ ಸಂಧಿಗಳ ವಿಧಗಳು
1.ಸವರ್ಣ ದೀರ್ಘ ಸಂಧಿ
2.ಗುಣ ಸಂಧಿ
3.ವೃದ್ಧಿ ಸಂಧಿ
4.ಯಣ್ ಸಂಧಿ

ಸವರ್ಣ ದೀರ್ಘ ಸಂಧಿ
” ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು
“.ಅ-ಅ=ಆ ,
ಅ-ಆ=ಆ,
ಇ-ಇ=ಈ ,
ಇ-ಈ=ಈ
ಉ-ಉ=ಊ ,
ಉ-ಊ=ಊ

ಉದಾ:
ದೇವಾಲಯ= ದೇವ + ಆಲಯ
ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ
ಗಿರೀಶ= ಗಿರಿ + ಈಶ
ಗುರೂಪದೇಶ= ಗುರು + ಉಪದೇಶ
ಶುಭಾಶಯ , ರವೀಂದ್ರ , ದೇವಾಸುರ , ಫಲಾಹಾರ , ಸೂರ್ಯಸ್ತ.

ಗುಣ ಸಂಧಿ
“ಅ .ಆ ಕಾರಗಳ ಮುಂದೆದ ಇ.ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ.ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ , ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”.
ಅ-ಆ,
ಇ-ಈ=ಏ
ಅ-ಆ,
ಉ-ಊ=ಓ
ಅ-ಆ,ಋ=ಅರ್

ಉದಾ:
ದೇವೇಂದ್ರ=ದೇವ + ಇಂದ್ರ
ಸಪ್ತರ್ಷಿ=ಸಪ್ತ + ಋಷಿ
ಸುರೇಂದ್ರ=ಸುರ + ಇಂದ್ರ
ಜನೋಪಕಾರ=ಜನ + ಉಪಕಾರ
ನಾಗೇಶ , ಏಕೋನ , ಚಂದ್ರೋದಯ ,ಉಮೇಶ

ವೃದ್ಧಿ ಸಂಧಿ
“ಅ.ಆ ಕಾರಗಳಿಗೆ ಏ .ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ .ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ದಿ ಸಂಧಿ ಎನ್ನುವರು”.
ಅ,ಆ-ಏ,
ಐ=ಐಅ,
ಆ-ಒ,
ಓ=ಔ

ಉದಾ:
ಏಕೈಕ= ಏಕ + ಏಕ
ವನೌಷಧಿ=ವನ + ಔಷಧಿ
ಜನೈಕ್ಯ=ಜನ + ಐಕ್ಯ
ವನೌಷಧ , ಸಿದ್ಧೌಷದ , ಲೋಕೈಕವೀರ

ಯಣ್ ಸಂಧಿ
“ಇ ,ಈ ಕಾರಗಳ ಮುಂದೆ ಅ ,ಆ ಕಾರಗಳು ಪರವಾದರೆ ಅವೆರಡರಸ್ಥಾನದಲ್ಲಿ “ಯ್” ಕಾರವೂ. ಉ ,ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು”
ಇ,ಈ-ಅ,ಆ=’ಯ್’
ಉ,ಊ-ಅ,ಆ=’ವ್’
ಋ-ಅ,ಆ=’ರ್’
ಉದಾ:
ಪ್ರತ್ಯುತ್ತರ= ಪ್ರತಿ +ಉತ್ತರ
ಮನ್ವಂತರ= ಮನು +ಅಂತರ
ಜಾತ್ಯಾತೀತ=ಜಾತಿ +ಅತೀತ
ಮಾತ್ರಂಶ=ಮಾತೃ +ಅಂಶ
ಅತ್ಯವಸರ , ಮನ್ವಾದಿ , ಅತ್ಯಾಶೆ , ಗತ್ಯಂತರ

ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
1.ಜಶ್ತ್ವ ಸಂಧಿ
2.ಶ್ಚುತ್ವ ಸಂಧಿ
3.ಅನುನಾಸಿಕ ಸಂಧಿ

ಜಶ್ತ್ವ ಸಂಧಿ
“ಪೂರ್ವ ಪದದ ಕೊನೆಯಲ್ಲಿರುವ ಕ,ಚ,ಟ,ತ,ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”.
ಉದಾ:
ವಾಗೀಶ=ವಾಕ್ + ಈಶ
ಅಜಂತ=ಅಚ್ + ಅಂತ
ಷೆಡಂಗ=ಷಟ್ +ಅಂಗ
ಸದ್ಭಾವ=ಸತ್ +ಭಾವ
ಅಜ್ಜ=ಅಪ್ + ಜ
ದಿಗಂತ , ಅಜೌದಿ , ಷಡಾನನ , ಚಿದಾನಂದ , ಅಬ್ಧಿ

ಶ್ಚುತ್ವ ಸಂಧಿ
” ಶ್ಚು ಎಂದರೆ ಶಕಾರ ಚ ವರ್ಗಾಕ್ಷರಗಳು(ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳು ತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು”.
ಸ ಕಾರಕ್ಕೆ – ಶ ಕಾರವು
ತ ವರ್ಗಕ್ಕೆ- ಚ ವರ್ಗವು (ಆದೇಶವಾಗಿ ಬರುತ್ತವೆ)

ಉದಾ:
ಸಜ್ಜನ=ಸತ್ +ಜನ
ಚಲಚಿತ್ರ= ಚಲತ್ + ಚಿತ್ರ
ಯಶಶ್ಯರೀರ=ಸರತ್ +ಚಂದ್ರ
ಜಗಜ್ಯೋತಿ, ಪಯಶ್ಯಯನ, ಶರಚ್ಚಂದ್ರ

ಅನುನಾಸಿಕ ಸಂಧಿ
“ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು”.
ಉದಾ.
ವಾಙ್ಮಯ=ವಾಕ್ +ಮಯ
ಚಿನ್ಮೂರ್ತಿ= ಚಿತ್ + ಮೂರ್ತಿ
ತನ್ಮಯ= ತತ್+ಮಯ
ಸನ್ಮಾನ , ಅಮ್ಮಯ , ಸನ್ಮಣಿ ,ಚಿನ್ಮೂಲ ,

🙏🙏🙏🙏🙏

ಸಮಾಸ ಪ್ರಕರಣ

“ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು”.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ವಿಗ್ರಹ ವಾಕ್ಯ
“ಸಮಾಸದ ಅ
ರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)

ಸಮಾಸ ಪದಗಳಾಗುವ ಸನ್ನಿವೇಶಗಳು
ಸಂಸ್ಕ್ರತ-ಸಂಸ್ಕ್ರತ ಶಬ್ಧಗಳು ಸೇರಿ
ಕನ್ನಡ-ಕನ್ನಡ ಶಬ್ಧಗಳು ಸೇರಿ
ತದ್ಬವ-ತದ್ಬವ ಶಬ್ಧಗಳು ಸೇರಿ
ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ
ಕನ್ನಡಕ್ಕೆ – ಸಂಸ್ಕ್ರತ ಶಬ್ಧಗಳು ಸೇರಿ ಸಮಾಸವಾಗಲಾರದು.ವೀರ ಗಳು

ಸಮಾಸದ ವಿಧಗಳು
1.ತತ್ಪುರುಷ ಸಮಾಸ
2.ಕರ್ಮಧಾರೆಯ ಸಮಾಸ
3.ದ್ವಿಗು ಸಮಾಸ
4.ಅಂಶಿ ಸಮಾಸ
5.ದ್ವಂದ್ವ ಸಮಾಸ
6.ಬಹುವ್ರೀಹಿ ಸಮಾಸ
7.ಕ್ರಿಯಾ ಸಮಾಸ
8.ಗಮಕ ಸಮಾಸ

ತತ್ಪುರುಷ ಸಮಾಸ
“ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು”.
ಉದಾ:
ಮರದ+ಕಾಲ =ಮರಗಾಲ
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

ಕರ್ಮಧಾರೆಯ ಸಮಾಸ
“ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ

ದ್ವಿಗು ಸಮಾಸ
“ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ”
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು

ಅಂಶಿ ಸಮಾಸ
“ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು”.
ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ

ದ್ವಂದ್ವ ಸಮಾಸ
“ಎರಡು ಅಥವಾ ಉಳ್ಳ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು”
.ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು
ತನುಮನಗಳು,

Sep 10, 2016

ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು

🌸🌸ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು🌸🌸
〰〰〰〰〰〰〰〰〰〰〰〰
🍂🍂🍂🍂🍂🍂🍂
🌾ಕಾರ್ಯಕ್ರಮಗಳು - ಜಾರಿಯಾದ ವರ್ಷ🌾

👉 ಮೊದಲ ಪಂಚವಾರ್ಷಿಕ ಯೋಜನೆ (1951-56)
>> ಸಾಮುದಾಯಿಕ ಅಭಿವೃದ್ಧಿ ಕಾರ್ಯಕ್ರಮ -1952
>> ರಾಷ್ಟ್ರೀಯ ವಿಸ್ತರಣಾ ಸೇವೆ- 1953

👉ಎರಡನೆಯ ಪಂಚವಾರ್ಷಿಕ ಯೋಜನೆ (1956-61)
>>ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಕಾರ್ಯಕ್ರಮ
1957
>>ಗ್ರಾಮ ವಸತಿ ಯೋಜನೆ ವ್ಯವಸ್ಥೆ 1957
>> ಬಹು ಉದ್ದೇಶ ಬುಡಕಟ್ಟು ಅಭಿವೃದ್ಧಿ ಬ್ಲಾಕ್ ಗಳ
ಕಾರ್ಯಕ್ರಮ 1959
>> ಕಂತೆ ಕಾರ್ಯಕ್ರಮ 1960
>>ಸಾಂದ್ರ ಕೃಷಿ ಜಿಲ್ಲಾ ಕಾರ್ಯಕ್ರಮ 1960
>>ಗುಡ್ಡಗಾಡು ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮ 1960

👉ಮೂರನೇಯ ಪಂಚವಾರ್ಷಿಕ ಯೋಜನೆ (1961-66)
>> ಪ್ರಯೋಗಿಕ ಪೌಷ್ಠಿಕತೆಯ ಕಾರ್ಯಕ್ರಮ 1961
>> ಗ್ರಾಮೀಣ ಕೈಗಾರಿಕಾ ಯೋಜನೆಗಳು 1962
>> ಬುಡಕಟ್ಟು ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮ 1962
>> ಸಾಂದ್ರ ಕೃಷಿ ಪ್ರದೇಶ ಕಾರ್ಯಕ್ರಮ 1964
>> ಅಧಿಕ ಇಳುವರಿ ವೈವಿಧ್ಯಮಯ ಕಾರ್ಯಕ್ರಮ 1966
★ವಾರ್ಷಿಕ ಯೋಜನೆಗಳು (1966-69)
>> ರೈತರ ತರಬೇತಿ ಮತ್ತು ಶೈಕ್ಷಣಿಕ ಕಾರ್ಯಕ್ರಮ 1966
>>ಬಾವಿ ನಿರ್ಮಾಣ ಕಾರ್ಯಕ್ರಮ 1966
>>ಗ್ರಾಮೀಣ ಕೆಲಸಗಳ ಕಾರ್ಯಕ್ರಮ 1967
>> ಗ್ರಾಮೀಣ ಮಾನವ ಶಕ್ತಿ ಕಾರ್ಯಕ್ರಮ 1969
>> ಮಹಿಳ ಮತ್ತು ಶಾಲಾ ಪೂರ್ವದ ಮಕ್ಕಳ ಸಂಯುಕ್ತ
ಕಾರ್ಯಕ್ರಮ 1969

👉ನಾಲ್ಕನೆಯ ಪಂಚವಾರ್ಷಿಕ ಯೋಜನೆ (1969-74)
>> ಸಣ್ಣ ರೈತರ ಅಭಿವೃದ್ಧಿ ಸಂಸ್ಥೆ, 1969
>> ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ
ಕಾರ್ಯಕ್ರಮ 1969
>> ಬರಗಾಲ ಸಂಭವನೀಯ ಪ್ರದೇಶಗಳ ಕಾರ್ಯಕ್ರಮ 1970
>>ಗ್ರಾಮೀಣ ಉದ್ಯೋಗಕ್ಕಾಗಿ ರಭಸಗತಿಯ ಯೋಜನೆ
1971
>> ಬುಡಕಟ್ಟು ಜನರ ಅಭಿವೃದ್ಧಿ ಕಾರ್ಯಕ್ರಮ 1972
>> ಬುಡಕಟ್ಟು ಜನರ ಅಭಿವೃದ್ಧಿಗಾಗಿ ಪ್ರಾಯೋಗಿಕ
ಯೋಜನೆ 1972
>>ಪ್ರಾಯೋಗಿಕ ಯೋಜನೆ ಆಧಿಕ್ಯದ ಗ್ರಾಮೀಣ
ಉದ್ಯೋಗ ಕಾರ್ಯಕ್ರಮ 1972
>> ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮ 1972
>> ವೇಗವರ್ಧಿತ ಗ್ರಾಮೀಣ
ನೀರು ಸರಬರಾಜು ಕಾರ್ಯಕ್ರಮ 1972
>> ಆಜ್ಞಾಪಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ 1973

👉ಐದನೆಯ ಪಂಚವಾರ್ಷಿಕ ಯೋಜನೆ ( 1974-79)
>> 20 ಅಂಶಗಳು ಕಾರ್ಯಕ್ರಮ 1975
>> ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮ 1975
>> ವಿಶೇಷ ಜಾನುವಾರು ಉತ್ಪಾದನಾ ಕಾರ್ಯಕ್ರಮ
1975
>>ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ
1975
>> ಅಂತ್ಯೋದಯ 1977
>> ಮರುಭೂಮಿ ಅಭಿವೃದ್ಧಿ ಕಾರ್ಯಕ್ರಮ 1977
>> ಜಿಲ್ಲಾ ಕೈಗಾರಿಕಾ ಕೇಂದ್ರ 1977
>> ಸಮಗ್ರ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮ 1978
>>ಸಂಪೂರ್ಣ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ 1979
,>> ಸ್ವಯಂ ಉದ್ಯೋಗಕ್ಕೆ ಗ್ರಾಮೀಣ ಯುವ ಜನರ
ತರಬೇತಿ ಕಾರ್ಯಕ್ರಮ. 1979

👉ಆರನೇಯ ಪಂಚವಾರ್ಷಿಕ ಯೋಜನೆ (1980-85)
>> ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ
1980
>> ಪ್ರಧಾನ ಮಂತ್ರಿಗಳ ನೂತನ 20
ಅಂಶಗಳು ಕಾರ್ಯಕ್ರಮ 1980
>> ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮತ್ತು ಮಕ್ಕಳ
ಅಭಿವೃದ್ಧಿ ಕಾರ್ಯಕ್ರಮ 1982
>> ವಿದ್ಯಾವಂತರು ಯುವ ನಿರುದ್ಯೋಗಿಗಳ ಸ್ವ
ಉದ್ಯೋಗ ಕಾರ್ಯಕ್ರಮ 1983
>> ಗ್ರಾಮೀಣ ಭೂ ರಹಿತ ಉದ್ಯೋಗ ಭರವಸೆ ಕಾರ್ಯಕ್ರಮ
1983

👉ಎಳನೇಯ ಪಂಚವಾರ್ಷಿಕ ಯೋಜನೆ (1985-90)
>> ಇಂದಿರಾ ಆವಾಸ್ ಯೋಜನೆ 1986
>> ಜವಾಹರ್ ರೋಜ್ ಗಾರ್ ಯೋಜನೆ 1989

👉 ಎಂಟನೆಯ ಪಂಚವಾರ್ಷಿಕ ಯೋಜನೆ 1992-97
>> ಉದ್ಯೋಗ ಭರವಸೆ ಯೋಜನೆ 1993
>> ಹೂಡಿಕೆ ವೃದ್ಧಿಸುವ ಯೋಜನೆ 1994
>> ಸಮಗ್ರ ಒಣಭೂಮಿ ಅಭಿವೃದ್ಧಿ ಯೋಜನೆ 1994
>> ಗಂಗಾ ಕಲ್ಯಾಣ ಯೋಜನೆ 1995

👉 ಒಂಬತ್ತನೆಯ ಪಂಚವಾರ್ಷಿಕ ಯೋಜನೆ (1997-2002)
>> ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ
1999
>> ಜವಾಹರ್ ಗ್ರಾಮ ಸಮೃದ್ಧಿ ಯೋಜನೆ 1999
>> ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆ 2000
>> ಅನ್ನಪೂರ್ಣ ಯೋಜನೆ 2000
>> ಅಂತ್ಯೋದಯ ಅನ್ನ ಯೋಜನೆ 2001
>> ಮಹಾವೀರ ಗ್ರಾಮ ಕಲ್ಯಾಣ ಯೋಜನೆ 2001
>>ಸಂಪೂರ್ಣ ಗ್ರಾಮೀಣ ರೋಜ್ ಗಾರ್ ಯೋಜನೆ 2001

👉ಹತ್ತನೆಯ ಪಂಚವಾರ್ಷಿಕ ಯೋಜನೆ (2002-2007)
>> ಸ್ವಜಲಧಾರ ಎಲ್ಲರಿಗೂ ಗ್ರಾಮೀಣ ಕುಡಿಯುವ
ನೀರು ಒದಗಿಸುವ ಯೋಜನೆ 2002
>> ಹರಿಯಾಲಿ ಹಸಿರೀಕರಣ ಜಲ ಸಂರಕ್ಷಣೆ ಯೋಜನೆ 2003
>>ಭಾರತ ನಿರ್ಮಾಣ ಯೋಜನೆ 2005
>> ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆ

🍂🍂🍂🍂

Sep 4, 2016

ಗಣಪತಿಯ ೩೨ ಅವತಾರಗಳು

*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

*ಬಾಲ ಗಣಪತಿ*

    ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
   
    *ತರುಣ ಗಣಪತಿ*

    ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
   
    *ಭಕ್ತಿ ಗಣಪತಿ*

    ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
   
    *ವೀರ ಗಣಪತಿ*

    ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
   
    *ಶಕ್ತಿ ಗಣಪತಿ*

    ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
   
    *ದ್ವಿಜ ಗಣಪತಿ*

    "ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
  
   *ಸಿದ್ಧಿ ಗಣಪತಿ*

    ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
 
    *ಉಚ್ಚಿಷ್ಟ ಗಣಪತಿ*

    ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
   
    *ವಿಘ್ನ ಗಣಪತಿ*

    ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
   
    *ಕ್ಷಿಪ್ರ ಗಣಪತಿ*

    ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
  
    *ಹೇರಂಬ ಗಣಪತಿ*

    ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
   
    *ಲಕ್ಷ್ಮೀ ಗಣಪತಿ*

    ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
  
    *ಮಹಾ ಗಣಪತಿ*

    "ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
   
    *ವಿಜಯ ಗಣಪತಿ*

    ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
   
    *ನೃತ್ಯ ಗಣಪತಿ*

    ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
   
    *ಊರ್ಧ್ವ ಗಣಪತಿ*

    ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
   
    *ಏಕಾಕ್ಷರ ಗಣಪತಿ*

    "ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
   
    *ವರದ ಗಣಪತಿ*

    ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
   
    *ತ್ರಯಾಕ್ಷರ ಗಣಪತಿ*

    ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
   
    *ಕ್ಷಿಪ್ರ ಪ್ರಸಾದ ಗಣಪತಿ*

    ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
   
    *ಹರಿದ್ರ ಗಣಪತಿ*

    ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
   
    *ಏಕದಂತ ಗಣಪತಿ*

    ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
   
    *ಸೃಷ್ಟಿ ಗಣಪತಿ*

    ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.
   
    *ಉದ್ಧಂಡ ಗಣಪತಿ*

    ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
   
    *ಋಣಮೋಚನ ಗಣಪತಿ*

    ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
   
    *ದುಂಧಿ ಗಣಪತಿ*

    ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
   
    *ದ್ವಿಮುಖ ಗಣಪತಿ*

    ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
   
    *ತ್ರಿಮುಖ ಗಣಪತಿ*

    ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
   
    *ಸಿಂಹ ಗಣಪತಿ*

    ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
   
    *ಯೋಗ ಗಣಪತಿ*

    ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
  
    *ದುರ್ಗಾ ಗಣಪತಿ*

    ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
  
    *ಸಂಕಷ್ಟ ಹರ ಗಣಪತಿ*

    ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.                        

💐 *ಸರ್ವೇ ಜನಃ ಸುಖಿನೋ ಭವಂತು* 💐