Jun 17, 2009

ಪ್ರಶ್ನೋತ್ತರ ಮಾಲಿಕೆ - ೬

.’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿತಿಳಿದವನುಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?

ಉತ್ತರ: ರಕ್ತಾಕ್ಷಿ
. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?

ಉತ್ತರ: ಅಗ್ನಿ ಮತ್ತು ಮಳೆ / ಗಿರೀಶಕಾರ್ನಾಡ

.ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?

ಉತ್ತರ: ಚಿತ್ತಾಲರ ಶಿಕಾರಿ

. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವಪ್ರಾಣಿ ಯಾವುದು?

ಉತ್ತರ: ಅಜ

. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?

ಉತ್ತರ: ಗೊಲ್ಗೊಥಾ

. ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]

ಉತ್ತರ: ಸತಿ ಸುಲೋಚನ

೭. ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಯು ಆರ್ ಅನಂತಮೂರ್ತಿ ಕಥೆಯಾಧಾರಿತ ಕನ್ನಡ ಚಿತ್ರಯಾವುದು?

ಉತ್ತರ: ಘಟಶ್ರಾದ್ಧ

. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?

ಉತ್ತರ: ಬನಾರಸ್ ಹಿಂದೂ ವಿಶ್ವವಿದ್ಯಾಲಯ, BHU

೯. ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಸಿರು ಹೊನ್ನು ಎಂಬ ಪ್ರಸಿದ್ಧಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ. ಬಿ ಜಿ ಎಲ್ ಸ್ವಾಮಿಯವರ ಹೆಸರನ್ನು ವಿಸ್ತರಿಸಿರಿ.

ಉತ್ತರ: ಬೆಂಗಳೂರುಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ